ಮೆಗಾ ಪ್ರಾಜೆಕ್ಟ್‌ಗೆ ಭರ್ಜರಿ ಪ್ಲ್ಯಾನ್: ಚರಣ್ ಎದುರು ವಿಜಯ್ ಸೇತುಪತಿ? | Vijay Sethupathi joins cast of Bucchibabu and Ramcharan’s RC16

bredcrumb

Gossips

oi-Narayana M

|

ಮೆಗಾ
ಪವರ್
ಸ್ಟಾರ್
ರಾಮ್‌ಚರಣ್
ತೇಜಾ
‘ಗೇಮ್‌
ಚೇಂಜರ್’
ನಟಿಸ್ತಿರೋದು
ಗೊತ್ತೇಯಿದೆ.
ಬುಚ್ಚಿಬಾಬು
ಜೊತೆ
ಮುಂದಿನ
ಸಿನಿಮಾ
ಕನ್ಫರ್ಮ್
ಮಾಡಿದ್ದಾರೆ.
‘ಮಫ್ತಿ’
ನರ್ತನ್
ಜೊತೆಗೂ
ಒಂದು
ಸಿನಿಮಾ
ಮಾತುಕತೆ
ಹಂತದಲ್ಲಿದೆ.
ಇತ್ತೀಚೆಗೆ
ಮನೆಗೆ
ಮಗಳನ್ನು
ರಾಮ್‌ಚರಣ್-
ಉಪಾಸನಾ
ದಂಪತಿ
ಸ್ವಾಗತಿಸಿದ್ದರು.
ಇದೇ
ಕಾರಣಕ್ಕೆ
ಕೆಲ
ದಿನಗಳ
ಕಾಲ
ಚಿತ್ರೀಕರಣಕ್ಕೆ
ಚರಣ್
ಬ್ರೇಕ್
ಹಾಕಿದ್ದರು.

ಮತ್ತೆ
‘ಗೇಮ್‌
ಚೇಂಜರ್’
ಸಿನಿಮಾ
ಚಿತ್ರೀಕರಣಕ್ಕೆ
ರಾಮ್‌ಚರಣ್
ಸಿದ್ಧವಾಗುತ್ತಿದ್ದಾರೆ.
ತಮಿಳು
ನಿರ್ದೇಶಕ
ಶಂಕರ್

ಚಿತ್ರಕ್ಕೆ
ಆಕ್ಷನ್
ಕಟ್
ಹೇಳುತ್ತಿದ್ದಾರೆ.
ಇನ್ನು
ಬುಚ್ಚಿಬಾಬು
ನಿರ್ದೇಶನದ
ಚಿತ್ರಕ್ಕೆ
ಟೈಟಲ್
ಫೈನಲ್
ಆಗಿಲ್ಲ.
RC16
ಟೈಟಲ್‌ನಲ್ಲಿ
ಸಿನಿಮಾ
ಕೆಲಸಗಳು
ನಡೀತಿದೆ.
ಪ್ರೀ
ಪ್ರೊಡಕ್ಷನ್
ವರ್ಕ್
ಶುರುವಾಗಿದೆ.
ಸದ್ಯ
ಸಿನಿಮಾ
ಸ್ಟಾರ್‌
ಕಾಸ್ಟ್
ಬಗ್ಗೆ
ಇಂಟ್ರೆಸ್ಟಿಂಗ್
ಮಾಹಿತಿ
ಹರಿದಾಡ್ತಿದೆ.
ತಮಿಳು
ನಟ
ವಿಜಯ್
ಸೇತುಪತಿ
ಚಿತ್ರದಲ್ಲಿ
ಕೀ
ರೋಲ್‌
ಪ್ಲೇ
ಮಾಡ್ತಿದ್ದಾರೆ
ಎನ್ನಲಾಗ್ತಿದೆ.

Vijay -sethupathi-in-RC16

ಭಾರತೀಯ
ಚಿತ್ರರಂಗದಲ್ಲಿ
ಪ್ಯಾನ್
ಇಂಡಿಯಾ
ಸಿನಿಮಾ
ಟ್ರೆಂಡ್
ನಡೀತಿದೆ.
ದಕ್ಷಿಣದ
ಕಲಾವಿದರು
ಬಾಲಿವುಡ್‌
ಸಿನಿಮಾಗಳಲ್ಲಿ
ನಟಿಸ್ತಿದ್ದಾರೆ.
ಅದೇ
ರೀತಿ
ಬಾಲಿವುಡ್
ಸ್ಟಾರ್ಸ್
ಕೂಡ
ದಕ್ಷಿಣದ
ಸಿನಿಮಾಗಳಲ್ಲಿ
ಬಣ್ಣ
ಹಚ್ಚುತ್ತಿದ್ದಾರೆ.
ಇನ್ನು
ತಮಿಳು
ನಟರು
ತೆಲುಗಿನಲ್ಲಿ
ತೆಲುಗು
ನಟರು
ಕನ್ನಡದಲ್ಲಿ
ಅದೇ
ರೀತಿ
ಕನ್ನಡ
ನಟರು
ತೆಲುಗು,
ತಮಿಳು
ಸಿನಿಮಾಗಳಲ್ಲಿ
ನಟಿಸೋದು
ಕಾಮನ್
ಆಗಿಬಿಟ್ಟಿದೆ.

ಇತ್ತೀಚೆಗೆ
ಕಮಲ್
ಹಾಸನ್
ತೆಲುಗಿನ
‘ಪ್ರಾಜೆಕ್ಟ್‌-ಕೆ’
ಚಿತ್ರದಲ್ಲಿ
ಪ್ರಭಾಸ್
ಎದುರು
ವಿಲನ್
ಆಗಿ
ನಟಿಸೋಕೆ
ಸೈ
ಎಂದಿದ್ದಾರೆ.
ಇದಕ್ಕಾಗಿ
ಭಾರೀ
ಮೊತ್ತದ
ಸಂಭಾವನೆ
ಕೂಡ
ಜೇಬಿಗಿಳಿಸುತ್ತಿದ್ದಾರೆ.
ಪ್ರತಿಭಾನ್ವಿತ
ನಟ
ವಿಜಯ್
ಸೇತುಪತಿ
ಇತ್ತೀಚೆಗೆ
ಬಾಲಿವುಡ್‌ಗೂ
ಎಂಟ್ರಿ
ಕೊಟ್ಟಿದ್ದಾರೆ.
ಇದೀಗ
ರಾಮ್‌ಚರಣ್
ಎದುರು
ಸೇತುಪತಿ
ನಟಿಸ್ತಾರೆ
ಎನ್ನುವ
ಗುಸುಗುಸು
ಶುರುವಾಗಿದೆ.
ಇನ್ನು
ಚಿತ್ರದಲ್ಲಿ
ಬಾಲಿವುಡ್
ನಟಿ
ಜಾನ್ವಿ
ಕಪೂರ್
ನಾಯಕಿಯಾಗಿ
ನಟಿಸುವ
ಮಾತುಗಳು
ಕೇಳಿಬರ್ತಿದೆ.

Vijay -sethupathi-in-RC16

ಈಗಾಗಲೇ
ತೆಲುಗಿನ
‘ದೇವರ’
ಚಿತ್ರದಲ್ಲಿ
ಜಾನ್ವಿ
ಕಪೂರ್
ನಟಿಸುತ್ತಿದ್ದಾರೆ.

ಸಿನಿಮಾ
ಮೂಲಕ
ಸೌತ್‌
ಸಿನಿದುನಿಯಾಗೆ
ಶ್ರೀದೇವಿ
ಪುತ್ರಿಯ
ಆಗಮನವಾಗಿದೆ.
ಇದೀಗ
RC16
ಚಿತ್ರದಲ್ಲೂ
ಜಾನ್ವಿ
ನಟಿಸ್ತಾರೆ
ಎನ್ನಲಾಗ್ತಿದೆ.
ಇನ್ನು
ಆಸ್ಕರ್
ವಿಜೇತ
ಸಂಗೀತ
ನಿರ್ದೇಶಕ
ಎ.
ಆರ್
ರಹಮಾನ್
ಚಿತ್ರಕ್ಕೆ
ಮ್ಯೂಸಿಕ್
ಕಂಪೋಸ್
ಮಾಡೋದು
ಬಹುತೇಕ
ಪಕ್ಕಾ
ಎನ್ನುವ
ಚರ್ಚೆ
ನಡೀತಿದೆ.
ಒಟ್ನಲ್ಲಿ
ಪ್ರತಿಭಾನ್ವಿತರ
ತಂಡ
ಕಟ್ಟಿಕೊಂಡು
ಬುಚ್ಚಿಬಾಬು
2ನೇ
ಚಿತ್ರಕ್ಕೆ
ಕೈ
ಹಾಕುತ್ತಿದ್ದಾರೆ.

‘ಉಪ್ಪೆನ’
ಸಿನಿಮಾ
ಮೂಲಕ
ಬುಚ್ಚಿಬಾಬು
ಸ್ವತಂತ್ರ
ನಿರ್ದೇಶಕರಾಗಿದ್ದರು.
ಮೊದಲ
ಪ್ರಯತ್ನದಲ್ಲೇ
ಭರ್ಜರಿ
ಸಕ್ಸಸ್
ಕಂಡಿದ್ದರು.
ಸುಕುಮಾರ್
ಗರಡಿಯಲ್ಲಿ
ಪಳಗಿದ
ನಿರ್ದೇಶಕ

ಬಾರಿ
ರಾಮ್‌ಚರಣ್‌ಗೆ
ಆಕ್ಷನ್
ಕಟ್
ಹೇಳುತ್ತಿದ್ದಾರೆ.
ಸೆಟ್ಟೇರುವುದಕ್ಕೂ
ಮೊದ್ಲೆ
RC16
ಸಿನಿಮಾ
ಸಿಕ್ಕಾಪಟ್ಟೆ
ಹೈಪ್
ಕ್ರಿಯೇಟ್
ಮಾಡ್ತಿದೆ.

ಹಿಂದೆ
ತಮ್ಮ
ಗುರುಗಳಾದ
ಸುಕುಮಾರ್
ನಿರ್ದೇಶನದ
‘ಪುಷ್ಪ’
ಸಿನಿಮಾ
10
‘KGF’
ಸಿನಿಮಾಗಳಿಗೆ
ಸಮ
ಎಂದು
ಬುಚ್ಚಿಬಾಬು
ಹೇಳಿದ್ದು
ಭಾರೀ
ಸುದ್ದಿ
ಆಗಿತ್ತು.

ಉಪಾಸನಾ ಹೆರಿಗೆಯ ಆಸ್ಪತ್ರೆ ಬಿಲ್ ಎಷ್ಟು ಕೋಟಿ? ಅಷ್ಟು ದೊಡ್ಡ ಮೊತ್ತ ಕಟ್ಟಿದ್ದು ಯಾರು?ಉಪಾಸನಾ
ಹೆರಿಗೆಯ
ಆಸ್ಪತ್ರೆ
ಬಿಲ್
ಎಷ್ಟು
ಕೋಟಿ?
ಅಷ್ಟು
ದೊಡ್ಡ
ಮೊತ್ತ
ಕಟ್ಟಿದ್ದು
ಯಾರು?

ತಮಿಳು
ನಿರ್ದೇಶಕ
ಶಂಕರ್
ನಿರ್ದೇಶನದ
‘ಗೇಮ್‌
ಚೇಂಜರ್’
ಸಿನಿಮಾ
ಕೂಡ
ಭಾರೀ
ನಿರೀಕ್ಷೆ
ಮೂಡಿಸಿದೆ.
ದಿಲ್
ರಾಜು

ಸಿನಿಮಾ
ನಿರ್ಮಾಣ
ಮಾಡ್ತಿದ್ದು
ಚರಣ್
ಡಬಲ್
ರೋಲ್‌ನಲ್ಲಿ
ರಂಜಿಸೋಕೆ
ಬರ್ತಿದ್ದಾರೆ.
ಕೆಲ
ದಿನಗಳ
ಹಿಂದೆ
ರಿಲೀಸ್
ಆಗಿದ್ದ
ಚಿತ್ರದ
ಫಸ್ಟ್
ಲುಕ್
ವೈರಲ್
ಆಗಿತ್ತು.
ಚಿತ್ರದಲ್ಲಿ
ಕಿಯಾರಾ
ಅಡ್ವಾನಿ
ನಾಯಕಿಯಾಗಿ
ನಟಿಸ್ತಿದ್ದಾರೆ.
ನ್ಯೂಜಿಲ್ಯಾಂಡ್
ಸೇರಿದಂತೆ
ಹಲವೆಡೆ
ಸಿನಿಮಾ
ಚಿತ್ರೀಕರಣ
ನಡೆದಿದೆ.

English summary

Vijay Sethupathi joins cast of Buchibabu and Ramcharan’s RC16. A R Rahman confirmed as music director. know more.

Sunday, July 9, 2023, 18:01

Story first published: Sunday, July 9, 2023, 18:01 [IST]

Source link