ದ್ವಿತೀಯ ಪಿಯುಸಿ ಓದುತ್ತಿದ್ದ ಅನುರಾಗ್, ನಿಪುಣ ಟೇಕ್ವಾಂಡೋ ಆಟಗಾರನಾಗಿದ್ದ. 17 ವರ್ಷದ ಈತ ರಾಷ್ಟ್ರಮಟ್ಟದ ಟೂರ್ನಿಗಳಲ್ಲಿ ಪದಕಗಳನ್ನೂ ಗೆದ್ದಿದ್ದಾನೆ. ಅನುರಾಗ್ ಚಂದೌಲಿಯಲ್ಲಿ ನಡೆದ ಇಂಡೋ-ನೇಪಾಳ ಅಂತರಾಷ್ಟ್ರೀಯ ಟೇಕ್ವಾಂಡೋ ಸ್ಪರ್ಧೆಯಲ್ಲಿ ಕಂಚಿನ ಪದಕ, ನೋಯ್ಡಾದಲ್ಲಿ ನಡೆದ ಓಪನ್ ನ್ಯಾಷನಲ್ಸ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ. ಅಕ್ಟೋಬರ್ 30ರ ಬುಧವಾರ ಬೆಳಿಗ್ಗೆ ಅನುರಾಗ್ ತನ್ನ ಮನೆಯ ಹೊರಗೆ ಹಲ್ಲುಜ್ಜುತ್ತಿದ್ದ ವೇಳೆ, ಆತನ ನೆರೆಹೊರೆಯವರು ಮತ್ತು ಆರೋಪಿ ಲಾಲ್ಟಾ ಯಾದವ್ ಹಿಂದಿನಿಂದ ಬಂದು ಕತ್ತಿಯಿಂದ ಬಾಲಕನ ಶಿರಚ್ಛೇದ ಮಾಡಿದ್ದಾನೆ.