International
oi-Gururaj S
ಮಾಸ್ಕೊ, ಜೂನ್ 25; ರಷ್ಯಾದ ಆಂತರಿಕ ಬಿಕ್ಕಟ್ಟು ಅಂತ್ಯವಾಗುವ ಸೂಚನೆ ಸಿಕ್ಕಿದೆ. ರಷ್ಯಾದ ಖಾಸಗಿ ಸೇನೆ ‘ವ್ಯಾಗ್ನರ್ ಗ್ರೂಪ್’ ಮಾಸ್ಕೊ ನಗರದ ಕಡೆಯ ಪ್ರಯಾಣವನ್ನು ಸ್ಥಗಿತಗೊಳಿಸಿದೆ. ಪಿಗೋಷಿನ್ ನೇತೃತ್ವದ ಖಾಸಗಿ ಸೇನೆ ಮಾಸ್ಕೊದಿಂದ ಸುಮಾರು 200 ಕಿ. ಮೀ. ದೂರದಲ್ಲಿತ್ತು.
ಪಿಗ್ರೋಷಿನ್ ಮಾತನಾಡಿ, “ರಷ್ಯಾದಲ್ಲಿ ರಕ್ತಪಾತ ತಪ್ಪಿಸಲು ದಾಳಿ ನಿಲ್ಲಿಸಿ ಉಕ್ರೇನ್‌ನ ಸೇನಾ ಶಿಬಿರಗಳಿಗೆ ವಾಪಸ್ ಆಗುವಂತೆ ತಮ್ಮ ಪಡೆಗೆ ಆದೇಶ ನೀಡಿದ್ದೇನೆ” ಎಂದು ಹೇಳಿದ್ದಾರೆ. ಈ ಮೂಲಕ ರಷ್ಯಾದಲ್ಲಿ ಉಂಟಾಗಿದ್ದ ಆತಂಕ ದೂರವಾಗಿದೆ. ರಷ್ಯಾ ಸೇನೆ ಮತ್ತು ಖಾಸಗಿ ಸೇನೆಗಳ ನಡುವಿನ ದಾಳಿ ಅಂತ್ಯವಾಗುವ ಸೂಚನೆ ಸಿಕ್ಕಿದೆ.
ಮಾಸ್ಕೊ ನಗರದಿಂದ ‘ವ್ಯಾಗ್ನರ್ ಗ್ರೂಪ್’ ಕೇವಲ 200 ಕಿ. ಮೀ. ದೂರದಲ್ಲಿತ್ತು. ಆಗ ಪಿಗ್ರೋಷಿನ್ ತನ್ನ ಪಡೆಗಳಿಗೆ ದಾಳಿ ನಿಲ್ಲಿಸಿ, ಉಕ್ರೇನ್‌ನ ಸೇನಾ ಶಿಬಿರಕ್ಕೆ ವಾಪಸ್ ಆಗುವ ಸೂಚನೆ ಕೊಟ್ಟಿದ್ದಾರೆ. ಪಿಗೋಷಿನ್ ಬೇಡಿಕೆಗಳಿಗೆ ರಷ್ಯಾ ಒಪ್ಪಿಗೆ ನೀಡಿದೆಯೇ? ಎಂಬ ಬಗ್ಗೆ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಸೇನೆ ಹಿಂದಕ್ಕೆ; ಪಿಗ್ರೋಷಿನ್ ತಮ್ಮ ಹೇಳಿಕೆಯಲ್ಲಿ, “ನಮ್ಮ ಯೋಧರು ಮಾಸ್ಕೊದಿಂದ ಕೇವಲ 200 ಕಿ. ಮೀ. ದೂರದಲ್ಲಿ ಇರುವಾಗ ದಾಳಿ ನಿಲ್ಲಿಸಿ ಅವರನ್ನು ಹಿಂದಕ್ಕೆ ಕರೆಸಿಕೊಳ್ಳಲು ನಿರ್ಧರಿಸಿದ್ದೇನೆ” ಎಂದು ಹೇಳಿದ್ದಾರೆ. ಈ ಬೆಳವಣಿಗೆ ಬಗ್ಗೆ ರಷ್ಯಾ ಸಹ ಯಾವುದೇ ತಕ್ಷಣದ ಪ್ರತಿಕ್ರಿಯೆಯನ್ನು ಕೊಟ್ಟಿಲ್ಲ.
‘ವ್ಯಾಗ್ನರ್’ ಗ್ರೂಪ್ ಮಾಸ್ಕೊ ನಗರ ಪ್ರವೇಶ ಮಾಡುವ ಆತಂಕ ಎದುರಾಗಿತ್ತು. ಇದರಿಂದಾಗಿ ನಗರಕ್ಕೆ ಆಗಮಿಸುವ ಎಲ್ಲಾ ರಸ್ತೆಗಳನ್ನು ಬಂದ್ ಮಾಡಿ ರಷ್ಯಾ ಸೇನೆಯ ಯೋಧರನ್ನು ನಿಯೋಜನೆ ಮಾಡಲಾಗಿತ್ತು. ಚೆಕ್‌ಪಾಯಿಂಟ್ ಸ್ಥಾಪನೆ ಮಾಡಿ ಶಸ್ತ್ರ ಸಜ್ಜಿತ ಯೋಧರನ್ನು ಕಾವಲಿಗೆ ಹಾಕಲಾಗಿತ್ತು.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಒಂದು ಕಾಲದ ಆಪ್ತ ಯೆವ್ಗೆನಿ ಪಿಗ್ರೋಷಿನ್ 2014ರಲ್ಲಿ ಪುಟಿನ್ ಬೆಂಬಲದಿಂದಲೇ ‘ವ್ಯಾಗ್ನರ್’ ಎಂಬ ಖಾಸಗಿ ಸೇನೆ ಕಟ್ಟಿದ್ದರು. ಅವರ ರಷ್ಯಾ ಅಧ್ಯಕ್ಷರ ವಿರುದ್ಧವೇ ಹೋರಾಟ ಆರಂಭಿಸಿದ್ದು, ರಷ್ಯಾ ಸೇರಿದಂತೆ ಅನೇಕ ದೇಶದಲ್ಲಿ ಆತಂಕ ಮೂಡಿಸಿತ್ತು. ‘ವ್ಯಾಗ್ನರ್’ ಗುಂಪು ಬೆನ್ನಿಗೆ ಚೂರಿ ಹಾಕಿದೆ ಎಂದು ಪುಟಿನ್ ಶನಿವಾರ ಹೇಳಿದ್ದರು.
English summary
The fighters of the Wagner private army lead by Yevgeny Prigozhin said that army stopped march towards Moscow.
Story first published: Sunday, June 25, 2023, 8:15 [IST]