ಮಧ್ಯದ ಬೆರಳ ಮೇಲೆ ನಟಿ; ವಿಜಯ್ ದೇವರಕೊಂಡ ತಮ್ಮನ ಚಿತ್ರದ ಅತಿಕೆಟ್ಟ ಪೋಸ್ಟರ್! | Baby telugu movie team humiliated women by releasing controversial poster

bredcrumb

Telugu

oi-Srinivasa A

|

ಚಿತ್ರಗಳು
ತನ್ನ
ಹಾಡುಗಳು,
ಕೆಲ
ದೃಶ್ಯಗಳು
ಹಾಗೂ
ಸಂಭಾಷಣೆಗಳ
ಕಾರಣಗಳಿಂದಾಗಿ
ವಿವಾದವನ್ನು
ಎಬ್ಬಿಸುವುದು
ಕಾಮನ್
ಆಗಿಬಿಟ್ಟಿದೆ.
ಇತ್ತೀಚೆಗೆ
ಬಂದ
ಆದಿಪುರುಷ್
ಚಿತ್ರ
ಹಾಗೂ
ವಿಜಯ್
ನಟನೆಯ
ಲಿಯೊ
ಚಿತ್ರದ
ಹಾಡು
ಸಹ
ಇದೇ
ರೀತಿಯ
ಕಾರಣಗಳಿಂದಾಗಿ
ವಿವಾದಗಳನ್ನು
ಎಬ್ಬಿಸಿದ್ದವು.

ಹೌದು,
ಆದಿಪುರುಷ್
ಚಿತ್ರದಲ್ಲಿ
ರಾಮಾಯಣದ
ಪಾತ್ರಗಳನ್ನು
ತಪ್ಪಾಗಿ
ತೋರಿಸಲಾಗಿದೆ,
ಸಂಭಾಷಣೆಗಳು
ಅಸಂಬದ್ಧವಾಗಿವೆ
ಹಾಗೂ
ಲುಕ್‌ಗಳು
ಕೆಟ್ಟದಾಗಿವೆ
ಎಂದು
ಟ್ರೋಲ್
ಮಾಡಲಾಗಿತ್ತು.
ವಿಜಯ್
ನಟನೆಯ
ಮುಂದಿನ
ಚಿತ್ರ
ಲಿಯೊದ
ಮೊದಲ
ಹಾಡು
‘ನಾ
ರೆಡಿ’
ಲಿರಿಕಲ್
ವಿಡಿಯೊದಲ್ಲಿ
ಧೂಮಪಾನ,
ಮದ್ಯಪಾನ
ಹಾಗೂ
ಮಾದಕ
ವಸ್ತುಗಳ
ಸೇವನೆಯ
ವೈಭವೀಕರಣ
ಮಾಡಲಾಗಿದೆ
ಹಾಗೂ
ಎಲ್ಲಿಯೂ
ಸಹ
ಧೂಮಪಾನ
ಹಾಗೂ
ಮದ್ಯಪಾನ
ಆರೋಗ್ಯಕ್ಕೆ
ಹಾನಿಕರ
ಎಂಬ
ಸೂಚನೆ
ಬಳಸಿಲ್ಲ
ಎಂಬ
ಕಾರಣದಿಂದಾಗಿ

ಹಾಡೂ
ಸಹ
ಟೀಕೆಗೆ
ಒಳಗಾಗಿ
ವಿವಾದ
ಮಾಡಿಕೊಂಡಿತ್ತು.

Baby telugu movie team humiliated women by releasing controversial poster


ವಿವಾದಗಳು
ತಣ್ಣಗಾಗುವ
ಬೆನ್ನಲ್ಲೇ
ಇದೀಗ
ಮತ್ತೊಂದು
ಚಿತ್ರ
ವಿವಾದ
ಮಾಡಿಕೊಳ್ಳುವ
ಎಲ್ಲಾ
ಲಕ್ಷಣಗಳು
ಕಾಣ
ಸಿಗುತ್ತಿವೆ.
ಹೌದು,
ತೆಲುಗಿನ
ಹೊಸ
ಚಿತ್ರ
ಬೇಬಿ
ಚಿತ್ರ
ಇದೀಗ
ವಿವಾದಕ್ಕೆ
ಗುರಿಯಾಗುವಂತಹ
ಪೋಸ್ಟರ್
ಒಂದನ್ನು
ಬಿಡುಗಡೆಗೊಳಿಸಿದೆ.

ಕಳೆದ
ವರ್ಷವೇ
ಟೀಸರ್
ಹಾಗೂ
ಕೆಲ
ಹಾಡುಗಳನ್ನು
ಬಿಡುಗಡೆ
ಮಾಡುವ
ಮೂಲಕ
ತುಸು
ಸದ್ದನ್ನು
ಮಾಡಿದ್ದ

ಚಿತ್ರ
ಇಂದು
(
ಜೂನ್
29
)
ತನ್ನ
ಬಿಡುಗಡೆ
ದಿನಾಂಕದ
ಪೋಸ್ಟರ್
ಅನ್ನು
ಹಂಚಿಕೊಳ್ಳುವ
ಮೂಲಕ
ವಿವಾದ
ಎಬ್ಬಿಸಿದೆ.

ಚಿತ್ರತಂಡ
ತಮ್ಮ
ಚಿತ್ರ
ಜುಲೈ
14ರಂದು
ಬಿಡುಗಡೆಗೊಳ್ಳಲಿದೆ
ಎಂಬ
ಪೋಸ್ಟರ್
ಅನ್ನು
ಸಾಮಾಜಿಕ
ಜಾಲತಾಣದಲ್ಲಿ
ಹಂಚಿಕೊಂಡಿದ್ದು,

ಪೋಸ್ಟರ್‌ನಲ್ಲಿ
ಮಧ್ಯದ
ಬೆರಳಿನ
ಮೇಲೆ
ಚಿತ್ರದ
ನಟಿಯ
ಫೋಟೊವನ್ನು
ಬಳಕೆ
ಮಾಡಿ
ಎಡಿಟ್
ಮಾಡಲಾಗಿದೆ.
ಮಧ್ಯದ
ಬೆರಳನ್ನು
ತೋರಿಸುವುದು
ತಪ್ಪು,
ಕೆಟ್ಟದ್ದು
ಎನ್ನುವುದು
ಎಲ್ಲರಿಗೂ
ತಿಳಿದಿರುವ
ವಿಷಯವೇ.

ಚಿತ್ರವೊಂದರಲ್ಲಿ
ಮಧ್ಯದ
ಬೆರಳನ್ನು
ತೋರಿಸುವ
ದೃಶ್ಯವಿದ್ದರೆ
ಅಂತಹ
ಸಮಯದಲ್ಲಿ
ಮಧ್ಯದ
ಬೆರಳನ್ನು
ಬ್ಲರ್
ಮಾಡಿ
ತೋರಿಸಿದ
ಉದಾಹರಣೆಗಳೂ
ಸಹ
ಇವೆ.
ಇಷ್ಟರ
ಮಟ್ಟಕ್ಕೆ
ವಿವಾದಾತ್ಮಕವೆನಿಸಿರುವ

ವಿಷಯವನ್ನು
ಇಟ್ಟುಕೊಂಡು
ಚಿತ್ರತಂಡ
ಮಾಡಿರುವ
ಪೋಸ್ಟರ್
ಕಂಡು
ಸಿನಿ
ರಸಿಕರು
ಬುದ್ಧಿ
ಇಲ್ವಾ
ಎಂದು
ಪ್ರಶ್ನಿಸಿದ್ದಾರೆ.

ಇನ್ನು

ಚಿತ್ರದಲ್ಲಿ
ವಿಜಯ್
ದೇವರಕೊಂಡ
ಅವರ
ತಮ್ಮ
ಆನಂದ್
ದೇವರಕೊಂಡ
ನಾಯಕನಾಗಿ
ನಟಿಸಿದ್ದು,
ನಾಯಕಿಯಾಗಿ
ರೀಲ್ಸ್
ಬೆಡಗಿ
ವೈಷ್ಣವಿ
ಚೈತನ್ಯ
ನಟಿಸಿದ್ದಾರೆ.
ಪೋಸ್ಟರ್‌ನಲ್ಲಿ
ಇದೇ
ವೈಷ್ಣವಿ
ಚೈತನ್ಯ
ಫೋಟೊವನ್ನೇ
ವಿವಾದಾತ್ಮಕವಾಗಿ
ಎಡಿಟ್
ಮಾಡಲಾಗಿದೆ.

ಸದ್ಯ
ನೆಟ್ಟಿಗರು
ಹಾಗೂ
ಸಿನಿ
ರಸಿಕರಿಂದ
ಮಾತ್ರ
ನೆಗೆಟಿವ್
ಕಾಮೆಂಟ್
ಪಡೆದುಕೊಳ್ಳುತ್ತಿರುವ
ಬೇಬಿ
ಚಿತ್ರದ
ಪೋಸ್ಟರ್
ಆದಷ್ಟು
ಬೇಗ
ಮಹಿಳಾ
ಸಂಘಗಳಿಂದ
ವಿರೋಧ
ಪಡೆದುಕೊಳ್ಳುವುದು
ಹಾಗೂ
ಬ್ಯಾನ್
ಆಕ್ರೋಶಕ್ಕೆ
ಗುರಿಯಾಗುವುದು
ಪಕ್ಕಾ.

ಒಂದೆಡೆ
ಕೆಲ
ಸಿನಿಕರು
ಚಿತ್ರದ

ಪೋಸ್ಟರ್
ವಿರುದ್ಧ
ಕಾಮೆಂಟ್
ಮಾಡುತ್ತಿದ್ದರೆ,
ಮತ್ತೊಂದೆಡೆ
ಇನ್ನೂ
ಕೆಲ
ಸಿನಿ
ರಸಿಕರು
ಇದೆಲ್ಲಾ
ಚಿತ್ರತಂಡದ
ಪ್ರಚಾರದ
ಗಿಮಿಕ್,
ತಮ್ಮ
ಚಿತ್ರದ
ಬಿಡುಗಡೆ
ದಿನಾಂಕ
ದೊಡ್ಡ
ಮಟ್ಟದಲ್ಲಿ
ಸದ್ದು
ಮಾಡಲಿ
ಎಂದು
ಬೇಕಂತಲೇ
ಉದ್ದೇಶಪೂರ್ವಕವಾಗಿ
ಮಾಡಿರುವ
ಯೋಜನೆ
ಇದು
ಎಂದು
ಕಿಡಿಕಾರಿದ್ದಾರೆ.

English summary

Baby telugu movie team humiliated women by releasing controversial poster . Read on

Thursday, June 29, 2023, 17:38

Story first published: Thursday, June 29, 2023, 17:38 [IST]

Source link