ಮಣಿಪುರ ಪರಿಹಾರ ಶಿಬಿರಗಳ ಸ್ಥಿತಿ ಕರುಣಾಜನಕ: ರಾಜ್ಯಪಾಲರಿಗೆ ತಿಳಿಸಿದ ವಿಪಕ್ಷಗಳ ನಿಯೋಗ | Opposition in Manipur: Manipur relief camps in pathetic condition says INDIA MPs

India

oi-Mamatha M

|

Google Oneindia Kannada News

ಇಂಫಾಲ, ಜುಲೈ. 30: ರಾಜಭವನದಲ್ಲಿ ಮಣಿಪುರ ರಾಜ್ಯಪಾಲ ಅನುಸೂಯಾ ಉಯ್ಕೆ ಅವರನ್ನು ಭೇಟಿ ಮಾಡಿದ ಇಂಡಿಯಾ ಮೈತ್ರಿ ಸಂಸದರ ನಿಯೋಗ, ಪರಿಹಾರ ಶಿಬಿರಗಳ ಸ್ಥಿತಿ “ಕರುಣಾಜನಕವಾಗಿದೆ ಮತ್ತು ಆದ್ಯತೆಯ ಆಧಾರದ ಮೇಲೆ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸುವ ಅಗತ್ಯವಿದೆ “ಎಂದು ತಮ್ಮ ಜ್ಞಾಪಕ ಪತ್ರದಲ್ಲಿ ಹೇಳಿಕೊಂಡಿದ್ದಾರೆ.

ಜನಾಂಗೀಯ ಹಿಂಸಾಚಾರದ್ಲಿ ನಲುಗಿರುವ ಮಣಿಪುರ ರಾಜ್ಯಕ್ಕೆ ಭೇಟಿ ನೀಡಿದ ನಂತರ ಅವರು ತಮ್ಮ ಅವಲೋಕನಗಳ ಕುರಿತು ಸರ್ಕಾರಕ್ಕೆ ಜ್ಞಾಪಕ ಪತ್ರವನ್ನು ಸಲ್ಲಿಸಿದ್ದಾರೆ. “140 ಕ್ಕೂ ಹೆಚ್ಚು ಸಾವುಗಳು, 500 ಕ್ಕೂ ಹೆಚ್ಚು ಗಾಯಾಳುಗಳು, 5,000 ಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ಮತ್ತು 60,000 ಕ್ಕಿಂತ ಹೆಚ್ಚು ಜನರ ಆಂತರಿಕ ಸ್ಥಳಾಂತರದ ಅಂಕಿ ಅಂಶಗಳಿಂದ ಎರಡು ಸಮುದಾಯಗಳ ಜನರ ಜೀವ ಮತ್ತು ಆಸ್ತಿಯನ್ನು ರಕ್ಷಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವೈಫಲ್ಯವು ಸ್ಪಷ್ಟವಾಗಿದೆ” ಎಂದು ನಿಯೋಗವು ಜ್ಞಾಪಕ ಪತ್ರದಲ್ಲಿ ತಿಳಿಸಿದೆ.

Opposition in Manipur: Manipur relief camps in pathetic condition says INDIA MPs

“ಕಳೆದ ಕೆಲವು ದಿನಗಳಲ್ಲಿ ನಿರಂತರ ಗುಂಡಿನ ದಾಳಿ ಮತ್ತು ಮನೆಗಳಿಗೆ ಬೆಂಕಿ ಹಚ್ಚಿದ ವರದಿಗಳಿಂದ, ಕಳೆದ ಮೂರು ತಿಂಗಳಿನಿಂದ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ರಾಜ್ಯ ಯಂತ್ರವು ಸಂಪೂರ್ಣವಾಗಿ ವಿಫಲವಾಗಿದೆ ಎಂದು ನಿಸ್ಸಂದೇಹವಾಗಿ ಹೇಳಬಹುದು” ಎಂದು ಆರೋಪಿಸಿದ್ದಾರೆ. ಮಣಿಪುರದಲ್ಲಿ ಮೂರು ತಿಂಗಳ ಕಾಲ ನಡೆದ ಜನಾಂಗೀಯ ಗಲಭೆಗಳ ಸಂತ್ರಸ್ತರನ್ನು ಭೇಟಿ ಮಾಡಲು 21 ಸಂಸದರ ಪ್ರತಿಪಕ್ಷಗಳ ನಿಯೋಗ ಶನಿವಾರ ಮಣಿಪುರಕ್ಕೆ ಆಗಮಿಸಿದೆ.

ಮಣಿಪುರ ಹಿಂಸಾಚಾರ: ಭಾನುವಾರ ರಾಜ್ಯಪಾಲರನ್ನು ಭೇಟಿಯಾಗಲಿರುವ ವಿಪಕ್ಷಗಳ ನಾಯಕರುಮಣಿಪುರ ಹಿಂಸಾಚಾರ: ಭಾನುವಾರ ರಾಜ್ಯಪಾಲರನ್ನು ಭೇಟಿಯಾಗಲಿರುವ ವಿಪಕ್ಷಗಳ ನಾಯಕರು

ತಮ್ಮ ಎರಡು ದಿನಗಳ ಪ್ರವಾಸದ ಮೊದಲ ದಿನ, ಅವರು ಇಂಫಾಲ್, ಬಿಷ್ಣುಪುರ ಜಿಲ್ಲೆಯ ಮೊಯಿರಾಂಗ್ ಮತ್ತು ಚುರಾಚಂದ್‌ಪುರದ ಹಲವಾರು ಪರಿಹಾರ ಶಿಬಿರಗಳಿಗೆ ಭೇಟಿ ನೀಡಿದ್ದಾರೆ. ಜನಾಂಗೀಯ ಘರ್ಷಣೆಯ ಸಂತ್ರಸ್ತರನ್ನು ಭೇಟಿ ಮಾಡಿ ಅವರಿಂದ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದಿದ್ದಾರೆ.

“ಗೌರವಾನ್ವಿತ ಪ್ರಧಾನಮಂತ್ರಿಯವರ ಮೌನವು ಮಣಿಪುರದ ಹಿಂಸಾಚಾರದ ಬಗ್ಗೆ ಅವರ ನಿರ್ಲಜ್ಜ ಉದಾಸೀನತೆಯನ್ನು ತೋರಿಸುತ್ತದೆ” ಎಂದು ಜ್ಞಾಪಕ ಪತ್ರದಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ರಾಜ್ಯಪಾಲರ ಜೊತೆಗಿನ ಸಭೆಯ ನಂತರ ರಾಜಭವನದ ಹೊರಗೆ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಮಣಿಪುರ ಜನಾಂಗೀಯ ಸಂಘರ್ಷವನ್ನು ಶೀಘ್ರವಾಗಿ ಪರಿಹರಿಸದಿದ್ದರೆ, ಅದು ದೇಶಕ್ಕೆ ಭದ್ರತಾ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಅಂದಾಜಿಸಿದ್ದಾರೆ.

Opposition in Manipur: Manipur relief camps in pathetic condition says INDIA MPs

“ರಾಜ್ಯಪಾಲರು ನಮ್ಮ ಅವಲೋಕನಗಳನ್ನು ಕೇಳಿದ್ದಾರೆ ಮತ್ತು ಅದಕ್ಕೆ ಸಮ್ಮತಿಸಿದ್ದಾರೆ. ಅವರು ಹಿಂಸಾಚಾರದ ಘಟನೆಗಳ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ ಮತ್ತು ಸಮುದಾಯಗಳ ನಡುವಿನ ಅಪನಂಬಿಕೆಯನ್ನು ಹೋಗಲಾಡಿಸಲು ಜನರೊಂದಿಗೆ ಮಾತನಾಡಲು ಸರ್ವಪಕ್ಷಗಳ ನಿಯೋಗ ಮಣಿಪುರಕ್ಕೆ ಭೇಟಿ ನೀಡಬೇಕು ಎಂದು ಸಲಹೆ ನೀಡಿದ್ದಾರೆ” ಎಂದಿದ್ದಾರೆ.

ಮಣಿಪುರಕ್ಕೆ ಭೇಟಿ ನೀಡಿರುವ ಸಂಸದರು ಮಣಿಪುರದ ಬಗ್ಗೆ ತಮ್ಮ ಅವಲೋಕನಗಳನ್ನು ಸಂಸತ್ತಿನಲ್ಲಿ ಮಂಡಿಸಲಿದ್ದಾರೆ ಎಂದು ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ. ದಿನದಿಂದ ದಿನಕ್ಕೆ ಪರಿಸ್ಥಿತಿ ಹದಗೆಡುತ್ತಿರುವ ಕಾರಣ ಮಣಿಪುರ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಸುವಂತೆ ಮನವಿ ಮಾಡಿದ್ದೇವೆ ಎಂದಿದ್ದಾರೆ.

ಟ್ವಿಟರ್‌ನಲ್ಲಿ ಜ್ಞಾಪಕ ಪತ್ರವನ್ನು ಹಂಚಿಕೊಂಡ ಕಾಂಗ್ರೆಸ್ ಹಿರಿಯ ನಾಯಕ, “ಮಣಿಪುರದ ಜನರ ಕೋಪ, ಆತಂಕ, ವೇದನೆ, ನೋವು ಮತ್ತು ದುಃಖವು ಪ್ರಧಾನಿಯವರಲ್ಲಿ ಯಾವುದೇ ವ್ಯತ್ಯಾಸವನ್ನು ತೋರಿಸುತ್ತಿಲ್ಲ. ಅವರು ತಮ್ಮದೇ ಆದ ಧ್ವನಿಯನ್ನು ಕೇಳುವಲ್ಲಿ ನಿರತರಾಗಿರುವಾಗ ಮತ್ತು ಅವರ ‘ಮನ್ ಕಿ ಬಾತ್’ ಅನ್ನು ಕೋಟಿಗಟ್ಟಲೆ ಭಾರತೀಯರ ಮೇಲೆ ಹೇರುತ್ತಿರುವಾಗ, ಟೀಮ್ ಇಂಡಿಯಾದ 21 ಸಂಸದರ ನಿಯೋಗವು ಮಣಿಪುರದ ರಾಜ್ಯಪಾಲರೊಂದಿಗೆ ಮಣಿಪುರ ಕಿ ಬಾತ್ ಕುರಿತು ಮಾತನಾಡುತ್ತಿದೆ. ರಾಜ್ಯಪಾಲರಿಗೆ ಅವರ ಜ್ಞಾಪಕ ಪತ್ರ ಇಲ್ಲಿದೆ” ಎಂದು ಟೀಕಿಸಿದ್ದಾರೆ.

ಅಧೀರ್ ರಂಜನ್ ಚೌಧರಿ ಮತ್ತು ಲೋಕಸಭೆಯಲ್ಲಿ ಕಾಂಗ್ರೆಸ್‌ನ ಉಪ ನಾಯಕ ಗೌರವ್ ಗೊಗೊಯ್ ಅವರಲ್ಲದೆ, ನಿಯೋಗದಲ್ಲಿ ಟಿಎಂಸಿಯ ಸುಶ್ಮಿತಾ ದೇವ್, ಜೆಎಂಎಂನ ಮಹುವಾ ಮಜಿ, ಡಿಎಂಕೆಯ ಕನಿಮೋಳಿ, ಆರ್‌ಎಲ್‌ಡಿಯ ಜಯಂತ್ ಚೌಧರಿ, ಆರ್‌ಜೆಡಿಯ ಮನೋಜ್ ಕುಮಾರ್ ಝಾ, ಆರ್‌ಎಸ್‌ಪಿ, ಜೆಡಿಯು ಮುಖ್ಯಸ್ಥ ಎನ್‌ಕೆ ಪ್ರೇಮಚಂದ್ರನ್ ಇದ್ದಾರೆ. ರಂಜನ್ (ಲಾಲನ್) ಸಿಂಗ್, ಅನೀಲ್ ಪ್ರಸಾದ್ ಹೆಗ್ಡೆ (ಜೆಡಿ-ಯು), ಸಿಪಿಐನ ಪಿ ಸಂತೋಷ್ ಕುಮಾರ್ ಮತ್ತು ಸಿಪಿಐ(ಎಂ) ನ ಎ ಎ ರಹೀಮ್ ಇತರರು ಇದ್ದಾರೆ.

English summary

Opposition in Manipur: Manipur relief camps in pathetic condition says Opposition INDIA alliance MPs. they meet Manipur governor Anusuiya Uikey at Raj Bhavan. know more.

Story first published: Sunday, July 30, 2023, 15:41 [IST]

Source link