Ramanagara
lekhaka-Ramesh Ramakirshna
ರಾಮನಗರ, ಜೂನ್, 19: ಸರ್ಕಾರದ ಅನುದಾನ ಬಿಡುಗಡೆ ಮಾಡದ ಅಧಿಕಾರಿಗಳ ನಡೆ ಖಂಡಿಸಿದ ರೈತನೋರ್ವ ಗ್ರಾಮ ಪಂಚಾಯತಿ ಕಾರ್ಯಾಲಯ ಒಳಗೆ ಜಾನುವಾರುಗಳನ್ನು ಕಟ್ಟಿಹಾಕ ಮೂಲಕ ವಿನೂತನ ಪ್ರತಿಭಟನೆ ನಡೆಸಿದ ಘಟನೆ ನ್ನಪಟ್ಟಣ ತಾಲೂಕಿನ ಮೈಲನಾಯಕನಹಳ್ಳಿಯಲ್ಲಿ ನಡೆದಿದೆ.
ಸರ್ಕಾರದ ಅನುದಾನ ಬಿಡುಗಡೆ ಮಾಡದ ಹಿನ್ನೆಲೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಮೈಲನಾಯಕನಹಳ್ಳಿ ಗ್ರಾಮದ ರೈತ ರವಿ ಎನ್ನುವವರು ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ಧ ವಿನೂತನ ಪ್ರತಿಭಟನೆ ಮಾಡಿ ಗಮನ ಸೆಳೆದಿದ್ದಾರೆ. ಪಂಚಾಯತಿ ಕಾರ್ಯಾಲಯದ ಒಳಗಡೆ ಕುರಿ, ಮೇಕೆಗಳನ್ನು ಕಟ್ಟಿಹಾಕುವ ಮೂಲಕ ಅಲ್ಲಿನ ಅಧಿಕಾರಿಗಳ ವಿರುದ್ಧ ವಿನೂತನ ಪ್ರತಿಭಟನೆ ಮಾಡಿದ್ದಾರೆ.
ಸರ್ಕಾರದ ಅನುದಾನ ನಂಬಿ ರೈತ ರವಿ ಕೈಸಾಲ ಮಾಡಿ ಕಳೆದ ಒಂದು ವರ್ಷದ ಹಿಂದೆ ಕೊಟ್ಟಿಗೆ ನಿರ್ಮಾಣ ಮಾಡಿದ್ದರು. ಅಲ್ಲದೆ ಅನುದಾನಕ್ಕೆ ಅರ್ಜಿಯನ್ನೂ ಸಹ ಸಲ್ಲಿಸಿದರು. ಆದರೆ ಅರ್ಜಿ ಸಲ್ಲಿಸಿ ಒಂದು ವರ್ಷವಾದರೂ ಅಧಿಕಾರಿಗಳು ಅನುದಾನ ಬಿಡುಗಡೆ ಮಾಡಿರಲಿಲ್ಲ. ವಿನಾಕರಣ ಕಚೇರಿ ಮನೆಗೆ ಆಲೆದಾಡಿಸಿದ ಹಿನ್ನೆಲೆ ಆಕ್ರೋಶಗೊಂಡ ರೈತ ರವಿ ತನ್ನ ಕುರಿ, ಮೇಕೆಗಳನ್ನು ಮೈಲನಾಯಕನಹಳ್ಳಿ ಗ್ರಾಮ ಪಂಚಾಯತಿ ಕಟ್ಟಡ ಒಳಗ ಕಟ್ಟಿ ಹಾಕಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.
ಸಿಎಂ ಸಿದ್ದರಾಮಯ್ಯಗೆ ಪುಕ್ಕಲುತನ: ಪ್ರತಾಪ್ ಸಿಂಹ ಹೀಗೆ ಹೇಳಿದ್ಯಾಕೆ?, ಇಲ್ಲಿದೆ ವಿವರ
ಈ ಬಗ್ಗೆ ಮಾತನಾಡಿ ರೈತ ರವಿ, ಕೊಟ್ಟಿಗೆ ನಿರ್ಮಾಣದ ಹಣ 50 ಸಾವಿರ ರೂಪಾಯಿಗಳನ್ನು ಮೈಲನಾಯಕನಹಳ್ಳಿ ಗ್ರಾಮ ಪಂಚಾಯತಿ ಅಧಿಕಾರಿಗಳು ಬಿಡುಗಡೆ ಮಾಡದೆ ಸತಾಯಿಸುತ್ತಿದ್ದಾರೆ. ಕೊಟ್ಟಿಗೆ ನಿರ್ಮಾಣ ಮಾಡಿ ಒಂದೂವರೆ ವರ್ಷ ಆಗಿದೆ. ಅಂದಿನಿಂದಲೂ ಗ್ರಾಮ ಪಂಚಾಯತಿ ಕಚೇರಿಗೆ ಸುತ್ತಾಡಿ ಬೇಸರ ಆಗಿದೆ. ಇತ್ತೀಚೆಗೆ ನಿರ್ಮಾಣ ಆದ ಕೊಟ್ಟಿಗೆಗಳಿಗೆ ಅನುದಾನ ಬಿಡುಗಡೆ ಮಾಡಿ, ನನ್ನನ್ನು ಉದ್ದೇಶಪೂರ್ವಕವಾಗಿ ಅಲೆದಾಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ಅಲ್ಲದೇ ಕೊಟ್ಟಿಗೆ ನಿರ್ಮಾಣದ ಹಣ ಕೇಳಿದರೆ ಇಲ್ಲ ಸಲ್ಲದ ಸಬೂಬು ನೀಡುತ್ತಿರುವ ಗ್ರಾಮ ಪಂಚಾಯತಿ ಅಧಿಕಾರಿಗಳ ವಿರುದ್ಧ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನ ಆಗಿಲ್ಲ. ಇಂದು ಸಹ ಬೆಳಗ್ಗೆ 10 ಗಂಟೆಗೆ ಕುರಿ ಮೇಕೆಗಳನ್ನು ಗ್ರಾಮ ಪಂಚಾಯತಿ ಕಚೇರಿಯಲ್ಲಿ ಕಟ್ಟಿ ಹಾಕಿದ್ದೇನೆ. ಅದರೂ ಅಧಿಕಾರಿಗಳು ನನ್ನ ಸಮಸ್ಯೆ ಪರಿಹಾರಕ್ಕೆ ಮುಂದಾಗಿಲ್ಲ ಎಂದು ರೈತ ರವಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ನೀಡಿರುವ ಅಕ್ಕಿ ಗ್ಯಾರಂಟಿ ಅನುಷ್ಟಾನಕ್ಕೆ ಕೇಂದ್ರ ಸರ್ಕಾರ ಜಟಾಪಟಿ ನಡೆಸುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ಮುಖಂಡ ಮಾಜಿ ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ನಕಲಿ ಪಡಿತರ ಚೀಟಿಗಳನ್ನು ಪತ್ತೆಹಚ್ಚಿ ರದ್ದುಪಡಿಸಲು ಆಗ್ರಹಿಸಿದ್ದಾರೆ.
ರಾಮನಗರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಹು ಸಂಖ್ಯೆಯ ನಕಲಿ ಪಡಿತರ ಚೀಟಿಗಳಿಂದ ಸರ್ಕಾರ ನೀಡುವ ಅನ್ನಭಾಗ್ಯಕ್ಕೆ ಖನ್ನ ಬೀಳಲಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡ ಸಿ.ಎಂ.ಲಿಂಗಪ್ಪ ಸರ್ಕಾರವನ್ನು ಎಚ್ಚರಿಸಿದರು. ಹಾಗೆಯೇ ನಾನು ಕಂಡಿರುವಂತೆ ಉಳ್ಳವರೂ ಕೂಡ ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿದ್ದಾರೆ ಎಂದರು.
ಒಂದೇ ಕುಟುಂಬದವರು ಎರಡಕ್ಕೂ ಹೆಚ್ಚು ಪಡಿತರ ಚೀಟಿಗಳನ್ನು ಹೊಂದಿರುವ ಉದಾಹರಣೆಗಳೂ ಕೂಡ ಇವೆ. ಇಂತಹ ನಕಲಿ ಪಡಿತರ ಚೀಟಿಗಳನ್ನು ಪತ್ತೆಹಚ್ಚಿ ರದ್ದುಪಡಿಸದಿದ್ದರೆ 10 ಕೆ.ಜಿ. ಅಕ್ಕಿ ನೀಡುವುದು ಸರ್ಕಾರಕ್ಕೆ ಹೊರೆಯಾಗಿ ಪರಿಣಮಿಸಲಿದೆ. ಆದ್ದರಿಂದ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಸಮಗ್ರ ತನಿಖೆ ನಡೆಸಬೇಕು. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಇಲಾಖೆಯ ಸಚಿವರ ಗಮನಕ್ಕೆ ತರಲಾಗುವುದು ಎಂದರು.
ನಂತರವೂ ಸರಿಹೋಗದಿದ್ದರೆ ರಾಜ್ಯ ಮಟ್ಟದಲ್ಲಿ ಹೋರಾಟ ನಡೆಸುವ ಎಚ್ಚರಿಕೆಯನ್ನೂ ಸಿ.ಎಂ.ಲಿಂಗಪ್ಪ ನೀಡಿದರು. ಅಲ್ಲದೆ ಹೆಚ್ಚುವರಿ ಪಡಿತರ ಚೀಟಿಗಳಿಂದಾಗಿ ಸರ್ಕಾರಕ್ಕೆ ನೂರಾರು ಕೋಟಿ ಹೊರೆ ಆಗುತ್ತಿದೆ. ಈ ವಂಚಕರಿಂದ ನಿಜವಾದ ಫಲಾನುಭವಿಗಳಿಗೆ ಯೋಜನೆ ಲಾಭ ಪಡೆಯಲು ಆಗುತ್ತಿಲ್ಲ. ಈ ಜಾಲವನ್ನು ತಪ್ಪಿಸಿದರೆ ಸರ್ಕಾರಕ್ಕೆ ಸಾಕಷ್ಟು ಹಣ ಉಳಿತಾಯ ಆಗಲಿದೆ ಎಂದು ಹೇಳಿದರು.
ಪಡಿತರ ಅಂಗಡಿಯಲ್ಲಿ ಪಾಸ್ಟಿಕ್ ಅಕ್ಕಿ ವಿತರಣೆ
ಈ ತಿಂಗಳು ಪೂರೈಕೆಯಾಗಿರುವ ಪಡಿತರ ಅಕ್ಕಿಯ ಜೊತೆಗೆ ಪ್ಲಾಸ್ಟಿಕ್ ಅಕ್ಕಿ ಮಿಶ್ರಣ ಆಗಿದೆ. ತಾಲೂಕಿನ ಇಟ್ಟಮಡು ಗ್ರಾಮದಲ್ಲಿ ಹಲವರಿಗೆ ಈ ಪ್ಲಾಸ್ಟಿಕ್ ಅಕ್ಕಿ ನೀಡಲಾಗಿದೆ. ಗ್ರಾಮಸ್ಥರು ಇದನ್ನು ನನ್ನ ಗಮನಕ್ಕೆ ತಂದಿದ್ದಾರೆ. ಸರ್ಕಾರ ಕೂಡಲೇ ಇದರ ಮೂಲ ಪತ್ತೆಹಚ್ಚಿ ಸಾರ್ವಜನಿಕರ ಆರೋಗ್ಯದ ಮೇಲಾಗುವ ದುಷ್ಪರಿಣಾಮವನ್ನು ತಪ್ಪಿಸಬೇಕು ಎಂದು ಆಗ್ರಹಿಸಿದರು.
ಪ್ಲಾಸ್ಟಿಕ್ ಅಕ್ಕಿ ಸೇವನೆಯಿಂದ ಮಾರಕ ಕ್ಯಾನ್ಸರ್ ರೋಗಕ್ಕೆ ತುತ್ತಾಗುವ ಸಂಭವ ಹೆಚ್ಚಿರುತ್ತದೆ. ಆದ್ದರಿಂದ ಈ ತಿಂಗಳು ವಿತರಣೆ ಆಗಿರುವ ಅಕ್ಕಿ ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಖರೀದಿಸಿದ ಅಕ್ಕಿಯಾಗಿದೆ. ಇದೊಂದು ದೊಡ್ಡ ಜಾಲವಾಗಿದ್ದು, ಮಿಶ್ರಣ ಮಾಡಿರುವವರು ಯಾರೆಂದು ತಿಳಿದಿದ್ದರೂ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳದಿರುವುದು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದರು.
English summary
A farmer protest for house grant Farmer protest for house grantvillage of Ramaranagara district,
Story first published: Monday, June 19, 2023, 19:38 [IST]