ಭಾರತ vs ಯುಎಸ್ಎ ನಡುವೆ 5 ಬೋರ್ಡ್ ತಂಡಗಳ ಚೆಸ್ ಪಂದ್ಯ; ಗುಕೇಶ್-ಹಿಕಾರು ನಕಮುರಾ ಸೇರಿ ಘಟಾನುಘಟಿಗಳ ಕಾದಾಟ

ಯುಎಸ್ಎ ಮತ್ತು ಭಾರತ 5 ಸುತ್ತುಗಳನ್ನು ಒಳಗೊಂಡಿರುತ್ತವೆ. 2500 ಆಸನಗಳ ಕ್ರೀಡಾಂಗಣದಲ್ಲಿ ಪ್ರೇಕ್ಷಕರ ಮುಂದೆ ಒಂದು ಸಮಯದಲ್ಲಿ ಒಂದು ಬೋರ್ಡ್​​​ನೊಂದಿಗೆ ಆಡಲಾಗುತ್ತದೆ. ಆಟಗಾರರಿಗೆ ಪ್ರತಿ ಪಂದ್ಯಕ್ಕೆ 10 ನಿಮಿಷಗಳು ಇರುತ್ತವೆ ಮತ್ತು ಡ್ರಾಗೊಂಡರೆ, ಓವರ್​​ಟೈಮ್ ಆದರೆ ಆಟಗಾರರಿಗೆ ತಲಾ 5 ನಿಮಿಷ ಹೆಚ್ಚುವರಿ ನೀಡಲಾಗುತ್ತದೆ. ಆಗಲೂ ಡ್ರಾಗೊಂಡರೆ, ಒಂದು ನಿಮಿಷದ ಶೂಟೌಟ್ ಆಟವನ್ನು ಆಡಲಾಗುತ್ತದೆ. ಅದು ಕೂಡ ಡ್ರಾಗೊಂಡರೆ, ವಿಜೇತರಾಗುವ ತನಕ ಪ್ರತಿ ಆಟಗಾರನ ಆಟಕ್ಕೆ ಹೆಚ್ಚುವರಿ ನಿಮಿಷ ಪಡೆಯುತ್ತಾರೆ. ತವರಿನ ಅನುಕೂಲವನ್ನು ಗುರುತಿಸಲು ಅಮೆರಿಕನ್ ಆಟಗಾರರು ಎಲ್ಲಾ ಬೋರ್ಡ್​​ಗಳಲ್ಲಿ ವೈಟ್ ಆಡುತ್ತಾರೆ.

Source link