ಭಾರೀ ಮಳೆ: ಆಗುಂಬೆ ಘಾಟ್‌ನಲ್ಲಿ ಜುಲೈ 27ರಿಂದ ಸೆಪ್ಟೆಂಬರ್ 15ರವರೆಗೆ ಘನ ವಾಹನ ಸಂಚಾರ ನಿಷೇಧ | Heavy rain: Heavy vehicles run ban in Agumbe Ghat from July 27 to September 15

Udupi

lekhaka-Kishan Kumar

By ಉಡುಪಿ ಪ್ರತಿನಿಧಿ

|

Google Oneindia Kannada News

ಉಡುಪಿ, ಜುಲೈ, 27: ಭಾರೀ ಮಳೆಯಿಂದ ಹಳ್ಳ, ಕೊಳ್ಳಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಹಿನ್ನೆಲೆ ರಾಜ್ಯದ ಬಹುತೇಕ ಜಿಲ್ಲೆಗಳ ಪ್ರವಾಸಿ ತಾಣಗಳಿಗೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಅದೇ ರೀತಿ ಕರಾವಳಿ- ಮಲೆನಾಡು ಭಾಗದಲ್ಲಿ ವ್ಯಾಪಕ ಮಳೆ ಹಿನ್ನೆಲೆ ಆಗುಂಬೆ ಘಾಟಿಯಲ್ಲಿ ಜುಲೈ 27 ರಿಂದ ಸೆಪ್ಟೆಂಬರ್ 15ರವರೆಗೆ ಘನ ವಾಹನ ಸಂಚಾರಕ್ಕೆ ನಿಷೇಧ ಹೇರಿ ಉಡುಪಿ ಜಿಲ್ಲಾಧಿಕಾರಿ ಡಾ.ಕೆ ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ.

ಭಾರೀ ಮಳೆ ಹಿನ್ನೆಲೆ ಆಗುಂಬೆ ಘಾಟಿ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 169 ಎನಲ್ಲಿ ರಸ್ತೆ ಕುಸಿಯುವ ಆತಂಕ ಎದುರಾಗಿದೆ. ಈಗಾಗಲೇ ಘನ ವಾಹನ ಸಂಚಾರದಿಂದ ಆಗುಂಬೆ ಘಾಟಿಯ 6, 7 ಹಾಗೂ 11ನೇ ತಿರುವಿನ ರಸ್ತೆಯಲ್ಲಿ ಅಲ್ಲಲ್ಲಿ ಬಿರುಕು ಬಿಟ್ಟಿರುವ ಹಿನ್ನೆಲೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆಯಿದೆ. ಆದ್ದರಿಂದ ಉಡುಪಿ ಜಿಲ್ಲಾಡಳಿತ ಬಸ್‌- ಲಾರಿ ಸೇರಿದಂತೆ ಘನ ವಾಹನಗಳಿಗೆ ಬದಲಿ ಮಾರ್ಗವನ್ನು ಸೂಚಿಸಿದೆ.

Heavy rain: Heavy vehicles run ban in Agumbe Ghat from July 27 to September 15

ಈ ಮಾರ್ಗದಲ್ಲಿ ತೆರಳುವ ವಾಹನ ಸವಾರರು ತೀರ್ಥಹಳ್ಳಿ- ಆಗುಂಬೆ- ಶೃಂಗೇರಿ- ಮಾಳಾಘಾಟ್- ಕಾರ್ಕಳ- ಉಡುಪಿ ಅಥವಾ ತೀರ್ಥಹಳ್ಳಿ- ಮಾಸ್ತಿಕಟ್ಟೆ- ಸಿದ್ದಾಪುರ- ಕುಂದಾಪುರ- ಉಡುಪಿ ಮಾರ್ಗ ಬಳಸಬಹುದು. ಹೀಗೆ ಈ ಎರಡು ಬದಲಿ ಮಾರ್ಗ ಬಳಸುವಂತೆ ಘನ ವಾಹನ ಚಾಲಕರಿಗೆ ಉಡುಪಿ ಜಿಲ್ಲಾಡಳಿತ ಮನವಿ ಮಾಡಿದೆ.

English summary

Heavy rain: Heavy vehicles run ban in Agumbe Ghat from July 27 to September 15, here see details

Story first published: Thursday, July 27, 2023, 10:54 [IST]

Source link