ಮಾಜಿ ಪ್ರಧಾನಿ ಜಸ್ಟ್ ಮಿಸ್: ಪರಿಸ್ಥಿತಿ ಮಾತ್ರ ಭಯಾನಕ! | Pak former PM Imran Khan went Pakistan supreme court

International

oi-Malathesha M

|

Google Oneindia Kannada News

ರಾಜಕಾರಣಿಗಳು ಭ್ರಷ್ಟಾಚಾರದ ಪ್ರಕರಣಗಳಲ್ಲಿ ಜೈಲು ಸೇರುವುದು ಮಾಮೂಲಿ. ಅದರಲ್ಲೂ ಪಾಕ್ ರಾಜಕಾರಣಿಗಳಿಗೆ ಭ್ರಷ್ಟಾಚಾರ ಅನ್ನೋದೆ ಟ್ರೆಂಡ್ ಆಗಿದೆ. ಹೀಗೆ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಅಳತೆಗೂ ಮೀರಿ ಕೇಸ್‌ಗಳು ಬಿದ್ದಿವೆ. ಈ ಪೈಕಿ ಒಂದು ಮಹತ್ವದ ಪ್ರಕರಣದಲ್ಲಿ ಇಮ್ರಾನ್ ಮತ್ತೆ ಜೈಲು ಸೇರುವ ಭೀತಿ ಖಾನ್‌ಗೆ ಈಗ ಶುರುವಾಗಿದೆ. ಹಾಗಾದ್ರೆ ಯಾವುದು ಆ ಪ್ರಕರಣ, ಬನ್ನಿ ತಿಳಿಯೋಣ.

ಹೌದು, ಜಗತ್ತಿನಲ್ಲೇ ಅಭಿವೃದ್ಧಿ ಹೊಂದುತ್ತಿರುವ ಮುಂಚೂಣಿ ರಾಷ್ಟ್ರ ಎನಿಸಿಕೊಳ್ಳುತ್ತಿದೆ ಭಾರತ. ಭಾರತಕ್ಕೆ ಭಾರತವೇ ಸಾಟಿ ಎಂದು ಘಟಾನುಘಟಿ ದೇಶಗಳೂ ಹೇಳುತ್ತಿವೆ. ಆದರೆ ಭಾರತವನ್ನು ಸದಾ ವಿರೋಧ ಮಾಡುವ ಪಾಕಿಸ್ತಾನದ ಪಾಡು ಹೇಗಿದೆ ಗೊತ್ತಾ? ಅಲ್ಲಿನ ಮಾಜಿ ಪ್ರಧಾನಿಗೆ ಜೀವ ರಕ್ಷಣೆಯೇ ಇಲ್ಲದಂತಾಗಿದೆ. ಯಾಕೆ ಈ ಮಾತು ಅಂದರೆ, ತೋಶಾಖಾನಾ ಭ್ರಷ್ಟಾಚಾರ ಪ್ರಕರಣದಲ್ಲಿ ಇಮ್ರಾನ್‌ಗೆ ಆತಂಕ ಶುರುವಾಗಿದೆ. ಈ ಕೇಸ್‌ನ ವಾರದ ಒಳಗಾಗಿ ಮರುಪರಿಶೀಲಿಸಲು ವಿಚಾರಣಾ ನ್ಯಾಯಾಲಯಕ್ಕೆ ಇಸ್ಲಾಮಾಬಾದ್ ಹೈಕೋರ್ಟ್ ನೀಡಿದ ನಿರ್ದೇಶನ ಸಂಚಲನ ಸೃಷ್ಟಿಸಿದೆ. ಹೀಗಾಗಿ ಮಹತ್ವದ ಆದೇಶ ಪ್ರಶ್ನಿಸಿ ಪದಚ್ಯುತ ಪ್ರಧಾನಿ ಇಮ್ರಾನ್ ಖಾನ್ ಈಗ ಪಾಕಿಸ್ತಾನದ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ.

Pak former PM Imran Khan went Pakistan supreme court

ಸುಪ್ರೀಂ ಕೋರ್ಟ್‌ನಲ್ಲಿ ಸಿಗುತ್ತಾ ರಿಲೀಫ್?

ಅಷ್ಟಕ್ಕೂ, ಇಮ್ರಾನ್ ಖಾನ್ ಹಲವು ಭ್ರಷ್ಟಾಚಾರ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಹೀಗೆ ದುಬಾರಿ ಉಡುಗೊರೆಗಳನ್ನು ಲಾಭಕ್ಕಾಗಿ ಮಾರಾಟ ಮಾಡಿದ ಆರೋಪ ಹಿನ್ನೆಲೆಯಲ್ಲಿ ಒಂದು ಕೇಸ್ ದಾಖಲಾಗಿತ್ತು. ತೋಶಾಖಾನ ಅಂದರೆ ರಾಜ್ಯ ಉಡುಗೊರೆ ಭಂಡಾರದಡಿ ಕೇಸ್ ಖಾನ್ ವಿರುದ್ಧ ಇದೆ. ಈ ಪ್ರಕರಣದಲ್ಲಿ ಇಮ್ರಾನ್ ಖಾನ್‌ಗೆ ಈಗ ಅಪಾಯ ಕೂಡ ಎದುರಾಗಿದೆ. ಹೀಗಾಗಿ ಅಲರ್ಟ್ ಆದ ಇಮ್ರಾನ್ ಪಾಕಿಸ್ತಾನದ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆಂದು ಹೇಳಲಾಗುತ್ತಿದೆ. ಈ ಹಿಂದೆ ಕೂಡ ಜೈಲು ಸೇರಿದ್ದಾಗ ಪಾಕಿಸ್ತಾನದ ಸುಪ್ರೀಂ ಕೋರ್ಟ್‌ ಆ ಸಂದರ್ಭದಲ್ಲಿ ಇಮ್ರಾನ್‌ಗೆ ರಿಲೀಫ್ ನೀಡಿತ್ತು.

ಏನೇ ಮಾಡಿದರೂ ಇಮ್ರಾನ್‌ಗೆ ಸಂಕಷ್ಟ!

ಪಾಕ್ ಸೇನೆ & ಪಾಕ್ ಕೇಂದ್ರ ಸರ್ಕಾರದ ವಿರುದ್ಧ ಇಮ್ರಾನ್ ತೊಡೆತಟ್ಟಿದ್ದಾರೆ. ಹೀಗಾಗಿಯೇ ಖಾನ್ ವಿರುದ್ಧವೇ ಕೇಸ್‌ಗಳು ದಾಖಲಾಗುತ್ತಿವೆ. ಈವರೆಗೂ ಖಾನ್ ವಿರುದ್ಧ 150ಕ್ಕೂ ಹೆಚ್ಚು ಕೇಸ್ ದಾಖಲಾಗಿ ಒಮ್ಮೆ ಜೈಲೂಟ ಮಾಡಿದ್ದಾರೆ. ಇಷ್ಟು ಮಾತ್ರವಲ್ಲದೆ ಇಮ್ರಾನ್ ಮೇಲೆ ಗುಂಡು ಹಾರಿಸಿ ಕೊಲೆಗೂ ಯತ್ನಿಸಲಾಗಿತ್ತು. ಇದಿಷ್ಟು ಸಾಲದು ಎಂಬಂತೆ ಇಮ್ರಾನ್ ಖಾನ್‌ಗೆ ಮತ್ತೆ ಜೈಲು ತೋರಿಸಬೇಕು ಎಂದು ಪಾಕಿಸ್ತಾನ ಸರ್ಕಾರ ಪಣತೊಟ್ಟಂತೆ ಕಾಣುತ್ತಿದೆ. ಹೀಗಾಗಿ ಮತ್ತೆ ಮತ್ತೆ ಲಾಕ್ ಆಗುತ್ತಿದ್ದಾರೆ ಇಮ್ರಾನ್ ಖಾನ್.

Pak former PM Imran Khan went Pakistan supreme court

150 ಕೇಸ್‌ಗಳ ಸರದಾರ ಇಮ್ರಾನ್!

ಮೇ 9ರಂದು ಇಮ್ರಾನ್ ಅರೆಸ್ಟ್ ಆದ ಬಳಿಕ ಪಾಕಿಸ್ತಾನ ಸೇನಾ ನೆಲೆಗಳ ಮೇಲೆ ದಾಳಿ ನಡೆದಿತ್ತು. ಆಗ ಪಾಕಿಸ್ತಾನ ಸೇನೆಗೆ ಸೇರಿದ ಕಂಪ್ಯೂಟರ್ ಮತ್ತು ಡಾಟಾ ಸೇರಿ ಹಲವು ವಸ್ತುಗಳನ್ನು ನಾಶ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಇಮ್ರಾನ್ ಖಾನ್ ಬೆಂಬಲಿಗರು ಅರೆಸ್ಟ್ ಆಗಿದ್ರು. ಗಲಾಟೆ ಮಾಡಿದವರ ವಿರುದ್ಧ ಉಗ್ರರ ಪಟ್ಟ ಕಟ್ಟಲಾಗಿದೆ. ಹೀಗೆ ಇಮ್ರಾನ್ ವಿರುದ್ಧ ಭಯೋತ್ಪಾದನೆ ಆರೋಪ ಹೊರಿಸಲು ಪ್ರಯತ್ನಿಸಲಾಗಿತ್ತು. ಇದು ವರ್ಕೌಟ್ ಆಗದ ಕಾರಣ ಮೊನ್ನೆ ಇಮ್ರಾನ್ ಖಾನ್ ವಿರುದ್ಧ ದಿಢೀರ್ 6 ಹೊಸ ಪ್ರಕರಣಗಳನ್ನ ದಾಖಲು ಮಾಡಲಾಗಿತ್ತು.

ಭ್ರಷ್ಟಾಚಾರದ ಕೇಸ್‌ಗಳ ಸುರಿಮಳೆ

ಅಲ್-ಖಾದಿರ್ ಟ್ರಸ್ಟ್‌ಗೆ ಭೂಮಿ ನೀಡುವಾಗ, ಸಾವಿರಾರು ಕೋಟಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಇಮ್ರಾನ್ ವಿರುದ್ಧ ಇದೆ. ಪಾಕಿಸ್ತಾನ ಮಾಜಿ ಪ್ರಧಾನಿ ವಿರುದ್ಧವೇ 5 ಸಾವಿರ ಕೋಟಿ ರೂಪಾಯಿ ಲ್ಯಾಂಡ್ ಡೀಲ್ ಹಗರಣವಿದೆ. ಕೇಸ್ ಸಂಬಂಧ ಖಾನ್ ಈಗಾಗ್ಲೇ ಜೈಲು ಸೇರಿದ್ರು. ಪಾಕಿಸ್ತಾನ ರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ ಮಂಡಳಿ ಖಾನ್‌ ಅರೆಸ್ಟ್ ಮಾಡಿತ್ತು. ಆದರೆ ಪಾಕ್ ಸುಪ್ರೀಂಕೋರ್ಟ್ ಮಧ್ಯಪ್ರವೇಶದ ನಂತರ ಇಮ್ರಾನ್ ಬಿಡುಗಡೆ ಆಗಿದ್ದಾರೆ. ಇದರ ಜೊತೆಗೆ ₹600 ಕೋಟಿ ಬೆಲೆ ಬಾಳುವ ಭೂಮಿಯನ್ನ ರಾಜಕೀಯ ಪ್ರಭಾವ ಬಳಸಿ ₹13 ಕೋಟಿಗೆ ಖರೀದಿ ಮಾಡಿದ ಆರೋಪ ಕೂಡ ಇಮ್ರಾನ್ ವಿರುದ್ಧ ಇದೆ. ಈ ನಡುವೆ ಸಾಲು ಸಾಲು ಕೇಸ್‌ಗಳು ಇಮ್ರಾನ್ ತಲೆಗೆ ಸುತ್ತಿಕೊಳ್ಳುತ್ತಿವೆ.

English summary

Pak former PM Imran Khan went Pakistan supreme court.

Story first published: Saturday, July 8, 2023, 22:18 [IST]

Source link