News
oi-Muralidhar S
ರಾಗಿಣಿ
ದ್ವಿವೇದಿ
ಸಂಕಷ್ಟಕ್ಕೆ
ಸಿಲುಕಿದ್ದಾಗ
ಅವರ
ವೃತ್ತಿ
ಬದುಕು
ಮುಗಿದೇ
ಹೋಯ್ತು
ಅಂತ
ಅದೆಷ್ಟೋ
ಮಂದಿ
ಅಂದುಕೊಂಡಿದ್ದರು.
ಮತ್ತೆ
ರಾಗಿಣಿಗೆ
ಸಿನಿಮಾಗಳು
ಸಿಗೋದು
ಕಷ್ಟ
ಅಂತಲೇ
ಭವಿಷ್ಯ
ನುಡಿದವರೂ
ಇದ್ದರು.
ಆದ್ರೀಗ
ರಾಗಿಣಿ
ಸ್ಟ್ರಾಂಗ್
ಕಮ್
ಬ್ಯಾಕ್
ಮಾಡುವ
ಸೂಚನೆ
ಕೊಟ್ಟಿದ್ದಾರೆ.
ರಾಗಿಣಿ
ಹೊಸ
ಸಿನಿಮಾ
ಕೇವಲ
ಕನ್ನಡದಲ್ಲಿಷ್ಟೇ
ಅಲ್ಲ,
ಮಲಯಾಳಂನಲ್ಲೂ
ನಿರ್ಮಾಣ
ಆಗಿದೆ.
ಅದುವೇ
‘ಶೀಲಾ’.
ಎರಡೂ
ಭಾಷೆಯಲ್ಲೂ
ಏಕಕಾಲಕ್ಕೆ
ಸಿನಿಮಾ
ಶೂಟಿಂಗ್
ಮಾಡಲಾಗಿದೆ.
ಇದರೊಂದಿಗೆ
ಬೇರೆ
ಬೇರೆ
ಭಾಷೆಯಲ್ಲೂ
ಸಿನಿಮಾ
ರಿಲೀಸ್‌ಗೆ
ರೆಡಿಯಾಗುತ್ತಿದೆ.

ಕೆಲವು
ದಿನಗಳ
ಹಿಂದೆನೇ
ರಾಗಿಣಿ
ತನ್ನ
ಹೊಸ
ಸಿನಿಮಾ
ಬಗ್ಗೆ
ಸುಳಿವು
ನೀಡಿದ್ದರು.
ಅದರಂತೆ
ದ್ವಿಭಾಷೆಯಲ್ಲಿ
ನಿರ್ಮಾಣಗೊಂಡಿರೋ
‘ಶೀಲಾ’
ಸಿನಿಮಾದ
ಫಸ್ಟ್
ಲುಕ್
ರಿಲೀಸ್
ಆಗಿದೆ.
ಈ
ಸಿನಿಮಾವನ್ನು
ಪ್ಯಾನ್
ಇಂಡಿಯಾ
ಲೆವೆಲ್‌ನಲ್ಲಿ
ರಿಲೀಸ್
ಮಾಡುವ
ಆಲೋಚನೆ
ಚಿತ್ರತಂಡಕ್ಕಿದೆ.
ಅಂದ್ಹಾಗೆ
‘ಶ್ರೀಲಾ’
ಪಕ್ಕಾ
ಮಹಿಳಾ
ಪ್ರಧಾನ
ಸಿನಿಮಾ.
ಇದರಲ್ಲಿ
ರಾಗಿಣಿ
ಪ್ರಮುಖ
ಪಾತ್ರದಲ್ಲಿ
ನಟಿಸಿದ್ದಾರೆ.
ತನಗೆ
ಎದುರಾಗುವ
ಕಷ್ಟಗಳನ್ನು
ಮಹಿಳೆಯೊಬ್ಬಳು
ಹೇಗೆ
ನಿಭಾಯಿಸುತ್ತಾಳೆ
ಎನ್ನವುದೇ
ಸಿನಿಮಾ
ಕಥೆ.
ಹೀಗಾಗಿ
ರಾಗಿಣಿ
ಕೂಡ
ಈ
ಸಿನಿಮಾ
ಬಗ್ಗೆ
ಫುಲ್
ಥ್ರಿಲ್
ಆಗಿದ್ದಾರೆ.
“ನನ್ನ
ಪಾತ್ರ
ಚೆನ್ನಾಗಿದೆ.
ಸಮಾಜದಲ್ಲಿ
ಎದುರಾಗುವ
ಸಾಕಷ್ಟು
ಸವಾಲುಗಳನ್ನು
ಹೆಣ್ಣುಮಗಳೊಬ್ಬಳು
ಹೇಗೆ
ನಿಭಾಯಿಸುತ್ತಾಳೆ
ಎಂಬುದು
ಕಥೆ.
ಈ
ಪ್ಯಾನ್
ಇಂಡಿಯಾ
ಸಿನಿಮಾದ
ಚಿತ್ರೀಕರಣವೀಗ
ಮುಕ್ತಾಯವಾಗಿದೆ.
ಕೇರಳ
ಹಾಗೂ
ಕರ್ನಾಟಕದಲ್ಲಿ
ಚಿತ್ರೀಕರಣ
ನಡೆದಿದೆ.
ಸದ್ಯಕ್ಕೀಗ
ಫಸ್ಟ್
ಲುಕ್
ಬಿಡುಗಡೆಯಾಗಿದೆ.
ಶೀಘ್ರದಲ್ಲೇ
ಟ್ರೈಲರ್
ಬರಲಿದೆ”
ಎಂದು
ರಾಗಿಣಿ
ದ್ವಿವೇದಿ
ತಿಳಿಸಿದ್ದಾರೆ.

‘ಶೀಲಾ’
ಸಿನಿಮಾವನ್ನು
ಡಿ.ಎಂ.ಪಿಳ್ಳೆ
ನಿರ್ಮಾಣ
ಮಾಡಿದ್ದರೆ,
ಬಾಲು
ನಾರಾಯಣನ್
ಆಕ್ಷನ್
ಕಟ್
ಹೇಳಿದ್ದಾರೆ.
ರಾಗಿಣಿ
ದ್ವಿವೇದಿ,
ಅವಿನಾಶ್,
ಶೋಭ್
ರಾಜ್,
ಚಿತ್ರಾ
ಶೆಣೈ,
ಮಹೇಶ್
ನಾಯರ್,
ಶ್ರೀಪತಿ,
ರಿಯಾಜ್
ಖಾನ್,
ಅಬೆ
ಡೇವಿಡ್,
ಆರತಿ
ಗೋಪಾಲ್
ಮುಂತಾದವರು
ಪ್ರಮುಖ
ಪಾತ್ರದಲ್ಲಿ
ನಟಿಸಿದ್ದಾರೆ.
English summary
Ragini Dwivedi’s Stunning Look in Kannada-Malayalam Bilingual Movie Sheela know more.
Wednesday, June 21, 2023, 23:38
Story first published: Wednesday, June 21, 2023, 23:38 [IST]