ಮಲೇಷ್ಯಾ ಮಾಸ್ಟರ್ಸ್ 2024 ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಸಿಂಗಲ್ಸ್ ಫೈನಲ್ನಲ್ಲಿ ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧು (PV Sindhu) ವೀರೋಚಿತ ಸೋಲು ಕಂಡಿದ್ದಾರೆ. ಕೌಲಾಲಂಪುರದಲ್ಲಿ ಮೇ 26ರ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಚೀನಾದ ವಾಂಗ್ ಝಿಯಿ ವಿರುದ್ಧ ಭಾರತದ ನಂಬರ್ ವನ್ ಬ್ಯಾಡ್ಮಿಂಟನ್ ಆಟಗಾರ್ತಿ ಸಿಂಧು ಮುಗ್ಗರಿಸಿದ್ದಾರೆ. ಆರಂಭಿಕ ಸೆಟ್ ಗೆಲುವಿನ ಹೊರತಾಗಿಯೂ, ನಂತರ ಸತತ ಮುಗ್ಗರಿಸಿದ ಅವರು, ಅಂತಿಮವಾಗಿ 16-21, 21-5, 21-16 ಸೆಟ್ಗಳಿಂದ ಸೋಲೊಪ್ಪಿದ್ದಾರೆ.