ನ್ಯೂಜಿಲೆಂಡ್ ತಂಡದ ಗ್ಲೆನ್ ಫಿಲಿಪ್ಸ್ (Glenn Phillips).. ಕ್ರಿಕೆಟ್ ಲೋಕದ ಫ್ಲೈಯಿಂಗ್ ಬರ್ಡ್. ಇದರಲ್ಲಿ ಯಾವುದೇ ಅನುಮಾನ ಇಲ್ಲ! ಕ್ರಿಕೆಟ್ ಜಗತ್ತಿನಲ್ಲಿ ಅದೆಷ್ಟೋ ಅದ್ಭುತ, ಅಮೋಘ, ಸ್ಟನ್ನಿಂಗ್ ಕ್ಯಾಚ್ಗಳಿರಬಹುದು. ಆದರೆ ಫಿಲಿಫ್ಸ್ ಹಿಡಿದ ಕ್ಯಾಚ್ಗಳು ಯಾವಾಗಲೂ ಅಗ್ರಸ್ಥಾನದಲ್ಲಿ ಇರುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಅವರ ಅಭೂತಪೂರ್ವ ಕ್ಯಾಚ್ಗಳ ಪಟ್ಟಿಗೆ ಮತ್ತೊಂದು ಸೇರ್ಪಡೆಯಾಗಿದೆ. ಹೌದು, ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಫಿಲಿಪ್ಸ್ ಪಡೆದ ಕ್ಯಾಚ್ ಎಂತಹವರನ್ನೂ ಬೆರಗುಗೊಳಿಸುತ್ತದೆ.