ರಾಜ್ಯದಲ್ಲಿ ಗೋಹತ್ಯೆ ವಿರೋಧಿ ಕಾಯ್ದೆ ರದ್ದುಗೊಳಿಸುವ ಯಾವುದೇ ಪ್ರಸ್ತಾವನೆ ಇಲ್ಲ: ಸಚಿವ | No proposal to repeal the anti-cow slaughter Act of 2020 :Minister

Karnataka

oi-Mamatha M

|

Google Oneindia Kannada News

ಬೆಂಗಳೂರು, ಜುಲೈ. 05: 2020 ರ ಗೋಹತ್ಯೆ ವಿರೋಧಿ ಕಾಯ್ದೆಯನ್ನು ರದ್ದುಗೊಳಿಸುವ ಯಾವುದೇ ಪ್ರಸ್ತಾಪವಿಲ್ಲ ಎಂದು ಕರ್ನಾಟಕ ಸರ್ಕಾರ ಹೇಳಿದ್ದರೂ, ಪ್ರತಿಪಕ್ಷ ಬಿಜೆಪಿ ರಾಜ್ಯ ಸರ್ಕಾರದಿಂದ ಸ್ಪಷ್ಟವಾದ ಹೇಳಿಕೆಯನ್ನು ಪದೇ ಪದೇ ಬಯಸುತ್ತಿದೆ. ಜೊತೆಗೆ ಕಲಾಪದಲ್ಲಿ ಈ ಬಗ್ಗೆ ಗದ್ದಕ ಎಬ್ಬಿಸುತ್ತಿದ್ದಾರೆ. ಕರ್ನಾಟಕದಲ್ಲಿ ಅಕ್ರಮ ಗೋಹತ್ಯೆಗೆ ಸರ್ಕಾರ ಅನುಮತಿ ನೀಡುತ್ತಿದೆ ಎಂದು ಆರೋಪಿಸಿ ಜುಲೈ 5 ರಂದು ವಿಧಾನ ಮಂಡಲದ ಕಲಾಪವನ್ನು ಸ್ಥಗಿತಗೊಳಿಸಿದ್ದಾರೆ.

ಮೈಸೂರಿನಲ್ಲಿ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಅವರ ಹೇಳಿಕೆಯನ್ನು ಪ್ರಸ್ತಾಪಿಸಿದ ವಿಧಾನಪರಿಷತ್ ನಲ್ಲಿ ಬಿಜೆಪಿ ಎಂಎಲ್ ಸಿ ಎನ್.ರವಿಕುಮಾರ್, ಪ್ರಶ್ನೋತ್ತರ ವೇಳೆಯಲ್ಲಿ ಸಚಿವರಿಂದ ದೃಢವಾದ ಉತ್ತರ ಕೇಳಿ, ಇತ್ತೀಚೆಗೆ ಸಾವಿರಾರು ಗೋವುಗಳನ್ನು ಅಕ್ರಮವಾಗಿ ಹತ್ಯೆ ಮಾಡಲಾಗಿದೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.

No proposal to repeal the anti-cow slaughter Act of 2020 :Minister

ಇಂತಹ ಅಕ್ರಮ ಗೋಹತ್ಯೆ ವಿರುದ್ಧ ತೆಗೆದುಕೊಳ್ಳಲಾಗಿದೆ. 2020 ರಲ್ಲಿ ಜಾರಿಗೆ ತಂದ ಗೋಹತ್ಯೆ ವಿರೋಧಿ ನಿಬಂಧನೆಗಳನ್ನು ಹಿಂಪಡೆಯಲು ಸರ್ಕಾರ ಮುಂದಾದರೇ ಧಾರ್ಮಿಕ ಮುಖಂಡರು ಧರಣಿ ಕುಳಿತುಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ ಎಂಬ ಅಂಶವನ್ನು ಹೇಳಿ ಸದನದ ಗಮನಸೆಳೆದರು.

ಬಿಜೆಪಿ ಕಾಲದ ಕಾಯ್ದೆಗಳು ಈ ಅಧಿವೇಶನದಲ್ಲಿ ವಾಪಸ್‌ ಇಲ್ಲ?: ಪರ-ವಿರೋಧ ಚರ್ಚೆ; ಏನಿದು ಸರ್ಕಾರದ ಬಿಜೆಪಿ ಕಾಲದ ಕಾಯ್ದೆಗಳು ಈ ಅಧಿವೇಶನದಲ್ಲಿ ವಾಪಸ್‌ ಇಲ್ಲ?: ಪರ-ವಿರೋಧ ಚರ್ಚೆ; ಏನಿದು ಸರ್ಕಾರದ “ಲೋಕ” ಲೆಕ್ಕಾಚಾರ?

ಇದಕ್ಕೂ ಮುನ್ನ ಸಿ ಎನ್ ರವಿಕುಮಾರ್ ಅವರಿಗೆ ನೀಡಿದ ಲಿಖಿತ ಉತ್ತರದಲ್ಲಿ, ಕರ್ನಾಟಕ ಗೋಹತ್ಯೆ ತಡೆ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ 2020 ಅನ್ನು ರದ್ದುಗೊಳಿಸುವ ಯಾವುದೇ ಪ್ರಸ್ತಾಪವಿಲ್ಲ. ಏಕೆಂದರೆ ಅಂತಹ ಕ್ರಮದ ಸಾಧಕ – ಬಾಧಕಗಳು ಚರ್ಚೆಯಲ್ಲಿವೆ ಎಂದು ಹೇಳಿದ್ದರು.

ಆದರೆ, ಈ ಹಿಂದೆ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್, ಎಮ್ಮೆಗಳನ್ನು ಕಡಿಯುವಾಗ ಗೋಹತ್ಯೆ ಮಾಡುವುದು ಏಕೆ ತಪ್ಪಾಗುತ್ತದೆ ಎಂದು ಪ್ರಶ್ನಿಸಿದ್ದನ್ನು ಬಿಜೆಪಿ ಸದಸ್ಯರು ಒತ್ತಿ ಹೇಳಿದದಾರೆ. ಸಚಿವರ ಈ ಹಿಂದಿನ ಹೇಳಿಕೆಗೆ ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಹೇಳಿಕೆಯು ವಿವಾದಾಸ್ಪದವಾಗಿದ್ದರೂ, “ಗೋಹತ್ಯೆ ವಿರೋಧಿ ಕಾಯ್ದೆಯನ್ನು ರದ್ದುಗೊಳಿಸುವ ಯಾವುದೇ ಪ್ರಸ್ತಾಪವಿಲ್ಲ. ನಾನು ಸಮಸ್ಯೆಯ ಬಗ್ಗೆ ಸಾಮಾನ್ಯ ಹೇಳಿಕೆಯನ್ನು ನೀಡಿದ್ದೇನೆ” ಎಂದಿದ್ದಾರೆ.

No proposal to repeal the anti-cow slaughter Act of 2020 :Minister

ಸಚಿವರ ಹೇಳಿಕೆಗೆ ಬಿಜೆಪಿ ಸದಸ್ಯರು ಪಟ್ಟು ಹಿಡಿದ ನಂತರ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿ ನಡೆಯಿತು. ಬಿಜೆಪಿಯವರು ಮತಕ್ಕಾಗಿ ಗೋವಿನ ರಾಜಕಾರಣ ಮಾಡುವ ಮೂಲಕ ಸದನದ ಹಿತಾಸಕ್ತಿಯನ್ನು ಬಲಿಕೊಡುತ್ತಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಆರೋಪಿಸಿದ್ದಾರೆ.

ಸಚಿವರು ಈ ವಿಷಯದ ಬಗ್ಗೆ ಹೆಚ್ಚು ಮಾತನಾಡಲು ನಿರಾಕರಿಸಿದಾಗ, ಬಿಜೆಪಿ ಸದಸ್ಯರು ಸದನದ ಬಾವಿಗೆ ಇಳಿದು ಧರಣಿ ನಡೆಸಿ, ಪ್ರಶ್ನೋತ್ತರ ಅವಧಿ ಹಾಗೂ ಸದನದ ಕಲಾಪವನ್ನು ಸ್ಥಗಿತಗೊಳಿಸಿ, ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಸದನವನ್ನು ಮುಂದೂಡುವಂತೆ ಒತ್ತಾಯಿಸಿದರು.

ಇದಕ್ಕೂ ಮೊದಲು, ಜುಲೈ 4 ರಂದು ಐದು ಗ್ಯಾರಂಟಿಗಳ ಅನುಷ್ಠಾನದ ಕುರಿತು ಮುಂದೂಡಿಕೆ ನಿರ್ಣಯವನ್ನು ಮಂಡಿಸುವ ಬಗ್ಗೆ ಬಿಜೆಪಿ ಸದನದ ಕಲಾಪಕ್ಕೆ ಅವಕಾಶ ನೀಡಲಿಲ್ಲ. ಆದರೆ ಅಧ್ಯಕ್ಷರು ಸಮಸ್ಯೆಯನ್ನು ಪರಿಶೀಲಿಸುವ ಭರವಸೆಯೊಂದಿಗೆ ಧರಣಿಯನ್ನು ಹಿಂಪಡೆಯಲು ಮನವೊಲಿಸಿದರು. ಮೊದಲ ಬಿಜೆಪಿ ಸರ್ಕಾರದ ಅವಧಿಯಲ್ಲಿ 2010 ರಲ್ಲಿ ಅಂಗೀಕರಿಸಲ್ಪಟ್ಟ ಮಸೂದೆಯನ್ನು ಅಂದಿನ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರು ರಾಷ್ಟ್ರಪತಿಗಳ ಒಪ್ಪಿಗೆಗೆ ಕಳುಹಿಸಿದ್ದರು.

ರಾಷ್ಟ್ರಪತಿಗಳ ಒಪ್ಪಿಗೆಗೆ ಕಾಯುತ್ತಿದ್ದಾಗಲೇ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 2013-14ರಲ್ಲಿ ಮಸೂದೆಯನ್ನು ಹಿಂಪಡೆದಿತ್ತು. ಬಿಜೆಪಿಯು ಗೋಹತ್ಯೆ ತಿದ್ದುಪಡಿ ಮಸೂದೆಯನ್ನು ತಂದಿತು, ಇದು 2010 ರದ್ದಕ್ಕಿಂತ ಹೆಚ್ಚು ಕಠಿಣವಾಗಿತ್ತು. 2020 ರ ಮಸೂದೆಯು ಉತ್ತರ ಪ್ರದೇಶದಲ್ಲಿ ಇದೇ ರೀತಿಯ ಕಾನೂನಿನ ಮಾದರಿಯಲ್ಲಿದೆ.

English summary

No proposal to repeal the anti-cow slaughter Act of 2020 says Animal Husbandry Minister K. Venkatesh. know more.

Story first published: Wednesday, July 5, 2023, 18:28 [IST]

Source link