ಮಹಾರಾಷ್ಟ್ರ: ಗೋಮಾಂಸ ಕಳ್ಳಸಾಗಣೆ ಆರೋಪದಲ್ಲಿ ಮುಸ್ಲಿಂ ವ್ಯಕ್ತಿಯನ್ನು ಹತ್ಯೆಗೈದ ಗುಂಪು | Muslim Man beaten to death By Mob over suspicion of smuggling beef

India

oi-Mamatha M

|

Google Oneindia Kannada News

ಮುಂಬೈ, ಜೂನ್. 26 : ಗೋಮಾಂಸವನ್ನು ಕಳ್ಳಸಾಗಣೆ ಮಾಡುತ್ತಿದ್ದಾರೆ ಎಂಬ ಅನುಮಾನದಲ್ಲಿ ಗೋರಕ್ಷಕರ ಗುಂಪೊಂದು ಶನಿವಾರ ರಾತ್ರಿ ವ್ಯಕ್ತಿಯೊಬ್ಬನನ್ನು ಹೊಡೆದು ಕೊಂದಿರುವ ಘಟನೆ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಮುಂಬೈನ ಕುರ್ಲಾದ 32 ವರ್ಷದ ಅಫಾನ್ ಅನ್ಸಾರಿ ಹತ್ಯೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ.

32 ವರ್ಷದ ಅಫಾನ್ ಅನ್ಸಾರಿ ತನ್ನ ಸಹಾಯಕ ನಾಸಿರ್ ಶೇಖ್ ಜೊತೆಗೆ ಕಾರಿನಲ್ಲಿ ಮಾಂಸವನ್ನು ಸಾಗಿಸುತ್ತಿದ್ದಾಗ ಗೋರಕ್ಷಕರು ಅವರನ್ನು ಅಡ್ಡಗಟ್ಟಿ ಥಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದರೆ, ಚಿಕಿತ್ಸೆ ಫಲಕಾರಿಯಾಗದೇ ಒಬ್ಬರು ಮೃತಪಟ್ಟಿದ್ದಾರೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

Muslim Man beaten to death By Mob over suspicion of smuggling beef

“ಘಟನಾ ಸ್ಥಳವನ್ನು ತಲುಪಿದಾಗ, ಕಾರು ಸಂಪೂರ್ಣವಾಗಿ ಹಾನಿಗೊಳಗಾದ ಸ್ಥಿತಿಯಲ್ಲಿ ಇ್ದ್ದ್ಉ ಗಮನಕ್ಕೆ ಬಂದಿದೆ. ಇಬ್ಬರು ಗಾಯಾಳುಗಳು ಕಾರಿನೊಳಗೆ ಇದ್ದರು. ತಕ್ಷಣ ನಾವು ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದೇವೆ. ಆದರೆ, ಚಿಕಿತ್ಸೆ ವೇಳೆ ಅವರಲ್ಲಿ ಒಬ್ಬರು ಸಾವನ್ನಪ್ಪಿದರು” ಎಂದು ಸಬ್ ಇನ್ಸ್‌ಪೆಕ್ಟರ್ ಸುನಿಲ್ ಭಮ್ರೆ ಮಾಹಿತಿ ನೀಡಿದ್ದಾರೆ.

ಕಾರ್ಕಳ: ಟಿವಿ ಚಾನೆಲ್ ಬದಲಿಸುವ ವಿಚಾರಕ್ಕೆ ಜಗಳ; ದಂಪತಿ ಸಾವು, ಅನಾಥರಾದ ಮಕ್ಕಳುಕಾರ್ಕಳ: ಟಿವಿ ಚಾನೆಲ್ ಬದಲಿಸುವ ವಿಚಾರಕ್ಕೆ ಜಗಳ; ದಂಪತಿ ಸಾವು, ಅನಾಥರಾದ ಮಕ್ಕಳು

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ ಹತ್ತು ಮಂದಿಯನ್ನು ಬಂಧಿಸಿದ್ದಾರೆ. ಗಾಯಾಳು ನೀಡಿದ ದೂರಿನ ಮೇರೆಗೆ ಕೊಲೆ ಮತ್ತು ಗಲಭೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತರು ನಿಜವಾಗಿಯೂ ಗೋಮಾಂಸ ಸಾಗಿಸುತ್ತಿದ್ದಾರೋ ಇಲ್ಲವೋ ಎಂಬುದು ಪ್ರಯೋಗಾಲಯದ ವರದಿ ಬಂದ ನಂತರವಷ್ಟೇ ತಿಳಿಯಲಿದೆ ಎಂದು ಪೊಲೀಸರು ಹೇಳಿದ್ದಾರೆ.

ಗೋಹತ್ಯೆ ನಿಷೇಧ ಕಾಯ್ದೆಯ ಸಿಂಧುತ್ವವನ್ನು ಬಾಂಬೆ ಹೈಕೋರ್ಟ್ ಎತ್ತಿ ಹಿಡಿದ ಎಂಟು ವರ್ಷಗಳ ನಂತರ, ಗೋಹತ್ಯೆ ನಿಷೇಧ ಕಾನೂನನ್ನು ಜಾರಿಗೆ ತರಲು ಆಯೋಗವನ್ನು ರಚಿಸುವ ಪ್ರಸ್ತಾವನೆಯನ್ನು ಮಾರ್ಚ್‌ನಲ್ಲಿ ಮಹಾರಾಷ್ಟ್ರ ಸರ್ಕಾರವು ಅಂಗೀಕರಿಸಿದೆ. ಸಕ್ಷಮ ಪ್ರಾಧಿಕಾರವು ಹಸು, ಗೂಳಿ ಅಥವಾ ಗೂಳಿ ರಫ್ತಿಗೆ ಬಳಸುವ ಯಾವುದೇ ವಾಹನವನ್ನು ತಡೆದು ನಿಲ್ಲಿಸಬಹುದು ಮತ್ತು ಶೋಧಿಸಬಹುದು ಮತ್ತು ಅದನ್ನು ವಶಪಡಿಸಿಕೊಳ್ಳಬಹುದು ಎಂದು ನ್ಯಾಯಾಲಯ ಹೇಳಿದೆ.

English summary

Muslim man was beaten to death by a group of cow vigilantes on suspicion of smuggling beef in Nashik district of Maharashtra says police. know more.

Story first published: Monday, June 26, 2023, 9:23 [IST]

Source link