Telugu
oi-Narayana M
ಮಂಗಳವಾರವಷ್ಟೇ
ಮೆಗಾ
ಫ್ಯಾಮಿಲಿಗೆ
ರಾಜಕುಮಾರಿಯ
ಆಗಮನವಾಗಿದೆ.
ಮದುವೆಯಾಗಿ
11
ವರ್ಷಗಳ
ನಂತರ
ರಾಮ್‌ಚರಣ್,
ಉಪಾಸನಾ
ದಂಪತಿ
ಮಗುವನ್ನು
ಸ್ವಾಗತಿಸಿದ್ದಾರೆ.
ಇದು
ಮೆಗಾ
ಫ್ಯಾಮಿಲಿ
ಹಾಗೂ
ಮೆಗಾ
ಫ್ಯಾನ್ಸ್
ಮನದಲ್ಲಿ
ಸಂತಸ
ತಂದಿದೆ.
ಮೆಗಾ
ಪ್ರಿನ್ಸೆಸ್
ಹ್ಯಾಷ್‌ಟ್ಯಾಗ್
ಸಿಕ್ಕಾಪಟ್ಟೆ
ವೈರಲ್
ಆಗ್ತಿದೆ.
ಚರಣ್
ಎಲ್ಲಾ
ಕೆಲಸ
ಬಿಟ್ಟು
ಮಡದಿ
ಮಗುವಿನ
ಜೊತೆ
ಕಾಲ
ಕಳೆಯುತ್ತಿದ್ದಾರೆ.
ಹೈದರಾಬಾದ್‌ನ
ಅಫೋಲೊ
ಆಸ್ಪತ್ರೆಗೆ
ಉಪಾಸನಾ
ಹೆರಿಗೆಗಾಗಿ
ಸೋಮವಾರ
ದಾಖಲಾಗಿದ್ದರು.
ಅಂದು
ಮಧ್ಯರಾತ್ರಿ
1
ಗಂಟೆ
49
ನಿಮಿಷಕ್ಕೆ
ಹೆಣ್ಣು
ಮಗುವಿಗೆ
ಉಪಾಸನಾ
ಜನ್ಮ
ನೀಡಿದ್ದರು.
ಬೆಳಗ್ಗೆ
ಕೊನಿದೇಲ
ಹಾಗೂ
ಕಮಿನೇನಿ
ಫ್ಯಾಮಿಲಿ
ಸದಸ್ಯರೆಲ್ಲಾ
ಹೋಗಿ
ತಾಯಿ
ಮಗುವನ್ನು
ನೋಡಿ
ಬಂದಿದ್ದರು.
ಮೊಮ್ಮಗಳನ್ನು
ನೋಡಿ
ಬಂದ
ಚಿರು
ಮಾಧ್ಯಮಗಳ
ಜೊತೆ
ಮಾತನಾಡಿ
ಖುಷಿ
ಹಂಚಿಕೊಂಡಿದ್ದರು.
ನಂತರ
ಸೋಶಿಯಲ್
ಮೀಡಿಯಾದಲ್ಲೂ
ಎಮೋಷನಲ್
ಪೋಸ್ಟ್
ಮಾಡಿದ್ದರು.
ಇನ್ನು
ಸಾಕಷ್ಟು
ಅಭಿಮಾನಿಗಳು
ಆಸ್ಪತ್ರೆ
ಎದುರು
ಜಮಾಯಿಸಿದ್ದರು.
ಅಭಿಮಾನಿಗಳು
ಕೂಡ
ಮೆಗಾ
ಪ್ರಿನ್ಸೆಸ್‌ನ
ನೋಡೋಕೆ
ಕಾತುರದಿಂದ
ಕಾಯುತ್ತಿದ್ದಾರೆ.
ಇನ್ನು
ನಾಗಬಾಬು,
ಅಲ್ಲು
ಅರ್ಜುನ್
ಎಲ್ಲರೂ
ಸೋಶಿಯಲ್
ಮೀಡಿಯಾದಲ್ಲಿ
ಚರಣ್-
ಉಪಾಸನಾ
ದಂಪತಿಗೆ
ಅಭಿನಂದನೆ
ತಿಳಿಸುತ್ತಿದ್ದಾರೆ.
ಸದ್ಯ
ಉಪಾಸನಾ
ಕೋನಿದೇಲ
ಇನ್ನು
ಆಸ್ಪತ್ರೆಯಲ್ಲಿದ್ದು
ಶೀಘ್ರದಲ್ಲೇ
ಡಿಸ್ಚಾರ್ಜ್
ಆಗಲಿದ್ದಾರೆ.
ಆಕೆಯ
ಹೊಕ್ಕುಳ
ಬಳ್ಳಿ
ರಕ್ತವನ್ನು
ಹೆರಿಗೆ
ಸಮಯದಲ್ಲಿ
ವೈದ್ಯರು
ಶೇಖರಿಸಿರುವುದಾಗಿ
ಹೇಳಲಾಗುತ್ತಿದೆ.
ರಾಮ್
ಚರಣ್‌ಗೆ
ಮತ್ತೊಂದು
ಮಗು
ಆಗೋದಿಲ್ಲ:
ಟಾಲಿವುಡ್
ಜ್ಯೋತಿಷಿ
ನುಡಿದ
ಭವಿಷ್ಯದಲ್ಲಿ
ಇನ್ನೇನಿದೆ?
ಮೆಗಾ
ಪ್ರಿನ್ಸೆಸ್
ಫಸ್ಟ್
ಫೋಟೊ?
ಇದೆಲ್ಲದರ
ನಡುವೆ
ರಾಮ್‌ಚರಣ್
ಮಗಳ
ಹೆಸರಿನಲ್ಲಿ
ಸೋಶಿಯಲ್
ಮೀಡಿಯಾದಲ್ಲಿ
ಫೋಟೊಗಳು
ವೈರಲ್
ಆಗುತ್ತಿದೆ.
ಇನ್ನು
ರಾಮ್‌ಚರಣ್
ಎಳೆ
ಮಗುವೊಂದರ
ಜೊತೆ
ಆಟವಾಡುತ್ತಿರುವ
ಹಳೇ
ವಿಡಿಯೋ
ಕೂಡ
ಸಖತ್
ಸದ್ದು
ಮಾಡಿದೆ.
ಇದು
ಮೆಗಾ
ಪ್ರಿನ್ಸೆಸ್
ಫೊಟೊ,
ವಿಡಿಯೋ
ಅಂತಲೇ
ಕೆಲವರು
ಅಂದುಕೊಂಡಿದ್ದಾರೆ.
ಕೆಲವರು
“ಸೋ
ಕ್ಯೂಟ್”
ಅಂತೆಲ್ಲಾ
ಕಾಮೆಂಟ್
ಮಾಡುತ್ತಿದ್ದಾರೆ.
ಆದರೆ
ಅದು
ಸುಳ್ಳು
ಎನ್ನುತ್ತಿವೆ
ಮೂಲಗಳು.
ಚರಣ್-
ಉಪಾಸನಾ
ದಂಪತಿಯ
ಮಗುವಿನ
ಯಾವುದೇ
ಫೋಟೊ
ಈವರೆಗೆ
ಹೊರ
ಬಂದಿಲ್ಲ.
ಲೀಕ್
ಕೂಡ
ಆಗಿಲ್ಲ.
ಫೇಕ್
ಫೋಟೊ,
ವಿಡಿಯೋಗಳು
ಸಾಮಾನ್ಯವಾಗಿ
ನೆಚ್ಚಿನ
ನಟ-
ನಟಿಯರ
ಮಕ್ಕಳನ್ನು
ನೋಡಲು
ಅಭಿಮಾನಿಗಳು
ಕಾಯುತ್ತಿರುತ್ತಾರೆ.
ಇನ್ನು
ಹೊಸದಾಗಿ
ಮಗು
ಹುಟ್ಟಿದರೆ
ಆ
ಮಗುವಿನ
ಫಸ್ಟ್
ಫೋಟೊ
ಯಾವಾಗ
ರಿಲೀಸ್
ಆಗುತ್ತೆ
ಎಂದು
ಕಾಯುತ್ತಿರುತ್ತಾರೆ.
ಈ
ಹಿಂದೆ
ಆಲಿಯಾ
ಭಟ್‌ಗೆ
ಮಗಳು
ಹುಟ್ಟಿದಾಗಲೂ
ಸೋಶಿಯಲ್
ಮೀಡಿಯಾದಲ್ಲಿ
ಇಂತದ್ದೇ
ಫೇಕ್
ಫೋಟೊ,
ವಿಡಿಯೋ
ವೈರಲ್
ಆಗಿತ್ತು.
ಆದರೆ
ಬಹಳ
ದಿನಗಳ
ನಂತರ
ದಂಪತಿ
ಮಗಳ
ಫೋಟೊ
ಶೇರ್
ಮಾಡಿದ್ದರು.
“ಲಿಟಲ್
ಮೆಗಾ
ಪ್ರಿನ್ಸೆಸ್‌ಗೆ
ಸ್ವಾಗತ”..
ಮೊಮ್ಮಗಳ
ಬಗ್ಗೆ
ಮೆಗಾಸ್ಟಾರ್
ಚಿರಂಜೀವಿ
ಎಮೋಷನಲ್
ಪೋಸ್ಟ್
ಸದ್ಯಕ್ಕೆ
ಮೆಗಾ
ಪ್ರಿನ್ಸೆಸ್
ದರ್ಶನ
ಇಲ್ಲ
ಎಳೆ
ಮಗುವಿನ
ಫೋಟೊವನ್ನು
ಹುಟ್ಟಿದ
ಕೂಡಲೇ
ಬಹುತೇಕರು
ರಿವೀಲ್
ಮಾಡುವುದಿಲ್ಲ.
ಅದರಲ್ಲೂ
ಸೆಲೆಬ್ರೆಟಿಗಳು
ಅಷ್ಟು
ಸುಲಭವಾಗಿ
ತಮ್ಮ
ಮಗುವಿನ
ಫೋಟೊವನ್ನು
ಹಂಚಿಕೊಳ್ಳುವುದಿಲ್ಲ.
ರಾಮ್‌ಚರಣ್-
ಉಪಾಸನಾ
ಕೂಡ
ಇದೇ
ಹಾದಿ
ಹಿಡಿಯಲಿದ್ದಾರೆ.
ಕೆಲ
ತಿಂಗಳ
ನಂತರ
ಸ್ಪೆಷಲ್
ಫೋಟೊ
ಶೂಟ್
ಮಾಡಿಸಿ
ವಿಶೇಷ
ದಿನದಂದು
ಮಗಳನ್ನು
ಪ್ರಪಂಚಕ್ಕೆ
ಪರಿಚಯಿಸುವ
ಸಾಧ್ಯತೆಯಿದೆ.
ಒಟ್ನಲ್ಲಿ
ಅಭಿಮಾನಿಗಳಂತೂ
ಮೆಗಾ
ಪ್ರಿನ್ಸೆಸ್
ದರ್ಶನಕ್ಕಾಗಿ
ಕಾಯುತ್ತಿದ್ದಾರೆ.
ದುನೈನಲ್ಲಿ
ಉಪಾಸನಾ
ಸೀಮಂತ
ಕಳೆದ
ಡಿಸೆಂಬರ್‌ನಲ್ಲಿ
ಚಿರಂಜೀವಿ
ಸೊಸೆ
ಉಪಾಸನಾ
ಗರ್ಭಿಣಿ
ಆಗಿರುವ
ವಿಚಾರ
ಬಹಿರಂಗಪಡಿಸಿದ್ದರು.
‘RRR’
ಚಿತ್ರಕ್ಕೆ
ಆಸ್ಕರ್
ಅವಾರ್ಡ್,
ಗೋಲ್ಡ್
ಗ್ಲೋಬ್
ಅವಾರ್ಡ್
ಸಿಕ್ಕಾಗ
ಪತಿಯ
ಜೊತೆ
ಉಪಾಸನಾ
ಹೋಗಿದ್ದರು.
ಆ
ಸಂಭ್ರಮದಲ್ಲಿ
ಭಾಗಿ
ಆಗಿದ್ದರು.
ಆಸ್ಕರ್
ಅವಾರ್ಡ್
ಸರೆಮನಿಯಲ್ಲೇ
ಜೋಡಿ
ಮೊದಲ
ಬಾರಿಗೆ
ತಮ್ಮ
ಮಗುವಿನ
ಬಗ್ಗೆ
ಮಾತನಾಡಿದ್ದರು.
ನಂತರ
ಉಪಾಸನಾ
ಇಷ್ಟು
ದಿನ
ಯಾಕೆ
ಮಗು
ಮಾಡಿಕೊಳ್ಳಲಿಲ್ಲ
ಅನ್ನುವುದನ್ನು
ಸಂದರ್ಶನವೊಂದರಲ್ಲಿ
ಹೇಳಿಕೊಂಡಿದ್ದರು.
ದುಬೈ
ಹಾಗೂ
ಹೈದರಾಬಾದ್‌ನಲ್ಲಿ
ಸೀಮಂತ
ಕಾರ್ಯಕ್ರಮ
ನಡೆದಿತ್ತು.
English summary
Mega Princess: Ramcharan and Upasana’s Baby’s First Pics, video Leaked?. The pictures are claimed to be from the hospital. know more.
Thursday, June 22, 2023, 17:09
Story first published: Thursday, June 22, 2023, 17:09 [IST]