ರಾಜ್ಯದಲ್ಲಿ ಕರೆಂಟ್‌ ಬಿಲ್‌ ಹೆಚ್ಚಳದ ಶಾಕ್;‌ ವಿದ್ಯುತ್‌ ದರ ಹೆಚ್ಚಳ ನಿರ್ಧಾರ ಹಿಂಪಡೆಯಲ್ಲ: ಸಚಿವ ಎಂ.ಬಿ. ಪಾಟೀಲ್ | We Are Not Responsible For Electricity Bill Hike And Not Decreasing Says Minister MB Patil

Karnataka

oi-Reshma P

|

Google Oneindia Kannada News

ವಿಜಯಪುರ, ಜೂನ್‌ 22: ನಮ್ಮ ಸರ್ಕಾರ ವಿದ್ಯುತ್ ದರ ಹೆಚ್ಚಳ ಮಾಡಿಲ್ಲ, ಕಾಂಗ್ರೆಸ್‌ ಸರ್ಕಾರ ಬರುವ ಮೊದಲೇ ಹೆಚ್ಚಳ ಮಾಡಲಾಗಿದೆ. ಅಲ್ಲದೆ, ಬೆಲೆ ಏರಿಕೆಗೂ ನಮಗೂ ಸಂಬಂಧ ಇಲ್ಲ. ಕೆಇಆರ್‌ಸಿ ವಿದ್ಯುತ್ ದರವನ್ನು ಹೆಚ್ಚಳ ಮಾಡಿದೆ. ಆದರೆ, ವಿದ್ಯುತ್ ದರ ಹೆಚ್ಚಳ ನಿರ್ಧಾರ ಹಿಂಪಡೆಯಲ್ಲ ಎಂದು ಸಚಿವ ಎಂ ಬಿ ಪಾಟೀಲ್‌ ಸ್ಪಷ್ಟ ಪಡಿಸಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ವಿದ್ಯುತ್ ದರವನ್ನು ನಮ್ಮ ಸರ್ಕಾರ ಹೆಚ್ಚಳ ಮಾಡಿಲ್ಲ. ಸ್ವಾಯತ್ತ ಹೊಂದಿರುವಂತಹ ಕೆ ಇ ಆರ್ ಸಿ ಈ ವಿದ್ಯುತ್ ದರವನ್ನು ಹೆಚ್ಚಳ ಮಾಡಿದೆ. ಅದು ಕೂಡ ನಮ್ಮ ಸರ್ಕಾರ ಬರುವ ಮೊದಲೇ ಹೆಚ್ಚಳ‌ ಮಾಡಿದೆ, ಹೀಗಾಗಿ ಬೆಲೆ ಏರಿಕೆಗೆ ನಮಗೆ ಯಾವುದೇ ಸಂಭಂದ ಇಲ್ಲ. ಅದನ್ನು ಹಿಂಪಡೆಯಲು ಆಗಲ್ಲಾ ಎಂದು ಈಗಾಗಲೇ ಮುಖ್ಯಮಂತ್ರಿಗಳು ಹಿಂತೆಗೆದುಕೊಳ್ಳಲು ಆಗೋದಿಲ್ಲಾ ಎಂದು ಹೇಳಿದ್ದಾರೆ. ಆದರೂ ಸಹ ನಾನು ಸಿಎಂ ಜೊತೆಗೆ ಚರ್ಚೆ ಮಾಡುತ್ತೇನೆ ಎಂದರು.

We Are Not Responsible For Electricity Bill Hike And Not Decreasing Says Minister MB Patil

ಕೈಗಾರಿಕೆಗಳು ಸೇರಿದಂತೆ ದಯವಿಟ್ಟು ಸಹಕಾರ ಮಾಡಿ ಎಂದು ವಿನಂತಿ ಮಾಡುತ್ತೇನೆ. ವಿದ್ಯುತ್ ದರ ಕೆ ಇ ಆರ್ ಸಿ ಇಂದ ವಿದ್ಯುತ್ ದರ ಆಗಾಗ ಏರಿಕೆ ಆಗಿರುತ್ತದೆ, ಅದನ್ನು ಸರ್ಕಾರ ಮಾಡಬೇಕಾಗಿದ್ದಲ್ಲ, ಕೆ ಇ ಆರ್ ಸಿ ಅವರು ಆಗಾಗ ಮಾಡುತ್ತಾರೆ. ಇವತ್ತು ದರ ಏರಿಕೆ ಮಾಡಿದಾರೆ, ಮುಂದೆನು ಕಾಲ ಕಾಲಕ್ಕೆ ಮಾಡಿರುತ್ತಾರೆ, ಎಲ್ಲರೂ ಸಹಕಾರ ಮಾಡಿರಿ, ಸಿಎಂ ಹಾಗೂ ಇಂಧನ ಸಚಿವ ಜಾರ್ಜ್ ಜೊತೆ ಚರ್ಚೆ ಮಾಡಿ ಏನು ಪರಿಹಾರ ಮಾಡಲು ಸಾಧ್ಯವಿದೆ ಅದನ್ನು ಮಾಡುತ್ತೇವೆ ಎಂದ ಸಚಿವ ಎಂ ಬಿ ಪಾಟೀಲ್ ತಿಳಿಸಿದರು.

ರಾಜ್ಯದಲ್ಲಿ ಉಚಿತ ಅಕ್ಕಿ ವಿತರಣೆ ವಿಚಾರವಾಗಿ ಮಾತನಾಡಿ, ಅಕ್ಕಿ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ. ಬಡವರು ತಿನ್ನುವ ಅಕ್ಕಿಯಲ್ಲಿ ರಾಜಕೀಯ ಮಾಡಲಾಗುತ್ತಿದೆ
ನಾವು ಕೇಂದ್ರಕ್ಕೆ ಪತ್ರ ಬರೆದಾಗ ಅವರು ಉತ್ತರ ಬರೆದರು, ಸಿಎಂ ಮಾತನಾಡಿದಾಗಲು 7 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಇದೆ‌ ಎಂದು ಹೇಳಿದ್ದರು. ಅದಾದ ಬಳಿಕ ಈ ರಾಜಕೀಯ ನಡೆದಿದೆ ಬಡವರ ಅನ್ನದ ಜೊತೆಗೆ ರಾಜಕಾರಣ ಮಾಡೋದು ಸರಿಯಲ್ಲ, ಪುಕ್ಸಟ್ಟೆ ಅಕ್ಕಿ ಕೇಳುತ್ತಿಲ್ಲ, ದುಡ್ಡು ಕೊಟ್ಟು ಕೇಳುತ್ತಿದ್ದೇವೆ. ನಾಲ್ಕು ದಿನ ವಿಳಂಬವಾದರು ಅಕ್ಕಿ ಕೊಡುತ್ತೇವೆ. ಯಾವುದೇ ಪರಿಸ್ಥಿತಿಯಲ್ಲೂ ನಾವು ಅಕ್ಕಿ ಕೊಡುತ್ತೇವೆನುಡಿದಂತೆ ನಡೆದಿದ್ದೇವೆ, 10 ಕೆ‌ಜಿ ಆಹಾರ ಧಾನ್ಯ ಕೊಟ್ಟೆ ಕೊಡುತ್ತೇವೆ ಎಂದು ತಿಳಿಸಿದರು.

ಸಚಿವರು ದೆಹಲಿಗೆ ತೆರಳಿರುವ ವಿಚಾರವಾಗಿ ಮಾತನಾಡಿ, ಎಲ್ಲ ಸಚಿವರು ದೆಹಲಿ ಹೋಗಿಲ್ಲ. ಸಿಎಂ ಹೋಗಿದ್ದಾರೆ, ಅವರ ಜೊತೆಗೆ ಕೆಲವರು ಹೋಗಿದ್ದಾರೆ, ತಮ್ಮ ತಮ್ಮ ಇಲಾಖೆಯ ಕೇಂದ್ರ ಸಚಿವರನ್ನ ಭೇಟಿ ಮಾಡುವುದಕ್ಕೆ ಹೋಗಿದ್ದಾರೆ. ನಮ್ಮದು ರೋಡ್ ಮ್ಯಾಪ್ ಸಿದ್ಧವಾದ ಮೇಲೆ ನಾವು ದೆಹಲಿಗೆ ಪ್ರಯಾಣ ಮಾಡುತ್ತೇವೆ. ಈ ತಿಂಗಳ 27ರ ಬಳಿಕ ಅಂತಿಮ ಮೀಟಿಂಗ್ ಇದೆ. ಏನೇಲ್ಲ ಮಾಡುಬೇಕು ಎನ್ನುವ ಕಾರ್ಯಕ್ರಮ ಹಾಕಿಕೊಂಡಿದ್ದೇವೆ, ಜುಲೈ ಮೊದಲ ವಾರದಲ್ಲಿ ದೆಹಲಿ ಪ್ರಯಾಣ ಹೋಗಿ ಕೇಂದ್ರ ಸಚಿವರನ್ನ ಭೇಟಿ ಮಾಡುತ್ತೇನೆ, ನಮ್ಮ ಇಲಾಖೆಗೆ ಸಂಬಂಧಿಸಿದ ಪ್ರಸ್ತಾವಣೆ ತೆಗೆದುಕೊಂಡು ಹೋಗುತ್ತನೆ. ಕೇಂದ್ರ‌ ಸಚಿವರ ಮನವೊಲಿಸುವ ಕೆಲಸ ಮಾಡ್ತೇವೆ ಎಂದು ತಿಳಿಸಿದರು.

English summary

Minister MB Patil Said That We Are Not Responsible For Electricity Bill Hike And Not Decreasing.

Source link