ಭೀಮ್‌ ಆರ್ಮಿ ಮುಖ್ಯಸ್ಥನ ಮೇಲೆ ಗುಂಡಿನ ದಾಳಿ: ಶಾಂತಿಗೆ ಕರೆ ನೀಡಿದ ದಲಿತ ನಾಯಕ | Firing on Bhim Army Chandrasekhar Azad: Dalit leader calls for peace

India

oi-Punith BU

|

Google Oneindia Kannada News

ಲಕ್ನೋ, ಜೂನ್ 29: ಆಜಾದ್ ಸಮಾಜ ಪಕ್ಷದ ನಾಯಕ ಮತ್ತು ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಅವರು ಉತ್ತರ ಪ್ರದೇಶದ ಸಹರಾನ್‌ಪುರ ಜಿಲ್ಲೆಯಲ್ಲಿ ಶಸ್ತ್ರಸಜ್ಜಿತ ದಾಳಿಕೋರರಿಂದ ಗುಂಡಿನ ದಾಳಿಗೆ ಒಳಗಾದ ನಂತರ ಶಾಂತಿ ಕಾಪಾಡುವಂತೆ ತಮ್ಮ ಸ್ನೇಹಿತರು ಮತ್ತು ಬೆಂಬಲಿಗರಿಗೆ ಮನವಿ ಮಾಡಿದ್ದಾರೆ.

ಇಂತಹ ಹಠಾತ್ ದಾಳಿಯನ್ನು ನಾನು ನಿರೀಕ್ಷಿಸಿರಲಿಲ್ಲ. ನನ್ನ ಸ್ನೇಹಿತರು, ಬೆಂಬಲಿಗರು ಮತ್ತು ದೇಶಾದ್ಯಂತದ ಕಾರ್ಯಕರ್ತರಲ್ಲಿ ಶಾಂತಿ ಕಾಪಾಡುವಂತೆ ನಾನು ಮನವಿ ಮಾಡಲು ಬಯಸುತ್ತೇನೆ. ನಾವು ನಮ್ಮ ಹೋರಾಟವನ್ನು ಸಾಂವಿಧಾನಿಕವಾಗಿ ಮುಂದುವರಿಸುತ್ತೇವೆ. ಕೋಟ್ಯಂತರ ಜನರ ಪ್ರೀತಿ ಮತ್ತು ಆಶೀರ್ವಾದದಿಂದ ನಾನು ಚೆನ್ನಾಗಿದ್ದೇನೆ ಎಂದು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಆಜಾದ್ ತಿಳಿಸಿದರು.

Firing on Bhim Army Chandrasekhar Azad

ಚಂದ್ರಶೇಖರ್ ಆಜಾದ್ ಅವರು ಈಗ ಚೇತರಿಸಿಕೊಂಡಿದ್ದಾರೆ ಮತ್ತು ಗುರುವಾರ ತಪಾಸಣೆಯ ನಂತರ ಡಿಸ್ಚಾರ್ಜ್ ಆಗಲಿದ್ದಾರೆ. ತನಿಖೆ ಮುಂದುವರಿದಿದ್ದು, ಗುಂಡಿನ ದಾಳಿಯ ಹಿಂದಿನ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.

ಯುಪಿ: ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ರಾವಣ ಮೇಲೆ ಗುಂಡಿನ ದಾಳಿ, ಆಸ್ಪತ್ರೆಗೆ ದಾಖಲುಯುಪಿ: ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ರಾವಣ ಮೇಲೆ ಗುಂಡಿನ ದಾಳಿ, ಆಸ್ಪತ್ರೆಗೆ ದಾಖಲು

ನಾನು ಚಂದ್ರಶೇಖರ್ ಆಜಾದ್ ಅವರನ್ನು ಭೇಟಿಯಾಗಿ ಮಾತನಾಡಿದೆ, ಅವರು ಈಗ ಉತ್ತಮವಾಗಿದ್ದಾರೆ. ಅವರ ವೈದ್ಯರ ಬಳಿಯೂ ನಾನು ಮಾತನಾಡಿದ್ದೇನೆ ಮತ್ತು ಆಜಾದ್ ಅವರ ಆರೋಗ್ಯ ಸ್ಥಿರವಾಗಿದೆ. ತಪಾಸಣೆಯ ನಂತರ ನಾಳೆ ಅವರನ್ನು ಡಿಸ್ಚಾರ್ಜ್‌ ಮಾಡಲಾಗುತ್ತದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ದಾಳಿಯ ಹಿಂದಿನ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಸಹರಾನ್‌ಪುರದ ಎಸ್‌ಪಿ ಅಭಿಮನ್ಯು ಮಾಂಗ್ಲಿಕ್ ಹೇಳಿದ್ದಾರೆ.

ಚಂದ್ರಶೇಖರ್‌ ಆಜಾದ್ ಅವರು ಚಲಿಸುತ್ತಿದ್ದ ಕಾರಿನ ಮೇಲೆ ಬುಧವಾರ ಸಹರಾನ್‌ಪುರ ಜಿಲ್ಲೆಯಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳ ಗುಂಪು ದಾಳಿ ನಡೆಸಿತು. ಬಳಿಕ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಗುಂಡು ಆಜಾದ್‌ ಅವರ ಹೊಟ್ಟೆಯನ್ನು ಹೊಕ್ಕಿದೆ. ಅವರ ಸ್ಥಿತಿ ಸ್ಥಿರವಾಗಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಾರೆ ಮತ್ತು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಎಸ್‌ಎಸ್‌ಪಿ ಡಾ ವಿಪಿನ್ ತಾಡಾ ಹೇಳಿದ್ದಾರೆ.

ಘಟನೆ ಸಂಭವಿಸಿದಾಗ ಅವರ ಕಿರಿಯ ಸಹೋದರ ಕೂಡ ಕಾರಿನಲ್ಲಿದ್ದರು. ನನಗೆ ಸರಿಯಾಗಿ ನೆನಪಿಲ್ಲ, ಆದರೆ ನನ್ನ ಜನರು ಅವರನ್ನು ಗುರುತಿಸಿದ್ದಾರೆ. ಅವರ ಕಾರು ಸಹರಾನ್‌ಪುರ ಕಡೆಗೆ ಹೋಗಿದೆ. ನಾವು ಯು-ಟರ್ನ್ ತೆಗೆದುಕೊಂಡಿದ್ದೇವೆ. ಘಟನೆ ಸಂಭವಿಸಿದಾಗ ನನ್ನ ಕಿರಿಯ ಸಹೋದರ ಸೇರಿದಂತೆ ನಾವು ಐವರು ಕಾರಿನಲ್ಲಿದ್ದೇವು ಎಂದು ಅವರು ಹೇಳಿದರು.

English summary

Azad Samaj Party leader and Bhim Army chief Chandrasekhar Azad has appealed to his friends and supporters to maintain peace after he came under fire from armed assailants in Uttar Pradesh’s Saharanpur district.

Source link