Karnataka
oi-Madhusudhan KR

ಕರ್ನಾಟಕ, ಜುಲೈ, 11: ಇತ್ತೀಚೆಗಷ್ಟೇ ಸಿಎಂ ಹಾಗೂ ಹಣಕಾಸು ಮಂತ್ರಿಯಾದ ಸಿದ್ದರಾಮಯ್ಯ ಅವರು ರಾಜ್ಯ ಬಜೆಟ್ ಅನ್ನು ಮಂಡನೆ ಮಾಡಿದ್ದು, ಈ ವೇಳೆ ಮದ್ಯದ ದರ ಏರಿಸುವುದಾಗಿ ಸುಳಿವು ನೀಡಿದ್ದರು. ಇದೀಗ ಅದರಂತೆಯೇ ಮದ್ಯದ ಮೇಲಿನ ಸುಂಕ ಏರಿಕೆಯನ್ನು ಜುಲೈ 20ರಿಂದ ಜಾರಿಗೆ ಬರಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಯಾವ ಬ್ರಾಂಡ್ ಎಣ್ಣೆಯ ಬೆಲೆ ಎಷ್ಟಾಗಲಿದೆ ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ಮದ್ಯಪ್ರಿಯರಿಗೆ ಬೆಲೆ ಏರಿಕೆ ಗ್ಯಾರಂಟಿ: ಅಬಕಾರಿ ಇಲಾಖೆಯಿಂದ 36 ಸಾವಿರ ಕೋಟಿ ತೆರಿಗೆ ಸಂಗ್ರಹದ ಗುರಿ!
ಇನ್ನು ಮದ್ಯದ ಮೇಲಿನ ಹೆಚ್ಚುವರಿ ಸುಂಕ ಹೆಚ್ಚಳ ಸಂಬಂಧಿದಂತೆ ಸರಕಾರ ಸೋಮವಾರ ಕರಡು ಪ್ರಕಟಿಸಿದ್ದು, 7 ದಿನಗಳೊಳಗೆ ಆಕ್ಷೇಪಣೆ ಸಲ್ಲಿಸುವಂತೆಯೂ ಕೋರಿದೆ. ಬ್ರಾಂದಿ, ವಿಸ್ಕಿ, ರಮ್, ಜಿನ್ ಸೇರಿದಂತೆ ಭಾರತೀಯ ಮದ್ಯದ ಮೇಲೆ ಎಲ್ಲಾ ಘೋಷಿತ 18 ಫ್ಲ್ಯಾಬ್‌ಗಳ ಮೇಲಿನ ಈಗಿರುವ ಸುಂಕಕ್ಕಿಂತ ಶೇಕಡಾ 20ರಷ್ಟು ದರವನ್ನು ಏರಿಕೆ ಮಾಡಲಾಗುತ್ತದೆ.

ಹಾಗೆಯೇ ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಶೇಕಡಾ 175ರಿಂದ 185 ಅಂದರೆ ಶೇಕಡಾ 10ರಷ್ಟು ಹೆಚ್ಚಳ ಮಾಡುವ ಬಗ್ಗೆ ಗೆಜೆಟ್‌ನಲ್ಲಿ ಸೂಚನೆ ನೀಡಲಾಗಿತ್ತು. ಇದೆ ವೇಳೆ ಬೆಲೆ ಏರಿಕೆಗೆ ಗ್ರೀನ್ ಸಿಗ್ನಲ್ ಸಿಕ್ಕರೆ ಭಾರತೀಯ ಮದ್ಯ (ಐಎಂಎಲ್) ಒಂದು ಪೆಗ್ (60 ಎಂಎಲ್)ಗೆ 10ರಿಂದ 20 ರೂಪಾಯಿ ಮತ್ತು ಬಿಯರ್ ಬೆಲೆ ಪ್ರತಿ ಬಾಟಲ್‌ಗೆ 3ರಿಂದ 5 ರೂಪಾಯಿ ಹೆಚ್ಚಳ ಆಗುವ ಸಾಧ್ಯತೆಯಿದೆ ಎನ್ನುವ ಮಾಹಿತಿಯೊಂದು ಹೊರಬಿದ್ದಿದೆ.
ಸುವರ್ಣ ನ್ಯೂಸ್ ಕನ್ನಡ ವರದಿಯ ಪ್ರಕಾರ ಬೆಲೆ ವಿವರ
1. ಹೈವೋಡ್ಸ್ ಪಂಚ್: ಈಗಿನ ಬೆಲೆ – 70 ರೂಪಾಯಿ ಇದ್ದು ಇದನ್ನು 80ಕ್ಕೆ ಏರಿಸಲಾಗುತ್ತದೆ ಎಂದು ಸುವಣ್ಣ ನ್ಯೂಸ್ ವರದಿ ಮಾಡಿದೆ.
2. ಬಡ್‌ವೈಸರ್
ಈಗಿನ ಬೆಲೆ – 220 ರೂಪಾಯಿ
ಏರಿಕೆ ಬೆಲೆ – 240 ರೂಪಾಯಿ
3. ಕಿಂಗ್ ಫಿಷರ್ ಪ್ರಿಮಿಯನ್
ಈಗಿನ ಬೆಲೆ – 170 ರೂಪಾಯಿ
ಏರಿಕೆ ಬೆಲೆ -190 ರೂಪಾಯಿ
4. ಬ್ಯಾಕ್ ಪೇಪರ್ ವಿಸ್ಕಿ
ಈಗಿನ ಬೆಲೆ – 106 ರೂಪಾಯಿ
ಏರಿಕೆ ಬೆಲೆ – 120
5. ಬ್ಲಾಕ್ & ವೈಟ್
ಈಗಿನ ಬೆಲೆ – 2,464 ರೂಪಾಯಿ
ಏರಿಕೆ ಬೆಲೆ – 2,800 ರೂಪಾಯಿ
6. ಓಲ್ಡ್ ಮಂಕ್
ಈಗಿನ ಬೆಲೆ – 137 ರೂಪಾಯಿ
ಏರಿಕೆ ಬೆಲೆ- 155 ರೂಪಾಯಿ
7. ಮ್ಯನ್ಷನ್ ಹೌಸ್ ಬ್ರಾಂಡಿ
ಈಗಿನ ಬೆಲೆ – 220 ರೂಪಾಯಿ
ಏರಿಕೆ ಬೆಲೆ- 240 ರೂಪಾಯಿ
8. ಮಾಕ್ ಡುವೆಲ್ದ್ ಬ್ರಾಂದಿ
ಈಗಿನ ಬೆಲೆ – 170 ರೂಪಾಯಿ
ಏರಿಕೆ ಬೆಲೆ – 190 ರೂಪಾಯಿ
9. ಇಂಪಿಯರಿಯಲ್ ಬ್ಲೂ
ಈಗಿನ ಬೆಲೆ – 220 ರೂಪಾಯಿ
ಏರಿಕೆ ಬೆಲೆ – 240 ರೂಪಾಯಿ
10. ಒಲ್ಡ್ ಟವರ್ ವಿಸ್ಕಿ
ಈಗಿನ ಬೆಲೆ – 87 ರೂಪಾಯಿ
ಏರಿಕೆ ಬೆಲೆ – 100 ರೂಪಾಯಿ
11. ಜಾನಿ ವಾಕರ್ ಬ್ಲಾಕ್ ಲೇಬಲ್
ಈಗಿನ ಬೆಲೆ – 6,250 ರೂಪಾಯಿ
ಏರಿಕೆ ಬೆಲೆ – 7,150 ರೂಪಾಯಿ
12. ಮ್ಯಾಜಿಕ್ ಮುಮೆಂಟ್
ಈಗಿನ ಬೆಲೆ – 330 ರೂಪಾಯಿ
ಏರಿಕೆ ಬೆಲೆ – 380 ರೂಪಾಯಿ
English summary
Liquor price hike from July 20 in Karnataka, here see brand wise complete Price details