ಭಾರೀ ಮೊತ್ತಕ್ಕೆ ‘ಸಲಾರ್‌’ ಓಟಿಟಿ ಡೀಲ್.. ಜಾಕ್‌ಪಾಟ್ ಹೊಡೆದ ಹೊಂಬಾಳೆ.. ಸ್ಟ್ರೀಮಿಂಗ್ ಎಲ್ಲಿ? | Prabhas Starrer Salaar ott rights sold for whopping 200 cr

bredcrumb

Gossips

oi-Narayana M

|


ವರ್ಷದ
ಬಹುನಿರೀಕ್ಷಿತ
ಸಿನಿಮಾ
‘ಸಲಾರ್’.
ಪ್ರಶಾಂತ್
ನೀಲ್
ನಿರ್ದೇಶನದ

ಆಕ್ಷನ್
ಎಂಟರ್‌ಟೈನರ್
ಚಿತ್ರದಲ್ಲಿ
ಟಾಲಿವುಡ್
ಯಂಗ್
ರೆಬಲ್
ಸ್ಟಾರ್
ಪ್ರಭಾಸ್
ಟೈಟಲ್
ರೋಲ್‌ನಲ್ಲಿ
ಅಬ್ಬರಿಸಿದ್ದಾರೆ.
ಇತ್ತೀಚೆಗೆ
ಬಿಡುಗಡೆಯಾದ
ಸಿನಿಮಾ
ಟೀಸರ್
10
ಕೋಟಿಗೂ
ಅಧಿಕ
ವೀವ್ಸ್
ಸಾಧಿಸಿ
ಧೂಳೆಬ್ಬಿಸಿದೆ.
ಸದ್ಯ
ಸಿನಿಮಾ
ಓಟಿಟಿ
ರೈಟ್ಸ್
ಭಾರೀ
ಮೊತ್ತಕ್ಕೆ
ಬಿಕರಿಯಾಗಿರುವುದಾಗಿ
ಹೇಳಲಾಗ್ತಿದೆ.

ಹೊಂಬಾಳೆ
ಸಂಸ್ಥೆ
ಅಂದಾಜು
400
ಕೋಟಿ
ರೂ.
ವೆಚ್ಚದಲ್ಲಿ

ಚಿತ್ರವನ್ನು
ನಿರ್ಮಾಣ
ಮಾಡಿದೆ.
ಪ್ರಭಾಸ್
ಮಾಫಿಯಾ
ಡಾನ್
ಅವತಾರದಲ್ಲಿ
ನಟಿಸಿದ್ದಾರೆ.
‘KGF’
ಸರಣಿ
ನಂತರ
ಬಹುತೇಕ
ಅದೇ
ತಂಡ
ಸೇರಿ
ಮಾಡಿರುವ
ಸಿನಿಮಾ
ಇದು.
ಹಾಗಾಗಿ
ನಿರೀಕ್ಷೆ
ದುಪ್ಪಟ್ಟಾಗಿದೆ.
ಇತ್ತೀಚೆಗೆ
ಬಂದ
ಟೀಸರ್‌ಗೆ
ಮಿಶ್ರಪ್ರತಿಕ್ರಿಯೆ
ಸಿಕ್ಕರೂ
ಯೂಟ್ಯೂಬ್‌ನಲ್ಲಿ
ಕಡಿಮೆ
ಸಮಯದಲ್ಲಿ
ಹೆಚ್ಚು
ವೀವ್ಸ್
ಸಾರ್ವಕಾಲಿಕ
ದಾಖಲೆ
ಬರೆದಿದೆ.
ಪ್ರಭಾಸ್
ಕ್ರೇಜ್
ಎಂಥಾದ್ದು
ಅನ್ನೋದು
ಮತ್ತೊಮ್ಮೆ
ಸಾಬೀತಾಗಿದೆ.

Prabhas Starrer Salaar ott rights sold for whopping 200 cr

‘ಸಲಾರ್’
ಸಿನಿಮಾ
ಸೆಪ್ಟೆಂಬರ್
28ಕ್ಕೆ
5
ಭಾಷೆಗಳಲ್ಲಿ
ವಿಶ್ವದಾದ್ಯಂತ
ತೆರೆಗಪ್ಪಳಿಸಲಿದೆ.
ಆಗಸ್ಟ್
ಕೊನೆ
ವಾರದಲ್ಲಿ
ಟ್ರೈಲರ್
ರಿಲೀಸ್
ಮಾಡಿ
ಮತ್ತಷ್ಟು
ಹೈಪ್
ಕ್ರಿಯೇಟ್
ಮಾಡಲು
ಪ್ರಯತ್ನ
ಮಾಡಲಾಗುತ್ತಿದೆ.
ಟೀಸರ್‌
ನಿರಾಸೆ
ಮೂಡಿಸಿದರೂ
ಟ್ರೈಲರ್
ಸಖತ್
ಕಿಕ್
ಕೊಡೊದು
ಗ್ಯಾರೆಂಟಿ
ಎನ್ನುವ
ನಿರೀಕ್ಷೆಯಿದೆ.

Prashanth Neel: ಕರ್ನಾಟಕದಲ್ಲಿ 'ಉಗ್ರಂ', 'ಕೆಜಿಎಫ್'.. ತೆಲುಗು ರಾಜ್ಯಗಳಲ್ಲಿ 'ಸಲಾರ್'.. ವಿದೇಶದಲ್ಲಿ NTR 31?Prashanth
Neel:
ಕರ್ನಾಟಕದಲ್ಲಿ
‘ಉಗ್ರಂ’,
‘ಕೆಜಿಎಫ್’..
ತೆಲುಗು
ರಾಜ್ಯಗಳಲ್ಲಿ
‘ಸಲಾರ್’..
ವಿದೇಶದಲ್ಲಿ
NTR
31?

₹200
ಕೋಟಿಗೆ
ಓಟಿಟಿ
ರೈಟ್ಸ್?

ಇತ್ತೀಚಿನ
ವರ್ಷಗಳಲ್ಲಿ
ಥ್ರಿಯೇಟ್ರಿಕಲ್
ರೈಟ್ಸ್
ಬಿಟ್ರೆ,
ಸಿನಿಮಾಗಳಿಗೆ
ಹೆಚ್ಚಿನ
ಆದಾಯ
ತಂದು
ಕೊಡೋದು
ಡಿಜಿಟಲ್
ರೈಟ್ಸ್.
ದೊಡ್ಡ
ದೊಡ್ಡ
ಸಿನಿಮಾಗಳ
ವಿಚಾರದಲ್ಲಿ
ಕ್ರೇಜ್‌ಗೆ
ತಕ್ಕಂತೆ
ಓಟಿಟಿ
ಡೀಲ್
ಆಗುತ್ತದೆ.
ಮೊನ್ನೆ
ಮೊನ್ನೆ
ರಾಜ್‌ಕುಮಾರ್
ಹಿರಾನಿ
ಹಾಗೂ
ಶಾರುಖ್
ಖಾನ್
ಜೋಡಿಯ
‘ಡಂಕಿ’
ಸಿನಿಮಾ
ಡಿಜಿಟಲ್
ರೈಟ್ಸ್
₹150
ಕೋಟಿಗೆ
ಮಾರಾಟ
ಆಗ್ತಿದೆ
ಎನ್ನಲಾಗಿತ್ತು.
ಇದೀಗ
‘ಸಲಾರ್’
ಓಟಿಟಿ
ರೈಟ್ಸ್
ಬರೋಬ್ಬರಿ
₹200
ಕೋಟಿಗೆ
ವ್ಯವಹಾರ
ಖುದರಿಸುತ್ತಿದ್ದರೆ
ಎನ್ನುವ
ಮಾತುಗಳು
ಕೇಳಿಬರ್ತಿದೆ.

Prabhas Starrer Salaar ott rights sold for whopping 200 cr

ಬಹುನಿರೀಕ್ಷಿತ
ಸಿನಿಮಾ
‘ಸಲಾರ್’

ಹೇಳಿ
ಕೇಳಿ
‘ಸಲಾರ್’
ಸಿನಿಮಾ
ಭಾರೀ
ಕುತೂಹಲ
ಮೂಡಿಸಿದೆ.
ಪ್ರಶಾಂತ್
ನೀಲ್-
ಪ್ರಭಾಸ್
ಕಾಂಬಿನೇಷನ್
ಅನ್ನೋದೇ
ಎವರೆಸ್ಟ್
ಎತ್ತರಕ್ಕೆ
ನಿರೀಕ್ಷೆ
ಹೆಚ್ಚಿಸಿದೆ.
ಇನ್ನು
ಸತತ
ಸೋಲುಗಳಿಂದ
ಕಂಗೆಟ್ಟಿರುವ
ಪ್ರಭಾಸ್

ಸಿನಿಮಾ
ಮೂಲಕ
ಕಂಬ್ಯಾಕ್
ಮಾಡುವ
ನಿರೀಕ್ಷೆ
ಇದೆ.
ಹಾಗಾಗಿನೇ
ಅಭಿಮಾನಿಗಳು
ಸಿನಿಮಾ
ನೋಡಲು
ಚಾತಕ
ಪಕ್ಷಿಗಳಂತೆ
ಕಾಯುತ್ತಿದ್ದಾರೆ.
ಓಟಿಟಿ
ಸ್ಟ್ರೀಮಿಂಗ್‌ಗೂ
ಒಳ್ಳೆ
ರೆಸ್ಪಾನ್ಸ್
ನಿರೀಕ್ಷೆ
ಮಾಡಲಾಗುತ್ತದೆ.
ಹಾಗಾಗಿಯೇ
₹200
ಕೋಟಿ
ಕೊಡಲು
ಮುಂದೆ
ಬಂದಿದ್ದಾರೆ
ಎನ್ನಲಾಗ್ತಿದೆ.
ಇನ್ನು
5
ಭಾಷೆಗಳ
ರೈಟ್ಸ್
ಆಗಿರುವದರಿಂದ
ಇಷ್ಟು
ದೊಡ್ಡ
ಮೊತ್ತಕ್ಕೆ
ಮಾತುಕತೆ
ನಡೀತಿದೆಯಂತೆ.

ಅಮೇಜಾನ್‌
ಪ್ರೈಮ್‌ನಲ್ಲಿ
‘ಸಲಾರ್’

ದಕ್ಷಿಣದ
ಸಿನಿಮಾಗಳು
ಹೆಚ್ಚು
ಅಮೇಜಾನ್‌
ಪ್ರೈಂನ
ನಂಬಿಕೊಂಡಿವೆ.
ಇನ್ನು
ಹೊಂಬಾಳೆ
ಸಂಸ್ಥೆ
ಕೂಡ
ತನ್ನ
ಎಲ್ಲಾ
ಸಿನಿಮಾಗಳನ್ನು
ಇದೇ
ಸಂಸ್ಥೆಗೆ
ನೀಡುತ್ತಾ
ಬರ್ತಿದೆ.
ಎರಡು
ಸಂಸ್ಥೆಗಳ
ನಡುವೆ
ಉತ್ತಮವಾದ
ವ್ಯಾವಹಾರಿಕ
ಸಂಬಂಧವಿದೆ.
ಹಾಗಾಗಿ
ಅಮೇಜಾನ್
ಪ್ರೈಂ
ಸಂಸ್ಥೆ
ಜೊತೆ
‘ಸಲಾರ್’
ರೈಟ್ಸ್
ಮಾರಾಟದ
ಮಾತುಕತೆ
ನಡೀತಿದೆಯಂತೆ.
ಇತ್ತೀಚಿನ
ಕೆಲ
ಸಿನಿಮಾಗಳು
ಪ್ರೈಂ
ವಿಡಿಯೋಗೆ
ನಷ್ಟ
ತಂದೊಡ್ಡಿವೆ.
ಆದಾಗ್ಯೂ
ಕೂಡ
ದೊಡ್ಡ
ದೊಡ್ಡ
ಸಿನಿಮಾಗಳನ್ನು

ಸಿನಿಮಾ
ಸಂಸ್ಥೆ
ಕೊಂಡುಕೊಳ್ಳಲು
ಮುಂದೆ
ಬರ್ತಿದೆ.

ದುಡ್ಡು ಕೊಟ್ಟು ಟೀಸರ್ ಗೆಲ್ಲಿಸಿದ್ರು; ಸಲಾರ್ ಟೀಸರ್ ವ್ಯೂಸ್ ಫೇಕ್ ಎಂದು ಆರೋಪಿಸಿದ ನೆಟ್ಟಿಗರು!ದುಡ್ಡು
ಕೊಟ್ಟು
ಟೀಸರ್
ಗೆಲ್ಲಿಸಿದ್ರು;
ಸಲಾರ್
ಟೀಸರ್
ವ್ಯೂಸ್
ಫೇಕ್
ಎಂದು
ಆರೋಪಿಸಿದ
ನೆಟ್ಟಿಗರು!

ನವೆಂಬರ್
ಕೊನೆಗೆ
ಓಟಿಟಿ
ರಿಲೀಸ್

₹200
ಕೋಟಿಗೆ
ಓಟಿಟಿ
ಡೀಲ್
ಏನೋ
ಸರಿ?
ಯಾವಾಗ
ಸಿನಿಮಾ
ಡಿಜಿಟಲ್
ಫ್ಲಾಟ್‌ಪಾರ್ಮ್‌ಗೆ
ಎಂಟ್ರಿ
ಕೊಡುತ್ತದೆ
ಅನ್ನೋದನ್ನು
ನೋಡುವುದಾದರೆ
ನವೆಂಬರ್
ಕೊನೆಗೆ
ಎನ್ನಬಹುದು.
ಸೆಪ್ಟೆಂಬರ್‌
28ಕ್ಕೆ
‘ಸಲಾರ್’
ಸಿನಿಮಾ
ಥಿಯೇಟರ್‌ಗಳಲ್ಲಿ
ಸದ್ದು
ಮಾಡಲಿದೆ.
ನಂತರ
45
ದಿನಗಳ
ಬಳಿಕ
ಸಿನಿಮಾ
ಓಟಿಟಿಗೆ
ಬರುವ
ಸಾಧ್ಯತೆಯಿದೆ.

ಲೆಕ್ಕದಲ್ಲಿ
ನವೆಂಬರ್
ಕೊನೆಗೆ
ಅಮೇಜಾನ್
ಪ್ರೈಂನಲ್ಲಿ
‘ಸಲಾರ್’
ದರ್ಶನವಾಗಲಿದೆ.
ಸಾಮಾನ್ಯವಾಗಿ
ಯಾವುದೇ
ಸಿನಿಮಾ
ಆದರೂ
ಥಿಯೇಟರ್‌ಗಳಲ್ಲಿ
ರಿಲೀಸ್
ಆಗಿ
47
ದಿನಗಳ
ಬಳಿಕ
ಡಿಜಿಟಲ್‌
ಫ್ಲಾಟ್‌ಪಾರ್ಮ್‌ಗೆ
ಬರುವಂತೆ
ಒಪ್ಪಂದ
ಆಗುತ್ತದೆ.
ಇತ್ತೀಚೆಗೆ
ಹೊಂಬಾಳೆ
ಸಂಸ್ಥೆಯೇ
ತಮ್ಮ
ಸಿನಿಮಾಗಳನ್ನು
ತಿಂಗಳಿಗೂ
ಮೊದ್ಲು
ಓಟಿಟಿಗೆ
ತರ್ತಿದೆ.

English summary

Prabhas Starrer Salaar ott rights sold for whopping 200 cr. Prashanth neel Directed Salaar: Part 1 – Ceasefire scheduled for a worldwide theatrical release on 28 September 2023. know more.

Saturday, July 15, 2023, 12:41

Story first published: Saturday, July 15, 2023, 12:41 [IST]

Source link