ಮಹಾರಾಷ್ಟ್ರ ಸಿಎಂ ಸ್ಥಾನಕ್ಕೆ ಹಠಹಿಡಿದ ಅಜಿತ್‌ ಪವಾರ್‌: ಬಿಜೆಪಿ-ಶಿವಸೇನಾ ನಡುವಿನ ಉರಿಗೆ ಕಾರ ಸುರಿಯುತ್ತಿರುವ ಪವಾರ್‌ ಫ್ಯಾಮಿಲಿ | Ajit Pawar to become Maharashtra CM? Here is the biggest political scoop

India

oi-Ravindra Gangal

|

Google Oneindia Kannada News

ಮುಂಬೈ, ಜುಲೈ 28: ಮಹಾರಾಷ್ಟ್ರ ರಾಜಕಾರಣ ವಿಚಿತ್ರ ಬೆಳವಣಿಗೆಗಳಿಗೆ ಸಾಕ್ಷಿಯಾಗುತ್ತಿದೆ. ಮಹಾರಾಷ್ಟ್ರ ಸರ್ಕಾರಕ್ಕೆ ಹೊಸದಾಗಿ ಸೇರಿಕೊಂಡಿರುವ ಎನ್‌ಸಿಪಿಯ ಅಜಿತ್‌ ಪವಾರ್‌ ಬಣ ಹಲವು ಬೇಡಿಕೆಗಳನ್ನು ಮುಂದಿಡುತ್ತಲೇ ಇದೆ. ಉಪ ಮುಖ್ಯಮಂತ್ರಿಯಾಗಿರುವ ಅಜಿತ್‌ ಪವಾರ್‌ ಈಗ ಸಿಎಂ ಸ್ಥಾನಕ್ಕೆ ಹಠ ಹಿಡಿದಿದ್ದಾರೆ ಎನ್ನಲಾಗಿದೆ. ಇದು ಬಿಜೆಪಿ ಹಾಗೂ ಶಿವಸೇನಾ ( ಏಕನಾಥ ಶಿಂಧೆ ಬಣ ) ನಡುವೆ ಬಿರುಕು ಮೂಡಿಸಿದೆ.

ಮಹಾರಾಷ್ಟ್ರದಲ್ಲಿ ಸಿಎಂ ಸ್ಥಾನಕ್ಕೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಬಣಗಳ ನಡುವೆ ಹಗ್ಗ ಜಗ್ಗಾಟ ಮುಂದುವರಿದಿದೆ. ಗುರುವಾರ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಬಣವು ಮುಖ್ಯಮಂತ್ರಿ ಸ್ಥಾನಕ್ಕೆ ಬೇಡಿಕೆ ಇಟ್ಟಿದೆ. ತಮಗೆ ಮುಖ್ಯಮಂತ್ರಿ ಸ್ಥಾನವನ್ನು ನೀಡಲೇಬೇಕೆಂದು ಅಜಿತ್‌ ಪವಾರ್‌ ಹಠ ಹಿಡಿದಿದ್ದಾರೆ.

Ajit Pawar to become Maharashtra CM? Here is the biggest political scoop

ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಕೇಂದ್ರ ಸಚಿವ ಪ್ರಫುಲ್ ಪಟೇಲ್, ಅಜಿತ್ ಪವಾರ್ ಜನಪ್ರಿಯ ನಾಯಕರಾಗಿದ್ದಾರೆ. ಅವರು ಮಹಾರಾಷ್ಟ್ರದ ಸಿಎಂ ಆಗುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಹೇಳಿದ್ದಾರೆ.

ಅಜಿತ್ ಪವಾರ್ ಸಿಎಂ ಆಗುವ ಕುರಿತು ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಅಜಿತ್‌ ಪವಾರ್‌ ಸಹ ಮುಖ್ಯಮಂತ್ರಿ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮಹಾರಾಷ್ಟ್ರದ ಮುಖ್ಯಮಂತ್ರಿಯಾಗುವುದು ಅಜಿತ್‌ ಪವಾರ್‌ ಅವರ ದೀರ್ಘ ಕಾಲದ ಕನಸಾಗಿದೆ. ಅದನ್ನು ನನಸು ಮಾಡಿಕೊಳ್ಳಲು ಅವರು ಮಹಾರಾಷ್ಟ್ರ ಸರ್ಕಾರದ ಭಾಗವಾಗಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ.

Ajit Pawar to become Maharashtra CM? Here is the biggest political scoop

ಕೆಲ ದಿನಗಳ ಹಿಂದೆ ಪವಾರ್‌ ಅವರು ಶಿಂಧೆ ಅವರ ಸ್ಥಾನಕ್ಕೆ ಬಂದು ಕುಳಿತುಕೊಳ್ಳುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ದೇವೇಂದ್ರ ಫಡ್ನವೀಸ್‌ ಅವರು ಇದೆಲ್ಲವೂ ಊಹಾಪೋಹವೆಂದು ಹೇಳಿದ್ದರು. ಆದರೆ, ಈಗ ಮತ್ತೆ ಅಜಿತ್‌ ಪವಾರ್‌ ಮುಖ್ಯಮಂತ್ರಿಯಾಗುವ ಕುರಿತು ವರದಿಗಳು ಪ್ರಕಟವಾಗಿವೆ.

ಅಜಿತ್ ಪವಾರ್ ಅವರು ಹಲವು ವರ್ಷಗಳಿಂದ ಪಕ್ಷದಲ್ಲಿ ಪ್ರಮುಖ ನಾಯಕರಾಗಿದ್ದಾರೆ. ಶ್ರದ್ಧೆಯಿಂದ ಕೆಲಸ ಮಾಡುವವರಿಗೆ ಅಂತಿಮವಾಗಿ ನಾಯಕತ್ವದ ಅವಕಾಶ ಸಿಗುತ್ತದೆ ಎಂದು ಪ್ರಫುಲ್ ಪಟೇಲ್ ಹೇಳಿದ್ದಾರೆ.

Ajit Pawar to become Maharashtra CM? Here is the biggest political scoop

‘ಕೆಲಸ ಮಾಡುವವರಿಗೆ ಇಂದು, ನಾಳೆ ಅಥವಾ ಅದರ ಮರುದಿನ ಅವಕಾಶ ಸಿಗುತ್ತದೆ. ಅನೇಕರಿಗೆ ಅವಕಾಶ ಸಿಕ್ಕಿದೆ. ಅಜಿತ್ ದಾದಾ ಕೂಡ ಇದನ್ನು ಪಡೆಯುತ್ತಾರೆ. ಇಂದು ಅಲ್ಲದಿದ್ದರೆ ನಾಳೆ ಅಥವಾ ಭವಿಷ್ಯದ ಯಾವುದೇ ಸಮಯದಲ್ಲಿ ಅವರು ಮುಖ್ಯಮಂತ್ರಿಯಾಗಬಹುದು. ನಾವು ಆ ದಿಕ್ಕಿನಲ್ಲಿ ಕೆಲಸ ಮಾಡುತ್ತೇವೆ’ ಎಂದು ಪಟೇಲ್ ನಾಗ್ಪುರದಲ್ಲಿ ತಿಳಿಸಿದ್ದಾರೆ.

ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಬಣ ಹಾಗೂ ಬಿಜೆಪಿಯ ನಡುವಿನ ಒಪ್ಪಂದಗಳು ಇನ್ನೂ ಗೊತ್ತಾಗಿಲ್ಲ. ಆದರೆ, ಅಜಿತ್‌ ಪವಾರ್‌ ಅವರನ್ನು ಮುಖ್ಯಮಂತ್ರಿಯಾಗಿ ಮಾಡುತ್ತೇವೆಂದು ಬಿಜೆಪಿ ಕೇಂದ್ರ ನಾಯಕತ್ವ ಭರವಸೆ ನೀಡಿದೆ ಎಂಬ ಮಾತುಗಳು ಕೇಳಿಬಂದಿವೆ. ಇದು ಬಿಕ್ಕಟ್ಟನ್ನು ಮತ್ತಷ್ಟು ಜಠಿಲಗೊಳಿಸಿದೆ.

‘ಬಿಜೆಪಿಯ ಉನ್ನತ ನಾಯಕತ್ವವು ಅಜಿತ್ ಪವಾರ್ ಅವರನ್ನು ಮುಖ್ಯಮಂತ್ರಿಯಾಗಿ ಮಾಡುವುದಾಗಿ ಭರವಸೆ ನೀಡಿದೆ. ಕೇಂದ್ರ ಸರ್ಕಾರದಲ್ಲಿ ಎರಡು ಕ್ಯಾಬಿನೆಟ್ ಮಂತ್ರಿಗಳ ಸ್ಥಾನಗಳನ್ನು ಎನ್‌ಸಿಪಿಗೆ ನೀಡಬೇಕೆಂದು ಬೇಡಿಕೆ ಇಟ್ಟಿದ್ದೆವು. ಅದಕ್ಕೂ ಬಿಜೆಪಿ ನಾಯಕತ್ವ ಒಪ್ಪಿಕೊಂಡಿದೆ’ ಎಂದು ಎನ್‌ಸಿಪಿ ನಾಯಕರೊಬ್ಬರು ತಿಳಿಸಿದ್ದಾರೆ.

Ajit Pawar to become Maharashtra CM? Here is the biggest political scoop

ಬಾಂಬ್‌ ಸಿಡಿಸಿದ ಕಾಂಗ್ರೆಸ್‌

ಇದೇ ವೇಳೆ, ಕಾಂಗ್ರೆಸ್‌ ನಾಯಕ ಪ್ರಥ್ವಿರಾಜ್‌ ಚವ್ಹಾನ್‌ ಅವರು ಹೊಸದೊಂದು ಬಾಂಬ್‌ ಸಿಡಿಸಿದ್ದಾರೆ. ಆಗಸ್ಟ್‌ 10 ರಂದು ಅಜಿತ್‌ ಪವಾರ್‌ ಅವರನ್ನು ಮುಖ್ಯಮಂತ್ರಿ ಮಾಡಲು ಬಿಜೆಪಿ ನಿರ್ಧರಿಸಿದೆ. ಲೋಕಸಭೆ ಚುನಾವಣೆಯನ್ನು ಎದುರಿಸಲು ಏಕನಾಥ ಶಿಂಧೆ ಅನರ್ಹರು ಎಂಬುದನ್ನು ಬಿಜೆಪಿ ಅರ್ಥ ಮಾಡಿಕೊಂಡಿದೆ ಎಂದು ಚವ್ಹಾನ್‌ ಹೇಳಿದ್ದಾರೆ.

ಬಿಜೆಪಿ – ಶಿವಸೇನಾ ಉರಿಗೆ ಕಾರ ಹಾಕುತ್ತಿರುವ ಪವಾರ್‌ ಫ್ಯಾಮಿಲಿ

ಇದೇ ವೇಳೆ, ಬಿಜೆಪಿ ಹಾಗೂ ಏಕನಾಥ ಶಿಂಧೆ ನೇತೃತ್ವದ ಬಣಗಳ ನಡುವೆ ಅಸಮಾಧಾನ ಕಂಡುಬಂದಿದೆ. ಶಿಂಧೆ ಅವರ ಪರಮಾಧಿಕಾರವನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಶಿವಸೇನಾ ನಾಯಕರು ಆಕ್ರೋಶಗೊಂಡಿದ್ದಾರೆ. ಬಿಜೆಪಿ-ಶಿವಸೇನಾ ನಡುವಿನ ಉರಿಗೆ ಪವಾರ್‌ ಫ್ಯಾಮಿಲಿ ಕಾರ ಸುರಿಯುತ್ತಿದೆ ಎಂದು ಹೇಳಲಾಗುತ್ತಿದೆ.

English summary

NCP faction led by Ajit Pawar has demanded the post of Chief Minister of Maharashtra.

Source link