ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಸಿದ್ದರಾಮಯ್ಯ ಸರ್ಕಾರ ಕೊಟ್ಟಿದ್ದು ಎಷ್ಟು ನೂರು ಕೋಟಿ ಗೊತ್ತಾ? | How much Karnataka government spent for free bus scheme

Karnataka

oi-Malathesha M

|

Google Oneindia Kannada News

ಬೆಂಗಳೂರು: ರಾಜ್ಯದಲ್ಲಿ ‘ಶಕ್ತಿ ಯೋಜನೆ’ ಯಶಸ್ವಿಯಾಗಿ ಜಾರಿಯಾಗಿದ್ದು, ದುಡಿಯುವ ವರ್ಗ ಯೋಜನೆ ಸದುಪಯೋಗ ಮಾಡಿಕೊಳ್ಳುತ್ತಿದೆ. ನಿತ್ಯ ನೂರಾರು ರೂಪಾಯಿ ಖರ್ಚು ಮಾಡ್ಕೊಂಡು ಕೆಲಸಕ್ಕೆ ಹೋಗುತ್ತಿದ್ದ ಮಹಿಳೆಯರಿಗೆ ಬೆಂಬಲ ಸಿಕ್ಕಿದೆ. ಗೊಂದಲಗಳಿದ್ದರು ಶಕ್ತಿ ಯೋಜನೆಗೆ ಅಡ್ಡಿಯಾಗಿಲ್ಲ. ಹಾಗಾದರೆ ಸರ್ಕಾರ ಈವರೆಗೂ ಶಕ್ತಿ ಯೋಜನೆಗೋಸ್ಕರ ಖರ್ಚು ಮಾಡಿದ್ದು ಎಷ್ಟು ಕೋಟಿ ಗೊತ್ತಾ? ಇಲ್ಲಿದೆ ಮಾಹಿತಿ.

ಕರ್ನಾಟಕ ವಿಧಾನಸಭೆ ಚುನಾವಣೆಗೂ ಮೊದಲು ಕಾಂಗ್ರೆಸ್ ಕೊಟ್ಟಿದ್ದ 5 ಗ್ಯಾರಂಟಿ ಪೈಕಿ ಉಚಿತ ಬಸ್ ಪ್ರಯಾಣವೂ ಒಂದು. ಈಗಾಗಲೇ ಉಚಿತ ಬಸ್ ಯೋಜನೆ ಅಂದರೆ ಈ ಶಕ್ತಿ ಯೋಜನೆ ಜಾರಿಯಾಗಿ 2 ವಾರವೇ ಕಳೆದಿವೆ. ಆದ್ರೂ ಯೋಜನೆ ಸದ್ದು ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಅದರಲ್ಲೂ ದುಡಿವ ವರ್ಗದ ಮಹಿಳೆಯರಿಗೆ ಸಾಕಷ್ಟು ಸಹಾಯ ಆಗಿದೆ. ಇನ್ನು ದಿನದಿಂದ ದಿನಕ್ಕೆ ಮಹಿಳಾ ಪ್ರಯಾಣಿಕರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಹೀಗಾಗಿ ಕಳೆದ 2 ವಾರದಲ್ಲಿ ಅಂದರೆ 11.06.2023ರಿಂದ 25.06.2023ರ ತನಕ ಸರ್ಕಾರ ಉಚಿತ ಬಸ್ ಪ್ರಯಾಣಕ್ಕೆ ಖರ್ಚು ಮಾಡಿದ್ದು ಎಷ್ಟು ನೂರು ಕೋಟಿ ರೂಪಾಯಿ ಗೊತ್ತಾ?

government spent for free bus scheme

2 ವಾರದಲ್ಲಿ 179 ಕೋಟಿ ರೂಪಾಯಿ ಖರ್ಚು!

11.06.2023ರಿಂದ 25.06.2023ರ ತನಕ ಕರ್ನಾಟಕದ 4 ನಿಗಮಗಳ ಬಸ್‌ಗಳಲ್ಲಿ ಒಟ್ಟಾರೆ 7 ಕೋಟಿ 64 ಲಕ್ಷ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಇದಕ್ಕಾಗಿ ರಾಜ್ಯ ಸರ್ಕಾರ ಒಟ್ಟಾರೆ 179 ಕೋಟಿ 28 ಲಕ್ಷ ರೂ. ಖರ್ಚು ಮಾಡಿದೆ. ಈ ಮೂಲಕ ಸರ್ಕಾರಿ ಸಾರಿಗೆಗೆ ಜನ ಬರ್ತಿಲ್ಲ ಅನ್ನೋ ಕೊರಗು ದೂರವಾಗುತ್ತಿದೆ. ಹಾಗೇ ಸಾರಿಗೆ ಸಂಸ್ಥೆಗಳಿಗೂ ಈ ಮೂಲಕ ಹೊಸ ಉತ್ತೇಜನ ಸಿಕ್ಕಂತಾಗಿದೆ. ಸಾಕಷ್ಟು ನಷ್ಟದ ಹಾದಿಯಲ್ಲಿ ಸಾಗುತ್ತಿದ್ದ ರಾಜ್ಯ ಸರ್ಕಾರಿ ಸಾರಿಗೆಗೆ ಹೊಸ ಹುಮ್ಮಸ್ಸು ಬಂದಿದೆ ಎಂಬ ಮಾತುಗಳು ಕೇಳಿಬಂದಿವೆ. ಉಚಿತವಾಗಿ ಮಹಿಳೆಯರು ಪ್ರಯಾಣ ಮಾಡಿದರೂ ರಾಜ್ಯ ಸರ್ಕಾರವೇ ಅದರ ಟಿಕೆಟ್‌ನ ವೆಚ್ಚ ಭರಿಸಲಿದೆ.

ಗೃಹಲಕ್ಷ್ಮಿ ಅರ್ಜಿಗೂ ಮುಹೂರ್ತ ಫಿಕ್ಸ್

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಿರೋಧ ಪಕ್ಷಗಳು 5 ಗ್ಯಾರಂಟಿ ವಿಚಾರ ಹಿಡಿದು ವಾಗ್ದಾಳಿ ನಡೆಸುತ್ತಿವೆ. ಅದರಲ್ಲೂ ಅನ್ನಭಾಗ್ಯ, ಗೃಹಜ್ಯೋತಿ ಯೋಜನೆ ಸೇರಿ ಶಕ್ತಿ ಯೋಜನೆ ವಿಚಾರದಲ್ಲೂ ಸಾಕಷ್ಟು ಜಟಾಪಟಿ ನಡೆದಿದೆ. ಅದೇ ರೀತಿ ಗೃಹಲಕ್ಷ್ಮಿ ಯೋಜನೆ ವಿಚಾರಕ್ಕೂ ವಿರೋಧ ಪಕ್ಷಗಳು ಫೈಟ್ ಮಾಡುತ್ತಿವೆ. ಈ ಹೊತ್ತಲ್ಲೇ ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆಗೆ ದಿನಾಂಕ ಫಿಕ್ಸ್ ಆಗಿದೆ. ನಾಳೆಯಿಂದ ಅಂದರೆ ಜೂನ್ 27ರಿಂದಲೇ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಶುರುವಾಗಲಿದೆ. ಹೀಗೆ ರಾಜ್ಯದಲ್ಲಿ ಕಾಂಗ್ರೆಸ್ ಘೋಷಿಸಿರುವ ಇನ್ನೊಂದು ಗ್ಯಾರಂಟಿ ಯೋಜನೆ ಜಾರಿಗೂ ಕೌಂಟ್‌ಡೌನ್ ಶುರುವಾಗಿದೆ.

government spent for free bus scheme

ಹಾಗಾದರೆ ರಾಜ್ಯ ಸರ್ಕಾರದ 5 ಗ್ಯಾರಂಟಿಗಳ ಪೈಕಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ನೀವು ಅರ್ಜಿ ಸಲ್ಲಿಸಲು ಯಾವ ದಾಖಲೆ ಬೇಕು ಗೊತ್ತಾ? ದಾಖಲೆಗಳು ಇದ್ದರೆ ಅದನ್ನ ಆನ್‌ಲೈನ್ ಮೂಲಕ ಸಲ್ಲಿಕೆ ಮಾಡುವುದು ಹೇಗೆ? ಅರ್ಜಿ ಸಲ್ಲಿಕೆಯ ವಿಧಾನ ಹೇಗೆ? ಅದರ ಸಂಪೂರ್ಣ ಮಾಹಿತಿ ಇಲ್ಲಿದೆ ತಿಳಿಯಿರಿ.

ಯಾವೆಲ್ಲಾ ದಾಖಲೆಗಳು ಬೇಕು?

1) ರೇಷನ್ ಕಾರ್ಡ್

2) ಬ್ಯಾಂಕ್ ಪಾಸ್‌ಬುಕ್

3) ಆಧಾರ್ ಕಾರ್ಡ್

4) ವೋಟರ್ ಐಡಿ

ಉಚಿತ ಬಸ್‌ ಪ್ರಯಾಣದಿಂದ ಬಸ್‌ ಫುಲ್‌ ರಶ್‌: ಪ್ರತಿ ನಿತ್ಯ ಅಪಾಯದಲ್ಲಿ ವಿದ್ಯಾರ್ಥಿಗಳ ಸಂಚಾರಉಚಿತ ಬಸ್‌ ಪ್ರಯಾಣದಿಂದ ಬಸ್‌ ಫುಲ್‌ ರಶ್‌: ಪ್ರತಿ ನಿತ್ಯ ಅಪಾಯದಲ್ಲಿ ವಿದ್ಯಾರ್ಥಿಗಳ ಸಂಚಾರ

ಅರ್ಜಿ ಸಲ್ಲಿಕೆ ಮಾಡುವುದು ಹೇಗೆ?

ಅಂದಹಾಗೆ ನಿಮ್ಮ ಬಳಿ ರೇಷನ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್, ಆಧಾರ್ ಕಾರ್ಡ್ ಜೊತೆ ವೋಟರ್ ಐಡಿ ಇರಬೇಕು. ಗೃಹಲಕ್ಷ್ಮೀ ಯೋಜನೆಗೆ ಸರ್ಕಾರದ ಸೇವಾಸಿಂಧು ಪೋರ್ಟಲ್‌ನ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬಹುದು. ಇಲ್ಲ ಎಂದರೆ ಗ್ರಾಮ ಒನ್ & ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳಲ್ಲೂ ಭೌತಿಕವಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

English summary

How much Karnataka government spent for free bus scheme.

Story first published: Monday, June 26, 2023, 14:40 [IST]

Source link