ಮಹಿಳೆಯರಿಗೆ ಉಚಿತ ಬಸ್‌: ಪ್ರಯಾಣಿಕರ ನಿಯಂತ್ರಣಕ್ಕೆ ಹೋಂ ಗಾರ್ಡ್‌ ನೇಮಕ | Appointment Of Home Guard For Passenger Control In Raichur Bus Stands

Raichur

oi-Umapathi Ramoji

By ರಾಯಚೂರು ಪ್ರತಿನಿಧಿ

|

Google Oneindia Kannada News

ರಾಯಚೂರು, ಜೂನ್‌ 19: ರಾಜ್ಯ ಸರ್ಕಾರ ಮಹಿಳಾ ಪ್ರಯಾಣಿಕರಿಗೆ ಜೂನ್ 11ರಿಂದ ಆರಂಭಿಸಿರುವ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣದ ವೇಳೆ ನಿಲ್ದಾಣದಲ್ಲಿ ಪ್ರಯಾಣಿಕರನ್ನು ನಿಯಂತ್ರಿಸಲು ನೂಕುನುಗ್ಗಲು ತಪ್ಪಿಸಲು ಸಾರಿಗೆ ಸಂಸ್ಥೆಯು ಗೃಹರಕ್ಷಕ ದಳದ ಮಹಿಳಾ ಸಿಬ್ಬಂದಿಯ ಮೊರೆ ಹೋಗಿದೆ.

ರಾಯಚೂರು ಜಿಲ್ಲೆಯ 7 ಸಾರಿಗೆ ಘಟಕಗಳಿಗೆ ಸೇರಿದ 565 ಬಸ್‌ಗಳು ಸಂಚರಿಸುತ್ತಿವೆ. ಅಂತರ್‌ರಾಜ್ಯ ಹಾಗೂ ಸ್ಲೀಪರ್ ಸೇರಿ 50 ಬಸ್ ಗಳನ್ನು ಹೊರತುಪಡಿಸಿ 515 ಬಸ್ ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಎಕ್ಸ್‌ಪ್ರೆಸ್‌ 324, ಲೋಕಲ್ 204 ಹಾಗೂ ನಗರ ವ್ಯಾಪ್ತಿಯ 14 ಬಸ್‌ಗಳಲ್ಲಿ ಮಹಿಳೆಯರು ಸಂಚರಿಸಲು ಅವಕಾಶವಿದೆ. ಜಿಲ್ಲೆಯ ಪ್ರತಿಯೊಂದು ಬಸ್ ನಿಲ್ದಾಣದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ.

Appointment Of Home Guard For Passenger

ಒಬ್ಬರು ಪಿಎಸ್‌ಐ , ಇಬ್ಬರು ಪೊಲೀಸ್ ಪೇದೆ ಸೇರಿ ನಾಲ್ವರು ಪುರುಷ ಹಾಗೂ ನಾಲ್ವರು ಮಹಿಳಾ ಹೋಂ ಗಾರ್ಡ್‌ಗಳನ್ನು ಪಾಳಿ ಪ್ರಕಾರ ಪಹರೆ ಕೆಲಸ ನಿರ್ವಹಿಸುತ್ತಿದ್ದಾರೆ. ನಿತ್ಯವೂ ಒಂದಲ್ಲ ಒಂದು ನಿಲ್ದಾಣದಲ್ಲಿ ಕಳ್ಳತನ ನಡೆದರೂ ಪ್ರಯಾಣಿಕರು ದೂರು ನೀಡಲು ಮುಂದೆ ಬಾರದೇ ಇರುವುದು ಅಚ್ಚರಿ ಮೂಡಿಸಿದೆ.

ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ: ವಾರಾಂತ್ಯದಲ್ಲಿ ಲಕ್ಷ ಜನರಿಂದ ಮಂಜುನಾಥನ ದರ್ಶನಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ: ವಾರಾಂತ್ಯದಲ್ಲಿ ಲಕ್ಷ ಜನರಿಂದ ಮಂಜುನಾಥನ ದರ್ಶನ

ಕಳೆದ ಒಂದು ವಾರದಿಂದ ಬಹುತೇಕ್ ಬಸ್‌ಗಳು ವಿಶೇಷವಾಗಿ ಮಹಿಳಾ ಪ್ರಯಾಣಿಕರಿಂದ ತುಂಬಿ ತುಳುಕುತ್ತಿವೆ. ಸೀಟಿಗಾಗಿ ಪ್ರಯಾಣಿಕರ ಮಧ್ಯೆ ಮೇಲಿಂದ ಮೇಲೆ ನಡೆಯುವ ವಾಗ್ದಾದ, ಜಗಳ ತಪ್ಪಿಸುವುದೇ ನಿರ್ವಾಹಕರು ಮತ್ತು ಚಾಲಕರ ಕೆಲಸವಾಗಿದೆ. ಈ ಮಧ್ಯೆ ಪ್ರಯಾಣಿಕರ ನೂಕುನುಗ್ಗಲಿನ ಲಾಭ ಪಡೆಯಲು ಕಳ್ಳಕಾಕರು ಮುಂದಾಗಿದ್ದಾರೆ. ಇಂತಹ ಕಳ್ಳರ ಜಾಡು ಹಿಡಿಯುವುದು ಪೊಲೀಸರಿಗೆ ಹೊಸ ಸವಾಲಾಗಿದೆ.

Appointment Of Home Guard For Passenger

ಜಿಲ್ಲೆಯ ಏಳು ಸಾರಿಗೆ ಘಟಕಗಳಿಂದ ವಿವಿಧ ತಾಲೂಕುಗಳಿಂದ ಬಂದಿರುವ ಗೃಹ ರಕ್ಷಕ ದಳದ ಮಹಿಳಾ ಸಿಬ್ಬಂದಿಯನ್ನು ಅಲ್ಲಿ ನಿಯೋಜಿಸಲಾಗಿದೆ. ಜೂನ್ 11ರಿಂದಲೇ ನಿಲ್ದಾಣಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿ ಪ್ರಯಾಣಿಕರಿಗೆ ತಿಳಿವಳಿಕೆ ಮೂಡಿಸುತ್ತಿದ್ದಾರೆ.

ಶಕ್ತಿ ಯೋಜನೆ ಜಾರಿ ನಂತರ ರಾಯಚೂರು ಕೇಂದ್ರ ಬಸ್ ನಿಲ್ದಾಣ ಸೇರಿ ಇತರ ಬಸ್ ನಿಲ್ದಾಣಗಳಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕಳ್ಳತನ ಸೇರಿ ಇತರ ಅಹಿತಕರ ಘಟನೆ ನಡೆದರೆ ಪೊಲೀಸರು, ಸಾರ್ವಜನಿಕರ ನೆರವಿಗೆ ಧಾವಿಸಲಿದ್ದಾರೆ ಎಂದು ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್ ತಿಳಿಸಿದ್ದಾರೆ.

English summary

Free bus Effect: Appointment of home guard for control passenger and crime in Raichur Bus Stands. Know more

Source link