ರಷ್ಯಾ ಹಾರಿಸಿದ ಕ್ಷಿಪಣಿಗೆ 8 ಅಮಾಯಕ ಜೀವಗಳು ಬಲಿ? | Ukraine loses 8 lives in deadly missile attack

International

oi-Malathesha M

|

Google Oneindia Kannada News

ರಷ್ಯಾ ಹಾಗೂ ಉಕ್ರೇನ್ ತಮ್ಮ ಹಠ ಬಿಡುತ್ತಿಲ್ಲ, ಇನ್ನೊಂದು ಕಡೆ ಇವರಿಬ್ಬರ ದ್ವೇಷಕ್ಕೆ ಅಮಾಯಕರು ಬಲಿಯಾಗುವುದು ತಪ್ಪುತ್ತಿಲ್ಲ. ರಷ್ಯಾದಲ್ಲಿ ಖಾಸಗಿ ಸೇನೆ ದಂಗೆಯ ನಂತರ ಎರಡೂ ರಾಷ್ಟ್ರಗಳ ನಡುವೆ ಭೀಕರ ಯುದ್ಧ ನಡೆಯುತ್ತಿದ್ದು, ಕಳೆದ 500 ದಿನಗಳಲ್ಲೇ ಅತ್ಯಂತ ವಿನಾಶಕಾರಿ ಹಂತ ತಲುಪಿದೆ. ಈಗಲೂ ಅಷ್ಟೇ ರಷ್ಯಾ ನಡೆಸಿದ ಭೀಕರ ಕ್ಷಿಪಣಿ ದಾಳಿಗೆ ಉಕ್ರೇನ್ ಛಿದ್ರ ಛಿದ್ರವಾಗಿದೆ.

ಅಂದಹಾಗೆ ರಷ್ಯಾ ನಡೆಸಿದ ರಾಕೆಟ್‌ ದಾಳಿಗೆ ಪೂರ್ವ ಉಕ್ರೇನ್‌ನ ಲೈಮನ್‌ ನಗರ ಸಂಪೂರ್ಣ ಬೆಚ್ಚಿಬಿದ್ದಿದೆ. ದಿಢೀರ್ ರಷ್ಯಾ ಕ್ಷಿಪಣಿಯ ಮಳೆಯನ್ನೇ ಸುರಿಸಿದ್ದು, ಘಟನೆಯಲ್ಲಿ ಒಟ್ಟು 8 ನಾಗರಿಕರು ಮೃತಪಟ್ಟಿದ್ದಾರೆ. ಅಲ್ಲದೆ 13 ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನ್‌ ಆಂತರಿಕ ಸಚಿವಾಲಯ ಆರೋಪಿಸಿದೆ. ಇಂದು ಉಕ್ರೇನ್ ಕಾಲಮಾನ ಬೆಳಗ್ಗೆ 10 ಗಂಟೆಯ ವೇಳೆಗೆ ನಡೆದ ರಾಕೆಟ್‌ ದಾಳಿಯಲ್ಲಿ ವಸತಿ ಕಟ್ಟಡ ಸೇರಿದಂತೆ 1 ಮುದ್ರಣಾಲಯ ಹಾಗೂ 3 ಕಾರುಗಳಿಗೆ ಬೆಂಕಿ ತಗುಲಿದೆ. ಈ ಮೂಲಕ 8 ಅಮಾಯಕರ ಪ್ರಾಣಪಕ್ಷಿ ಹಾರಿಹೋಗಿದೆ.

Ukraine loses 8 lives in deadly missile attack

ಯಾರದ್ದು ಸುಳ್ಳು.. ಯಾರದ್ದು ಸತ್ಯ?

ಈಗ ಉಕ್ರೇನ್ ದೇಶದಲ್ಲಿ ಎಲ್ಲಿ ನೋಡಿದರೂ ಹೆಣಗಳ ರಾಶಿ ಕಾಣುತ್ತಿದೆ. ದಿಢೀರ್ ಬಂದು ಬೀಳುತ್ತಿರುವ ಕ್ಷಿಪಣಿಗಳು ಅಮಾಯಕರ ಜೀವ ತೆಗೆಯುತ್ತಿವೆ. ಹೀಗೆ ರಷ್ಯಾ & ಉಕ್ರೇನ್ ಯುದ್ಧ ಶುರುವಾದ ಮರುದಿನದಿಂದಲೇ ಜಗತ್ತಿಗೆ ಒಂದಲ್ಲ ಒಂದು ಕಂಟಕ ಎದುರಾಗುತ್ತಿದೆ. ಅದ್ರಲ್ಲೂ ಉಕ್ರೇನ್‌ನ ಜಪೋರಿಝಿಯಾ ಪರಮಾಣು ವಿದ್ಯುತ್ ಸ್ಥಾವರದ ಮೇಲೆ ದಾಳಿ ನಡೆಯುವ ಭಯ ಈಗ ಆವರಿಸಿದೆ. ಕಳೆದ ಒಂದು ವಾರದಿಂದಲೂ ಇಲ್ಲಿ ಭಯ ಕಾಡುತ್ತಿದೆ. ಇದೇ ಸಮಯ ಬಳಸಿಕೊಂಡು ಉಕ್ರೇನ್ ಹೊಂಚು ಹಾಕುತ್ತಿದೆ ಎಂದು ರಷ್ಯಾ ಆರೋಪಿಸುತ್ತಿದ್ದರೆ, ಅತ್ತ ರಷ್ಯಾ ಪಡೆ ದಾಳಿಯಿಂದ ಉಕ್ರೇನ್ ನಾಗರಿಕರು ಸತ್ತಿದ್ದಾರೆ ಅಂತಿದೆ ಉಕ್ರೇನ್ ಸೇನೆ.

ಅಮೆರಿಕ ವಿರುದ್ಧ ರಷ್ಯಾ ರಿವೇಂಜ್?

ರಷ್ಯಾ ವಿರುದ್ಧ ಹೋರಾಡಲು ಅಮೆರಿಕ ಶಸ್ತ್ರಾಸ್ತ್ರಗಳನ್ನ ಉಕ್ರೇನ್‌ಗೆ ಕಳುಹಿಸುತ್ತಿದೆ. ಉಕ್ರೇನ್ ಮೇಲೆ ರಷ್ಯಾದ ಸೇನೆ ಆಕ್ರಮಣ ಆರಂಭಿಸಿದ ಬಳಿಕ ಅಮೆರಿಕ ಭಾರಿ ನೆರವು ನೀಡ್ತಿದೆ. ರಷ್ಯಾ ದೀರ್ಘಕಾಲದ ಯುದ್ಧಕ್ಕೆ ಸಿದ್ಧವಾಗಿ ಬಂದಿದೆ. ರಷ್ಯಾ ಅಧ್ಯಕ್ಷ ಪುಟಿನ್‌ರ ಆಪ್ತರೇ ಈ ಮಾಹಿತಿ ನೀಡಿದ್ದರು. ಮುಂದಿನ 10 ವರ್ಷಗಳಲ್ಲೂ ರಷ್ಯಾ & ಉಕ್ರೇನ್ ಯದ್ಧ ನಿಲ್ಲಲ್ಲ ಎಂದಿದ್ದರು. ಹೀಗೆ ಅಮೆರಿಕಗೆ ಕೂಡ ತನ್ನ ತಂತ್ರಗಳಲ್ಲಿ ಫ್ಲಾಪ್ ಆಗುತ್ತಿದ್ದಿದ್ದು ಗೊತ್ತಾಗಿದೆ. ಈ ಕಾರಣಕ್ಕೆ ಅಮೆರಿಕ & ನ್ಯಾಟೋ ಪಡೆಗಳು ಕೂಡ ರಷ್ಯಾ ವಿರುದ್ಧ ದೀರ್ಘ ಕಾಲದ ಯುದ್ಧಕ್ಕೆ ಸನ್ನದ್ಧವಾಗಿ ಉಕ್ರೇನ್ ಪರ ನಿಲ್ಲುತ್ತಿವೆ. ಇದೇ ಹೊತ್ತಲ್ಲಿ ರಷ್ಯಾ ಕೂಡ ಭೀಕರ ದಾಳಿ ಆರಂಭಿಸಿದೆ.

Ukraine loses 8 lives in deadly missile attack

ಹೀಗೆ ರಷ್ಯಾ & ಅಮೆರಿಕ ಮಧ್ಯೆ ಕಿತ್ತಾಟದಲ್ಲಿ ಉಕ್ರೇನ್ ಅಸ್ತ್ರವಾಗಿ ಬಳಕೆಯಾಗುತ್ತಿದೆ ಅನ್ನೋ ಆರೋಪ ಆಗಾಗ ಕೇಳಿಬರುತ್ತಿದೆ. ಉಕ್ರೇನ್ ಬಳಸಿಕೊಂಡು ಅಮೆರಿಕ ನಮ್ಮ ವಿರುದ್ಧ ಪಿತೂರಿ ನಡೆಸುತ್ತಿದೆ ಎಂದು ರಷ್ಯಾ ಆರೋಪ ಮಾಡುತ್ತಿದೆ. ಈ ನಡುವೆ ರಷ್ಯಾ ಮಾತಿಗೆ ಬೆಲೆ ಕೊಡದೆ ಅಮೆರಿಕ ಕೂಡ ಉಕ್ರೇನ್‌ಗೆ ಭಾರಿ ಪ್ರಮಾಣದ ನೆರವು ನೀಡುತ್ತಿದೆ. ಇಲ್ಲಿಯವರೆಗೂ ಸುಮಾರು 3 ಲಕ್ಷ ಕೋಟಿ ನೆರವು ನೀಡಿದ್ದ ಅಮೆರಿಕ ಇನ್ನಷ್ಟು ಅಸ್ತ್ರಗಳನ್ನ ಕಳುಹಿಸಲು ತಯಾರಿಯನ್ನ ನಡೆಸಿದೆ. ಆದರೆ ಇದೇ ಸಂದರ್ಭದಲ್ಲಿ ರಷ್ಯಾ ತನ್ನ ಕ್ಷಿಪಣಿ ದಾಳಿಯನ್ನ ತೀವ್ರಗೊಳಿಸಿದೆ.

English summary

Ukraine loses 8 lives in deadly missile attack.

Story first published: Saturday, July 8, 2023, 21:59 [IST]

Source link