International
oi-Malathesha M
ರಷ್ಯಾ: ಏನೋ ಮಾಡಲು ಹೋಗಿ ಏನೇನೋ ಆಗಿದೆ. ರಷ್ಯಾ & ಉಕ್ರೇನ್ ಯುದ್ಧದಲ್ಲಿ ಪುಟಿನ್ ಪಡೆ ವಿಜಯೋತ್ಸವ ಆಚರಿಸುತ್ತಿರುವ ಹೊತ್ತಲ್ಲೇ ಭಯಾನಕ ಆಘಾತವೂ ಸಿಕ್ಕಿದೆ. ದಿಢೀರ್ ರಷ್ಯಾ ಖಾಸಗಿ ಸೇನೆ ತನ್ನ ದೇಶದ ವಿರುದ್ಧವೇ ತಿರುಗಿಬಿದ್ದು, ಆಂತರಿಕ ಕಲಹಕ್ಕೆ ಕಾರಣವಾಗಿದೆ. ಆದರೆ ಇದೇ ಸಂದರ್ಭದಲ್ಲಿ ರಷ್ಯಾ ಬೆಂಕಿಯಲ್ಲಿ ಚಳಿ ಕಾಯಿಸಿಕೊಳ್ಳಲು ಯಾರೆಲ್ಲಾ ಸ್ಕೆಚ್ ಹಾಕಿದ್ದಾರೆ ಗೊತ್ತಾ? ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.
ಅಮೆರಿಕ, ರಷ್ಯಾ ಹಾವು & ಮುಂಗುಸಿ ಇದ್ದಂತೆ. ಒಬ್ಬರ ಮೇಲೊಬ್ರು ಕತ್ತಿ ಮಸೆಯುತ್ತಾ ಬಡಿದಾಡುತ್ತಿದ್ದಾರೆ. ಪರಿಸ್ಥಿತಿ ಹೀಗಿದ್ದಾಗಲೇ ರಷ್ಯಾದಲ್ಲಿ ಆಂತರಿಕ ಯುದ್ಧ ಭುಗಿಲೆದ್ದಿದ್ದು ಪುಟಿನ್ ಶತ್ರುಗಳು ಅಲರ್ಟ್ ಆಗಿದ್ದಾರೆ. ಅದರಲ್ಲೂ ಪಾಶ್ಚಿಮಾತ್ಯ ರಾಷ್ಟ್ರಗಳು ಈ ಸುದ್ದಿ ಕಿವಿಗೆ ಬೀಳುತ್ತಿದ್ದಂತೆ ನಿದ್ದೆಯಿಂದ ಮೇಲೆದ್ದಿವೆ. ಅಮೆರಿಕ ವಿದೇಶಾಂಗ ಕಾರ್ಯದರ್ಶಿಯ ನೇತೃತ್ವದಲ್ಲಿ ಮಹತ್ವದ ಚರ್ಚೆ ಆರಂಭವಾಗಿದೆ ಅನ್ನೋ ಮಾಹಿತಿ ಹೊರಬಿದ್ದಿದೆ. ಇದು ಒಂದು ಕಡೆಯಾದರೆ, ರಷ್ಯಾ ಸುತ್ತಮುತ್ತ ಇರುವ ನ್ಯಾಟೋ ರಾಷ್ಟ್ರಗಳು ಕೂಡ ಅಲರ್ಟ್ ಆಗಿವೆ. ಹಾಗಾದರೆ ಮುಂದೆ ರಷ್ಯಾ ಗತಿ ಏನು? (Russia Ukraine War).
ಜಿ7 ರಾಷ್ಟ್ರಗಳ ಜೊತೆ ಅಮೆರಿಕ ಮಾತುಕತೆ
ರಷ್ಯಾದ ಖಾಸಗಿ ಸೇನೆಯ ಮುಖ್ಯಸ್ಥ ಯೆವ್ಗೆನಿ ಪ್ರಿಗೊಝಿನ್ ಗ್ಯಾಂಗ್ ಕಟ್ಕೊಂಡು ತನ್ನದೇ ದೇಶದ ಮೇಲೆ ಎರಗಿದ್ದಾನೆ. ದಿಢೀರ್ ಪರಿಸ್ಥಿತಿ ಕೈಮೀರಿ ಹೋಗಿರುವುದು ರಷ್ಯಾಗೆ ಶಾಕ್ ಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಜಿ7 ರಾಷ್ಟ್ರಗಳ ಮುಖ್ಯಸ್ಥರ ಜೊತೆ ಮಾತನಾಡಿದ್ದಾರೆ. ಅಲ್ಲದೆ ಯುರೋಪ್ ರಾಷ್ಟ್ರಗಳ ಎಲ್ಲಾ ಪ್ರಮುಖ ಸಚಿವರ ಜೊತೆಗು ಆ್ಯಂಟನಿ ಬ್ಲಿಂಕೆನ್ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ರಷ್ಯಾ ಪರಿಸ್ಥಿತಿಯ ಕ್ಷಣಕ್ಷಣದ ಸುದ್ದಿಯನ್ನೂ ಅಮೆರಿಕ ಅಪ್‌ಡೇಟ್ ತೆಗೆದುಕೊಳ್ಳುತ್ತಿದೆ. ಹಾಗೂ ರಷ್ಯಾ ಗಡಿಯಲ್ಲಿರುವ ಅಮೆರಿಕದ ಸ್ನೇಹಿತ ರಾಷ್ಟ್ರಗಳು ಅಲರ್ಟ್ ಆಗಿವೆ.
I’m not saying a Wagner coup is where the Pentagon’s .2 billion “accounting error” went.
I am just reminding everyone Wagner group is literally a mercenary group 🧐 pic.twitter.com/XgdAyP18pO
— Brandon Herrera (@TheAKGuy) June 24, 2023
ಸಭೆಗಳಲ್ಲಿ ಪುಟಿನ್ ಫುಲ್ ಬ್ಯುಸಿ!
ಸೇಂಟ್ ಪೀಟರ್ಸ್ ಬರ್ಗ್ ಸಿಟಿ ಮೇಲೆ ಭೀಕರ ದಾಳಿ ನಡೆಯುವ ಅನುಮಾನ ಕಾಡುತ್ತಿದೆ. ಏಕೆಂದರೆ ಸೇಂಟ್ ಪೀಟರ್ಸ್ ಬರ್ಗ್ ನಗರದಲ್ಲೇ ವ್ಯಾಗ್ನರ್ ಗುಂಪು ಅಂದರೆ ರಷ್ಯಾ ಖಾಸಗಿ ಸೇನೆಯ ಕೇಂದ್ರ ಕಚೇರಿ ಇದೆ. ಹಾಗೇ ಇದೇ ಸ್ಥಳದ ಅಕ್ಕಪಕ್ಕ ನ್ಯಾಟೋ ಪಡೆಗಳ ಸದಸ್ಯ ರಾಷ್ಟ್ರಗಳು ಗಡಿ ಹಂಚಿಕೊಂಡಿವೆ. ಹೀಗಾಗಿ ಯಾವ ಕ್ಷಣದಲ್ಲಿ ಎಂಥ ಪರಿಸ್ಥಿತಿ ಬರುತ್ತೋ ಗೊತ್ತಿಲ್ಲ. ಇದನ್ನ ಅರಿತ ರಷ್ಯಾ ಸೇನೆ ತನ್ನ ಯುದ್ಧ ವಿಮಾನಗಳನ್ನು ಸೇಂಟ್ ಪೀಟರ್ಸ್ ಬರ್ಗ್ ಕಡೆಗೆ ನುಗ್ಗಿಸಿದೆ. ಅಲ್ಲದೆ ಖಾಸಗಿ ಸೇನೆ ಕಟ್ಟಿಹಾಕಲು ರಣತಂತ್ರ ರೆಡಿಯಾಗಿದ್ದು, ಪುಟಿನ್ ನೇತೃತ್ವದಲ್ಲಿ ಸಭೆಗಳ ಮೇಲೆ ಸಭೆಗಳು ನಡೆಯುತ್ತಿವೆ.
Street fights have broken out on the streets of Rostov between pro-Wagner and pro-Putin supporters. #Russia #RussiaIsCollapsing #RussianCivilWar #Wagner #WagnerCoup #WagnerGroup pic.twitter.com/tKxrTeN8Sw
— Paul Golding (@GoldingBF) June 24, 2023
ಪೆಟ್ರೋಲ್ ಅಡ್ಡೆ ಮೇಲೆ ಬಾಂಬ್ ದಾಳಿ!
ವೊರೊನೆಜ್ ನಗರ ಹೊತ್ತಿ ಉರಿಯುತ್ತಿದ್ದು, ಈ ಭಾಗದ ತೈಲ ಸಂಗ್ರಹದ ಮೇಲೆ ದಿಢೀರ್ ದಾಳಿ ಶುರುವಾಗಿದೆ. ಅದರಲ್ಲೂ ರಷ್ಯಾ ಸೇನೆಯ ಹೆಲಿಕಾಪ್ಟರ್ & ಯುದ್ಧ ವಿಮಾನಗಳ ಮೂಲಕವೇ ದಾಳಿ ನಡೆಸುತ್ತಿರುವ ಆರೋಪ ಕೇಳಿಬಂದಿದೆ. ಈ ಪೈಕಿ ವೊರೊನೆಜ್‌ನಲ್ಲೂ ಹೆಲಿಕಾಪ್ಟರ್ ನೇರವಾಗಿ ತೈಲ ಸಂಗ್ರಹಣೆ ಟ್ಯಾಂಕರ್ ಮೇಲೆ ಬಾಂಬ್ ಹಾಕಿದೆ. ವಿಡಿಯೋ ಈಗ ವೈರಲ್ ಆಗುತ್ತಿದ್ದು, ಬಾಂಬ್ ಹಾಕಿದ್ದು ಸ್ವತಃ ರಷ್ಯಾ ಸೇನೆಗೆ ಸೇರಿದ ಹೆಲಿಕಾಪ್ಟರ್ ಅನ್ನೋದು ಸ್ಪಷ್ಟವಾಗುತ್ತಿದೆ. ಘಟನೆ ಬಳಿಕ ರಷ್ಯಾ ಗಡಿ ಭಾಗದ ಜನರು ಭಯಗೊಂಡು ಹೊರಗೆ ಓಡಿ ಬಂದಿದ್ದಾರೆ.
ಸೇಂಟ್ ಪೀಟರ್ಸ್ ಬರ್ಗ್ ಕಡೆಗೆ ನುಗ್ಗಿದ ರಷ್ಯಾ ಯುದ್ಧ ವಿಮಾನಗಳು: ಗಡಿ ಉಳಿಸಿಕೊಳ್ಳಲು ರಷ್ಯಾ ಪರದಾಟ?
ಒಟ್ನಲ್ಲಿ ರಷ್ಯಾ & ಉಕ್ರೇನ್ ಯುದ್ಧ ಶುರುವಾಗಿ ಇನ್ನೇನು 500 ದಿನಗಳು ತುಂಬಲಿವೆ. ಆದರೆ ಈ ಹೊತ್ತಲ್ಲೇ ರಷ್ಯಾ ಒಳಗೆ ಬೆಂಕಿ ಹೊತ್ತಿಕೊಂಡಿದೆ. ದಿಢೀರ್ ರಷ್ಯಾ ಖಾಸಗಿ ಸೇನೆ ಯುದ್ಧಕ್ಕೆ ಸಿದ್ಧವಾಗಿ ಮುನ್ನುಗ್ಗಿದೆ. ಹಾಗೇ ರಷ್ಯಾ ಸೇನೆ ಪ್ರಧಾನ ಕಚೇರಿ ಇರುವ ಜಾಗಕ್ಕೆ ನುಗ್ಗಿ ಬಂದಿದೆ ಖಾಸಗಿ ಪಡೆ. ಹೀಗಾಗಿ ರಷ್ಯಾದ ಗಲ್ಲಿ ಗಲ್ಲಿಗಳನ್ನೂ ಬಂದ್ ಮಾಡಿ, ದಂಗೆ ಎದ್ದಿರುವ ಖಾಸಗಿ ಸೇನೆ ಒಳಗೆ ಬರದಂತೆ ರಷ್ಯಾ ಸೇನೆ ಕಟ್ಟೆಚ್ಚರ ವಹಿಸಿದೆ. ಈ ಮಧ್ಯೆ ಪಾಶ್ಚಿಮಾತ್ಯ ರಾಷ್ಟ್ರಗಳು ಅಂದರೆ ಅಮೆರಿಕ ಮತ್ತು ನ್ಯಾಟೋ ಪಡೆಗಳ ಕುಮ್ಮಕ್ಕಿನಿಂದ ದಾಳಿ ನಡೆದಿದೆ ಎಂದು ರಷ್ಯಾ ಆರೋಪಿಸಿದೆ. ಸ್ಥಳೀಯರು ಸೋಷಿಯಲ್ ಮೀಡಿಯಾದಲ್ಲಿ ಹೇಳುತ್ತಿರುವಂತೆ ಈಗಾಗಲೇ ಭೀಕರ ಸಂಘರ್ಷ ಆರಂಭವಾಗಿದೆ.
English summary
Russia alerted army about their enemies after Wagner group rebellion attack.
Story first published: Saturday, June 24, 2023, 23:13 [IST]