Mangaluru
lekhaka-Kishan Kumar
ಮಂಗಳೂರು, ಜೂನ್ 22: ನಿಮಗೆ ಹಣದ ಅವಶ್ಯಕತೆ ಇದೆಯೇ..? ಸದ್ಯದ ದುಡಿಮೆ ಸಾಲುತ್ತಿಲ್ಲವೇ? ಮತ್ತಷ್ಟು ಸಂಪಾದನೆಗಾಗಿ ಕಾಯುತ್ತೀದ್ದೀರಾ? ನಿಮಗೆ ಕೆಲಸದ ಅವಶ್ಯಕತೆ ಇದೆಯೇ? ಪಾರ್ಟ್ ಟೈಮ್ ಕೆಲಸದಲ್ಲಿಯೇ ಪ್ರತಿ ನಿತ್ಯ 5ರಿಂದ 8 ಸಾವಿರ ರೂಪಾಯಿ ಗಳಿಸಬಹುದು, ಹೀಗೆ ಹೇಳಿಕೊಂಡು ಜನರನ್ನು ಮೋಸದ ಬಲೆಗೆ ಬೀಳಿಸಲು ಕೆಲವು ಆನ್‌ಲೈನ್ ವಂಚಕರು ಬಾಯ್ತೆರೆದು ಕುಳಿತಿದ್ದಾರೆ.
ಇತ್ತೀಚಿಗೆ ಆನ್‌ಲೈನ್ ಪಾರ್ಟ್ ಟೈಮ್ ಕೆಲಸದ ಹೆಸರಿನಲ್ಲಿ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮಂಗಳೂರಿನಂತಹ ನಗರದಲ್ಲಿ ಇಂತಹ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದೆ ಎಂದು ವರದಿಯಾಗಿದೆ. ಈ ವರ್ಷದ ಅಂದರೆ 2023ರ ಜನವರಿಯಿಂದ ಮಂಗಳೂರು ನಗರದಲ್ಲಿ ಸಿಇಎನ್ ಪೊಲೀಸ್ ಠಾಣೆಯಲ್ಲಿ 27 ಪಾರ್ಟ್ ಟೈಮ್ ಜಾಬ್ ವಂಚನೆ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ವಂಚಕರು ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ಜನರನ್ನು ಸಂಪರ್ಕಿಸಿ, ಹೆಚ್ಚು ಹಣ ಸಂಪಾದಿಸಲು ಅವಕಾಶ ನೀಡುವ ನೆಪದಲ್ಲಿ ವಂಚಿಸುತ್ತಿದ್ದಾರೆ. ಪಾರ್ಟ್ ಟೈಮ್ ಕೆಲಸ ಕೊಟ್ಟು ಉತ್ತಮ ಸಂಬಳ ನೀಡುವುದಾಗಿ ನಂಬಿಸಿ, ಬಳಿಕ ಈ ವೆಬ್‌ಸೈಟ್ ಅಥವಾ ಲಿಂಕ್ ಅನ್ನು ಕ್ಲಿಕ್ ಮಾಡಿ, ಅಥವಾ ಮೊದಲು ಅಲ್ಪ ಮೊತ್ತ ಪಾವತಿಸಿ ಎನ್ನುವ ಮೂಲಕ ವಂಚನೆ ಮಾಡುತ್ತಾರೆ.
ವಂಚಕರು ಮೊದಲು ಸಂತ್ರಸ್ತರ ನಂಬಿಕೆ ಗಿಟ್ಟಿಸಿಕೊಳ್ಳಲು ಮೊದಲು ಅವರು ಹೇಳಿದಂತೆ ನಡೆದುಕೊಳ್ಳುತ್ತಾರೆ. ಆ ಬಳಿಕ ಸಂತ್ರಸ್ತನಿಂದ ದೊಡ್ಡ ಮೊತ್ತ ಪಾವತಿಸಿಕೊಂಡು. ಆತನಿಗೆ ಕೆಲಸವೂ ನೀಡದೇ, ಹಣವೂ ನೀಡದೇ ವಂಚನೆ ಮಾಡಿ ಕಣ್ಮರೆಯಾಗುತ್ತಾರೆ. ಈ ಎಲ್ಲಾ ವ್ಯವಹಾರಗಳು ಆನ್‌ಲೈನ್‌ನಲ್ಲಿ ನಡೆಯುತ್ತದೆ. ವಂಚಕರು ವ್ಯಕ್ತಿಯ ಅಗತ್ಯತೆಯನ್ನು ಅರಿತು ಅದರ ಮೇಲೆ ಹೊಸ ತಂತ್ರ ರೂಪಿಸಿ ಅವರನ್ನು ಬಲೆಗೆ ಬೀಳಿಸಿಕೊಳ್ಳುತ್ತಾರೆ.
ನನ್ನ ಬಂಧನ ರಾಜಕೀಯ ಪಿತೂರಿ ಎಂದ ಪಿಎಂಒ ಅಧಿಕಾರಿಯಂತೆ ಪೋಸ್ ಕೊಟ್ಟ Gujarat ವಂಚಕ
ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಕುಲದೀಪ್ ಆರ್ ಜೈನ್ ತಿಳಿಸಿದ್ದು’ ವಂಚಕರು ಈ ಹಿಂದೆ ಮಾಡುತ್ತಿದ್ದ ಐಡಿಯಾಗಳ ಬಗ್ಗೆ ಜನರಿಗೆ ತಿಳಿದಿದೆ. ಹೀಗಾಗಿ ಅಷ್ಟು ಬೇಗ ಮೋಸ ಹೋಗುವುದಿಲ್ಲ. ಆದರೆ ಇದನ್ನು ಅರಿತಿರುವ ವಂಚಕರು ಜನರನ್ನು ಆಕರ್ಷಿಸಲು ಹೊಸ ಹೊಸ ತಂತ್ರಗಳನ್ನು ರೂಪಿಸುತ್ತಿದ್ದಾರೆ. ಹಳೆಯ ವಿಧಾನಗಳನ್ನು ಬಿಟ್ಟು ಟೆಲಿಗ್ರಾಮ್ ಹಾಗೂ ಇ-ಮೇಲ್‌ಗಳಲ್ಲಿ ಆನ್‌ಲೈನ್ ಪಾರ್ಟ್ ಟೈಮ್ ಜಾಬ್ ಆಫರ್‌ಗಳನ್ನು ನೀಡುತ್ತಿದ್ದಾರೆ. ಇದುವರೆಗೆ ಓರ್ವ ಸಂತ್ರಸ್ತ ಸರಾಸರಿ 40,000-50,000 ಸಾವಿರ ರೂಪಾಯಿ ಹಣ ಕಳೆದುಕೊಂಡಿದ್ದಾರೆ’ ಎಂದು ತಿಳಿಸಿದ್ದಾರೆ.
ಮಾತು ಮುಂದುವರಿಸಿದ ಅವರು, ನಗರದಲ್ಲಿ ಇನ್ನೂ ಅನೇಕ ಪ್ರಕರಣಗಳು ವರದಿಯಾಗಿಲ್ಲ. ಹೆಚ್ಚು ಜನರು ದೂರು ನೀಡಲು ಹಿಂಜರಿಯುತ್ತಿರುವ ಕಾರಣ ಅನೇಕ ಪ್ರಕರಣಗಳು ಇನ್ನು ವರದಿಯಾಗಿಲ್ಲ. ಕೆಲವರು ವಂಚಕರಿಗೆ ಹಣ ನೀಡುವುದನ್ನು ನಿಲ್ಲಿಸಿದ್ದಾರೆ. ಆದರೆ ದೂರು ನೀಡಲು ನಿರ್ಧರಿಸಿದ್ದಾರೆ. ಈ ರೀತಿಯ ಪ್ರಕರಣಗಳು ಸಾಮಾನ್ಯವಾಗಿರುತ್ತದೆ. ಸಂತ್ರಸ್ತರು ನಾಚಿಕೆ ಪಟ್ಟುಕೊಳ್ಳದೇ ದೂರು ದಾಖಲಿಸಬೇಕು. ಸದ್ಯ ಅಂಕಿ ಅಂಶಗಳು ನಿಖರವಾಗಿಲ್ಲ ಆದರೆ ಸಮಸ್ಯೆ ದೊಡ್ಡದಾಗಿದೆ’ ಎಂದಿದ್ದಾರೆ.
ಮಂಗಳೂರು ಸಿಇಎನ್ ಪೊಲೀಸ್ ಠಾಣೆಯಲ್ಲಿ ಜನವರಿಯಿಂದ ಈವರೆಗೆ 117 ಪ್ರಕರಣಗಳು ದಾಖಲಾಗಿದ್ದು, 27 ಪಾರ್ಟ್ ಟೈಮ್ ಜಾಬ್ ಪ್ರಕರಣ, 14 ಗ್ರಾಹಕರು ಸೇವೆ ವಂಚನೆ ಪ್ರಕರಣ, ಹಾಗೂ 11 ಕೆವೈಸಿ ಪ್ರಕರಣಗಳು ಹಾಗೂ ಸಾಮಾಜಿಕ ಜಾಲತಾಣದಲ್ಲಿ ವಂಚನೆ ಪ್ರಕರಣಗಳು ದಾಖಲಾಗಿವೆ ಎಂದು ವರದಿಯಾಗಿದೆ.
English summary
The Mangaluru city is witnessing a rise in part-time job scams in the last few months. Know more
Story first published: Thursday, June 22, 2023, 12:54 [IST]