Karnataka
oi-Reshma P

ಚಿತ್ರದುರ್ಗ, ಜೂನ್ 21: ರಾಜ್ಯ ಸರ್ಕಾರದಿಂದ ಮತಾಂತರ ನಿಷೇದ ಕಾಯ್ದೆ ರದ್ದು ವಿಚಾರಕ್ಕೆ ಸಂಬಂಧಿಸಿದಂತೆ ಯಾರು ಯಾವ ಧರ್ಮವನ್ನು ಬೇಕಿದ್ದರೂ ಆಯ್ಕೆ ಮಾಡಬಹುದು ಅವರವರ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಯಾವ ಧರ್ಮದಲ್ಲಿದ್ದರೂ ಭಾರತದಲ್ಲೇ ಇರ್ತಾರೆ, ದೇಶ ಬಿಡೋಲ್ಲ ಎಂದು ಮಾಜಿ ಸಚಿವ ಹೆಚ್ ಆಂಜನೇಯ ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಅಸ್ಪೃಶ್ಯರಿಗೆ ಸಾಮಾಜಿಕ ಗೌರವ ಬೇಕಿದೆ. ನಮ್ಮ ಸಮಾಜದವರು ಹಿಂದೂ, ಕ್ರೈಸ್ತ, ಮುಸ್ಲಿಂ ಧರ್ಮದಲ್ಲೂ ಇದ್ದಾರೆ. ಆದರೆ ಮತಾಂತರ ನಿಷೇಧ ಕಾಯ್ದೆ ಹೊಟ್ಟೆ ತುಂಬಿಸುವ ಯೋಜನೆಯಲ್ಲ, ದೇಶವನ್ನು ಉದ್ಧಾರ ಮಾಡುವ ಯೋಜನೆಯಲ್ಲ, ಜನರ ಹಸಿವಿನ ಬಗ್ಗೆ ಯೋಚನೆ ಮಾಡಬೇಕಿದೆ ಎಂದು ಹೇಳಿದ್ದಾರೆ.

ಒಂದು ಬಿರಿಯಾನಿ ನೀಡಿ ಮತಾಂತರ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿರಿಯಾನಿಗಾಗಿ ಅಲ್ಲ, ಏನು ಇಲ್ಲ ಗೌರವಕ್ಕಾಗಿ ಮತಾಂತರ ಆಗ್ತಿದ್ದಾರೆಂಬುದು ನನ್ನ ಭಾವನೆ ಇದೆ. ಅದರಿಂದ ಏನು ಬೇಕಾಗಿಲ್ಲ, ಇದೇ ಸಮಾಜದಲ್ಲಿ, ಇದೇ ಧರ್ಮದಲ್ಲಿದ್ದು ಅಕ್ಕಿಗಾಗಿ ಹೋರಾಟ ಮಾಡಿ ಎಂದು ಹೇಳುತ್ತೇವೆ.
ನಾವೆಲ್ಲರೂ ಹಿಂದೂ ಧರ್ಮದಲ್ಲಿ ಇದ್ದೇವೆ. ನಾನು, ಜಿ.ಎಸ್.ಮಂಜುನಾಥ್, ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿ ನಾವೆಲ್ಲ ಮಾದಿಗರು, ನಾವೆಲ್ಲಾ ಹಿಂದೂ ಧರ್ಮದಲ್ಲೇ ಇದ್ದೇವೆ ಇರ್ತೀವಿ ಎಂದು ಹೆಚ್.ಆಂಜನೇಯ ಹೇಳಿದರು.
ಇನ್ನೂ ಅನ್ನಭಾಗ್ಯ ವಿಚಾರವಾಗಿ ಮಾತನಾಡಿ, ಪುಕ್ಕಟೆ ಅಕ್ಕಿ ಕೇಳಿಲ್ಲ. ನಾವು ಪುಗಸಟ್ಟಿ ಅಕ್ಕಿ ಕೊಡಿ ಎಂದು ಕೇಂದ್ರಕ್ಕೆ ಕೇಳಿಲ್ಲ, ಬದಲಿಗೆ ದುಡ್ಡು ಕೊಡುತ್ತೇವೆ ಮುಚ್ಕೊಂಡು ಅಕ್ಕಿ ಕೊಡಬೇಕು ಎಂದು ಮಾಜಿ ಸಚಿವ ಹೆಚ್ ಆಂಜನೇಯ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಕೇಂದ್ರ ಬಿಜೆಪಿ ಸರ್ಕಾರ ಬಡವರ ಪರವಾಗಿ ಇಲ್ಲ, ಬದಲಿಗೆ ಶ್ರೀಮಂತರ ಪರವಾಗಿ ಇದೆ ಕಾಳ ಸಂತೆಕೋರರು, ಬ್ಯಾಂಕ್ ಲೂಟಿಕೋರರ ಪರವಾಗಿ, ಅಂಬಾನಿ, ಅದಾನಿ ಪರವಾಗಿ ಮೋದಿ ನಿಂತಿದ್ದಾರೆ ಎಂದು ಹೆಚ್ ಆಂಜನೇಯ ಅವರು ಆರೋಪಿಸಿದರು.
ಇನ್ನೂ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಹತಾಶೆಯಿಂದ, ಕೇಂದ್ರ ಬಿಜೆಪಿ ಸರ್ಕಾರ, ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಅಕ್ಕಿ ನೀಡುತ್ತಿಲ್ಲ. ಫುಡ್ ಸೆಕ್ಯೂರಿಟಿ ಆಕ್ಟ್ ತಂದಿದ್ದು ನಮ್ಮ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸರ್ಕಾರ ಎಂದು ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.
English summary
Due to the frustration of BJP’s defeat, the central government is not giving rice to the state Congress government says h anjaneya.
Story first published: Wednesday, June 21, 2023, 11:13 [IST]