ಮೋದಿ ನಿದ್ರಿಸುತ್ತಿದ್ದಾರೆ: ಮಣಿಪುರ ಘಟನೆ ಭಾರತದ ಮಾನಹಾನಿ ಮಾಡಿದೆ- ಬಿಹಾರ ಬಿಜೆಪಿ ನಾಯಕ ರಾಜೀನಾಮೆ | ‘PM Modi is sleeping’: BJP leader says Manipur violence ‘defamed India’; resigns

India

oi-Ravindra Gangal

|

Google Oneindia Kannada News

ಪಟ್ನಾ, ಜುಲೈ 27: ಮಣಿಪುರ ಹಿಂಸಾಚಾರದ ವಿಚಾರವಾಗಿ ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದೆ. ಈ ವಿಚಾರವಾಗಿ ಪ್ರಧಾನಿ ಮೋದಿ ಹೇಳಿಕೆ ನೀಡಬೇಕೆಂದು ಒತ್ತಾಯಿಸುತ್ತಿವೆ. ಮೋದಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾಗಿವೆ. ಈ ಎಲ್ಲ ಬೆಳವಣಿಗೆಗಳ ನಡುವೆ ಮಣಿಪುರ ವಿಚಾರವಾಗಿ ಬಿಜೆಪಿ ಸದಸ್ಯತ್ವಕ್ಕೆ ಬಿಹಾರದ ನಾಯಕರೊಬ್ಬರು ರಾಜೀನಾಮೆ ನೀಡಿದ್ದಾರೆ.

ಬಿಹಾರದ ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಜ್ಯ ವಕ್ತಾರ ವಿನೋದ್ ಶರ್ಮಾ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಸಂಘರ್ಷವು ಭಾರತ ಮಾನವನ್ನು ಜಾಗತಿಕವಾಗಿ ಹರಾಜು ಮಾಡಿದೆ ಎಂದು ಆರೋಪಿಸಿದ್ದಾರೆ.

‘PM Modi is sleeping’: BJP leader says Manipur violence ‘defamed India’; resigns

ಮಣಿಪುರದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಸ್ಪಂದಿಸಿರುವ ರೀತಿಯ ಕುರಿತು ನನಗೆ ನೋವಾಗಿದೆ. ಬಿಜೆಪಿ ನಾಯಕತ್ವವು ಕಳಂಕಿತವಾಗಿದೆ. ಈ ಹಿನ್ನೆಲೆಯಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಸುಮಾರು 800 ರಿಂದ 1,000 ಪುರುಷರ ಗುಂಪು ಇಬ್ಬರ ಮಹಿಳೆಯರನ್ನು ಬೆತ್ತಲಾಗಿಸಿ ಮೆರವಣಿಗೆ ಮಾಡಿದೆ. ಕುಕಿ ಸಮುದಾಯದ ಇಬ್ಬರು ಮಹಿಳೆಯರನ್ನು ಹಗಲಿನಲ್ಲಿ ಬೆತ್ತಲೆಯಾಗಿ ಮೆರವಣಿಗೆ ಮಾಡಿ, ಆ ನಂತರ ಅತ್ಯಾಚಾರ ಎಸಗಿದೆ. ಮಣಿಪುರ ಘಟನೆಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದೆ. ಇದು ಭಾರತದ ಮಾನವನ್ನು ಹಾನಿ ಮಾಡಿದೆ ಎಂದು ಅವರು ಆರೋಪಿಸಿದರು.

ಅನಾಗರಿಕ ಘಟನೆ ಕುರಿತು ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರ ಹೇಳಿಕೆಯು ಆಘಾತಕಾರಿಯಾಗಿದೆ. ಇದೇ ರೀತಿಯ ಘಟನೆಗಳು ರಾಜ್ಯದಲ್ಲಿ ನೂರಾರು ನಡೆದಿವೆ ಎಂದು ಹೇಳಿದ್ದಾರೆ ಎಂದು ಶರ್ಮಾ ವಾಗ್ದಾಳಿ ನಡೆಸಿದ್ದಾರೆ.

‘PM Modi is sleeping’: BJP leader says Manipur violence ‘defamed India’; resigns

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ಇಂತಹ ಘಟನೆ ಬೇರೆಲ್ಲೂ ನಡೆದಿಲ್ಲ ಎಂದು ಶರ್ಮಾ ತಿಳಿಸಿದ್ದಾರೆ.

ಇಷ್ಟಾದರೂ ಪ್ರಧಾನಿ ನಿದ್ದೆ ಮಾಡುತ್ತಿದ್ದಾರೆ. ಸಿಎಂ ಬಿರೇನ್ ಸಿಂಗ್ ಅವರನ್ನು ವಜಾ ಮಾಡುವ ಧೈರ್ಯ ಅವರಿಗೆ ಇಲ್ಲ ಎಂದು ಆರೋಪಿಸಿದ್ದಾರೆ.

ಬಿಜೆಪಿ ನಾಯಕರಿಗೆ ಅಧಿಕಾರದ ದುರಾಸೆ ಇದೆ. ಮಣಿಪುರದ ಘಟನೆ ಕುರಿತು ಚರ್ಚೆ ನಡೆಸುವಂತೆ ಕೇಳಿಕೊಂಡರೂ ಅವರು ಮಾತನಾಡುತ್ತಿಲ್ಲ. ಅವರು ಯಾರ ಮಾತುಗಳನ್ನು ಕೇಳುವುದಿಲ್ಲ. ನಮ್ಮ ಹೆಣ್ಣುಮಕ್ಕಳು ಹಾಗೂ ನಾಗರಿಕರ ಬಗ್ಗೆ ಅವರಿಗೆ ಚಿಂತೆಯಿಲ್ಲ ಎಂದು ಅವರು ಟೀಕಿಸಿದ್ದಾರೆ.

ಜೆಡಿಯು ಪ್ರತಿಕ್ರಿಯೆ

ಶರ್ಮಾ ಅವರ ರಾಜೀನಾಮೆ ಹಿನ್ನೆಲೆಯಲ್ಲಿ ಬಿಜೆಪಿ ಪ್ರತಿಕ್ರಿಯಿಸಿದೆ. ಮಣಿಪುರದ ಹಿಂಸಾಚಾರದ ಬಗ್ಗೆ ಬಿಜೆಪಿ ನಾಯಕರೇ ನಾಚಿಕೆಪಟ್ಟುಕೊಳ್ಳುತ್ತಿದ್ದಾರೆ ಎಂದು ಹೇಳಿದೆ.

‘ಮಣಿಪುರದ ಹೆಣ್ಣುಮಕ್ಕಳನ್ನು ಸಂಪೂರ್ಣವಾಗಿ ಬೆತ್ತಲೆಯಾಗಿಸಿ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗಿದೆ. ಈ ಘಟನೆಯಿಂದ ಭಾರತವು ನಾಚಿಕೆಪಡುವಂತಾಗಿದೆ. ಇದಕ್ಕೆ ಮಣಿಪುರದ ಬಿಜೆಪಿ ಮುಖ್ಯಮಂತ್ರಿ ಬಿರೇನ್‌ ಸಿಂಗ್‌ ಮತ್ತು ಪ್ರಧಾನಿ ನರೇಂದ್ರ ಮೋದಿ ಸಂಪೂರ್ಣ ಹೊಣೆಗಾರರಾಗಿದ್ದಾರೆ’ ಎಂದು ಹೇಳಿದೆ.

English summary

Bihar Bharatiya Janata Party (BJP) state spokesperson Vinod Sharma has resigned from the party,

Story first published: Thursday, July 27, 2023, 18:18 [IST]

Source link