‘ಮಹಾಭಾರತದಲ್ಲೂ ಲವ್ ಜಿಹಾದ್ ಇತ್ತು’ ಹೇಳಿಕೆಗೆ ಹಿಮಂತ ಬಿಸ್ವಾ ವಾಗ್ದಾಳಿ! | Himanta Biswa attacked for ‘love jihad in Mahabharata too’ remark

India

oi-Sunitha B

|

Google Oneindia Kannada News

ಕಾಂಗ್ರೆಸ್‌ನ ರಾಜ್ಯ ಘಟಕದ ಮುಖ್ಯಸ್ಥ ಭೂಪೇನ್ ಬೋರಾ ಅವರ “ಲವ್ ಜಿಹಾದ್ ಮಹಾಭಾರತದಲ್ಲೂ ನಡೆದಿದೆ” ಎಂಬ ಹೇಳಿಕೆಯ ಬಗ್ಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ವಾಗ್ದಾಳಿ ನಡೆಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಭೂಪೇನ್ ಬೋರಾ, ‘ಶ್ರೀಕೃಷ್ಣನು ರುಕ್ಮಿಣಿಯನ್ನು ಮದುವೆಯಾಗಲು ಬಯಸಿದಾಗ, ಅರ್ಜುನನು ಮಹಿಳೆಯ ವೇಷದಲ್ಲಿ ಬಂದನು. ಮಹಾಭಾರತದಲ್ಲೂ ಲವ್ ಜಿಹಾದ್ ಇತ್ತು’ ಎಂದಿದ್ದರು. ಬೋರಾ ಅವರ ಹೇಳಿಕೆಯನ್ನು ಖಂಡಿಸಿದ ಹಿಮಂತ, ಬೋರಾ ಅವರ ಹೇಳಿಕೆ ಸನಾತನ ಮತ್ತು ಹಿಂದೂ ಧರ್ಮಕ್ಕೆ ವಿರುದ್ಧವಾಗಿದೆ ಎಂದು ಹೇಳಿದರು.

Himanta Biswa attacked for love jihad in Mahabharata too remark

“ಶ್ರೀಕೃಷ್ಣ ಮತ್ತು ರುಕ್ಮಿಣಿ ವಿಷಯವನ್ನು ಎಳೆದು ತರುವುದು ಖಂಡನೀಯ. ಇದು ಸನಾತನ ಧರ್ಮಕ್ಕೆ ವಿರುದ್ಧವಾಗಿದೆ. ಹಜರತ್ ಮುಹಮ್ಮದ್ ಅಥವಾ ಜೀಸಸ್ ಕ್ರೈಸ್ಟ್ ಅನ್ನು ಯಾವುದೇ ವಿವಾದಕ್ಕೆ ಹೇಗೆ ಎಳೆಯಬಾರದೋ, ಅದೇ ರೀತಿ ಶ್ರೀಕೃಷ್ಣನನ್ನು ಯಾವುದೇ ವಿವಾದಕ್ಕೆ ಎಳೆಯುವುದನ್ನು ತಪ್ಪಿಸಬೇಕು ಎಂದು ನಾನು ಕಾಂಗ್ರೆಸ್‌ಗೆ ವಿನಂತಿಸುತ್ತೇನೆ. ದೇವರನ್ನು ಕ್ರಿಮಿನಲ್ ಚಟುವಟಿಕೆಗೆ ಹೋಲಿಸುವುದು ಸ್ವೀಕಾರಾರ್ಹವಲ್ಲ” ಎಂದು ಹಿಮಂತ ಹೇಳಿದ್ದಾರೆ.

ಯಾರಾದರೂ ಕೇಸು ದಾಖಲಿಸಿದರೆ ಈ ಮಾತು ಹೇಳಿದವರನ್ನು ಬಂಧಿಸಬೇಕಾಗುತ್ತದೆ. ಸನಾತನ ಧರ್ಮದ ಸಾವಿರಾರು ಮಂದಿ ದೂರು ನೀಡಿದರೆ ಆತನನ್ನು ಉಳಿಸಲು ಸಾಧ್ಯವಿಲ್ಲ ಎಂದು ಹಿಮಾಂತ ಆಕ್ರೋಶಗೊಂಡರು. ಬೋರಾನ ಮಹಾಭಾರತದ ಉಲ್ಲೇಖಕ್ಕೆ ಮರುಪ್ರಶ್ನೆ ಮಾಡಿದ ಹಿಮಂತ, ‘ಭಗವಾನ್ ಕೃಷ್ಣನು ರುಕ್ಮಿಣಿಯನ್ನು ತನ್ನ ಧರ್ಮವನ್ನು ಬದಲಾಯಿಸಲು ಎಂದಿಗೂ ಒತ್ತಾಯಿಸಲಿಲ್ಲ’ ಎಂದು ಹೇಳಿದರು. ಹುಡುಗಿಯನ್ನು ಸುಳ್ಳು ಗುರುತಿನ ನೆಪದಲ್ಲಿ ಮದುವೆಯಾಗಿ ನಂತರ ಬಲವಂತವಾಗಿ ಧರ್ಮ ಬದಲಾಯಿಸಿದರೆ ಅದು ಲವ್ ಜಿಹಾದ್ ಎಂದು ಹಿಮಂತ ಹೇಳಿದ್ದಾರೆ.

“ಒಬ್ಬ ಹಿಂದೂ ಮುಸ್ಲಿಮನನ್ನು ಮದುವೆಯಾದರೆ ಸಮಾಜ ಕ್ರಮಬದ್ಧವಾಗಿರುತ್ತದೆ. ನಾನು ಯಾವಾಗಲೂ ಹಿಂದೂ ದೇವರು ಮತ್ತು ದೇವತೆಗಳನ್ನು ಪೂಜಿಸುತ್ತೇನೆ. ಆದರೆ ನಾಳೆ ನಮಾಜ್ ಓದಲು ಕೇಳಿದರೆ, ನನಗೆ ಹೇಗೆ ಅನಿಸುತ್ತದೆ? ಎಂದು ಹಿಮಂತ ಕೇಳಿದರು. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಅಂತರ್-ಧರ್ಮೀಯ ವಿವಾಹವಾಗಿದ್ದರೂ, ಧರ್ಮವನ್ನು ಬದಲಾಯಿಸಲು ಬಲವಂತಪಡಿಸಬಾರದು ಮತ್ತು ಅದು ವಿಶೇಷ ವಿವಾಹ ಕಾಯ್ದೆಯ ಪ್ರಕಾರವಾಗಿರಬೇಕು ಎಂದು ಹೇಳಿದರು.

“ನಾವು ಈ ಕಾನೂನುಗಳನ್ನು ಅನುಸರಿಸದಿದ್ದರೆ ಅದು ಲವ್ ಜಿಹಾದ್‌ಗೆ ತಿರುಗುತ್ತದೆ” ಎಂದು ಹಿಮಂತ ಹೇಳಿದರು.

English summary

Assam Chief Minister Himanta Biswa Sarma lashed out at Congress’s state unit chief Bhupen Borah over his “love jihad happened in Mahabharata too” remark.

Source link