ಮಣಿಪುರ ಭೇಟಿ ವೇಳೆ ‘ರಾಗಾ’ಗೆ ತಡೆ: ಡಬಲ್ ಇಂಜಿನ್ ಸರ್ಕಾರದ ವಿರುದ್ಧ ಕಾಂಗ್ರೆಸ್ಸಿಗರು ವಾಗ್ದಾಳಿ | Rahul Gandhi Blocking In Manipur Visit: AICC Presidents And Other Leaders Slams On Central BJP

India

oi-Shankrappa Parangi

|

Google Oneindia Kannada News

ನವದೆಹಲಿ, ಜೂನ್ 30: ಮಣಿಪುರದ ಜನಾಂಗೀಯ ಗಲಾಟೆಯಲ್ಲಿ ತೊಂದರೆಗೀಡಾದ ಸಂತ್ರಸ್ತರ ಬೇಟಿ ಮಾಡಲು ಹೊರಟಿದ್ದ ರಾಹುಲ್ ಗಾಂಧಿ ಅವರನ್ನು ತಡೆದ ಕೇಂದ್ರ ಸರ್ಕಾರ ಹಾಗೂ ಮಣಿಪುರ ಭಾರತೀಯ ಜನತಾ ಪಕ್ಷ (ಬಿಜೆಪಿ) ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಶುಕ್ರವಾರ ವಾಗ್ದಾಳಿ ನಡೆಸಿದರು.

ಎಐಸಿಸಿ ಕೇಂದ್ರ ಕಚೇರಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರು ಸಂತ್ರಸ್ತ ಸ್ಥಳಕ್ಕೆ ಬೇಟಿ ನೀಡುವ ಸಂಕಲ್ಪ ಮಾಡಿದಾಗಲೆಲ್ಲಾ, ಏನಾದರೂ ಮಾಡಿ ಅದನ್ನು ತಡೆಯಲಾಗುತ್ತದೆ ಎಂಬುದಕ್ಕೆ ಇದು ಮತ್ತೊಂದು ನಿದರ್ಶನ ಎಂದರು.

Rahul Gandhi Blocking In Manipur Visit

ಮಣಿಪುರ ಸರ್ಕಾರದ ಕ್ರಮವನ್ನು ಖಂಡಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಟ್ವೀಟ್ ಮಾಡಿದ್ದಾರೆ. ಮಣಿಪುರದಲ್ಲಿ ರಾಹುಲ್ ಗಾಂಧಿ ಅವರ ಬೆಂಗಾವಲು ಪಡೆ ಬಿಷ್ಣುಪುರ ಬಳಿ ಪೊಲೀಸರು ತಡೆದು ನಿಲ್ಲಿಸಿದ್ದಾರೆ. ಅವರು ಪರಿಹಾರ ಶಿಬಿರಗಳಲ್ಲಿ ಬಳಲುತ್ತಿರುವ ಜನರನ್ನು ಬೇಟಿ ಮಾಡಲು ಮತ್ತು ಚಿಕಿತ್ಸೆ ನೀಡಲು ಅಲ್ಲಿಗೆ ತೆರಳಲುತ್ತಿದ್ದರು. ಹಾನಿಗೀಡಾದ, ತೊಂದರೆ ಸಿಲುಕಿದ ಸಂತ್ರಸ್ತರಿಗೆ ಧೈರ್ಯ ತುಂಬಲು ಅವಕಾಶ ಮಾಡಿಕೊಡಲಿಲ್ಲ ಎಂದು ದೂರಿದರು.

ಇಷ್ಟು ದೊಡ್ಡ ಜನಾಂಗೀಯ ಗಲಾಟೆ ನಡೆದರೂ ಸಹ ಪ್ರಧಾನಿ ಮೋದಿಯವರ ಮೌನ ವಹಿಸಿದ್ದಾರೆ. ಮಣಿಪುರ ಜನರ ಮಹಿಳೆ ಮತ್ತು ಮಕ್ಕಳ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಕಾಳಜಿ ಇಲ್ಲ. ಹೀಗಾಗಿ ಅವರು ಆ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಪ್ರಧಾನಿಗಳ ಮಣಿಪುರವು ತನ್ನನ್ನು ತಾನೇ ರಕ್ಷಿಸಿಕೊಳ್ಳಲಿ ಎಂದು ಸುಮ್ಮನಾಗಿದ್ದಾರೆ.

ಬಿಜೆಪಿ ನಿರಂಕುಶಾಧಿಕಾರ ನೀತಿ ತಾಳಿದೆ

ಬಿಜೆಪಿಯವರ ಡಬಲ್ ಇಂಜಿನ್ ವಿನಾಶಕಾರಿ ಸರ್ಕಾರಗಳು ಸಹಾನುಭೂತಿಯ ಪ್ರಚಾರವನ್ನು ನಿಲ್ಲಿಸಲು ನಿರಂಕುಶಾಧಿಕಾರದ ವಿಧಾನಗಳನ್ನು ಬಳಸುತ್ತಿವೆ. ಅದರ ಭಾಗವಾಗೇ ರಾಹುಲ್ ಗಾಂಧಿಗೆ ಭೇಟಿಗೆ ಅವಕಾಶ ಮಾಡಿಕೊಟ್ಟಿಲ್ಲ. ಸರ್ಕಾರದ ಈ ನಡೆ ಖಂಡನೀಯ ಮತ್ತು ಸ್ವೀಕಾರಾರ್ಹವಲ್ಲ. ಈ ನಡೆ ಹೀಗೆ ಮುಂದುವರಿದರೆ ಎಲ್ಲಾ ಸಾಂವಿಧಾನಿಕ ಮತ್ತು ಪ್ರಜಾಸತ್ತಾತ್ಮಕ ಮಾನದಂಡಗಳನ್ನು ಛಿದ್ರಗೊಳಿಸುತ್ತದೆ. ಸದ್ಯ ಮಣಿಪುರಕ್ಕೆ ಶಾಂತಿ ಬೇಕು ಹೊರತು ರಾಜಕಾರಣವಲ್ಲ ಎಂದು ಅವರು ತಿಳಿಸಿದ್ದಾರೆ.

Rahul Gandhi Blocking In Manipur Visit

ಮಣಿಪುರ ತಲುಪಿದ ನಂತರ ಗುರುವಾರ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ ಕಾಂಗ್ರೆಸ್‌ ರಾಹುಲ್ ಗಾಂಧಿ ಅವರು, ಇಂದು ನಾನು ಮಣಿಪುರದಲ್ಲಿದ್ದೇನೆ. ಪರಿಹಾರ ಶಿಬಿರಗಳಿಗೆ ಬೇಟಿ ನೀಡುತ್ತೇನೆ. ಮತ್ತು ರಾಜ್ಯವನ್ನು ಆವರಿಸಿರುವ ಹಿಂಸಾಚಾರದಿಂದ ಸಂತ್ರಸ್ತರ ಕುಟುಂಬಗಳನ್ನು ಬೇಟಿ ಮಾಡುತ್ತೇನೆ. ನಾಗರಿಕ ಸಮಾಜದ ಸದಸ್ಯರು. ಶಾಂತಿಯ ಮರುಸ್ಥಾಪನೆಯು ಪ್ರಮುಖ ಆದ್ಯತೆಯಾಗಿದೆ. ಇಲ್ಲಿನ ಜನರಿಗೆ ಚಿಕಿತ್ಸೆ ಅಗತ್ಯವಿದೆ. ನಾವೆಲ್ಲರು ಒಟ್ಟಾದರೆ ಮಾತ್ರ ಇಲ್ಲಿ ಸಾಮರಸ್ಯ ತರಬಹುದು ಎಂದು ಅವರು ಹೇಳಿಕೊಂಡಿದ್ದಾರೆ.

ಬಿಜೆಪಿ ವಿರುದ್ಧ ಜೈರಾಮ್ ರಮೇಶ್ ಟೀಕೆ

ಸಂತ್ರಸ್ತ ಪ್ರದೇಶಗಳಿಗೆ ಗಾಂಧಿ ಬೇಟಿ ನೀಡುವ ಸಂದರ್ಭದಲ್ಲಿ ಬಿಷ್ಣುಪುರದಲ್ಲಿ ಅವರನ್ನು ತಡೆದಿದ್ದಕ್ಕೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಕಿಡಿ ಕಾರಿದ್ದಾರೆ. ಪರಿಹಾರ ಶಿಬಿರಗಳಿಗೆ ಬೇಟಿ ನೀಡುವುದನ್ನು ಮತ್ತು ಹೊರಗಿನ ಜನರೊಂದಿಗೆ ಸಂವಹನ ನಡೆಸುವುದನ್ನು ಮೋದಿ ಸರ್ಕಾರ ತಡೆಯುತ್ತಿರುವುದು ಅತ್ಯಂತ ದುರದೃಷ್ಟಕರ ಎಂದು ವಾಗ್ದಾಳಿ ನಡೆಸಿದ್ದಾರೆ.

ಈಗಾಗಲೇ ಭಾರತ್ ಜೋಡೋ ಯಾತ್ರೆ ಯಶಸ್ವಿಯಾಗಿದೆ. ಇದೀಗ ಮಣಿಪುರಕ್ಕೆ ರಾಹುಲ್ ಅವರು 2 ದಿನ ಪ್ರವಾಸ ಕೈಗೊಂಡಿದ್ದರು. ಗಲಭೆ ಕುರಿತು ಮೌನವಾಗಿರುವ ಪ್ರಧಾನಮಂತ್ರಿಗಳು ಮಣಿಪುರಿ ಜನರ ಕಷ್ಟ ಸುಖ ಆಲಿಸಲು, ಅವರಿಗೆ ಸಾಂತ್ವನ ಹೇಳಲು ಹೊರಟಿದ್ದವರನ್ನು ಏಕೆ ತಡೆಯಬೇಕು ಎಂದು ಅವರು ಪ್ರಶ್ನಿಸಿದರು.

Rahul Gandhi in Manipur: ಸಂತ್ರಸ್ತರಿಗೆ 'ರಾಗಾ' ಸಾಂತ್ವನ, ಇಂದು ವಿವಿಧ ಪಕ್ಷಗಳ ಮುಖಂಡರ ಭೇಟಿRahul Gandhi in Manipur: ಸಂತ್ರಸ್ತರಿಗೆ ‘ರಾಗಾ’ ಸಾಂತ್ವನ, ಇಂದು ವಿವಿಧ ಪಕ್ಷಗಳ ಮುಖಂಡರ ಭೇಟಿ

ಬಿಜೆಪಿ ಕೆಲಸ ನಾವು ಮಾಡಿದರೂ ತಡೆಯುತ್ತಾರೆ

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸಹ ಕೇಂದ್ರದ ವಿರುದ್ಧ ಟೀಕಿಸಿದ್ದಾರೆ. ಶಾಂತಿ ಮತ್ತು ಸೌಹಾರ್ದತೆಗಾಗಿ ಪ್ರಯತ್ನಿಸುವುದು ಹಾಗೂ ಅದಕ್ಕಗಿ ಶ್ರಮಿಸುವುದು ಪ್ರತಿಯೊಬ್ಬ ದೇಶಭಕ್ತರ ಕರ್ತವ್ಯ. ರಾಹುಲ್ ಗಾಂಧಿ ಅವರು ಮಣಿಪುರದಲ್ಲಿ ಜನರ ನೋವು ಹಂಚಿಕೊಳ್ಳಲು ಮತ್ತು ಶಾಂತಿಯ ಸಂದೇಶವನ್ನು ರವಾನಿಸಲು ಪ್ರವಾಸ ಕೈಗೊಂಡಿದ್ದರು. ಬಿಜೆಪಿ ಸರ್ಕಾರವೂ ಇದೇ ಕೆಲಸ ಮಾಡಬೇಕಿತ್ತು, ಅದನ್ನು ಬಿಟ್ಟು ಏಕೆ ರಾಹುಲ್ ಗಾಂಧಿಯವರನ್ನು ತಡೆದರು ಎಂದು ಹರಿಹಾಯ್ದರು.

ಎಐಸಿಸಿ ಪ್ರಧಾನ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನತೆ ಅವರು, ಯಾರು ಎಷ್ಟೇ ತಡೆದರೂ ಸಹಿತ ನಾಯಕ ರಾಹುಲ್ ಗಾಂಧಿ ಅವರು ಮಣಿಪುರದ ಸಂತ್ರಸ್ತ ಪ್ರದೇಶಗಳಿಗೆ ಬೇಟಿ ನೀಡುತ್ತಾರೆ. ಅಲ್ಲಿಯ ಕಷ್ಟಗಳನ್ನು ಆಲಿಸುತ್ತಾರೆ ಎಂದರು.

ಮಣಿಪುರದಲ್ಲಿ ಎರಡು ತಿಂಗಳಿನಿಂದ ಬೆಂಕಿ ಹೊತ್ತಿ ಉರಿಯುತ್ತಿದ್ದು, ಸ್ವತಃ ಪ್ರಧಾನಿ ಮೋದಿಯೇ ಬೇಟಿ ನೀಡಬೇಕಿತ್ತು. ಅವರ ಸರ್ಕಾರ ರಾಹುಲ್ ಗಾಂಧಿಯಂತಹ ವಾಸಿಮಾಡುವ ಸ್ಪರ್ಶ ನೀಡಿ ಕಣ್ಣೀರು ಒರೆಸುವವರನ್ನು ತಡೆಯುತ್ತಿದೆ ಎಂದು ಹೇಳಿದರು.

ಕೇಂದ್ರ ಡಬಲ್ ಇಂಜಿನ್ ಸರ್ಕಾರ ರಾಹುಲ್ ಗಾಂಧಿಯನ್ನು ತಡೆಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಹತ್ರಾಸ್ ಮತ್ತು ಲಖಿಂಪುರ ಖೇರಿಗೆ ಹೋಗುವ ದಾರಿಯಲ್ಲಿ ಅವರನ್ನು ತಡೆಯಲಾಗಿತ್ತು. ಬಿಜೆಪಿಯು ಈ ನೀತಿ ಅನುಸರಿಸುತ್ತಿರುವು ಇದೇನು ಮೊದಲಲ್ಲ ಎಂದು ವಕ್ತಾರೆ ತಿಳಿಸಿದರು.

English summary

Rahul Gandhi blocking in Manipur Visit: AICC President Mallikarjun Kharge and Other leaders slams on Central BJP.

Story first published: Friday, June 30, 2023, 18:48 [IST]

Source link