ಮಂಗಳೂರು-ಓವರ್ ಪಾಸ್ ನಿರ್ಮಾಣಕ್ಕೆ ಆರುನೂರು ಮರಗಳ ಮಾರಣಹೋಮಕ್ಕೆ ಸಿದ್ಧತೆ | Preparation For Cut Of Six Hundred Trees For Mangaluru Over Pass

Mangaluru

lekhaka-Kishan Kumar

By ಮಂಗಳೂರು ಪ್ರತಿನಿಧಿ

|

Google Oneindia Kannada News

ಮಂಗಳೂರು, ಜುಲೈ 20: ರಸ್ತೆ ಅಭಿವೃದ್ಧಿ ನೆಪದಲ್ಲಿ ವೃಕ್ಷಗಳು ಧರೆಗುರುತ್ತಲೇ ಇರುತ್ತದೆ. ನೂರಾರು ವರ್ಷಗಳಿಂದ ಬೆಳೆದ ಮರಗಳು ರಸ್ತೆ ಅಗಲೀಕರಣದಡಿಯಲ್ಲಿ ಸಮಾಧಿಯಾಗುತ್ತಿರುತ್ತದೆ. ಆದರೆ ಬೆಕ್ಕಿಗೆ ಗಂಟೆಕಟ್ಟುವವರು ಯಾರು? ಎಂಬಂತೆ ಕಡಿದ ಮರಗಳಿಗೆ ಪರ್ಯಾಯವಾಗಿ ಮತ್ತೆ ಗಿಡಗಳನ್ನು ನೆಡುವವರು ಯಾರು ಅನ್ನೋದೆ ಪರಿಸರಪ್ರಿಯರಿಗೆ ಎದುರಾದ ಯಕ್ಷಪ್ರಶ್ನೆಯಾಗಿದೆ.

ನಾವೀಗ ಅಭಿವೃದ್ಧಿಯ ಯುಗದಲ್ಲಿದ್ದೇವೆ. ಕಾಂಕ್ರಿಟ್ ಕಾಡಿನೊಳಗಿರುವ ನಮಗೆ ಪ್ರಕೃತಿದತ್ತ ಹಸಿರು ಗಿಡಮರಗಳು ಬೇಡವಾಗಿದೆ. ಪರಿಸರಪ್ರೇಮಿಗಳು ಮರ ಕಡಿಯುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದರೂ, ಅದಕ್ಕೆ ಕ್ಯಾರೇ ಎನ್ನದೆ ರಾಜ್ಯ ಸರಕಾರ, ಅಧಿಕಾರಿಗಳು ಅಭಿವೃದ್ಧಿ ಹೆಸರಿನಲ್ಲಿ ಮರಗಳ ಬುಡ ಉರುಳಿಸುತ್ತಲೇ ಇದೆ.

Six Hundred Trees

ಇದೀಗ ಎನ್ಎಚ್ಐ ವಾಹನ ದಟ್ಟಣೆ ನಿಯಂತ್ರಣಕ್ಕೆ ನಂತೂರು ಜಂಕ್ಷನ್‌ ಎಂದು ಕೆಪಿಟಿ ಜಂಕ್ಷನ್‍ವೆರೆಗೆ 1.6 ಕಿ.ಮೀ ವ್ಯಾಪ್ತಿಯಲ್ಲಿ ವೆಹಿಕ್ಯುಲರ್ ಓವರ್ ಪಾಸ್ 602 ಮರಗಳನ್ನು ತೆರವುಗೊಳಿಸಲು ಗುರುತಿಸಲಾಗಿದೆ. ಇವುಗಳಲ್ಲಿ 370 ಮರಗಳನ್ನು ಸ್ಥಳಾಂತರಿಸಬಹುದು. ಇನ್ನುಳಿದಂತೆ 232 ಮರಗಳನ್ನು ಕಡಿಯಲೇಬೇಕಾದ ಅನಿವಾರ್ಯತೆಯಿದೆ ಎಂದು ಹೇಳಲಾಗಿದೆ.

 ಮಂಗಳೂರು: ಚಪ್ಪಲಿ ಕಳುವಾಗಿದ್ದಕ್ಕೆ 112ಕ್ಕೆ ಕರೆ ಮಾಡಿ ದೂರು ನೀಡಿದ ವಾರಸುದಾರ, ಮುಂದೇನಾಯ್ತು ನೋಡಿ ಮಂಗಳೂರು: ಚಪ್ಪಲಿ ಕಳುವಾಗಿದ್ದಕ್ಕೆ 112ಕ್ಕೆ ಕರೆ ಮಾಡಿ ದೂರು ನೀಡಿದ ವಾರಸುದಾರ, ಮುಂದೇನಾಯ್ತು ನೋಡಿ

ಪರಸರ ಪ್ರೇಮಿಗಳಿಂದ ಇದಕ್ಕೆ ವಿರೋಧ ವ್ಯಕ್ತವಾಗಿದೆ‌. ಅಭಿವೃದ್ಧಿ ಕಾರ್ಯಕ್ಕೆ ತಮ್ಮದೇನು ತಕರಾರು ಇಲ್ಲ. ಆದರೆ ಪದೇಪದೇ ಅಭಿವೃದ್ಧಿ ನೆಪದಲ್ಲಿ ಮರಗಳ ಮಾರಣಹೋಮವೇಕೆ. ಈಗಾಗಲೇ ಭೂಮಿಯ ತಾಪಮಾನ ಏರಿಕೆಯಾಗುತ್ತಿದೆ‌. ಅತಿವೃಷ್ಟಿ, ಅನಾವೃಷ್ಟಿಗಳಿಂದ ಜನರು ಕಂಗಾಲಾಗಿದ್ದಾರೆ. ಆದರೆ ಅಧಿಕಾರಿಗಳು, ಸರಕಾರ ಮಾತ್ರ ವಾಸ್ತವಾಂಶಗಳನ್ನು ಅರಿಯದೆ, ಅಧ್ಯಯನ ನಡೆಸದೆ ಬೀರಿ ಅಭಿವೃದ್ಧಿಯ ಜಪ ಮಾಡುತ್ತಿದ್ದಾರೆ.

Six Hundred Trees

ಮರಗಿಡಗಳನ್ನು ಉಳಿಸಿ ಅಭಿವೃದ್ಧಿ ಕಾರ್ಯ ಮಾಡಲು ಸಾಧ್ಯವಿಲ್ಲವೇ. ಅದಕ್ಕೆ ಇಚ್ಛಾಶಕ್ತಿ ಬೇಕು. ಕಲ್ಲಡ್ಕದಲ್ಲಿ ಮಸೀದಿ, ಮಂದಿರಗಳನ್ನು ಉಳಿಸಿ ರಸ್ತೆ ಅಭಿವೃದ್ಧಿ ಮಾಡಲು ಸಾಧ್ಯವಿದೆ ಎನ್ನುವುದಾದಲ್ಲಿ ಕೆಪಿಟಿಯಲ್ಲೂ ಆ ಪ್ರಯತ್ನವಾಗಲಿ ಎಂಬುದು ಪರಿಸರ ಪ್ರೇಮಿಗಳ ಆಗ್ರಹ.

ಪರ್ಯಾಯ ಮೇಲ್ಸೇತುವೆಯ ಬಗ್ಗೆ ಪರಿಸರ ಪ್ರೇಮಿಗಳ ಸಲಹೆ ಬೆನ್ನಲ್ಲೇ ಯೋಜನೆಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಆದರೆ ಅದು ಪ್ರಸಕ್ತ ಯೋಜನೆಗಿಂತ ಅಧಿಕ ವೆಚ್ಚದಾಯಕವೆಂದು ಎನ್‌ಎಚ್ ಎಐ ಅಧಿಕಾರಿಗಳು ವಾದ. ಆದರೆ ಮಂಗಳೂರಿನ ಸೂಕ್ಷತೆಯನ್ನು ಗಮನದಲ್ಲಿರಿಸಿ ವೆಚ್ಚ ಹೆಚ್ಚಾದರೂ ಮರಗಳನ್ನು ಉಳಿಸಿ ವರ್ಟಿಕಲ್ ಹೈವೇ ನಿರ್ಮಾಣದ ಅಗತ್ಯವಿದೆ ಎಂದು ಪರಿಸರ ಸ್ನೇಹಿಗಳು ಆಗ್ರಹಿಸಿದ್ದಾರೆ..

Six Hundred Trees

ಎನ್ಎಚ್ಎಐಯವರಿಂದ ಈಗಿನ ಯೋಜನೆಯ ಡಿಪಿಆರ್ ಪಡೆದು ಪಡೆದು ಪರಿಶೀಲನೆ ನಡೆಸಲು ನಿರ್ಧರಿಸಲಾಗಿದೆ. ಈಗಿನ ಮಟ್ಟದಿಂದ ಸುಮಾರು 7.5 ಅಡಿಯಷ್ಟು ಹೆದ್ದಾರಿಯನ್ನು ಅಗೆದು ತಳಮಟ್ಟದಲ್ಲಿ ಕೊಂಡೊಯ್ಯಲಾಗುವುದು, ಕೆಪಿಟಿ ಜಂಕ್ಷನ್ ಹಾಗೂ ನಂತೂರು ಜಂಕ್ಷನ್‌ಗಳಲ್ಲಿ ವಾಹನ ಮೇಲೇತುವೆ ಬರಲಿದೆ. ಇದು ಒಟ್ಟು 40 ಕೋಟಿ ರೂ. ಯೋಜನೆಯಾಗಿದೆ.

ರಸ್ತೆ ಅಭಿವೃದ್ಧಿ ಕಾಮಗಾರಿಗೆ ತಮ್ಮದೇನು ತಕರಾರಿಲ್ಲ. ಆದರೆ ಸಾಧ್ಯವಾದಷ್ಟು ಮರಗಳನ್ನು ಉಳಿಸಿ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಸುವಂತೆ ಪರಿಸರ ಪ್ರೇಮಿಗಳು ಎನ್ಎಚ್ಐ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಅಭಿವೃದ್ಧಿಗೆ ವಿರೋಧ ವ್ಯಕ್ತಪಡಿಸಿಲ್ಲ. ಆದರೆ ಅಭಿವೃದ್ಧಿಗೆ ಮರಗಳ ಬುಡಕ್ಕೆ ಕೊಡಲಿಯೇಟು ಬೇಡ‌. ಓವರ್ ಪಾಸ್ ನಿರ್ಮಾಣಕ್ಕೆ ಮರಗಳನ್ನು ಉಳಿಸಿ ಪರಿಸರ ಪ್ರೇಮಿಗಳೇ ಸೇರಿ ಪ್ಲ್ಯಾನ್ ಮಾಡಿದ್ದೇವೆ. ಅದನ್ನು ತಾವು ಪರಿಗಣಿಸಬಹುದಲ್ಲ ಎಂದು ಪರಿಸರ ಪ್ರೇಮಿಗಳು ಹೇಳಿದ್ದಾರೆ.

English summary

Preparation for cut of six hundred trees for the construction of Mangaluru over pass. Know more.

Story first published: Thursday, July 20, 2023, 20:58 [IST]

Source link