Karnataka
oi-Mamatha M
ಬೆಂಗಳೂರು, ಜೂನ್. 25: ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಘಟಕದ (KSNDMC) ಅಂಕಿಅಂಶಗಳ ಪ್ರಕಾರ, ಕರ್ನಾಟಕದ ಪ್ರಮುಖ ಜಲಾನಯನ ಪ್ರದೇಶಗಳಾದ ಕಾವೇರಿ ಮತ್ತು ತುಂಗಭದ್ರಾ ನದಿಗಳಿಗೆ ನೀರುಣಿಸುವ ಪ್ರದೇಶಗಳಲ್ಲಿ ಕಡಿಮೆ ಮಳೆಯಾಗುತ್ತಿದ್ದು, ಜಲಾಶಯಗಳಲ್ಲಿ ನೀಡಿನ ಮಟ್ಟ ಕಡಿಮೆಯಾಗುತ್ತಿದೆ.
ಮುಂಗಾರು ಮಳೆಗಾಲದ ಮೊದಲ 25 ದಿನಗಳಲ್ಲಿ ಸಾಮಾನ್ಯಕ್ಕಿಂತ ಮೂರನೇ ಒಂದು ಭಾಗಕ್ಕಿಂತ ಕಡಿಮೆ ಮಳೆಯನ್ನು ಪಡೆದಿವೆ. ಈ ನದಿಗಳನ್ನು ಸೇರುವ ಹಲವಾರು ಉಪನದಿಗಳು ಹುಟ್ಟುವ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಮುಂತಾದ ಮಲೆನಾಡು ಜಿಲ್ಲೆಗಳಲ್ಲಿ ಮಳೆಯ ಕೊರತೆ ಉಂಟಾಗಿದ್ದು, ಸಾಮಾನ್ಯಕ್ಕಿಂತ 78 ರಷ್ಟು ಕಡಿಮೆಯಾಗಿದೆ.
ಸಾಮಾನ್ಯ 619 ಮಿಮೀ ಮಳೆಯಾಗುತ್ತಿತ್ತು, ಆದರೆ ಈ ಬಾರಿ ಜಿಲ್ಲೆಗಳಲ್ಲಿ ಕೇವಲ 188 ಮಿಮೀ ಮಳೆಯಾಗಿದೆ ಎಂದು ಅಂಕಿಅಂಶಗಳು ವಿವರಿಸಿವೆ. ಮಾನ್ಸೂನ್ ತಡವಾಗಿ ಆರಂಭಗೊಂಡಿರುವುದೆ ಈ ನೀರಿನ ಕೊರತೆ ಕಾರಣವಾಗಿದೆ. ಸಾಮಾನ್ಯವಾಗಿ ಜೂನ್ 5 ರಂದು ಆರಂಭವಾಗುತ್ತಿದ್ದ ಮಳೆ, ಈ ಬಾರಿಯ ಮಾನ್ಸೂನ್ ಜೂನ್ 10 ರಂದು ಕರ್ನಾಟಕಕ್ಕೆ ಬಂದಿತು. ಮಳೆ ಪ್ರಾರಂಭವಾದಾಗಿನಿಂದ, ಇದು ತುಲನಾತ್ಮಕವಾಗಿ ದುರ್ಬಲವಾಗಿಯೇ ಉಳಿದಿದೆ.
ಮಳೆ ಆರಂಭ; ಬೆಳೆ ವಿಮೆ ಪಡೆಯಲು ರೈತರಿಗೆ ಕೃಷಿ ಇಲಾಖೆ ಕರೆ
21 ರಷ್ಟು ಕೊರತೆಯ ನಡುವೆಯೂ ದಕ್ಷಿಣ ಒಳನಾಡು ಕರ್ನಾಟಕದಲ್ಲಿ ಮಾತ್ರ ಸಾಮಾನ್ಯ ಮಳೆ ದಾಖಲಾಗಿದೆ. ಬೆಂಗಳೂರು ನಗರ ಪ್ರದೇಶದಲ್ಲಿ 49 ಮಿ.ಮೀ ಮಳೆಯಾಗಿದ್ದು, ವಾಡಿಕೆಗಿಂತ ಶೇ.26ರಷ್ಟು ಕಡಿಮೆ ಮಳೆಯಾಗಿದೆ. ಒಟ್ಟಾರೆಯಾಗಿ, ಕರ್ನಾಟಕದಲ್ಲಿ ಸಾಮಾನ್ಯ 152 ಮಿಮೀ ಅಂದರೆ ಮಾಮೂಲಿ 64 ರಷ್ಟು ಮಳೆಯಾಗುತ್ತಿದ್ದ ಸ್ಥಳದಲ್ಲಿ ಕೇವಲ 55 ಮಿಮೀ ಮಳೆಯಾಗಿದೆ.
ಮಳೆ ಕೊರತೆಯಾಗಿದ್ದು, ರಾಜ್ಯದ ಪ್ರಮುಖ ಜಲಾಶಯಗಳಾದ ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಅಣೆಕಟ್ಟು ಮತ್ತು ವಿಜಯನಗರ ಜಿಲ್ಲೆಯ ತುಂಗಭದ್ರಾ ಜಲಾಶಯಗಳ ಒಳಹರಿವು ಕಡಿಮೆಯಾಗಿದೆ. ಕೆಆರ್ ಎಸ್ ನಲ್ಲಿ ಜೂನ್ 24ಕ್ಕೆ 9.93 ಟಿಎಂಸಿ ಸಂಗ್ರಹವಿದ್ದು, ಕಳೆದ ವರ್ಷ ಇದೇ ದಿನ 28.35 ಟಿಎಂಸಿ ಸಂಗ್ರಹವಾಗಿತ್ತು. ಅದೇ ರೀತಿ, ಕಳೆದ ವರ್ಷ 43.92 ಟಿಎಂಸಿಯಷ್ಟಿದ್ದ ತುಂಗಭದ್ರಾದಲ್ಲಿ ಪ್ರಸ್ತುತ 4.18 ಟಿಎಂಸಿ ನೀರು ಇತ್ತು.
ಮುಂದಿನ ನಾಲ್ಕು ದಿನಗಳ ಕಾಲ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಮತ್ತು ರಾಜ್ಯದ ಇತರ ಭಾಗಗಳಲ್ಲಿ ಅಲ್ಲಲ್ಲಿ ತುಂತುರು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿರುವುದರಿಂದ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಸುಧಾರಿಸುವ ಸಾಧ್ಯತೆಯಿದೆ ಎಂದು ಇಲಾಖೆಗಳು ಮುನ್ಸೂಚನೆ ನೀಡಿವೆ.
ಮುಂದಿನ ದಿನಗಳಲ್ಲಿ ಮಳೆ ಹೆಚ್ಚಾದಂತೆ ಜಲಾಶಯಗಳಿಗೆ ಒಳಹರಿವು ಸುಧಾರಿಸಲಿದೆ. ಸಾಮಾನ್ಯವಾಗಿ ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ಜಲಾಶಯಗಳಿಗೆ ಹೆಚ್ಚಿನ ಒಳಹರಿವು ಬರುತ್ತದೆ ಎಂದು ಕೆಎಸ್‌ಎನ್‌ಡಿಎಂಸಿ ವಿಜ್ಞಾನಿಯೊಬ್ಬರು ತಿಳಿಸಿದ್ದಾರೆ.
English summary
Less rainfall: Water level in key reservoirs KRS, Tungabhadra remains low as Karnataka receives less than one third of monsoon season rainfall. know more.
Story first published: Sunday, June 25, 2023, 17:48 [IST]