ಮಣಿಪುರ ಹಿಂಸಾಚಾರ: ತ್ವರಿತ ಕ್ರಮಕ್ಕೆ ಆಗ್ರಹಿಸಿದ ಯುರೋಪಿಯನ್ ಪಾರ್ಲಿಮೆಂಟ್! | European Parliament passes resolution on Manipur violence, asks India to act promptly

International

oi-Mamatha M

|

Google Oneindia Kannada News

ನವದೆಹಲಿ, ಜುಲೈ. 13: ಪ್ರಧಾನಿ ನರೇಂದ್ರ ಮೋದಿ ಅವರು ಪ್ಯಾರಿಸ್‌ ಪ್ರವಾಸದಲ್ಲಿದ್ದಾರೆ. ಈ ವೇಳೆ ಮತ್ತೊಂದು ಫ್ರೆಂಚ್ ನಗರವಾದ ಸ್ಟ್ರಾಸ್‌ಬರ್ಗ್‌ನಲ್ಲಿ, ಯುರೋಪಿಯನ್ ಪಾರ್ಲಿಮೆಂಟ್ (ಇಪಿ) ಮಣಿಪುರದಲ್ಲಿ ಹಿಂಸಾಚಾರವನ್ನು ನಿಲ್ಲಿಸಲು ಮತ್ತು ಧಾರ್ಮಿಕ ಅಲ್ಪಸಂಖ್ಯಾತರನ್ನು ರಕ್ಷಿಸಲು “ತ್ವರಿತವಾಗಿ” ಕಾರ್ಯನಿರ್ವಹಿಸುವಂತೆ ಭಾರತ ಸರ್ಕಾರಕ್ಕೆ ಕರೆ ನೀಡಿದೆ.

ಬುಧವಾರ ಸಂಜೆ ಈ ವಿಷಯದ ಚರ್ಚೆಯ ನಂತರ ಗುರುವಾರ ಕೈ ಎತ್ತುವ ಮೂಲಕ ನಿರ್ಣಯವನ್ನು ಅಂಗೀಕರಿಸಲಾಯಿತು. ಮಣಿಪುರದ ಪರಿಸ್ಥಿತಿಯು ಭಾರತಕ್ಕೆ ‘ಸಂಪೂರ್ಣ ಆಂತರಿಕ’ ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಬುಧವಾರ ಹೇಳಿ, ಸರ್ಕಾರವು ಈ ಕ್ರಮವನ್ನು ತಿರಸ್ಕರಿಸಿದೆ. ಮಣಿಪುರದಲ್ಲಿ ನಡೆದ ಹಿಂಸಾಚಾರದಲ್ಲಿ ಇಲ್ಲಿಯವರೆಗೆ 142 ಜನರು ಸಾವನ್ನಪ್ಪಿದ್ದಾರೆ ಮತ್ತು 54,000 ಜನರು ಸ್ಥಳಾಂತರಗೊಂಡಿದ್ದಾರೆ.

European Parliament passes resolution on Manipur

ಅಂತಿಮ ಯುರೋಪಿಯನ್ ಪಾರ್ಲಿಮೆಂಟ್ ನಿರ್ಣಯವು ಮಣಿಪುರದ ಕ್ರಿಶ್ಚಿಯನ್ ಸಮುದಾಯದಂತಹ ಎಲ್ಲಾ ಧಾರ್ಮಿಕ ಅಲ್ಪಸಂಖ್ಯಾತರನ್ನು ರಕ್ಷಿಸಲು ಮತ್ತು ಯಾವುದೇ ಹೆಚ್ಚಿನ ಹಿಂಸಾಚಾರ ನಡೆಯದಂತೆ ತಡೆಯಲು ಸರ್ಕಾರವನ್ನು ಕೇಳಿದೆ. ಪತ್ರಕರ್ತರು ಮತ್ತು ಅಂತರಾಷ್ಟ್ರೀಯ ವೀಕ್ಷಕರನ್ನು ಹಿಂಸಾಚಾರ ಪೀಡಿತ ಪ್ರದೇಶಕ್ಕೆ ಅಡೆತಡೆಯಿಲ್ಲದ ಪ್ರವೇಶವನ್ನು ನೀಡಬೇಕು ಮತ್ತು ಇಂಟರ್ನೆಟ್ ಸ್ಥಗಿತಗೊಳಿಸುವಿಕೆಯನ್ನು ಕೊನೆಗೊಳಿಸುವಂತೆ ಅಧಿಕಾರಿಗಳಿಗೆ ಕರೆ ನೀಡಿದೆ.

ಯುರೋಪಿಯನ್ ಪಾರ್ಲಿಮೆಂಟ್ ನಿರ್ಣಯವು ಆಂತರಿಕ ವಿಮರ್ಶೆಯ ಶಿಫಾರಸುಗಳಿಗೆ ಅನುಗುಣವಾಗಿ ಕಾನೂನುಬಾಹಿರ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರಗಳ ಕಾಯಿದೆಯನ್ನು ರದ್ದುಗೊಳಿಸಲು ಸರ್ಕಾರಕ್ಕೆ ಸೂಚಿಸಿದೆ. ಈ ನಿರ್ಣಯದ ಮೂಲಕ, ಯುರೋಪಿಯನ್ ಪಾರ್ಲಿಮೆಂಟ್ (MEPs) ಸದಸ್ಯರು ಭಾರತದೊಂದಿಗಿನ ಅದರ ಸಂವಾದ ಮತ್ತು ಸಂಬಂಧದಲ್ಲಿ ಮಾನವ ಹಕ್ಕುಗಳನ್ನು ಪ್ರಮುಖವಾಗಿಸಲು ಪ್ರಸ್ತಾಪಿಸಿದೆ.

European Parliament passes resolution on Manipur

ಚರ್ಚೆಯ ಸಮಯದಲ್ಲಿ, ಯುರೋಪಿಯನ್ ಪಾರ್ಲಿಮೆಂಟ್ ಸದಸ್ಯರು ಮಣಿಪುರ ಮತ್ತು ಅದರ ಅಲ್ಪಸಂಖ್ಯಾತರ ಸುತ್ತ ಮಾತ್ರವಲ್ಲದೆ ಇಡೀ ಭಾರತದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಸಮಾಜವಾದಿಗಳು ಮತ್ತು ಪ್ರಜಾಪ್ರಭುತ್ವವಾದಿಗಳ ಪ್ರಗತಿಶೀಲ ಒಕ್ಕೂಟದ ಗುಂಪು 2014 ರಿಂದ ನರೇಂದ್ರ ಮೋದಿ ಮತ್ತು ಸರ್ಕಾರದ ನೀತಿಗಳನ್ನು ಟೀಕಿಸಿದೆ.

ಸದ್ಯ ಜನಾಂಗೀಯ ಘರ್ಷಣೆಗಳ ಸರಣಿಯ ನಂತರ, ಮಣಿಪುರವು ಕಳೆದ ಎರಡು ದಿನಗಳಿಂದ ಕೊಂಚ ಮಟ್ಟಿಗೆ ಶಾಂತವಾಗಿದೆ. ಕಳೆದ 48 ಗಂಟೆಗಳಲ್ಲಿ ಯಾವುದೇ ದೊಡ್ಡ ಹಿಂಸಾಚಾರದ ಘಟನೆ ವರದಿಯಾಗಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಸೂಕ್ಷ್ಮ ಪ್ರದೇಶಗಳಲ್ಲಿ ಸೇನೆ ಮತ್ತು ಅರೆಸೇನಾ ಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ChatGPT ಪರ್ಯಾಯವಾಗಿ ಹೊಸ ಕಂಪನಿ xAI ಘೋಷಿಸಿದ ಎಲಾನ್ ಮಸ್ಕ್ChatGPT ಪರ್ಯಾಯವಾಗಿ ಹೊಸ ಕಂಪನಿ xAI ಘೋಷಿಸಿದ ಎಲಾನ್ ಮಸ್ಕ್

ಭದ್ರತೆಯಲ್ಲಿ ಕೃಷಿ ಚಟುವಟಿಕೆಗಳು ಬುಧವಾರ ಆರಂಭಗೊಂಡಿದ್ದರೂ ಹೆಚ್ಚಿನ ರೈತರು ಹೊಲಕ್ಕೆ ಹೋಗುತ್ತಿಲ್ಲ. ಇತ್ತೀಚೆಗೆ, ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ಕೃಷಿ ಚಟುವಟಿಕೆಗಳ ಉದ್ದೇಶಕ್ಕಾಗಿ, ಕಾಕ್ಚಿಂಗ್, ಇಂಫಾಲ್ ಪೂರ್ವ, ಇಂಫಾಲ್ ಪಶ್ಚಿಮ, ಬಿಷ್ಣುಪುರ ಜಿಲ್ಲೆಗಳು ಮತ್ತು ಚುರಾಚಂದ್‌ಪುರ ಮತ್ತು ಕಾಂಗ್‌ಪೋಕ್ಪಿ ಜಿಲ್ಲೆಗಳ ಪಕ್ಕದ ಪ್ರದೇಶಗಳಲ್ಲಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಿಕೆ ನೀಡಿದ್ದರು.

English summary

Manipur violence: European Parliament passes resolution on Manipur violence, asks Indian government to act promptly. know more.

Story first published: Thursday, July 13, 2023, 22:34 [IST]

Source link