ರಷ್ಯಾಗೆ ಹೊಸ ಅಧ್ಯಕ್ಷ ಫಿಕ್ಸ್? ಖಾಸಗಿ ಸೇನೆಯಿಂದ ವ್ಲಾದಿಮಿರ್ ಪುಟಿನ್ ಹತ್ಯೆಗೆ ಸಿದ್ಧವಾಯ್ತಾ ಸ್ಕೆಚ್? | Wagner group chief warned that Russia will see new president soon

International

oi-Malathesha M

|

Google Oneindia Kannada News

ಮಾಸ್ಕೋ: ರಷ್ಯಾ ಅಧ್ಯಕ್ಷ ಪುಟಿನ್ ಜೀವಕ್ಕೆ ಅಪಾಯ ಎದುರಾದಂತೆ ಕಾಣುತ್ತಿದೆ. ಕಳೆದ ತಿಂಗಳು ಡ್ರೋನ್ ಮೂಲಕ ವ್ಲಾದಿಮಿರ್ ಪುಟಿನ್ ಹತ್ಯೆಗೆ ಪ್ರಯತ್ನ ನಡೆದಿತ್ತು. ಈ ಘಟನೆ ನಡೆದು 1 ತಿಂಗಳು ಕಳೆಯುವ ಒಳಗೆ ಮತ್ತೊಂದು ಅಪಾಯ ಎದುರಾಗಿದೆ, ರಷ್ಯಾ ಖಾಸಗಿ ಸೇನೆ ಪುಟಿನ್ ಕಥೆ ಮುಗಿಸಲು ಸ್ಕೆಚ್ ಹಾಕಿದೆ ಅನ್ನೋ ಆರೋಪ ಕೇಳಿಬಂದಿದೆ.

ಹಲವು ದಿನಗಳ ಬಳಿಕ ರಷ್ಯಾ ಅಧ್ಯಕ್ಷ ಪುಟಿನ್ ದಿಢೀರ್ ರಾಷ್ಟ್ರವನ್ನ ಉದ್ದೇಶಿಸಿ ಭಾಷಣ ಮಾಡಿದ್ದಾರೆ. ರಷ್ಯಾದಲ್ಲಿ ಖಾಸಗಿ ಸೇನೆ ತನ್ನ ದೇಶದ ಅಧ್ಯಕ್ಷ ಹಾಗೂ ಸೇನಾ ಮುಖ್ಯಸ್ಥನ ವಿರುದ್ಧ ಮುನಿಸಿಕೊಂಡು, ರಷ್ಯಾ ಸೇನೆ ಕೇಂದ್ರ ಕಚೇರಿ ವಶಕ್ಕೆ ಪಡೆಯಲು ನುಗ್ಗುತ್ತಿದೆ. ಈ ವೇಳೆ ರಷ್ಯಾ ಖಾಸಗಿ ಸೇನೆಯ ಮುಖ್ಯಸ್ಥ ಯೆವ್ಗೆನಿ ಪ್ರಿಗೊಝಿನ್‌ನ ಬಂಧನಕ್ಕೆ ಪುಟಿನ್ ಆದೇಶ ನೀಡಿದ್ದಾರೆ. ಇದು ಉರಿಯುವ ಬೆಂಕಿಗೆ ಪೆಟ್ರೋಲ್ ಸುರಿದೆ. ಹೀಗೆ ಪುಟಿನ್ ತನ್ನ ಬಂಧನಕ್ಕೆ ಆದೇಶ ನೀಡುತ್ತಿದ್ದಂತೆ ರಷ್ಯಾ ಖಾಸಗಿ ಸೇನೆ ಮುಖ್ಯಸ್ಥ ಕೊಟ್ಟ ವಾರ್ನಿಂಗ್ ಹೇಗಿತ್ತು ಗೊತ್ತಾ? ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ (Russia Ukraine War).

Russia will see new president soon

ರಷ್ಯಾಗೆ ಹೊಸ ಅಧ್ಯಕ್ಷ ಫಿಕ್ಸ್?

ಅಂದಹಾಗೆ ಈಗಾಗಲೇ ನೇರವಾಗಿ ರಷ್ಯಾದ ರೋಸ್ಟೊವ್‌ ನಗರಕ್ಕೆ ನುಗ್ಗಿದೆ ಖಾಸಗಿ ಸೇನೆ. ಈ ಮಧ್ಯೆ ಪುಟಿನ್ ಕೊಲೆಗೂ ಸಂಚು ನಡೆದಿರುವ ಆರೋಪ ಕೇಳಿಬಂದಿದೆ. ಎಲ್ಲಾ ಬೆಳವಣಿಗೆ ನಡುವೆ ಮತ್ತೊಂದು ಸ್ಫೋಟಕ ಹೇಳಿಕೆ ಕೊಟ್ಟಿದ್ದಾನೆ ರಷ್ಯಾ ಖಾಸಗಿ ಸೇನೆಯ ಮುಖ್ಯಸ್ಥ. ಯೆವ್ಗೆನಿ ಪ್ರಿಗೊಝಿನ್ ಬಂಧನಕ್ಕೆ ವ್ಲಾದಿಮಿರ್ ಪುಟಿನ್ ಆದೇಶ ನೀಡುತ್ತಿದ್ದಂತೆ, ‘ನೀವು ತಪ್ಪು ಮಾಡಿಬಿಟ್ಟಿರಿ, ಇಂತಹ ಪರಿಸ್ಥಿತಿಯಲ್ಲಿ ತಪ್ಪು ನಿರ್ಧಾರ ಕೈಗೊಂಡಿದ್ದೀರಿ. ಹೀಗಾಗಿ ರಷ್ಯಾ ಹೊಸ ಅಧ್ಯಕ್ಷನನ್ನು ನೋಡಲಿದೆ’ ಎಂದಿದ್ದಾನೆ ಯೆವ್ಗೆನಿ ಪ್ರಿಗೊಝಿನ್. ಈ ಹೇಳಿಕೆ ರಷ್ಯಾದಲ್ಲಿ ಸಂಚಲನ ಸೃಷ್ಟಿಸಿದೆ. ಅಲ್ಲದೆ ಪುಟಿನ್ ಹತ್ಯೆಗೆ ಸ್ಕೆಚ್ ಹಾಕಿರುವ ಅನುಮಾನ ಕೂಡ ಭುಗಿಲೆದ್ದಿದೆ.

ಪುಟಿನ್ ಎದುರು ಬೆಟ್ಟದಷ್ಟು ಸವಾಲು!

ಹೌದು ಒಂದ್ಕಡೆ ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಘೋಷಣೆ ಮಾಡಿ ಹತ್ತಿರ ಹತ್ತಿರ 500 ದಿನಗಳೇ ಕಳೆದಿವೆ. ಪರಿಸ್ಥಿತಿ ಹೀಗಿದ್ದಾಗ ಪುಟಿನ್‌ಗೆ ಹೊಸ ಸವಾಲು ಎದುರಾಗಿದೆ. ತನ್ನದೇ ದೇಶದ, ಖಾಸಗಿ ಸೈನಿಕ ಪಡೆ ಪುಟಿನ್ ವಿರುದ್ಧ ತಿರುಗಿಬಿದ್ದಿದೆ. ಅತ್ತ ಉಕ್ರೇನ್‌ಗೆ ಅಮೆರಿಕ & ನ್ಯಾಟೋ ಬೆಂಬಲ ಘೋಷಿಸಿದೆ. ಇಷ್ಟೆಲ್ಲ ಕಂಟಕದ ಮಧ್ಯೆ ಆರ್ಥಿಕವಾಗಿ ಕೂಡ ರಷ್ಯಾ ತತ್ತರಿಸಿ ಹೋಗುತ್ತಿದೆ. ಹೀಗಾಗಿ ಪರಿಸ್ಥಿತಿ ಹಿಡಿತಕ್ಕೆ ಸಿಗುತ್ತಿಲ್ಲ ಮುಂದೆ ಏನಾಗುತ್ತೆ ಅನ್ನೋ ಭಯ ಆವರಿಸಿದೆ. ರಷ್ಯಾದ ಗಲ್ಲಿ ಗಲ್ಲಿಗಳಲ್ಲಿ ಜನರು ಗುಂಪು ಸೇರುತ್ತಿದ್ದಾರೆ. ಈ ನಡುವೆ ರಷ್ಯಾ ಒಳಗೆ ಆಂತರಿಕ ಯುದ್ಧ ಶುರುವಾಗುವ ಸಾಧ್ಯತೆ ಕೂಡ ದಟ್ಟವಾಗಿದೆ.

ಉಕ್ರೇನ್ ಯುದ್ಧವೇ ಪುಟಿನ್‌ಗೆ ಕಂಟಕ?

ದಿನಕ್ಕೊಂದು ವಿಡಿಯೋ ಮಾಡಿ ರಷ್ಯಾ ನಾಯಕರ ಬಗ್ಗೆ ಆಕ್ರೋಶ ಹೊರಹಾಕುತ್ತಿದ್ದ ಯೆವ್ಗೆನಿ. ಇಷ್ಟೆಲ್ಲ ನಡೆದರೂ ರಷ್ಯಾ ಸೇನೆ ಯೆವ್ಗೆನಿ ಪ್ರಿಗೊಝಿನ್ ಮಾತನ್ನ ನಿರ್ಲಕ್ಷ್ಯ ಮಾಡಿತ್ತು. ಅದರ ಪರಿಣಾಮವನ್ನ ಈಗ ಅನುಭವಿಸುವಂತಾಗಿದೆ. ರಷ್ಯಾ ಸೇನೆಯ ಅಧಿಕಾರಿಗಳು ಖಾಸಗಿ ಸೇನೆಗೆ ಸರಿಯಾಗಿ ಬುಲೆಟ್, ಬಾಂಬ್ ಕೊಡ್ತಿಲ್ಲ. ಸೂಕ್ತ ಸೌಲಭ್ಯ ಸಿಗದೆ ವ್ಯಾಗ್ನರ್ ಗುಂಪು ಅಥವಾ ಖಾಸಗಿ ಸೈನಿಕರು ಸಾಯುತ್ತಿದ್ದಾರೆ. ಇಷ್ಟಾದರೂ ರಷ್ಯಾ ಸೇನೆ ತಲೆಕೆಡಿಸಿಕೊಂಡಿಲ್ಲ ಅನ್ನೋ ಆರೋಪ ಮಾಡುತ್ತಿದ್ದ ಯೆವ್ಗೆನಿ ಪ್ರಿಗೊಝಿನ್.

ನೀನೇ ಸಾಕಿದ ಗಿಣಿ.. ಹದ್ದಾಗಿ ಕುಕ್ಕಿತಲ್ಲೋ..: ಸ್ನೇಹಿತನಿಂದಲೇ ಬೆನ್ನಿಗೆ ಚೂರಿ ಹಾಕಿಸಿಕೊಂಡ ರಷ್ಯಾ ಅಧ್ಯಕ್ಷ ಪುಟಿನ್! ನೀನೇ ಸಾಕಿದ ಗಿಣಿ.. ಹದ್ದಾಗಿ ಕುಕ್ಕಿತಲ್ಲೋ..: ಸ್ನೇಹಿತನಿಂದಲೇ ಬೆನ್ನಿಗೆ ಚೂರಿ ಹಾಕಿಸಿಕೊಂಡ ರಷ್ಯಾ ಅಧ್ಯಕ್ಷ ಪುಟಿನ್!

ಉಕ್ರೇನ್ ವಿರುದ್ಧ ದಾಳಿಯೂ ತೀವ್ರ

ಒಂದ್ಕಡೆ ರಷ್ಯಾ ಒಳಗೆ ಬೆಂಕಿ ಹೊತ್ತಿಕೊಂಡಿದೆ ಹಾಗೇ ಇನ್ನೊಂದು ಕಡೆ ಉಕ್ರೇನ್ ಮೇಲೆ ಭೀಕರ ದಾಳಿ ಕೂಡ ಆರಂಭವಾಗಿದೆ. ರಷ್ಯಾ ಖಾಸಗಿ ಸೇನೆ ಶತ್ರುಪಡೆ ಉಕ್ರೇನ್‌ನ ಬಿಟ್ಟು ತನ್ನ ಸ್ವಂತ ದೇಶದ ಮೇಲೆಯೇ ದಾಳಿ ಮಾಡುತ್ತಿರುವ ಸಂದರ್ಭದಲ್ಲಿ, ರಷ್ಯಾ ಸೇನೆ ತನ್ನ ದಾಳಿ ಇನ್ನಷ್ಟು ತೀವ್ರಗೊಳಿಸಿದೆ. ಇದೆಲ್ಲದರ ಹಿನ್ನೆಲೆ ಅಪಾರ ಪ್ರಮಾಣದ ಸಾವು ನೋವು ಸಂಭವಿಸಿದೆ. ರಷ್ಯಾ ಹಾರಿಸಿದ ಕ್ಷಿಪಣಿ ಉಕ್ರೇನ್ ಬಸ್‌ಗೆ ಬಡಿದಿದೆ ಎಂದು ಆರೋಪಿಸಿದೆ ಉಕ್ರೇನ್ ಸೇನೆ. ಹಾಗೇ ಕೆಲ ಮೂಲಗಳ ಪ್ರಕಾರ, ಉಕ್ರೇನ್ ಸೇನೆ ಹೆಚ್ಚಿನ ಪ್ರಮಾಣದಲ್ಲಿ ರಷ್ಯಾ ಗಡಿಯ ಕಡೆಗೆ ನುಗ್ಗಿ ಬರುತ್ತಿದೆ ಎನ್ನಲಾಗಿದೆ. ಇಷ್ಟೆಲ್ಲದರ ನಡುವೆ ರಷ್ಯಾಗೆ ಹೊಸ ಅಧ್ಯಕ್ಷ ಬರೋದು ಪಕ್ಕಾ ಎಂದಿರುವ ರಷ್ಯಾ ಖಾಸಗಿ ಸೇನೆಯ ಮುಖ್ಯಸ್ಥನ ಬಂಧನಕ್ಕೆ ಖೆಡ್ಡಾ ತೋಡಲಾಗಿದೆ.

English summary

Wagner group chief warned that Russia will see new president soon.

Story first published: Saturday, June 24, 2023, 16:17 [IST]

Source link