Travel
lekhaka-Kishan Kumar
ಮಂಗಳೂರು, ಜೂನ್, 19: ಕರಾವಳಿಯಲ್ಲಿ ಸರ್ಕಾರದ ಶಕ್ತಿ ಯೋಜನೆಗೆ ಭರ್ಜರಿ ಬೆಂಬಲ ವ್ಯಕ್ತವಾಗಿದೆ. ಈ ಯೋಜನೆ ಜಾರಿ ಆದಾಗಿನಿಂದ ಮಹಿಳೆಯರು ರೈಲು, ಖಾಸಗಿ ಬಸ್‌ಗಳನ್ನು ಬಿಟ್ಟು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಹಾಗಾದರೆ ಜೂನ್ 11ರಿಂದ 18ರವರೆಗೂ ಎಷ್ಟು ಜನ ಮಹಿಳೆಯರು ಪ್ರಯಾಣ ಮಾಡಿದ್ದಾರೆ ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ಹೀಗೆ ದಿನ ಕಳೆದಂತೆ ಸರ್ಕಾರಿ ಬಸ್‌ಗಳ ಮೆಟ್ಟಿಲು ಹತ್ತುವ ಮಹಿಳೆಯರ ಸಂಖ್ಯೆ ಜಾಸ್ತಿಯಾಗಿದೆ. ಹಾಗೆಯೆ ಮಂಗಳೂರು ವಿಭಾಗದ ಕೆಎಸ್‌ಆರ್‌ಟಿಸಿಯಲ್ಲಿ ಎರಡು ವಲಯ ಅಂದರೆ ಕುಂದಾಪುರ, ಉಡುಪಿ ವಲಯ ಬರಲಿದೆ. ಈ ಎಲ್ಲಾ ವಲಯಗಳಲ್ಲಿ ಶಕ್ತಿ ಯೋಜನೆಯ ಲಾಭವನ್ನು ಮಹಿಳೆಯರು ಭರಪೂರ ಪಡೆದುಕೊಳ್ಳುತ್ತಿದ್ದಾರೆ.
1. ಜೂನ್ 11ರಂದು ಮೊದಲ ಅರ್ಧ ದಿನದಲ್ಲಿ ಈ ನಾಲ್ಕು ವಲಯಗಳಲ್ಲಿ 5,454 ಮಂದಿ ಮಹಿಳೆಯರು ಬಸ್ ಪ್ರಯಾಣ ಮಾಡಿದ್ದಾದ್ದು, ಇವರಿಂದ ಕೆಎಸ್‌ಆರ್‌ಟಿಸಿಗೆ ಮೊದಲ ಅರ್ಧ ದಿನದಲ್ಲೇ 1,90,155 ರೂಪಾಯಿ ಆದಾಯ ಬಂದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
2. ಜೂನ್ 12ರ ಇಡೀ ದಿನ ಮಂಗಳೂರು ವಿಭಾಗದಲ್ಲಿ 30,404 ಮಂದಿ ಮಹಿಳೆಯರು ಸರ್ಕಾರಿ ಬಸ್‌ನಲ್ಲಿ ಪ್ರಯಾಣಿಸಿದ್ದು, ಇವರಿಂದ ಕೆಎಸ್ಆರ್‌ಟಿಸಿಗೆ ಬಂದ ಆದಾಯ 12,31,753 ರೂಪಾಯಿ ಆಗಿದೆ.
Shakti Scheme Effect: ಬೆಂಗಳೂರು-ಮೈಸೂರು ಪ್ರೀಮಿಯಂ ಬಸ್‌ಗಳಿಗೆ ಪ್ರಯಾಣಿಕರ ನಷ್ಟ ಎಷ್ಟು ಗೊತ್ತೇ?
3. ಜೂನ್ 13ರಂದು ಮಹಿಳಾ ಪ್ರಯಾಣಿಕರ ಸಂಖ್ಯೆ ದುಪ್ಪಟ್ಟಾಗಿದೆ. ಈ ದಿನ ಒಟ್ಟು 48,722 ಮಹಿಳೆಯರು ಪ್ರಯಾಣಿಸಿದ್ದು, ಇವರಿಂದ ಕೆಎಸ್‌ಆರ್‌ಟಿಸಿಗೆ 17,79,720ರೂಪಾಯಿ ಆದಾಯ ಬಂದಿದೆ ಎಂದು ತಿಳಿದುಬಂದಿದೆ.
4. ಜೂನ್ 14 ರಂದು ಮಹಿಳಾ ಪ್ರಯಾಣಿಕರ ಸಂಖ್ಯೆ ಐವತ್ತು ಸಾವಿರದ ಗಡಿ ದಾಟಿದೆ..ಒಟ್ಟು 57,329 ಮಹಿಳಾ ಪ್ರಯಾಣಿಕರು ಸರ್ಕಾರಿ ಬಸ್ ನಲ್ಲಿ ಪ್ರಯಾಣಿಸಿದ್ದು,20,21,008ರೂಪಾಯಿ ಆದಾಯ ಜೂನ್ 14 ರಂದು ಕೆ.ಎಸ್.ಆರ್.ಟಿ.ಸಿ ಪಾಲಾಗಿದೆ..
5. ಜೂನ್ 15 ರಂದು 61,244 ಮಂದಿ ಮಹಿಳಾ ಪ್ರಯಾಣಿಕರು ಸರ್ಕಾರಿ ಬಸ್‌ನಲ್ಲಿ ಪ್ರಯಾಣಿಸಿದ್ದು, ಇದರಿಂದ ಕೆಎಸ್‌ಆರ್‌ಟಿಸಿಗೆ 21,13,824 ರೂಪಾಯಿ ಆದಾಯ ಹರಿದುಬಂದಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.
6. ಜೂನ್ 16ರಂದು ಮಹಿಳಾ ಪ್ರಯಾಣಿಕರ ಸಂಖ್ಯೆ ಮತ್ತಷ್ಟು ಜಾಸ್ತಿಯಾಗಿದೆ. ಒಟ್ಟು,63,715 ಮಹಿಳೆಯರು ಸರ್ಕಾರಿ ಬಸ್‌ನಲ್ಲಿ ಪ್ರಯಾಣಿಸಿದ್ದು, ಇವರಿಂದ 21,94,459 ರೂಪಾಯಿ ಆದಾಯ ಹರಿದುಬಂದಿದೆ.
7. ಇನ್ನು ಜೂನ್ 17ರಂದು ದಾಖಲೆಯ ಸಂಖ್ಯೆಯಲ್ಲಿ ಮಹಿಳಾ ಪ್ರಯಾಣಿಕರು ಸಂಚಾರ ಮಾಡಿದ್ದಾರೆ. ಒಟ್ಟು 67,298 ಮಂದಿ ಮಹಿಳಾ ಪ್ರಯಾಣಿಕರು ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸಿದ್ದು,ಇದರಿಂದ 24,20,509 ರೂಪಾಯಿ ಆದಾಯ ಸಂಗ್ರಹವಾಗಿದೆ.
8. ಜೂನ್ 18ರಂದು 51,763 ಮಂದಿ ಮಹಿಳೆಯರು ಸರ್ಕಾರಿ ಬಸ್‌ನಲ್ಲಿ ಉಚಿತ ಪ್ರಯಾಣ ಮಾಡಿದ್ದು, ಈ ದಿನ ಕೆಎಸ್‌ಆರ್‌ಟಿಸಿ 24,16,191 ರೂಪಾಯಿ ಆದಾಯವನ್ನು ಬಾಚಿಕೊಂಡಿದೆ.
ಇನ್ನು ಕೆಎಸ್‌ಆರ್‌ಟಿಸಿ ಭರಪೂರ ಆದಾಯ ಗಳಿಸುತ್ತಿದ್ದು, ಕರಾವಳಿಯ ಮಹಿಳೆಯರು ಅತೀ ಹೆಚ್ಚಾಗಿ ಸರ್ಕಾರಿ ಬಸ್ ಬಳಸುತ್ತಿರೋದು ಕೆ.ಎಸ್.ಆರ್.ಟಿ.ಸಿಯ ಆದಾಯ ಏರಿಕೆಯಲ್ಲೇ ಕಂಡುಬಂದಿದೆ. ಒಂದು ವಾರದ ಉಚಿತ ಪ್ರಯಾಣದ ವೆಚ್ಚ ಒಂದು ಕೋಟಿ ಐವತ್ತು ಲಕ್ಷ ರೂಪಾಯಿ ಸರ್ಕಾರದಿಂದ ಕೆಎಸ್ಆರ್‌ಟಿಸಿಗೆ ಬರಬೇಕಾಗಿದೆ.
ಶಕ್ತಿ ಯೋಜನೆಯಿಂದ ಸರ್ಕಾರಿ ಬಸ್‌ಗಳು ಫುಲ್ ರಷ್ ಆಗಿ ಓಡಾಡುತ್ತಿದೆ. ಶೇಕಡಾ 85% ಮಹಿಳಾ ಪ್ರಯಾಣಿಕರಿಂದ ಸರ್ಕಾರಿ ಬಸ್‌ಗಳು ತುಂಬುತ್ತಿದ್ದು, ಪ್ರತಿ ದಿನ ಸರಾಸರಿ 50,000 ಮಹಿಳೆಯರು ಬಸ್‌ಗಳಲ್ಲಿ ಪ್ರಯಾಣ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಕೆಎಸ್‌ಆರ್‌ಟಿಸಿಗೆ ಪ್ರತಿ ದಿನ 25 ಲಕ್ಷ ರೂಪಾಯಿ ಆದಾಯ ಬರುತ್ತಿದೆ. ಹಾಗೆತೇ ಮಂಗಳೂರು ವಿಭಾಗದಲ್ಲಿ 303 ಸರ್ಕಾರಿ ಬಸ್‌ಗಳು ಪ್ರತಿದಿನ ಉಚಿತ ಸೇವೆ ಕೊಡುತ್ತಿದೆ. ಈ ಹಿಂದೆ ಖಾಸಗಿ ಬಸ್‌ಗಳು ಫುಲ್ ರಷ್ ಆಗಿ ಉಳಿದ ಪ್ರಯಾಣಿಕರು ಸರ್ಕಾರಿ ಬಸ್‌ನಲ್ಲಿ ಬರುತ್ತಿದ್ದರು. ಆದರೆ ಈಗ ಸರ್ಕಾರಿ ಬಸ್‌ಗಳು ಕೂಡ ಫುಲ್ ಆಗಿ ಉಳಿದ ಪ್ರಯಾಣಿಕರು ಖಾಸಗಿ ಬಸ್‌ಗಳಿಗೆ ಹೋಗುತ್ತಿದ್ದಾರೆ ಎಂದು ಮಂಗಳೂರು ವಿಭಾಗ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಹೇಳಿದ್ದಾರೆ.
English summary
Shakti Scheme: Total Women Passengers traveled in Mangaluru KSRTC Division From 11th to 18th June and Income details,
Story first published: Monday, June 19, 2023, 18:18 [IST]