ರಾಮ್ ಚರಣ್, ಉಪಾಸನಾ ಮಗಳಿಗೆ ಮುಖೇಶ್ ಅಂಬಾನಿ ಉಡುಗೊರೆ ನೀಡಿರುವುದು ಸುಳ್ಳು ವದಂತಿ! | Mukesh Ambani’s gifts to Ram Charan’s daughter: Real or Fake

India

oi-Mamatha M

|

Google Oneindia Kannada News

ಹೈದರಾಬಾದ್, ಜುಲೈ. 02: ಜೂನ್ 20 ರಂದು ಮೆಗಾಸ್ಟಾರ್ ಚಿರಂಜೀವಿ ಅವರ ಮಗ ರಾಮ್ ಚರಣ್ ಮತ್ತು ಸೊಸೆ ಉಪಾಸನಾ ಅವರು ತಮ್ಮ ಮಗುವನ್ನು ಸ್ವಾಗತಿಸಿರದ್ದಾರೆ. ಮದುವೆಯಾದ 11 ವರ್ಷಗಳ ನಂತರ, ಅವರ ಮಗುವಿನ ಆಗಮನವು ಇಡೀ ಚಿರಂಜೀವಿ ಕುಟುಂಬಕ್ಕೆ ಹೆಚ್ಚು ಸಂತೋಷವನ್ನು ತಂದಿದೆ. ಹಲವು ಗಣ್ಯರು ಮಗುವಿಗೆ ಉಡುಗೊರೆ ನೀಡಿದ್ದಾರೆ.

ಇದರ ಜೊತೆಗೆ ರಾಮ್ ಚರಣ್ ಅವರ ಮಗಳಿಗೆ ದೇಶದ ಪ್ರಮುಖ ಉದ್ಯಮಿ, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರು ಚಿನ್ನದ ತೊಟ್ಟಿಲು ಉಡುಗೊರೆಯಾಗಿ ನೀಡಿದ್ದಾರೆ ಎಂದು ಇತ್ತೀಚಿನ ವದಂತಿಗಳು ಹರಡಿವೆ. ಈ ವರದಿಗಳನ್ನು ಯಾವುದನ್ನೂ ದೃಢೀಕರಿಸಲಾಗಿಲ್ಲ ಮತ್ತು ಹಲವಾರು ಮಾಧ್ಯಮಗಳು ಈ ವರದಿಯನ್ನು ನಕಲಿ ಎಂದು ಬಣ್ಣಿಸಿವೆ. ಇದರ ಜೊತೆಗೆ ರಾಮ್ ಚರಣ್ ಅವರ ಅಧಿಕೃತ ತಂಡವು ಸಂಪೂರ್ಣವಾಗಿ ಸುಳ್ಳು ಎಂದು ದೃಢಪಡಿಸಿದೆ.

Mukesh Ambani’s gifts to Ram Charans daughter: Real or Fake

ಮೆಗಾಸ್ಟಾರ್ ಚಿರಂಜೀವಿ ಅವರ ಮೊಮ್ಮಗಳಿಗೆ “ಕ್ಲಿನ್ ಕಾರ ಕೊನಿಡೆಲಾ” ಎಂದು ಹೆಸರಿಸಲಾಗಿದೆ. ವಿಶೇಷ ನಾಮಕರಣ ಸಮಾರಂಭವನ್ನು ಆಯೋಜಿಸಲಾಗಿತ್ತು. ಅವರ ಇಡೀ ಮನೆಯನ್ನು ಸಂಭ್ರಮದಿಂದ ತುಂಬಿದೆ ಈ ಮಗು. ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಸ್ಟಾರ್ ಜೋಡಿಗೆ ಹೃತ್ಪೂರ್ವಕ ಶುಭಾಶಯ ಹೇಳಿದ್ದು, ಅವರ ಪ್ರೀತಿಯನ್ನು ವ್ಯಕ್ತಪಡಿಸಲು ಅವರಿಗೆ ಅದ್ಭುತ ಉಡುಗೊರೆಗಳನ್ನು ಕಳುಹಿಸಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರು ನವಜಾತ ಮಗುವಿಗೆ ಕೊಟ್ಟಿರುವ ತೊಟ್ಟಿಲಿನ ಉಡುಗೊರೆ 1.2 ಕೋಟಿ ರೂಪಾಯಿ ಮೌಲ್ಯದ ಅತ್ಯಂತ ದುಬಾರಿ ಚಿನ್ನದ ತೊಟ್ಟಿಲು ಎಂದು ವದಂತಿಗಳು ಹರಡಿದ್ದರು. ಆದರೆ, ಮೊದಲೇ ಹೇಳಿದಂತೆ, ಈ ವರದಿಗಳನ್ನು ಸುಳ್ಳು ಎಂದು ಪರಿಗಣಿಸಲಾಗಿದೆ ಮತ್ತು ರಾಮ್ ಚರಣ್ ತಂಡವು ಬಲವಾಗಿ ನಿರಾಕರಿಸಿದೆ.

Mukesh Ambani’s gifts to Ram Charans daughter: Real or Fake

ಜೂನ್ 19 ರ ಸಂಜೆಯ ಸಮಯದಲ್ಲಿ, ಉಪಾಸನಾ ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು ಮತ್ತು ಮಧ್ಯರಾತ್ರಿಯಲ್ಲಿ ಅವರು ತಮ್ಮ ಮೊದಲ ಮಗುವಿಗೆ ಜನ್ಮ ನೀಡಿದ್ದಾರೆ.

English summary

Mukesh Ambani gifts gold cradle to Upasana and Ram Charan’s daughter: This is real or fake see datails here. know more.

Story first published: Sunday, July 2, 2023, 13:41 [IST]

Source link