International
oi-Malathesha M
ಕೀವ್: ರಷ್ಯಾ ಹಾಗೂ ಉಕ್ರೇನ್ ನಡುವೆ ನಡೆಯುತ್ತಿರುವ ಭೀಕರ ಕಾಳಗ ಇಂದಿಗೆ 520ನೇ ದಿನಕ್ಕೆ ಕಾಲಿಟ್ಟಿದೆ. ಆದರೆ ಇದೇ ಸಂದರ್ಭದಲ್ಲಿ ರಷ್ಯಾ ವಿರುದ್ಧ ನಾವು ದೊಡ್ಡ ಗೆಲುವು ಸಾಧಿಸಿದ್ದೇವೆ ಎಂದು ಉಕ್ರೇನ್ ಹೇಳಿಕೊಂಡಿದೆ. ಅದ್ರಲ್ಲೂ ಉಕ್ರೇನ್‌ನ ದಕ್ಷಿಣ ಭಾಗದಲ್ಲಿ ಕಳೆದುಕೊಂಡಿದ್ದ ಪ್ರಮುಖ ಪ್ರದೇಶದಲ್ಲಿ ಮತ್ತೆ ಹಿಡಿತ ಸಿಕ್ಕಿದೆ ಎಂದಿದೆ ಉಕ್ರೇನ್.
ಯುದ್ಧ ಶುರುವಾದ ನಂತರ ಉಕ್ರೇನ್ ಸಾಕಷ್ಟು ಪ್ರದೇಶಗಳನ್ನು ಕಳೆದುಕೊಂಡಿದೆ. ಹೀಗೆ ಉಕ್ರೇನ್ ಕೈಬಿಟ್ಟು ಹೋದ ಪ್ರಮುಖ ಪ್ರದೇಶಗಳ ಪೈಕಿ ದಕ್ಷಿಣ ಭಾಗದಲ್ಲಿ ದೊಡ್ಡ ನಷ್ಟ ಎದುರಾಗಿತ್ತು. ಇದೀಗ ಸಾರೋಮೈಯೋಸ್ಕಿ ಭಾಗದಲ್ಲಿ ಹಳ್ಳಿಯೊಂದನ್ನು ರಷ್ಯಾ ಸೇನೆಯ ವಶದಿಂದ ಮರಳಿ ಪಡೆದಿದ್ದೇವೆ ಎಂದಿದೆ ಉಕ್ರೇನ್. ಈ ಕುರಿತು ಖುದ್ದು ಉಕ್ರೇನ್ ಅಧ್ಯಕ್ಷ ಟ್ವೀಟ್ ಮಾಡಿ ಮಾಹಿತಿ ನೀಡಿದ್ದು, ನಮ್ಮ ದಕ್ಷಿಣ! ನಮ್ಮ ಹುಡುಗರು, ಉಕ್ರೇನ್‌ಗೆ ವಿಜಯ ಎಂದು ಬರೆದುಕೊಂಡಿದ್ದಾರೆ. ಆದರೆ ಉಕ್ರೇನ್ ಹೇಳಿಕೆ ಬಗ್ಗೆ ರಷ್ಯಾ ರಿಯಾಕ್ಷನ್ ಏನು ಗೊತ್ತಾ? ಮುಂದೆ ಓದಿ.
ಅದೆಲ್ಲಾ ಸುಳ್ಳು ಅಂತಿದೆ ರಷ್ಯಾ!
ಹೌದು, ಆ ಕಡೆ ಉಕ್ರೇನ್ ನಾವು ಗೆಲುವು ಸಾಧಿಸಿದ್ದೇವೆ ಅಂತಿದೆ. ಆದರೆ ಈ ಬಗ್ಗೆ ರಷ್ಯಾ ಮಾತ್ರ ವ್ಯತಿರಿಕ್ತ ಹೇಳಿಕೆ ನೀಡಿದೆ. ಉಕ್ರೇನ್ ನಮ್ಮಿಂದ ಯಾವುದೇ ಪ್ರದೇಶವನ್ನೂ ವಶಕ್ಕೆ ಪಡೆದಿಲ್ಲ. ರಷ್ಯಾ ಸೇನೆಯ ದಾಳಿಯಿಂದ ಉಕ್ರೇನ್ ಜರ್ಜರಿತವಾಗಿದೆ ಎಂದಿದೆ. ಈ ವೇಳೆ ತನ್ನ ದಾಳಿಯನ್ನು ಮತ್ತಷ್ಟು ಭೀಕರಗೊಳಿಸುವ ಮುನ್ಸೂಚನೆ ನೀಡಿದೆ ರಷ್ಯಾ. ಹೀಗಾಗಿ ಉಕ್ರೇನ್ ನಿವಾಸಿಗಳಲ್ಲಿ ನಡುಕ ಶುರುವಾಗಿದ್ದು, ಈ ಇಬ್ಬರ ಕಿತ್ತಾಟದಲ್ಲಿ ಅಮಾಯಕರು ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾಗಿದೆ. ಕೆಲ ದಿನಗಳ ಹಿಂದೆ ರಷ್ಯಾ ಸೇನೆ ಉಕ್ರೇನ್‌ನ ಬಂದರು ಪ್ರದೇಶಗಳ ಮೇಲೆ ಭೀಕರ ದಾಳಿ ನಡೆಸಿತ್ತು.
Russian President Vladimir Putin: ಅರೆಸ್ಟ್ ವಾರಂಟ್‌ನಿಂದ ಪುಟಿನ್ ಮೇಲೆ ಆಗಬಹುದಾದ ಪರಿಣಾಮ ತಿಳಿಯಿರಿ
520ನೇ ದಿನಕ್ಕೆ ಕಾಲಿಟ್ಟ ಯುದ್ಧ
ಕೆಲವೇ ದಿನದಲ್ಲಿ ಮುಗಿದು ಹೋಗುತ್ತೆ ಎಂದು ಅಂದುಕೊಂಡಿದ್ದ ರಷ್ಯಾ ಮತ್ತು ಉಕ್ರೇನ್ ಯುದ್ಧ ಸುಮಾರು ಒಂದೂವರೆ ವರ್ಷ ಮುಗಿಸಿದೆ. ಇಂದಿಗೆ 520ನೇ ದಿನಕ್ಕೆ ಕಾಲಿಟ್ಟಿರುವ ಈ ರಣಭೀಕರ ಕಾಳಗ ನಿಲ್ಲುವ ಮುನ್ಸೂಚನೆ ಇಲ್ಲ. ರಷ್ಯಾ ಕೂಡ ಯುದ್ಧವನ್ನು ಇನ್ನೂ ಮುಂದಕ್ಕೆ ಕೊಂಡೊಯ್ಯಲು ಸನ್ನದ್ಧವಾಗಿದೆ. ಉಕ್ರೇನ್ ಪರದಾಡುತ್ತಿರುವಾಗ ಪಾಶ್ಚಿಮಾತ್ಯ ರಾಷ್ಟ್ರಗಳು ನೆರವಿಗೆ ನಿಂತಿವೆ. ಇದು ರಷ್ಯಾ ಅಧ್ಯಕ್ಷ ಪುಟಿನ್‌ರನ್ನ ಇನ್ನಷ್ಟು ಕೆರಳಿಸುತ್ತಿದೆ. ಹೀಗಾಗಿ ರಷ್ಯಾ ಹಾಗೂ ಉಕ್ರೇನ್ ಯುದ್ಧ ಕ್ಷಣಕ್ಷಣಕ್ಕೂ ಭೀಕರ ಸ್ವರೂಪ ಪಡೆಯುತ್ತಿದೆ. ನೋಡ ನೋಡುತ್ತಲೇ ಯುದ್ಧ 520 ದಿನ ಪೂರೈಸಿದ್ದು, ಇನ್ನೇನು 2ನೇ ವರ್ಷವನ್ನೂ ಈ ಯುದ್ಧ ಪೂರೈಸುವ ಸಾಧ್ಯತೆ ದಟ್ಟವಾಗಿದೆ.
ಭಯದಲ್ಲೇ ನರಳುತ್ತಿರುವ ಉಕ್ರೇನ್ ಜನ
ರಷ್ಯಾ & ಉಕ್ರೇನ್ ಯುದ್ಧದಲ್ಲಿ ಪರಮಾಣು ದಾಳಿಯ ಭೀತಿ ಕೂಡ ಇದೀಗ ಆವರಿಸಿದೆ. ಯೂರೋಪಿನ ಅತಿ ದೊಡ್ಡ ಅಣುಸ್ಥಾವರ ಜಪೋರಿಝಿಯಾ ನ್ಯೂಕ್ಲಿಯರ್ ಪ್ಲಾಂಟ್. 2022ರ ಮಾರ್ಚ್ ತಿಂಗಳಲ್ಲಿ ತನ್ನ ಅಣುಸ್ಥಾವರದ ಮೇಲೆ ರಷ್ಯಾ ಸೇನೆ ದಾಳಿ ನಡೆಸಿದೆ ಎಂದು ಉಕ್ರೇನ್ ಆರೋಪ ಮಾಡಿತ್ತು. ಆ ಬಳಿಕ ಜಗತ್ತು ಬೆಚ್ಚಿಬಿದ್ದಿತ್ತು, ನಂತರ ಸ್ವತಃ ಉಕ್ರೇನ್ ದಾಳಿ ಮಾಡಿ ನ್ಯೂಕ್ಲಿಯರ್ ಪ್ಲಾಂಟ್ ಟಾರ್ಗೆಟ್ ಮಾಡಿದೆ ಅಂತಿತ್ತು ರಷ್ಯಾ. ಆದರೆ ಈಗ ಬೇರೆಯೇ ವಿಷಯ ಹೊರಬಿದ್ದಿದೆ. ಏನದು ಆತಂಕಕಾರಿ ಮಾಹಿತಿ? ಮುಂದೆ ಓದಿ.
ಅಂದಹಾಗೆ ಜಪೋರಿಝಿಯಾ ನ್ಯೂಕ್ಲಿಯರ್ ಪ್ಲಾಂಟ್ ಕುರಿತು ಮೊನ್ನೆಯಷ್ಟೇ ವಿಶ್ವಸಂಸ್ಥೆ ಆಘಾತಕಾರಿ ಮಾಹಿತಿ ನೀಡಿತ್ತು. ಪರಮಾಣು ಸ್ಥಾವರ ಸುತ್ತಲೂ ನೆಲಬಾಂಬ್ ಇಟ್ಟಿರುವುದು ಆತಂಕ ಸೃಷ್ಟಿಮಾಡಿತ್ತು. ಇನ್ನೂ ಅಕಸ್ಮಾತ್ ಈ ಜಪೋರಿಝಿಯಾ ಸ್ಥಾವರ ಸ್ಫೋಟವಾಗಿದ್ದೇ ಆದರೆ ಅದು ಚೆರ್ನೊಬಿಲ್ ದುರಂತಕ್ಕಿಂತ 10 ಪಟ್ಟು ಹೆಚ್ಚು ಸಂಕಷ್ಟ ನೀಡಲಿದೆ. ಏಕೆಂದರೆ ಜಗತ್ತಿನ ದೊಡ್ಡ ಪರಮಾಣು ಸ್ಥಾವರಗಳ ಪೈಕಿ ಜಪೋರಿಝಿಯಾ ಕೂಡ ಒಂದಾಗಿದೆ. ಒಟ್ನಲ್ಲಿ ಇಬ್ಬರ ನಡುವಿನ ಜಗಳ ಇಡೀ ಜಗತ್ತಿಗೇ ಸಂಕಷ್ಟ ತಂದೊಡ್ಡಿದೆ.
English summary
Ukraine troops claimed that retaken a village from Russian troops
Story first published: Friday, July 28, 2023, 12:31 [IST]