Ramanagara
lekhaka-Ramesh Ramakirshna
ರಾಮನಗರ, ಜೂನ್, 23: ಕರ್ತವ್ಯನಿರತ ಮೂವರು ಪೊಲೀಸ್ ಅಧಿಕಾರಿಗಳು ಮದ್ಯಪಾನ ಸೇವನೆ ಮಾಡಿ ತೂರಾಡಿದ ಘಟನೆ ಮಾಗಡಿಯಲ್ಲಿ ನಡೆದಿದ್ದು, ಈ ವಿಡಿಯೋ ಎಲ್ಲೆಡೆ ವೈರಲ್ ಕೂಡ ಆಗಿತ್ತು. ಇದೀಗ ಈ ಸಂಬಂಧ ಇಬ್ಬರು ಎಎಸ್ಐ, ಓರ್ವ ಹೆಡ್ ಕಾನ್ಸ್‌ಟೇಬಲ್‌ಗಳನ್ನು ಅಮಾನತು ಮಾಡಲಾಗಿದೆ ಎಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಹೇಳಿದ್ದಾರೆ.
ಹೆಡ್ ಕಾನ್ಸ್‌ಟೇಬಲ್ ನಾರಾಯಣ ಮತ್ತು ದೀರ್ಘಾವಧಿ ರಜೆಯಲ್ಲಿದ್ದರುವ ಎಎಸ್ಐಗಳಾದ ಮಂಜುನಾಥ್ ಮತ್ತು ನಾರಾಯಣಮೂರ್ತಿ ಅವರನ್ನು ಅಮಾನತು ಮಾಡಲಾಗಿದೆ. ನಿನ್ನೆ ಕರ್ತವ್ಯಕ್ಕೆ ಹಾಜರಾಗುವ ವೇಳೆ ಕುಡಿದು ಸಾರ್ವಜನಿಕರೊಂದಿದೆ ಅನುಚಿತ ವರ್ತನೆ ತೋರಿದ್ದಾರೆ. ಇಂತಹ ಪ್ರಕರಣಗಳಿಂದ ಇಲಾಖೆಗೆ ಕೆಟ್ಟ ಹೆಸರು ಬರುತ್ತದೆ. ಆದ್ದರಿಂದ ಈ ಬಗ್ಗೆ ತನಿಖೆ ನಡೆಸಿ ಮೂವರನ್ನು ಅಮಾನತು ಮಾಡಲಾಗಿದೆ ಎಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ತಿಳಿಸಿದರು.
ಘಟನೆ ಹಿನ್ನೆಲೆ
ಪಲೀಸ್ ಅಧಿಕಾರಿಗಳಿಬ್ಬರು ಮಾಗಡಿ ಠಾಣೆಯಿಂದ ಖೈದಿಯನ್ನು ರಾಮನಗರ ಜಿಲ್ಲಾ ಕಾರಗೃಹಕ್ಕೆ ಬಿಟ್ಟು ಬರಲು ಹೋಗಿದ್ದರು. ಬಳಿಕ ಮತ್ತೆ ಮಾಗಡಿಗೆ ವಾಪಸ್ ಹೋಗುವಾಗ ಇವರಿಬ್ಬರು ವೇಳೆ ಎಣ್ಣೆ ಪಾರ್ಟಿ ಮಾಡಿದ್ದಾರೆ. ಹೀಗೆ ಕರ್ತವ್ಯದ ಸಮಯದಲ್ಲೇ ಕಂಠಪೂರ್ತಿ ಕುಡಿದು ಟೈಟಾಗಿದ್ದಲ್ಲದೆ ಸಾರ್ವಜನಿಕರೊಂದಿಗೆ ಕಿರಿಕ್ ಸಹ ಮಾಡಿಕೊಂಡಿದ್ದು, ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಅಪಘಾತ ತಡೆಗೆ ಮುಂದಾದ ಪೊಲೀಸ್: 54 ಅಂಶದ ವರದಿ ಸಿದ್ಧ
ಮಾಗಡಿ ಎಎಸ್ಐ ಮಂಜುನಾಥ್, ಕುದೂರು ಕ್ರೈಂ ಪಿಸಿ ನಾರಾಯಣ ಸೇರಿ ಮತ್ತಿಬ್ಬರು ಪೊಲೀಸರು ಕುಡಿದು ಠಾಣೆಯ ಕಾರಿನಲ್ಲೇ ಮೋಜುಮಸ್ತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ ಮೈ ಮೇಲೆ ಪ್ರಜ್ಞೆ ಇಲ್ಲದೇ, ಯೂನಿಫಾರ್ಮ್ ಕಳಚಿಟ್ಟು ಪಕ್ಕದಲ್ಲಿ ಹೋಗುತ್ತಿದ್ದ ಕಾರು ಚಾಲಕನೊಂದಿಗೆ ಕಿರಿಕ್ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಅವಾಚ್ಯ ಶಬ್ದಗಳಿಂದಲೂ ನಿಂಧಿಸಿರುವ ವೀಡಿಯೋ ಇದೀಗ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
English summary
Consumed alcohol while on duty: Ramanagara station Three police officers Suspension today.
Story first published: Friday, June 23, 2023, 18:44 [IST]