News
oi-Srinivasa A
ರಾಕಿಂಗ್
ಸ್ಟಾರ್
ಯಶ್.
ಕನ್ನಡ
ಚಿತ್ರರಂಗದ
ಓರ್ವ
ಸಾಮಾನ್ಯ
ಕಲಾವಿದರನಾಗಿ
ಸಿನಿಮಾ
ಕ್ಷೇತ್ರ
ಪ್ರವೇಶಿಸಿದ
ಪ್ರತಿಭೆ
ಇದೀಗ
ಪರಭಾಷಾ
ಚಿತ್ರಗಳಲ್ಲಿ
ನಟಿಸದೇ,
ಕೇವಲ
ಕನ್ನಡ
ಚಿತ್ರಗಳಲ್ಲಿಯೇ
ಅಭಿನಯಿಸಿ,
ಪ್ಯಾನ್
ಇಂಡಿಯಾ
ಕಾನ್ಸೆಪ್ಟ್
ಅನ್ನು
ಸರಿಯಾದ
ರೀತಿಯಲ್ಲಿ
ಉಪಯೋಗಿಸಿಕೊಂಡು
ಮೇಲೆ
ಬಂದ
ನಟ.
ಹೀಗೆ
ಹಂತ
ಹಂತವಾಗಿ
ಶ್ರಮಪಟ್ಟು
ಬೆಳೆದು
ಯಶಸ್ಸನ್ನು
ಸಾಧಿಸಿರುವ
ಯಶ್
ಇದೀಗ
ಪ್ಯಾನ್
ಇಂಡಿಯಾ
ಸ್ಟಾರ್
ಅಗಿ
ಇಡೀ
ದೇಶದಾದ್ಯಂತ
ಅಭಿಮಾನಿಗಳನ್ನು
ಸಂಪಾದಿಸಿದ್ದಾರೆ.
ಹೌದು,
ಕೆಜಿಎಫ್
ಚಾಪ್ಟರ್
1
ಹಾಗೂ
ಕೆಜಿಎಫ್
ಚಾಪ್ಟರ್
2
ಚಿತ್ರಗಳ
ಮೂಲಕ
ಯಶ್
ಅಪಾರವಾದ
ಫೇಮ್
ಪಡೆದುಕೊಂಡಿದ್ದಾರೆ.
ಹೀಗೆ
ಕೆಜಿಎಫ್
ಚಿತ್ರ
ಸರಣಿ
ಮೂಲಕ
ಖ್ಯಾತಿಯನ್ನು
ಗಳಿಸಿರುವ
ಯಶ್
ಸ್ಟಾರ್
ಆಗಿ
ನಿಂತದ್ದು
ಗೂಗ್ಲಿ
ಚಿತ್ರದ
ಮೂಲಕ.
ಡ್ರಾಮಾ
ಯಶಸ್ಸಿನ
ಬಳಿಕ
ಬಂದ
ಗೂಗ್ಲಿ
ದಿಗ್ವಿಜಯ
ಸಾಧಿಸಿ
ಯಶ್‌ಗೆ
ಸ್ಟಾರ್‌ಗಿರಿಯನ್ನು
ತಂದುಕೊಟ್ಟಿತ್ತು.
ಗೂಗ್ಲಿ
ಬಳಿಕ
ಯಶ್
ಕನ್ನಡದ
ದೊಡ್ಡ
ದೊಡ್ಡ
ನಟರ
ಚಿತ್ರಗಳಿಗೆ
ಬಾಕ್ಸ್
ಆಫೀಸ್‌ನಲ್ಲಿ
ಪೈಪೋಟಿ
ನೀಡುವ
ಹಂತಕ್ಕೆ
ಬೆಳೆದು
ನಿಂತರು.
ಹೀಗಾಗಿ
ಯಶ್‌ಗೆ
ಸ್ಟಾರ್
ಪಟ್ಟ
ತಂದುಕೊಟ್ಟ
ಕೀರ್ತಿ
ಗೂಗ್ಲಿಗೆ
ಸಲ್ಲುತ್ತದೆ.
ಹೀಗೆ
ಯಶ್
ಸಿನಿ
ಜೀವನಕ್ಕೆ
ದೊಡ್ಡ
ತಿರುವು
ತಂದುಕೊಟ್ಟ
ಗೂಗ್ಲಿ
ಜುಲೈ
ತಿಂಗಳಿನಲ್ಲಿ
ಬಿಡುಗಡೆಗೊಂಡಿತ್ತು.
ಅತ್ತ
ಯಶ್
ನಾಯಕ
ನಟನಾಗಿ
ನಟಿಸಿದ
ಮೊದಲ
ಸಿನಿಮಾ
ಮೊಗ್ಗಿನ
ಮನಸ್ಸು
ಚಿತ್ರ
ಸಹ
ಜುಲೈ
ತಿಂಗಳಿನಲ್ಲಿಯೇ
ತೆರೆಗೆ
ಬಂದಿತ್ತು.
ಹೀಗೆ
ಯಶ್
ನಾಯಕನಾಗಿ
ಕಾಣಿಸಿಕೊಂಡ
ಮೊದಲ
ಸಿನಿಮಾ
ಹಾಗೂ
ಯಶ್
ಸ್ಟಾರ್
ನಟನಾಗಿ
ಬೆಳೆದ
ಮೊದಲ
ಸಿನಿಮಾ
ಎರಡೂ
ಸಹ
ಜುಲೈ
ತಿಂಗಳಿನಲ್ಲಿಯೇ
ಬಿಡುಗಡೆಗೊಂಡಿದ್ದು
ಸದ್ಯ
ಯಶ್
ಅಭಿಮಾನಿಗಳಲ್ಲಿ
ಚರ್ಚೆಯನ್ನು
ಹುಟ್ಟುಹಾಕಿದೆ.
ಯಶ್
ಸಿನಿ
ಜೀವನದಲ್ಲಿ
ಲಕ್ಕಿ
ತಿಂಗಳು
ಎನಿಸಿಕೊಂಡಿರುವ
ಈ
ಜುಲೈ
ತಿಂಗಳು
ಇಂದಿನಿಂದ
ಆರಂಭಗೊಳ್ಳುತ್ತಿದ್ದು,
ಇದೇ
ತಿಂಗಳಿನಲ್ಲಿ
ಯಶ್
ತಮ್ಮ
ಮುಂದಿನ
ಚಿತ್ರವನ್ನು
ಘೋಷಿಸಬಹುದಾ
ಎಂಬ
ಕುತೂಹಲ
ಯಶ್
ಅಭಿಮಾನಿಗಳಲ್ಲಿ
ಮೂಡಿದೆ.
ಹೌದು,
ಯಶ್
ನಾಯಕನಾಗಿ
ಅಭಿನಯಿಸಿದ
ಮೊದಲ
ಸಿನಿಮಾ
ಬಿಡುಗಡೆಯಾಗಿ
ಈ
ಜುಲೈ
18ಕ್ಕೆ
15
ವರ್ಷಗಳಾಗಲಿದ್ದು,
ಈ
ದಿನವೇ
ತಮ್ಮ
ಮುಂದಿನ
ಚಿತ್ರವನ್ನು
ಘೋಷಿಸುವ
ಸಾಧ್ಯತೆಗಳಿವೆ
ಎಂಬ
ಮಾತುಗಳೂ
ಸಹ
ಕೇಳಿ
ಬರುತ್ತಿವೆ.
ಇನ್ನು
ಯಶ್
19
ಚಿತ್ರಕ್ಕೆ
ಯಾರು
ನಿರ್ದೇಶನ
ಮಾಡಬಹುದು
ಎಂಬ
ಕುತೂಹಲ
ಹಾಗೂ
ಪ್ರಶ್ನೆ
ಈ
ಹಿಂದಿನಿಂದಲೂ
ಯಶ್
ಅಭಿಮಾನಿಗಳು
ಹಾಗೂ
ಸಿನಿ
ರಸಿಕರನ್ನು
ಕಾಡುತ್ತಿದ್ದು,
ಹಲವಾರು
ನಿರ್ದೇಶಕರ
ಹೆಸರುಗಳು
ಈ
ಕುರಿತಾಗಿ
ಕೇಳಿಬಂದಿದ್ದವು.
ಅದರಲ್ಲಿಯೂ
ಮುಖ್ಯವಾಗಿ
ಮಲಯಾಳಂನ
ನಿರ್ದೇಶಕಿ
ಗೀತು
ಮೋಹನ್‌ದಾಸ್
ಹೆಸರು
ಹೆಚ್ಚಾಗಿ
ಕೇಳಿಬಂದಿತ್ತು.
ಮುತ್ತೂನ್
ಎಂಬ
ಮಲಯಾಳಂ
ಚಿತ್ರವನ್ನು
ನಿರ್ದೇಶಿಸಿ
ಸೈ
ಎನಿಸಿಕೊಂಡಿದ್ದ
ಗೀತು
ಮೋಹನ್
ದಾಸ್
ಯಶ್
19ಗೆ
ಆಕ್ಷನ್
ಕಟ್
ಹೇಳುವುದು
ಪಕ್ಕಾ
ಎನ್ನಲಾಗುತ್ತಿದ್ದು,
ಮುಂದಿನ
ದಿನಗಳಲ್ಲಿ
ಈ
ಸುದ್ದಿ
ಎಷ್ಟು
ಸತ್ಯ
ಎಂಬುದು
ಹೊರಬೀಳಲಿದೆ.
English summary
Yash 19 likely to be announced on July 18 on the occasion of Moggina Manasu anniversary.
Saturday, July 1, 2023, 13:08
Story first published: Saturday, July 1, 2023, 13:08 [IST]