ಮಳೆಯ ಸಿಂಚನದ ನಡುವೆ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅದ್ಧೂರಿ ಚಾಲನೆ; ಸೀನ್‌ ನದಿ ಮೇಲೆ ಕ್ರೀಡಾಪಟುಗಳ ಮೆರವಣಿಗೆ

ಸಂಪ್ರದಾಯದ ಪ್ರಕಾರ, ಆಧುನಿಕ ಒಲಿಂಪಿಕ್ಸ್‌ನ ಆತಿಥೇಯ ದೇಶ ಗ್ರೀಸ್‌ ಮೊದಲನೆಯವರಾಗಿ ಮೆರವಣಿಗೆಯಲ್ಲಿ ಸಾಗಿ ಬಂದರು. ಆ ಬಳಿಕ ಒಂದೊಂದೇ ತಂಡಗಳು ಕ್ರೀಡಾಕೂಟಕ್ಕೆ ಅಧಿಕೃತವಾಗಿ ಕಾಲಿಟ್ಟವು. ಇದರ ನಡುವೆ ಸಿಂಗರ್‌ ಲೇಡಿ ಗಾಗಾ ಫ್ರೆಂಚ್ ಭಾಷೆಯಲ್ಲಿ ಹಾಡಿ ಗಮನ ಸೆಳೆದರು. ಬಾಂಗ್ಲಾದೇಶ, ಅಫ್ಘಾನಿಸ್ತಾನ, ಜರ್ಮನಿ, ದಕ್ಷಿಣ ಆಫ್ರಿಕಾ, ಅರ್ಜೆಂಟೀನಾ ಸೇರಿದಂತೆ :388 ಅಥ್ಲೀಟ್‌ಗಳ ಚೀನಾದ ದೊಡ್ಡ ತಂಡ ಕೂಡಾ ಮೆರವಣಿಗೆಯಲ್ಲಿ ಸಾಗಿತು. ನೃತ್ಯ ಪ್ರದರ್ಶನಗಳ ಮೂಲಕ 1789-1799ರವರೆಗೆ ನಡೆದ ಫ್ರೆಂಚ್ ಕ್ರಾಂತಿಯ ರೂಪಕ ಪ್ರದರ್ಶಿಸಲಾಯ್ತು. ಈ ನಡುವೆ ನಿಗೂಢ ವ್ಯಕ್ತಿಗಳು ಒಲಿಂಪಿಕ್ ಜ್ಯೋತಿಯನ್ನು ಹಿಡಿದುಕೊಂಡು ಸಾಗಿದರು. 

Source link