ಭೋರ್ಗರೆಯುತ್ತಿದೆ ಸಿರಿಮನೆ ಜಲಪಾತ: ಹೋಗುವುದು ಹೇಗೆ, ಸಮಯ, ವಿವರ ಇಲ್ಲಿದೆ | Sirimane Falls: Timings, Travel Guide to Visit Beautifull Falls

Travel

oi-Naveen Kumar N

|

Google Oneindia Kannada News

ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು ನದಿ, ಹೊಳೆಗಳು ಮೈದುಂಬಿಕೊಳ್ಳುತ್ತಿವೆ. ಪರಿಣಾಮವಾಗಿ ಈ ಭಾಗದ ಜಲಪಾತಗಳಿಗೆ ಜೀವಕಳೆ ಬಂದಿದ್ದು, ಧುಮ್ಮಿಕ್ಕಿ ಹರಿಯುತ್ತಿವೆ. ಸಿರಿಮನೆ ಜಲಪಾತ ಕೂಡ ಭೋರ್ಗರೆಯುತ್ತಿದ್ದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ಪಶ್ಚಿಮ ಘಟ್ಟಗಳಲ್ಲಿರುವ ಅನೇಕ ಸುಂದರ ಜಲಪಾತಗಳಲ್ಲಿ ಸಿರಿಮನೆ ಜಲಪಾತ ಕೂಡ ಒಂದಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಸಮೀಪದ ಕಿಗ್ಗದಿಂದ 5 ಕಿ.ಮೀ ದೂರದಲ್ಲಿದೆ. ಶೃಂಗೇರಿಯಿಂದ 18 ಕಿಮೀ ದೂರದಲ್ಲಿ ಈ ಜಲಪಾತ ಇದ್ದು ನಯನ ಮನೋಹರವಾಗಿದೆ.

Sirimane Falls

40 ಅಡಿ ಎತ್ತರದಿಂದ ಧುಮ್ಮಿಕ್ಕುವ ಸಿರಿಮನೆ ಜಲಪಾತ ಪ್ರವಾಸಿಗರನ್ನು ಸೆಳೆಯುತ್ತದೆ. ಜಲಪಾತದ ಬುಡದಲ್ಲಿ ಆಳ ಕೂಡ ಕಡಿಮೆ ಇರುವುದರಿಂದ ಪ್ರವಾಸಿಗರು ಸ್ನಾನ ಮಾಡಲು ಅವಕಾಶ ನೀಡಲಾಗುತ್ತದೆ. ಆದರೆ ಮಳೆ ಹೆಚ್ಚಾಗಿ ಅಪಾಯ ಮಟ್ಟದಲ್ಲಿ ಜಲಪಾತ ಹರಿಯುವಾಗ ಪ್ರವೇಶ ನೀಡುವುದಿಲ್ಲ. ಶೃಂಗೇರಿ, ಹೊರನಾಡು ದೇವಸ್ಥಾನಗಳಿಗೆ ಭೇಟಿ ನೀಡುವ ಭಕ್ತರು ಸಿರಿಮನೆ ಜಲಪಾತಕ್ಕೆ ಭೇಟಿ ನೀಡಬಹುದು.

ಸಿರಿಮನೆ ಜಲಪಾತಕ್ಕೆ ನೀವು ಪ್ರಯಾಣಿಸಲು ನಿಗದಿತ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಮಾತ್ರ ಜಲಪಾತ ವೀಕ್ಷಣೆಗೆ ಅವಕಾಶ ನೀಡಲಾಗುತ್ತದೆ. ಈ ಸಮಯದೊಳಗೆ ಹೋದರೆ ಮಾತ್ರ ನೀವು ಜಲಪಾತವನ್ನು ನೋಡಬಹುದಾಗಿದೆ.

ಸಿರಿಮನೆ ಜಲಪಾತಕ್ಕೆ ಹೋಗುವುದು ಹೇಗೆ?

ಬೆಂಗಳೂರಿನಿಂದ ಶೃಂಗೇರಿಗೆ 320 ಕಿಲೋ ಮೀಟರ್ ದೂರವಿದ್ದು ಕೆಎಸ್‌ಆರ್ ಟಿಸಿ ಬಸ್ ವ್ಯವಸ್ಥೆ ಇರುತ್ತದೆ. ಸ್ವಂತ ವಾಹನದಲ್ಲಿ ಹೋಗುವವರು ಶೃಂಗೇರಿಗೆ ತೆರಳಿ ಅಲ್ಲಿಂದ ತೆರಳಬಹುದು. ಮಂಗಳೂರು ವಿಮಾನ ನಿಲ್ದಾಣ ಇಲ್ಲಿಗೆ 111 ಕಿ.ಮೀ ದೂರದಲ್ಲಿದೆ. ವಮೊಗ್ಗ, ಆಗುಂಬೆ, ತೀರ್ಥಹಳ್ಳಿ ಮತ್ತಿತರ ನಗರಗಳಿಂದ ಶೃಂಗೇರಿ ತಲುಪಲು ಬಸ್ಸುಗಳು ಸಿಗುತ್ತವೆ. ಶಿವಮೊಗ್ಗ ರೈಲು ನಿಲ್ದಾಣಕ್ಕೆ ಜಲಪಾತಕ್ಕೆ ಸಮೀಪದ ನಿಲ್ದಾಣವಾಗಿದೆ. ಇದು ಶೃಂಗೇರಿಯಿಂದ 90 ಕಿ.ಮೀ ದೂರದಲ್ಲಿದೆ. ಶೃಂಗೇರಿಯಲ್ಲಿ ತಂಗಲು ಪ್ರವಾಸಿಗರಿಗೆ ವ್ಯವಸ್ಥೆ ಇದೆ.

ಮಾನ್ಸೂನ್‌ ಋತುವಿನಲ್ಲಿ ಪ್ರವಾಸ ಮಾಡಬಹುದಾದ ಕರ್ನಾಟಕದ 5 ಉತ್ತಮ ಪ್ರವಾಸಿ ತಾಣಗಳು ಮಾನ್ಸೂನ್‌ ಋತುವಿನಲ್ಲಿ ಪ್ರವಾಸ ಮಾಡಬಹುದಾದ ಕರ್ನಾಟಕದ 5 ಉತ್ತಮ ಪ್ರವಾಸಿ ತಾಣಗಳು

ಶೃಂಗೇರಿಯಿಂದ ಕಿಗ್ಗಾ ಹಳ್ಳಿಯವರೆಗೆ ಬಸ್‌ಗಳ ಸೇವೆ ಇದೆ, ಟ್ಯಾಕ್ಸಿ, ಆಟೋ ಬಳಸಿ ಕೂಡ ಪ್ರಯಾಣ ಮಾಡಬಹುದು. ಕಿಗ್ಗಾದಿಂದ ಚಾರಣ ಮಾಡುವ ಮೂಲಕ ಕೂಡ ಜಲಪಾತದ ಸಮೀಪಕ್ಕೆ ತೆರಳಬಹುದು. ಟ್ಯಾಕ್ಸಿ, ಆಟೋ ಸೇವೆ ಕೂಡ ಲಭ್ಯವಿರುತ್ತದೆ.

ಜಲಪಾತಕ್ಕೆ ತೆರಳುವಾಗ ಕಾಫಿ ತೋಟಗಳು, ಭತ್ತದ ಗದ್ದೆಗಳು, ದಟ್ಟವಾದ ಅರಣ್ಯ ಪ್ರಯಾಣಿಕರ ಮನಸ್ಸಿಗೆ ಮುದ ನೀಡುತ್ತದೆ. ಸಿರಿಮನೆ ಜಲಪಾತ ಮಾತ್ರವಲ್ಲದೆ ಹಲವು ಪ್ರವಾಸಿ ತಾಣಗಳು ಕೂಡ ಇಲ್ಲಿಗೆ ಸಮೀಪದಲ್ಲಿದ್ದು ಭೇಟಿ ನೀಡಬಹುದಾಗಿದೆ.

ಆಗುಂಬೆ ಇಲ್ಲಿಗೆ 41 ಕಿ.ಮೀ. ದೂರದಲ್ಲಿದ್ದು, ಕುಂದಾದ್ರಿ 40 ಕಿ.ಮೀ. ದೂರದಲ್ಲಿದೆ. ಕವಿಶೈಲ 51 ಕಿ.ಮೀ ದೂರದಲ್ಲಿದ್ದು ಆಸಕ್ತರು ಅಲ್ಲಿಗೆ ಭೇಟಿ ನೀಡಬಹುದು. ಮತ್ತೊಂದು ಪ್ರಸಿದ್ಧ ದೇವಾಲಯ ಹೊರನಾಡು ಕೂಡ ಇಲ್ಲಿಂದ 60 ಕಿಮೀ ದೂರದಲ್ಲಿದೆ.

ಪ್ರವಾಸಿಗರಿಗೆ ಮನವಿ

ಇಲ್ಲಿಗೆ ಭೇಟಿ ನೀಡುವ ಪ್ರಯಾಣಿಕರು ಪರಿಸರದ ಬಗ್ಗೆ ಕಾಳಜಿಯನ್ನು ತೋರಿಸಬೇಕಿದೆ. ಪ್ಲಾಸ್ಟಿಕ್ ಬಾಟಲಿಗಳು, ಪೇಪರ್ ಗಳು, ಊಟ, ತಿಂಡಿಯ ಪೊಟ್ಟಣಗಳನ್ನು ಎಲ್ಲೆಂದರಲ್ಲಿ ಎಸೆಯದೇ ಜವಾಬ್ದಾರಿಯಿಂದ ವರ್ತಿಸಬೇಕಿದೆ.

English summary

Sirimane Falls, a tributary of the Tunga River, descends from the Western Ghats ranges near Sringeri in Chikmagalur District of Karnataka. It is situated at a distance of 5 km from Kigga and 15 km from Sringeri. The timings to visit Sirimane Falls are from 9 AM till 6 PM.

Story first published: Sunday, July 9, 2023, 16:14 [IST]

Source link