ಮೋದಿ ಅಮೆರಿಕ ಭೇಟಿ; ಮಹತ್ವದ ಘೋಷಣೆ ಮಾಡಿದ ಜನರಲ್ ಎಲೆಕ್ಟ್ರಿಕ್ | General Electric Will Produce Jet Engines For Indian Air Force With HAL

Business

oi-Gururaj S

|

Google Oneindia Kannada News

ನವದೆಹಲಿ, ಜೂನ್ 22: ಭಾರತದ ವಾಯುಪಡೆ ವಿಮಾನಗಳಿಗೆ ಇಂಜಿನ್ ನಿರ್ಮಾಣ ಮಾಡುವ ಮಹತ್ವದ ಘೋಷಣೆಯನ್ನು ಅಮೆರಿಕ ಜನರಲ್ ಎಲೆಕ್ಟ್ರಿಕ್ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಜನರಲ್ ಎಲೆಕ್ಟ್ರಿಕ್ ಅಧ್ಯಕ್ಷರನ್ನು ಭೇಟಿಯಾದ ಕೆಲವೇ ಗಂಟೆಗಳಲ್ಲಿ ಈ ಘೋಷಣೆ ಹೊರಬಿದ್ದಿದೆ.

ಪ್ರಧಾನಿ ನರೇಂದ್ರ ಮೋದಿ ವಾಷಿಂಗ್ಟನ್ ಡಿಸಿಯಲ್ಲಿ ಜನರಲ್ ಎಲೆಕ್ಟ್ರಿಕ್ ಅಧ್ಯಕ್ಷ ಹೆಚ್ ಲಾರೆನ್ಸ್ ಕಲ್ಪ್ ಜ್ಯೂನಿಯರ್ ಭೇಟಿಯಾಗಿ ವಿವಿಧ ವಿಚಾರಗಳ ಕುರಿತು ಮಾತುಕತೆ ನಡೆಸಿದ್ದರು. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್‌ಎಎಲ್) ಜೊತೆಗಿನ ಒಪ್ಪಂದದ ಕುರಿತು ಗುರುವಾರ ಜನರಲ್ ಎಲೆಕ್ಟ್ರಿಕ್ ಪ್ರಕಟಣೆ ಬಿಡುಗಡೆ ಮಾಡಿದೆ.

ಅಮೆರಿಕಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಬಹಿಷ್ಕರಿಸುತ್ತಿರುವ ರಶೀದಾ ತ್ಲೈಬ್ ಮತ್ತು ಇಲ್ಹಾನ್ ಒಮರ್ ಯಾರು?ಅಮೆರಿಕಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಬಹಿಷ್ಕರಿಸುತ್ತಿರುವ ರಶೀದಾ ತ್ಲೈಬ್ ಮತ್ತು ಇಲ್ಹಾನ್ ಒಮರ್ ಯಾರು?

General Electric Will Produce Jet Engines For Indian Air Force With HAL

ನರೇಂದ್ರ ಮೋದಿ ಹೆಚ್ ಲಾರೆನ್ಸ್ ಕಲ್ಪ್ ಜ್ಯೂನಿಯರ್ ಭೇಟಿ ಸಂದರ್ಭದಲ್ಲಿ ಭಾರತದಲ್ಲಿ ಉತ್ಪಾದನೆಯ ಬದ್ಧತೆ ತೋರಿಸುತ್ತಿರುವ ಜನರಲ್ ಎಲೆಕ್ಟ್ರಿಕ್ ಸಂಸ್ಥೆಯನ್ನು ಶ್ಲಾಘಿಸಿದರು. ಹೆಚ್ಚಿನ ತಂತ್ರಜ್ಞಾನದ ಸಹಯೋಗದ ಕುರಿತು ಚರ್ಚೆ ನಡೆಸಿದ್ದರು.

 ಭಾರತದಲ್ಲಿನ ಆತಂಕಕಾರಿ ಬೆಳವಣಿಗೆ ಬಗ್ಗೆ ಮೋದಿ ಬಳಿ ನೇರವಾಗಿ ಮಾತನಾಡಿ: ಬೈಡನ್‌ಗೆ ಅಮೆರಿಕ ಶಾಸಕರ ಒತ್ತಾಯ ಭಾರತದಲ್ಲಿನ ಆತಂಕಕಾರಿ ಬೆಳವಣಿಗೆ ಬಗ್ಗೆ ಮೋದಿ ಬಳಿ ನೇರವಾಗಿ ಮಾತನಾಡಿ: ಬೈಡನ್‌ಗೆ ಅಮೆರಿಕ ಶಾಸಕರ ಒತ್ತಾಯ

ಯುದ್ಧ ವಿಮಾನದ ಇಂಜಿನ್; ಪ್ರಧಾನಿ ನರೇಂದ್ರ ಮೋದಿ ಭಾರತದಲ್ಲಿ ವಾಯುಯಾನ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆ, ತಂತ್ರಜ್ಞಾನದ ಸಹಯೋಗ ವಹಿಸಿಕೊಳ್ಳುವಂತೆ ಹೆಚ್ ಲಾರೆನ್ಸ್ ಕಲ್ಪ್ ಜ್ಯೂನಿಯರ್‌ಗೆ ಆಹ್ವಾನಿಸಿದ್ದರು.

ಭಾರತಕ್ಕೆ ಬರುತ್ತಾ ಟೆಸ್ಲಾ? ಪ್ರಧಾನಿ ಮೋದಿ ಭೇಟಿ ಬಳಿಕ ಎಲಾನ್ ಮಸ್ಕ್ ಏನಂದ್ರು ಗೊತ್ತಾ?ಭಾರತಕ್ಕೆ ಬರುತ್ತಾ ಟೆಸ್ಲಾ? ಪ್ರಧಾನಿ ಮೋದಿ ಭೇಟಿ ಬಳಿಕ ಎಲಾನ್ ಮಸ್ಕ್ ಏನಂದ್ರು ಗೊತ್ತಾ?

ಜನರಲ್ ಎಲೆಕ್ಟ್ರಿಕ್ ಅಮೆರಿಕದ ಖ್ಯಾತ ಜೆಟ್ ಇಂಜಿನ್ ತಯಾರಿಕ ಕಂಪನಿಯಾಗಿದೆ. ಈಗ ಕಂಪನಿ ಭಾರತದಲ್ಲಿ ಹೆಚ್‌ಎಎಲ್ ಜೊತೆ ಸೇರಿ ಭಾರತೀಯ ವಾಯುಪಡೆಯ ವಿಮಾನದ ಇಂಜಿನ್ ಉತ್ಪಾದನೆ ಮಾಡುವ ಕುರಿತ ಒಪ್ಪಂದಕ್ಕೆ ಸಹಿ ಹಾಕಿದೆ.

ಹೆಚ್‌ಎಎಲ್ ಭಾರತೀಯ ವಾಯುಪಡೆಯ ವಿವಿಧ ಯುದ್ಧ ವಿಮಾನಗಳ ತಯಾರಿಕೆ ಮಾಡುತ್ತದೆ. ಜನರಲ್ ಎಲೆಕ್ಟ್ರಿಕ್ MK-2 ಸರಣಿಯ ಲಘು ಯುದ್ಧ ವಿಮಾನದ ಇಂಜಿನ್ ತಯಾರಿಕೆಯಲ್ಲಿ ಹೆಚ್‌ಎಎಲ್ ಜೊತೆ ಕೈ ಜೋಡಿಸಲಿದೆ. ಇದರಿಂದಾಗಿ ಭಾರತೀಯ ವಾಯುಪಡೆ ಬಲ ಹೆಚ್ಚಿದಂತೆ ಆಗಲಿದೆ.

“ಇದೊಂದು ಮಹತ್ವದ ಮತ್ತು ಐತಿಹಾಸಿಕ ಒಪ್ಪಂದವಾಗಿದೆ. ಭಾರತ ಮತ್ತು ಹೆಚ್ಎಎಲ್‌ ಜೊತೆಗಿನ ಧೀರ್ಘಕಾಲದ ಪಾಲುದಾರಿಕೆಯ ಭಾಗವಾಗಿ ಈ ಒಪ್ಪಂದ ಮಾಡಿಕೊಳ್ಳಲಾಗಿದೆ” ಎಂದು ಹೆಚ್ ಲಾರೆನ್ಸ್ ಕಲ್ಪ್ ಜ್ಯೂನಿಯರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

“ಅಮೆರಿಕ ಮತ್ತು ಭಾರತದ ನಡುವಿನ ಸಹಕಾರ ಒಪ್ಪಂದದ ಜೋ ಬೈಡನ್ ಮತ್ತು ನರೇಂದ್ರ ಮೋದಿ ಅವರ ಪ್ರಯತ್ನ ಭಾಗವಾಗವುದಕ್ಕೆ ನಮಗೆ ಹೆಮ್ಮೆ ಎನಿಸುತ್ತಿದೆ. ನಮ್ಮ ಎಫ್‌414 ಎಂಜಿನ್‌ಗಳಿಗೆ ಸರಿಯಾಟಿಯಾದವು ಯಾವುವೂ ಇಲ್ಲ. ಈ ಒಪ್ಪಂದ ಎರಡು ದೇಶಗಳ ನಡುವಿನ ರಾಷ್ಟ್ರೀಯ ಭದ್ರತೆ ಮತ್ತು ವಾಣಿಜ್ಯ ವ್ಯವಹಾರಗಳಿಗೆ ಸಹಾಯಕವಾಗಲಿದೆ” ಎಂದು ಹೆಚ್ ಲಾರೆನ್ಸ್ ಕಲ್ಪ್ ಜ್ಯೂನಿಯರ್‌ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಕಛೇರಿ ಇಂದು ಬೆಳಗ್ಗೆ ಹೆಚ್ ಲಾರೆನ್ಸ್ ಕಲ್ಪ್ ಜ್ಯೂನಿಯರ್‌ ಮತ್ತು ನರೇಂದ್ರ ಮೋದಿ ಭೇಟಿಯ ಚಿತ್ರಗಳನ್ನು ಟ್ವೀಟ್ ಮಾಡಿತ್ತು. ಜನರಲ್ ಎಲೆಕ್ಟ್ರಿಕ್ ತನ್ನ ಪ್ರಕಟಣೆಯಲ್ಲಿ ನಾವು ನಮ್ಮ ಗ್ರಾಹಕರಿಗೆ ಉತ್ತಮ ದರ್ಜೆಯ ಇಂಜಿನ್ ತಯಾರಿಕೆಗೆ ಸಹಾಯ ಮಾಡಲಿದ್ದೇವೆ. ಇದು ಅವರ ಮಿಲಿಟರಿ ಶಕ್ತಿಗೆ ಬಲ ತುಂಬಲಿದೆ ಎಂದು ಹೇಳಿದೆ.

ಜನರಲ್ ಎಲೆಕ್ಟ್ರಿಕ್ ಅಮೆರಿಕ ವಾಯುಪಡೆ, ನೌಕಾಪಡೆಗೆ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ಇಂಜಿನ್ ತಯಾರು ಮಾಡಿಕೊಡುತ್ತದೆ. ಎಫ್‌/ಎ-18 ಹಾರ್ನೆಟ್ ಇಂಜಿನ್, ನೌಕಾಪಡೆಯ ಗೋ-ಟು ಫೈಟರ್ ಇಂಜಿನ್ ತಂತ್ರಜ್ಞಾನವನ್ನು ಇದುವರೆಗೂ ಯಾವುದೇ ದೇಶದೊಂದಿಗೆ ಅದು ಹಂಚಿಕೊಂಡಿಲ್ಲ. ಈಗ ಭಾರತದಲ್ಲಿ ಇಂಜಿನ್ ಉತ್ಪಾದನೆಗೆ ಅದು ಕೈ ಜೋಡಿಸಿರುವುದು ಭಾರತದ ಪಾಲಿಗೆ ಮಹತ್ವದ ಸಂಗತಿಯಾಗಿದೆ.

English summary

General Electric announced that it will produce jet engines for the Indian Air Force with Hindustan Aeronautics Limited (HAL). Announcement made after General Electric chairman H. Lawrence Culp met Indian PM Narendra Modi in Washington.

Source link