Telugu
oi-Muralidhar S
ವಿಜಯ್
ದೇವರಕೊಂಡ
ಹಾಗೂ
ರಶ್ಮಿಕಾ
ಮಂದಣ್ಣ
ಡೇಟಿಂಗ್
ವಿಷಯ
ಆಗಾಗ
ಮುನ್ನೆಲೆಗೆ
ಬರುತ್ತಲೇ
ಇರುತ್ತೆ.
ಆಗಾಗ
ಇಬ್ಬರೂ
ಒಟ್ಟಿಗೆ
ಪಾರ್ಟಿ,
ಡಿನ್ನರ್
ಅಂತ
ಸೇರುತ್ತಲೇ
ಇರುತ್ತಾರೆ.
ಹೀಗಾಗಿ
ಜೋಡಿ
ಕ್ಯಾಮರಾದಲ್ಲಿ
ಸೆರೆಯಾಗುತ್ತಲೇ
ಇರುತ್ತಾರೆ.
ಆಗೆಲ್ಲಾ
ವಿಜಯ್
ಹಾಗೂ
ರಶ್ಮಿಕಾ
ಮಂದಣ್ಣ
ಡೇಟಿಂಗ್
ಮ್ಯಾಟರ್
ಚರ್ಚೆಗೆ
ಬರುತ್ತೆ.
ಅದೆಷ್ಟು
ಸಲ
ರಶ್ಮಿಕಾ
ಹಾಗೂ
ವಿಜಯ್
ದೇವರಕೊಂಡ
ಡೇಟಿಂಗ್
ಮ್ಯಾಟರ್
ಸದ್ದು
ಮಾಡಿದ್ರೂ
ಅವರದ್ದು
ಮಾತ್ರ
ಒಂದೇ
ಉತ್ತರ.
ನಾವಿಬ್ಬರೂ
ಉತ್ತಮ
ಸ್ನೇಹಿತರು
ಅಂತ
ಹೇಳುತ್ತಿದ್ದಾರೆ.
ಇತ್ತೀಚೆಗೆ
ಈ
ಹೇಳಿಕೆ
ಕೊಟ್ಟು
ಕೊಟ್ಟು
ಸುಸ್ತಾಗಿ
ಪ್ರತಿಕ್ರಿಯೆ
ನೀಡುವುದನ್ನೇ
ನಿಲ್ಲಿಸಿಬಿಟ್ಟಿದ್ದಾರೆ.
ಆದ್ರೀಗ
ಮತ್ತೆ
ಇವರಿಬ್ಬರ
ಡೇಟಿಂಗ್
ಮಾಡುತ್ತಿದ್ದಾರೆಂತೆ
ನೆಟ್ಟಿಗರು
ಸೋಶಿಯಲ್
ಮೀಡಿಯಾದಲ್ಲಿ
ಚರ್ಚೆ
ಮಾಡುತ್ತಿದ್ದಾರೆ.
ಅದಕ್ಕೆ
ಅವರ
ಬಳಿ
ಒಂದು
ಸಾಕ್ಷಿನೂ
ಇದೆ.
ಅದನ್ನೇ
ಇಟ್ಕೊಂಡು
ರಹಸ್ಯವಾಗಿ
ಡೇಟಿಂಗ್
ಮಾಡುತ್ತಿದ್ದಾರೆ
ಅಂತ
ಕಮೆಂಟ್
ಮಾಡುತ್ತಿದ್ದಾರೆ.
ಕಳೆದ
ಎರಡು
ದಿನಗಳಿಂದ
ಮಾಧ್ಯಮಗಳಲ್ಲಿ
ಈ
ವಿಡಿಯೋ
ಹಲ್‌ಚಲ್
ಎಬ್ಬಿಸಿದೆ.
ಕಾಫಿ
ಶಾಪ್‌ನಲ್ಲಿ
ವಿಜಯ್-ರಶ್ಮಿಕಾ
ಸೋಶಿಯಲ್
ಮೀಡಿಯಾದಲ್ಲಿ
ಒಂದು
ವಿಡಿಯೋ
ಹರಿದಾಡುತ್ತಿದ್ದು,
ಇದರಲ್ಲಿ
ರಶ್ಮಿಕಾ
ಮಂದಣ್ಣ
ಹಾಗೂ
ವಿಜಯ್
ದೇವರಕೊಂಡ
ಇಬ್ಬರೂ
ಒಂದು
ಕಾಫಿ
ಶಾಪ್‌ನಲ್ಲಿ
ಕಾಣಿಸಿಕೊಂಡಿದ್ದಾರೆ.
ಇವರೊಂದಿಗೆ
ವಿಜಯ್
ತಮ್ಮ
ಆನಂದ್
ದೇವರಕೊಂಡ,
ನಿರ್ದೇಶಕ
ಗೌತಮ್
ಟಿನ್ನನುರಿ
ಹಾಗೂ
ಶ್ರೇಯಾ
ವರ್ಮಾ
ಕಾಣಿಸಿಕೊಂಡಿದ್ದಾರೆ.
ಇದೇ
ವಿಡಿಯೋ
ಸಿಕ್ಕಾಪಟ್ಟೆ
ಸದ್ದು
ಮಾಡುತ್ತಿದೆ.
ಇವೆರೆಲ್ಲರೂ
ಸೇರಿ
ಒಟ್ಟಿಗೆ
ಸೇರಿ
ಸಖತ್
ಎಂಜಾಯ್
ಮಾಡುತ್ತಿದ್ದಾರೆ.
ಇದೇ
ವಿಡಿಯೋ
ಇಟ್ಟುಕೊಂಡು
ನೆಟ್ಟಿಗರು
ರಶ್ಮಿಕಾ
ಹಾಗೂ
ವಿಜಯ್
ದೇವರಕೊಂಡ
ರಹಸ್ಯವಾಗಿ
ಡೇಟಿಂಗ್
ಮಾಡುತ್ತಿದ್ದಾರೆ
ಅಂತ
ಕಮೆಂಟ್
ಮಾಡುತ್ತಿದ್ದಾರೆ.
ಆದರೆ,
ಅಸಲು
ಮ್ಯಾಟರ್
ಬೇರೆನೇ
ಇದೆ.
ರಹಸ್ಯವಾಗಿ
ಡೇಟಿಂಗ್
ಮಾಡುತ್ತಿದ್ದಾರಾ?
ಹೈದರಾಬಾದ್‌ನ
ಕಾಫಿ
ಶಾಪ್‌ನಲ್ಲಿ
ರಶ್ಮಿಕಾ
ಹಾಗೂ
ವಿಜಯ್
ದೇವರಕೊಂಡ
ಭೇಟಿಯಾದ
ವಿಡಿಯೋ
ಮತ್ತೆ
ಡೇಟಿಂಗ್
ಬಗ್ಗೆ
ಪುಕಾರು
ಹಬ್ಬಿಸುವಂತೆ
ಮಾಡಿದೆ.
ಹಾಗಂತ
ಇಬ್ಬರೂ
ಒಟ್ಟಿಗೆ
ಸೇರಿದ್ದು
ಇದೇ
ಮೊದಲೇನಲ್ಲ.
ಈ
ಹಿಂದೆ
ಒಟ್ಟಿಗೆ
ಜಿಮ್
ಮುಗಿಸಿ
ಬರುವಾಗ
ಕ್ಯಾಮರಾ
ಕಣ್ಣಿಗೆ
ಬದ್ದಿದ್ದರು.
ಏರ್‌ಪೋರ್ಟ್‌ನಲ್ಲಿ,
ಡಿನ್ನರ್‌ಗೆ
ಹೋಗುವಾಗ
ಹಾಗೇ
ಒಟ್ಟಿಗೆ
ಮಾಲ್ಟೀವ್ಸ್‌ಗ
ಹೋಗಿದ್ದರು
ಅನ್ನೋ
ಸುದ್ದಿ
ಇಬ್ಬರ
ಡೇಟಿಂಗ್
ಮ್ಯಾಟರ್‌ಗೆ
ಪುಷ್ಠಿ
ನೀಡಿತ್ತು.
ಕನ್ನಡದಲ್ಲಿ
ಮೊದಲ
ಚಿತ್ರ
ಮಾಡಿದ
ಈ
ನಾಲ್ವರು
ನಟಿಯರೀಗ
ಸೌತ್
ಇಂಡಸ್ಟ್ರಿ
ರೂಲರ್ಸ್!
ಪ್ರತಿ
ಬಾರಿನೂ
ನಾವಿಬ್ಬರೂ
ಸ್ನೇಹಿತರು
ಅಂತಲೇ
ಹೇಳಿಕೊಂಡಿದ್ದಾರೆ.
ಅದಕ್ಕೆ
ನೆಟ್ಟಿಗರು
ಈ
ವಿಡಿಯೋವನ್ನು
ಶೇರ್
ಮಾಡಿ
ರಹಸ್ಯವಾಗಿ
ಡೇಟಿಂಗ್
ಮಾಡುತ್ತಿದ್ದಾರೆ
ಅಂತ
ವಾದ
ಮಂಡಿಸಿದ್ದಾರೆ.
ಆದರೆ,
ಕೆಲವು
ಮೂಲಗಳು
ಇದು
ಹಳೇ
ವಿಡಿಯೋ
ಎಂದು
ಹೇಳುತ್ತಿವೆ.
ಒಟ್ಟಿಗೆ
ಸಿನಿಮಾದಲ್ಲಿ
ನಟಿಸುವುದಿಲ್ಲವೇ?
ರಶ್ಮಿಕಾ
ಮಂದಣ್ಣ
ಹಾಗೂ
ವಿಜಯ್
ದೇವರಕೊಂಡ
ಇಬ್ಬರೂ
ಜೊತೆಯಾಗಿ
ನಟಿಸಿದ
ಮೊದಲ
ಸಿನಿಮಾ
‘ಗೀತಾ
ಗೋವಿಂದಂ’.
ಈ
ಸಿನಿಮಾ
ಬಾಕ್ಸಾಫೀಸ್‌ನಲ್ಲಿ
100
ಕೋಟಿ
ರೂ.
ಕೆಲಕ್ಷನ್
ಮಾಡಿತ್ತು.
ಈ
ಪೇರ್
ಹಿಟ್
ಆಗುತ್ತಿದ್ದಂತೆ
ಎರಡನೇ
ಬಾರಿಗೆ
ಒಟ್ಟಿಗೆ
ನಟಿಸಿತ್ತು.
ಅದುವೇ
‘ಡಿಯರ್
ಕಾಮ್ರೇಡ್’.
ಆದರೆ,
ಈ
ಸಿನಿಮಾ
ಬಾಕ್ಸಾಫೀಸ್‌ನಲ್ಲಿ
ಮಕಾಡೆ
ಮಲಗಿತ್ತು.
ರಶ್ಮಿಕಾಗೆ
ಮ್ಯಾನೇಜರ್‌ನಿಂದ
80
ಲಕ್ಷ
ರೂ.
ದೋಖಾ?
ಪ್ರೆಸ್‌ನೋಟ್
ರಿಲೀಸ್
ಮಾಡಿದ
ಕಿರಿಕ್
ಬೆಡಗಿ
‘ಡಿಯರ್
ಕಾಮ್ರೇಡ್’
ಮತ್ತೆ
ಈ
ಜೋಡಿ
ಒಟ್ಟಾಗಿ
ನಟಿಸಿಲ್ಲ.
ಹೀಗಾಗಿ
ಮತ್ತೆ
ಯಾವಾಗ
ಒಟ್ಟಿಗೆ
ಒಂದೇ
ಸಿನಿಮಾದಲ್ಲಿ
ನಟಿಸುತ್ತಾರೋ
ಪ್ರೇಕ್ಷಕರು
ಎದುರು
ನೋಡುತ್ತಿದ್ದಾರೆ.
ಆದರೆ,
ಸದ್ಯಕ್ಕಂತೂ
ಇಬ್ಬರಿಗೂ
ಒಟ್ಟಿಗೆ
ಒಂದೇ
ಸಿನಿಮಾದಲ್ಲಿ
ನಟಿಸುವ
ಆಲೋಚನೆ
ಇದ್ದಂತೆ
ಇಲ್ಲ.
ಈ
ಮಧ್ಯೆ
ಇಬ್ಬರ
ಡೇಟಿಂಗ್
ಮ್ಯಾಟರ್
ಬೇರೆ
ಆಗಾಗ
ಸದ್ದು
ಮಾಡುತ್ತಲೇ
ಇರುತ್ತೆ.
English summary
Is Rashmika Mandanna and Vijay Devarakonda dating? cafe meet video goes viral
Saturday, June 24, 2023, 17:43
Story first published: Saturday, June 24, 2023, 17:43 [IST]