ಮಕ್ಕಳ ಕಳ್ಳಸಾಗಣೆ, ಆರು ವರ್ಷದ ವರದಿ ಬಹಿರಂಗ: ಈ ಮೂರು ರಾಜ್ಯಗಳಲ್ಲೇ ಅತಿಹೆಚ್ಚು | The Child Trafficking in India report, compiled by Games24x7 and Kailash Satyarthi Children’s Foundation

India

oi-Oneindia Staff

|

Google Oneindia Kannada News

ದೇಶವನ್ನು ಕಾಡುತ್ತಿರುವ ಅತಿದೊಡ್ಡ ಸಮಸ್ಯೆಗಳಲ್ಲಿ ಮಾನವ/ಮಕ್ಕಳ ಕಳ್ಳಸಾಗಣೆ ಕೂಡಾ ಒಂದು. ಇತ್ತೀಚಿನ ಅಂಕಿಅಂಶದ ಪ್ರಕಾರ ಉತ್ತರ ಪ್ರದೇಶ, ಬಿಹಾರ ಮತ್ತು ಆಂಧ್ರ ಪ್ರದೇಶ ರಾಜ್ಯಗಳು ಅತಿಹೆಚ್ಚಿನ ಸಮಸ್ಯೆಯನ್ನು ಈ ವಿಚಾರದಲ್ಲಿ ಎದುರಿಸುತ್ತಿದೆ. ಇನ್ನು, ದೆಹಲಿ ಕೂಡಾ ಹಿಂದೆ ಬಿದ್ದಿಲ್ಲ..

ಗೇಮ್ಸ್ 24×7 ಮತ್ತು ಕೈಲಾಶ್ ಸತ್ಯಾರ್ಥಿ ಚಿಲ್ಡ್ರನ್ಸ್ ಫೌಂಡೇಶನ್‌ ನಡೆಸಿರುವ ಅಥವಾ ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಕಳ್ಳಸಾಗಣೆಗೆ ದಂಧೆಗೆ ಒಳಗಾಗಿ ಇದರಿಂದ ರಕ್ಷಿಸಲ್ಪಟ್ಟ ಮಕ್ಕಳಲ್ಲಿ ಶೇ. ಎಂಬತ್ತರಷ್ಟು ಮಕ್ಕಳು 13-18 ವರ್ಷ ವಯಸ್ಸಿನವರು ಎನ್ನುವುದು ಗಮನಿಸಬೇಕಾದ ವಿಚಾರ.

The Child Trafficking in India report, compiled by Games24x7 and Kailash Satyarthi Children’s Foundation

ಇತ್ತೀಚಿನ ದಿನಗಳಲ್ಲಿ ಸರ್ಕಾರ ಮತ್ತು ಸಂಬಂಧ ಪಟ್ಟ ಇಲಾಖೆಗಳು ಈ ದಂಧೆಯನ್ನು ಹತ್ತಿಕ್ಕುವಲ್ಲಿ ಒಂದು ಹೆಜ್ಜೆಯನ್ನು ಮುಂದಿಟ್ಟಿದ್ದರೂ, ಸಾರ್ವಜನಿಕರಲ್ಲಿ ಜನಜಾಗೃತಿ ಮೂಡಿಸುವುದು ಇನ್ನೂ ಸವಾಲಾಗಿಯೇ ಉಳಿದಿದೆ ಎನ್ನುವುದು ಸಂಸ್ಥೆ ಸಂಗ್ರಹಿಸುವ ಮಾಹಿತಿಯಿಂದ ಹೊರಬಂದ ಅಂಶ. ಈ ವಿಚಾರವನ್ನು ಸಮರ್ಥವಾಗಿ ಎದುರಿಸಲು ಕಟ್ಟುನಿಟ್ಟಿನ ಕಾನೂನು ಈ ಸಮಯದ ತುರ್ತು ಅವಶ್ಯಕತೆಗಳಲ್ಲಿ ಒಂದು.

ರಾಜ್ಯದಲ್ಲಿ ಮಕ್ಕಳ ನಾಪತ್ತೆ ಪ್ರಕರಣ ಹೆಚ್ಚಳ: ಮಾನವ ಕಳ್ಳಸಾಗಣೆ ಆಕ್ಟೀವ್‌ ಸೂಚನೆ?ರಾಜ್ಯದಲ್ಲಿ ಮಕ್ಕಳ ನಾಪತ್ತೆ ಪ್ರಕರಣ ಹೆಚ್ಚಳ: ಮಾನವ ಕಳ್ಳಸಾಗಣೆ ಆಕ್ಟೀವ್‌ ಸೂಚನೆ?

ಗೇಮ್ಸ್ 24×7 ಮತ್ತು ಕೈಲಾಶ್ ಸತ್ಯಾರ್ಥಿ ಚಿಲ್ಡ್ರನ್ಸ್ ಫೌಂಡೇಶನ್‌ ಬಿಡುಗಡೆ ಮಾಡಿರುವ ಪ್ರೆಸ್ ರಿಲೀಸ್ ಪ್ರಕಾರ, ಉತ್ತರ ಪ್ರದೇಶ, ಬಿಹಾರ ಮತ್ತು ಆಂಧ್ರಪ್ರದೇಶವು 2016 ಮತ್ತು 2022 ರ ನಡುವಿನ ಅವಧಿಯಲ್ಲಿ ಗರಿಷ್ಠ ಪ್ರಮಾಣದ ಮಕ್ಕಳ ಕಳ್ಳಸಾಗಣೆಯಾಗಿರುವ ದೇಶದ ಮೊದಲ ಮೂರು ರಾಜ್ಯಗಳು ಎನ್ನುವ ಕುಖ್ಯಾತಿಗೆ ಒಳಗಾಗಿದೆ. ಇದರ ಜೊತೆಗೆ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೋವಿಡ್ ನಂತರದ ಅವಧಿಯಲ್ಲಿ ಶೇ. 68 ಏರಿಕೆಯನ್ನು ಕಂಡಿರುವುದು ವಿಪರ್ಯಾಸ.

ನೊಬೆಲ್ ಶಾಂತಿ ಪುರಸ್ಕೃತ ಕೈಲಾಶ್ ಸತ್ಯಾರ್ಥಿ

ನೊಬೆಲ್ ಶಾಂತಿ ಪುರಸ್ಕೃತ ಕೈಲಾಶ್ ಸತ್ಯಾರ್ಥಿ ಸ್ಥಾಪಿಸಿದ ಗೇಮ್ಸ್ 24×7 ಮತ್ತು ಕೈಲಾಶ್ ಸತ್ಯಾರ್ಥಿ ಮಕ್ಕಳ ಪ್ರತಿಷ್ಠಾನ (ಕೆಎಸ್‌ಸಿಎಫ್) ಜಂಟಿಯಾಗಿ ಬಿಡುಗಡೆ ಮಾಡಿದ ವರದಿಯಲ್ಲಿ ಮಕ್ಕಳ ಕಳ್ಳಸಾಗಣೆ ಕುರಿತ ಈ ವಿಸ್ಮಯಕಾರಿ ಸಂಗತಿಗಳು ಒಂದೊಂದಾಗಿಯೇ ಬಹಿರಂಗವಾಗಿವೆ. ರಾಜಸ್ಥಾನದ ರಾಜಧಾನಿ ಜೈಪುರ ಮಕ್ಕಳ ಕಳ್ಳಸಾಗಣಿಯಲ್ಲಿ ದೇಶದ ಹಾಟ್‌ಸ್ಪಾಟ್‌ ನಗರವಾಗಿದೆ. ಜೊತೆಗೆ, ಅತಿಹೆಚ್ಚು ಈ ಪ್ರಕರಣ ದಾಖಲಾದ ದೇಶದ ಹತ್ತು ಪ್ರಮುಖ ಜಿಲ್ಲೆಗಳಲ್ಲಿ ಇತರ ನಾಲ್ಕು ಹಾಟ್‌ಸ್ಪಾಟ್‌ ಗಳು ದೆಹಲಿಯ ಪ್ರದೇಶಗಳಾಗಿವೆ.

The Child Trafficking in India report, compiled by Games24x7 and Kailash Satyarthi Children’s Foundation

ಜುಲೈ 30 ರಂದು ಕಳ್ಳಸಾಗಣೆ ವಿರುದ್ಧದ ವಿಶ್ವ ದಿನ

ಜುಲೈ 30 ರಂದು ಕಳ್ಳಸಾಗಣೆ ವಿರುದ್ಧದ ವಿಶ್ವ ದಿನವನ್ನು ಗುರುತಿಸಿ ‘ಭಾರತದಲ್ಲಿ ಮಕ್ಕಳ ಕಳ್ಳಸಾಗಣೆ: ಪರಿಸ್ಥಿತಿಯ ಡೇಟಾ ವಿಶ್ಲೇಷಣೆ ಮತ್ತು ಟೆಕ್-ಚಾಲಿತ ಮಧ್ಯಸ್ಥಿಕೆ ತಂತ್ರಗಳ ಅಗತ್ಯತೆಗಳಿಂದ ಒಳನೋಟಗಳು’ ಎಂಬ ಶೀರ್ಷಿಕೆಯ ವರದಿಯನ್ನು ಬಿಡುಗಡೆ ಮಾಡಲಾಗಿದೆ. ದೇಶದಲ್ಲಿ ಬಾಲಕಾರ್ಮಿಕರ ದುಃಸ್ಥಿತಿಯ ಮೇಲೆ ಮತ್ತಷ್ಟು ಬೆಳಕು ಚೆಲ್ಲುವ ವರದಿಯ ಪ್ರಕಾರ, 13 ರಿಂದ 18 ವರ್ಷದೊಳಗಿನ ಮಕ್ಕಳನ್ನು ಕೈಗಾರಿಕೆಗಳಲ್ಲಿ ಬಳಸಿಕೊಳ್ಳಲಾಗುತ್ತಿದ್ದರೆ, ಸೌಂದರ್ಯವರ್ಧಕ ಉದ್ಯಮದಲ್ಲಿ (cosmetic industry) 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಬಳಸಿಕೊಳ್ಳಲಾಗುತ್ತಿದೆ.

80 ಪ್ರತಿಶತದಷ್ಟು ಮಕ್ಕಳು 13 ರಿಂದ 18 ವರ್ಷ ವಯಸ್ಸಿನವರು

ಮಾನವ ಕಳ್ಳಸಾಗಣಿಯಿಂದ ರಕ್ಷಿಸಲ್ಪಟ್ಟ ಮಕ್ಕಳಲ್ಲಿ 80 ಪ್ರತಿಶತದಷ್ಟು ಮಕ್ಕಳು 13 ರಿಂದ 18 ವರ್ಷ ವಯಸ್ಸಿನವರಾಗಿದ್ದರೆ, 13 ಪ್ರತಿಶತದಷ್ಟು ಮಕ್ಕಳು 9 ರಿಂದ 12 ವರ್ಷ ವಯಸ್ಸಿನವರು ಮತ್ತು 2 ವರ್ಷಕ್ಕಿಂತ ಮೇಲ್ಪಟ್ಟವರು ಎಂದು ವರದಿಯಲ್ಲಿ ಹೇಳಲಾಗಿದೆ. Games24x7 ನ ಡೇಟಾ ಸೈನ್ಸ್ ತಂಡವು 2016 ಮತ್ತು 2022 ರ ನಡುವಿನ ಅವಧಿಯಲ್ಲಿ ದೇಶದ 21 ರಾಜ್ಯಗಳ 262 ಜಿಲ್ಲೆಗಳಲ್ಲಿ ಮಕ್ಕಳ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಗ್ರಹಿಸಿದ ಡೇಟಾ ಆಧರಿಸಿ ವರದಿಯನ್ನು ಸಿದ್ದ ಪಡಿಸಿದೆ.

ಒಟ್ಟು 13,549 ಮಕ್ಕಳನ್ನು ರಕ್ಷಿಸಲಾಗಿದೆ

ಈ ವರದಿಯಿಂದಾಗಿ ಸರ್ಕಾರಕ್ಕೆ ಈ ಸಂಬಂಧ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲು ಅನುಕೂಲವಾಗಲಿದೆ. KSCF ಮತ್ತು ಅದರ ಪಾಲುದಾರರ ಸಂಸ್ಥೆಯ ಸಹಯೋಗದಿಂದ 2016 ಮತ್ತು 2022ರ ನಡುವೆ 18 ವರ್ಷದೊಳಗಿನ ಒಟ್ಟು 13,549 ಮಕ್ಕಳನ್ನು ರಕ್ಷಿಸಲಾಗಿದೆ. ವರದಿಯಲ್ಲಿ ದೇಶದಲ್ಲಿ ಬಾಲಕಾರ್ಮಿಕರ ದುಃಸ್ಥಿತಿಯನ್ನು ಕೂಡಾ ವಿವರಿಸಲಾಗಿದೆ, ಕಾನೂನು ಚೌಕಟ್ಟನ್ನು ಉಲ್ಲಂಘಿಸಿ ಮಕ್ಕಳನ್ನು ವಿವಿಧ ಉದ್ಯಮಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ.

ಹೋಟೆಲ್‌ಗಳು ಮತ್ತು ದಾಬಾಗಳು

ವರದಿಯ ಪ್ರಕಾರ, ಗರಿಷ್ಠ ಸಂಖ್ಯೆಯ ಬಾಲಕಾರ್ಮಿಕರನ್ನು ನೇಮಿಸಿಕೊಳ್ಳುವ ಉದ್ಯಮಗಳು ಹೋಟೆಲ್‌ಗಳು ಮತ್ತು ದಾಬಾಗಳು (15.6%), ಮಾಮ್ ಮತ್ತು ಪಾಪ್ ಆಟೋಮೊಬೈಲ್ ಅಥವಾ ಸಾರಿಗೆ ಉದ್ಯಮ (13%), ಮತ್ತು ಗಾರ್ಮೆಂಟ್ಸ್ (11.18%). ಎಲ್ಲಾ ಕೈಗಾರಿಕೆಗಳಲ್ಲಿ ಹೆಚ್ಚಿನ ಮಕ್ಕಳು (80%) 13 ರಿಂದ 18 ವರ್ಷ ವಯಸ್ಸಿನವರಾಗಿದ್ದಾರೆ.

ಮಕ್ಕಳ ಕಳ್ಳಸಾಗಣೆ ಗಮನಾರ್ಹ ಏರಿಕೆ

ವರದಿಯ ಪ್ರಕಾರ ವಿವಿಧ ರಾಜ್ಯಗಳಲ್ಲಿ ಮಕ್ಕಳ ಕಳ್ಳಸಾಗಣೆ ಗಮನಾರ್ಹ ಏರಿಕೆಯನ್ನು ಕಂಡಿದೆ, ಉತ್ತರ ಪ್ರದೇಶವು ಪ್ರಕರಣಗಳಲ್ಲಿ ಆಶ್ಚರ್ಯಕರ ರೀತಿಯಲ್ಲಿ ಹೆಚ್ಚಳವಾಗಿದೆ. ಕೋವಿಡ್ ಮುನ್ನ ಅಂದರೆ 2016-2019ರಲ್ಲಿ ವರದಿಯಾದ ಘಟನೆಗಳು 267, ಕೋವಿಡ್ ನಂತರದ ಹಂತದಲ್ಲಿ (2021-2022) ಈ ಸಂಖ್ಯೆ 1,214 ಕ್ಕೆ ಏರಿದೆ. ಕರ್ನಾಟಕದಲ್ಲಿ ಕೂಡಾ ಕೋವಿಡ್ ನಂತರ ಈ ದಂಧೆ ಶೇ. 18 ಪಟ್ಟು ಹೆಚ್ಚಳವಾಗಿರುವುದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆಯಾಗಿದೆ.

ಅಡ್ಮಿರಲ್ ರಾಹುಲ್ ಕುಮಾರ್ ಶ್ರಾವತ್

ದೇಶದಲ್ಲಿ ಹೆಚ್ಚುತ್ತಿರುವ ಮಕ್ಕಳ ಕಳ್ಳಸಾಗಣೆ ಪ್ರಕರಣಗಳ ಕುರಿತು, ಕೆಎಸ್‌ಸಿಎಫ್‌ನ ವ್ಯವಸ್ಥಾಪಕ ನಿರ್ದೇಶಕ ಎವಿಎಸ್‌ಎಂ (ನಿವೃತ್ತ) ರಿಯರ್ ಅಡ್ಮಿರಲ್ ರಾಹುಲ್ ಕುಮಾರ್ ಶ್ರಾವತ್, “ಸಂಖ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಮತ್ತು ಇದೊಂದು ಗಂಭೀರ ಸ್ವರೂಪದ ಸಮಸ್ಯೆಯಾಗಿದೆ. ಕಳೆದ ದಶಕದಲ್ಲಿ ಭಾರತವು ಮಕ್ಕಳ ಕಳ್ಳಸಾಗಣೆ ಸಮಸ್ಯೆಯನ್ನು ನಿಭಾಯಿಸಿದೆ”ಎಂದು ಶ್ರಾವತ್ ಹೇಳಿದ್ದಾರೆ.

ಸಂಸತ್ತಿನ ಈ ಅಧಿವೇಶನದಲ್ಲಿಯೇ ಅಂಗೀಕರಿಸಬೇಕು

ಕೇಂದ್ರ , ರಾಜ್ಯ ಸರ್ಕಾರಗಳು, ರೈಲ್ವೇ ರಕ್ಷಣಾ ಪಡೆ, ಗಡಿ ಭದ್ರತಾ ಪಡೆ ಮುಂತಾದ ಸಂಸ್ಥೆಗಳ ತ್ವರಿತ ಮತ್ತು ಆಗಾಗ್ಗೆ ಮಧ್ಯಪ್ರವೇಶವು ಕಳ್ಳಸಾಗಣೆದಾರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆದಾಗ್ಯೂ, ಇದನ್ನು ಕಠಿಣ ಮತ್ತು ಸಮಗ್ರವಾದ ಕಳ್ಳಸಾಗಣೆ ವಿರೋಧಿ ಕಾನೂನು ಜಾರಿಯಿಂದ ಮಾತ್ರ ಮೆಟ್ಟಿ ನಿಲ್ಲಲು ಸಾಧ್ಯ. ಹಾಗಾಗಿ, ಕಳ್ಳಸಾಗಣೆ ವಿರೋಧಿ ಮಸೂದೆಯನ್ನು ಸಂಸತ್ತಿನ ಈ ಅಧಿವೇಶನದಲ್ಲಿಯೇ ಅಂಗೀಕರಿಸಬೇಕು ಎಂದು ಸಂಸ್ಥೆ ಒತ್ತಾಯಿಸಿದೆ.

ಸಹ-ಸಂಸ್ಥಾಪಕ ಮತ್ತು ಸಹ-CEO ತ್ರಿವಿಕ್ರಮನ್ ಥಂಪಿ

Games24x7 ನ ಸಹ-ಸಂಸ್ಥಾಪಕ ಮತ್ತು ಸಹ-CEO ತ್ರಿವಿಕ್ರಮನ್ ಥಂಪಿ, “ಈ ವರ್ಷದ ಆರಂಭದಲ್ಲಿ, ನಾವು ಆರ್ಥಿಕ ಸಹಾಯವನ್ನು ಮೀರಿ KSCF ನೊಂದಿಗೆ ನಮ್ಮ ಮೈತ್ರಿಯನ್ನು ವಿಸ್ತರಿಸಲು ಮತ್ತು ಹತೋಟಿಗೆ ಬದ್ಧರಾಗಿದ್ದೇವೆ. ಮಕ್ಕಳ ಉನ್ನತಿಗಾಗಿ ಶಾಶ್ವತ ಪರಿಹಾರಗಳನ್ನು ರಚಿಸಲು ಡೇಟಾ ಸೈನ್ಸ್ ಮತ್ತು ಅನಾಲಿಟಿಕ್ಸ್‌ನಲ್ಲಿ ಸಾಮರ್ಥ್ಯಗಳನ್ನು ಹೊಂದಿರುವ ತಂತ್ರಜ್ಞಾನ ನಾಯಕರಾಗಿ Games24x7 ನ ಸೇವೆ ಅನನ್ಯ. ಸಂಸ್ಥೆಯ ಬದ್ಧತೆಗೆ ಅನುಗುಣವಾಗಿ, ಹೊರ ತಂದಿರುವ ಸಮಗ್ರ ವರದಿಯು ಮಕ್ಕಳ ಕಳ್ಳಸಾಗಣೆ ನಿಯಂತ್ರಿಸಲು ಅಗತ್ಯವಾದ ಕಾನೂನು ರೂಪಿಸಲು ಅನುಕೂಲವಾಗಲಿದೆ” ಎಂದು ಥಂಪಿ ಅಭಿಪ್ರಾಯ ಪಟ್ಟಿದ್ದಾರೆ. (ಹೆಚ್ಚಿನ ಮಾಹಿತಿಗಾಗಿ ಜಿತೇಂದ್ರ ಪರ್ಮಾರ್ ಅವರನ್ನು ಈ ಸಂಖ್ಯೆಯಲ್ಲಿ ಸಂಪರ್ಕಿಸಬಹುದು -85959 50825)

English summary

The Child Trafficking in India report, compiled by Games24x7 and Kailash Satyarthi Children’s Foundation. Know More,

Story first published: Sunday, July 30, 2023, 21:39 [IST]

Source link