ಮರಳು ದಂಧೆಕೋರರ ವಿರುದ್ಧ ಶಾಸಕಿಯೇ ಪ್ರತಿಭಟನೆ: ಗೂಂಡಾ ಸರ್ಕಾರ ಎಂದ ಜೆಡಿಎಸ್‌ | MLA protests against sand smugglers: JDS is a goon government

Karnataka

oi-Punith BU

|

Google Oneindia Kannada News

ಬೆಂಗಳೂರು, ಜೂನ್‌ 23: ದೇವದುರ್ಗ ತಾಲೂಕಿನಲ್ಲಿ ಅಕ್ರಮ ಮರಳು ಸಾಗಣೆ ಧಂದೆ ವಿರುದ್ಧ ದನಿ ಎತ್ತಿದರೆ ನಿಮ್ಮ ಮೇಲೆ ಲಾರಿ ಹತ್ತಿಸಿ ಕೊಲ್ಲುವುದಾಗಿ ಅಕ್ರಮ ಮರಳು ದಂಧೆಕೋರರು, ಶಾಸಕರಿಗೇ ಬೆದರಿಕೆ ಹಾಕಿರುವ ಹಿನ್ನೆಲೆಯಲ್ಲಿ ಜೆಡಿಎಸ್‌ ಪಕ್ಷ ಆಡಳಿತರೂಢ ಕಾಂಗ್ರೆಸ್‌ ಸರ್ಕಾರವನ್ನು ಗೂಂಡಾ ಸರ್ಕಾರ ಎಂದು ಟೀಕಿಸಿದೆ.

ದೇವದುರ್ಗ ವಿಧಾನಸಭೆ ಕ್ಷೇತ್ರದಲ್ಲಿ ಮಧ್ಯರಾತ್ರಿ ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿದ್ದ ಟಿಪ್ಪರ್ ಲಾರಿಗಳನ್ನು ಶಾಸಕರಾದ ಶ್ರೀಮತಿ ಕರೆಮ್ಮ ಜಿ‌ ನಾಯಕ್ ಅವರು ತಡೆಗಟ್ಟಿ ಏಕಾಂಗಿಯಾಗಿ ಪ್ರತಿಭಟಿಸಿದ್ದಾರೆ. ಅಕ್ರಮ ಮರಳು ಸಾಗಣೆ ಧಂದೆ ವಿರುದ್ಧ ದನಿ ಎತ್ತಿದರೆ ನಿಮ್ಮ ಮೇಲೆ ಲಾರಿ ಹತ್ತಿಸಿ ಕೊಲ್ಲುವುದಾಗಿ ಅಕ್ರಮ ಮರಳು ದಂಧೆಕೋರರು, ಶಾಸಕರಿಗೇ ಬೆದರಿಕೆ ಹಾಕಿರುವ ಆತಂಕಕಾರಿ ಘಟನೆ ನಡೆದಿದೆ. ಇದು ರಾಜ್ಯದಲ್ಲಿ ಗೂಂಡಾ ಸರಕಾರ ಬಂದಿರುವುದಕ್ಕೆ ಸಾಕ್ಷಿ ಎಂದು ಜೆಡಿಎಸ್ ಟ್ವೀಟ್‌ ಮಾಡಿದೆ.

MLA protests against sand smugglers: JDS is a goon government

ಇತ್ತೀಚೆಗಷ್ಟೆ ಅಕ್ರಮ ಮರಳು ಸಾಗಣಿ ಮಾಡುತ್ತಿದ್ದ ಟ್ರ್ಯಾಕ್ಟರ್ ತಡೆಯಲು ಪ್ರಯತ್ನಿಸಿದ್ದ, ಕರ್ತವ್ಯನಿರತ ಮುಖ್ಯ ಪೊಲೀಸ್ ಪೇದೆಯೊಬ್ಬರ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಬರ್ಬರವಾಗಿ ಹತ್ಯೆ ಮಾಡಿದ್ದ ಘಟನೆ ಕಲಬುರ್ಗಿ ಜಿಲ್ಲೆಯ ನಾರಾಯಣಪುರದ ಬಳಿ ವರದಿಯಾಗಿತ್ತು. ದುಸ್ಸಾಹಸವೇ ಇದು. ಅಂದರೆ, ಶಾಸಕರ ಜೀವಕ್ಕೂ ಈ ಸರಕಾರದಲ್ಲಿ ಗ್ಯಾರಂಟಿ ಇಲ್ಲವೇ? ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು ಉತ್ತರಿಸುವ ಅಗತ್ಯ ಇದೆ ಎಂದು ಆಗ್ರಹಿಸಲಾಗಿದೆ.

ಇಷ್ಟಾದರೂ ಕಾಂಗ್ರೆಸ್‌ ಸರಕಾರ ಅಕ್ರಮ ಮರಳು ದಂಧೆಯ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳದಿರುವುದು ದಂಧೆಕೋರರಿಗೆ ಕುಮ್ಮಕ್ಕು ನೀಡುತ್ತಿರುವಂತಿದೆ. ದೇವದುರ್ಗ ಸೇರಿದಂತೆ ರಾಜ್ಯದ ಹಲವೆಡೆ ಅಕ್ರಮ ಮರಳು ಸಾಗಾಣಿಕೆ ಎಗ್ಗಿಲ್ಲದೇ ಸಾಗುತ್ತಿದ್ದು ಈ ದಂಧೆಯಲ್ಲಿ ತೊಡಗಿರುವವರ ವಿರುದ್ಧ ರಾಜ್ಯ ಸರ್ಕಾರ ಸೂಕ್ತ ಕಠಿಣ ಕ್ರಮ ಕೈಗೊಳ್ಳಬೇಕಿದೆ ಎಂದು ಒತ್ತಾಯಿಸಲಾಗಿದೆ.

ನಿಯಮ ಮೀರಿ ಮನಸೋ ಇಚ್ಛೆ ಮರಳು ಲೂಟಿ ನಡೆಸುತ್ತಿರುವುದಕ್ಕೆ ಕಡಿವಾಣ ಹಾಕಲು, ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ವಿಶೇಷ ನಿಗಾವಹಿಸಲು ಹಾಗೂ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಂಬಂಧಪಟ್ಟ ಇಲಾಖೆಗಳಿಗೆ ರಾಜ್ಯ ಸರಕಾರ ಈ ಕೂಡಲೇ ಆದೇಶಿಸಿಸಬೇಕಿದೆ ಎಂದು ಒತ್ತಾಯಿಸಲಾಗಿದೆ.

English summary

In Devadurga taluk, the JDS party has criticized the ruling Congress government as a goon government after the illegal sand traders and MLAs have threatened to kill you with a lorry if you raise your voice against the illegal sand transport business in Devadurga taluk.

Story first published: Friday, June 23, 2023, 16:04 [IST]

Source link