Sports
oi-Naveen Kumar N
ಬೈಜೂಸ್ ಕಂಪನಿ ಭಾರತ ಕ್ರಿಕೆಟ್ ತಂಡದ ಪ್ರಾಯೋಜಕತ್ವದಿಂದ ಹಿಂದೆ ಸರಿದ ದೀರ್ಘ ಕಾಲದ ನಂತರ ಬಿಸಿಸಿಐ ಹೊಸ ಪ್ರಾಯೋಜಕರನ್ನು ಆಯ್ಕೆ ಮಾಡಿದೆ. ಡ್ರೀಮ್ 11 ಇನ್ನು ಮುಂದೆ ಭಾರತ ಕ್ರಿಕೆಟ್ ತಂಡದ ಪ್ರಾಯೋಜಕತ್ವ ವಹಿಸಿಕೊಂಡಿದೆ. ಇದಕ್ಕಾಗಿ ಡ್ರೀಮ್ 11 ಬಿಸಿಸಿಐಗೆ ವಾರ್ಷಿಕವಾಗಿ 358 ಕೋಟಿ ರೂಪಾಯಿ ಪಾವತಿಸಲಿದೆ.
ಎಲ್ಲಾ ಪ್ರಕ್ರಿಯೆಗಳು ನಿಗದಿತ ಸಮಯಕ್ಕೆ ಪೂರ್ಣಗೊಂಡರೆ ಭಾರತ ತಂಡ ಜುಲೈ-ಆಗಸ್ಟ್‌ನಲ್ಲಿ ಆಡಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್, ಏಕದಿನ, ಟಿ20 ಸರಣಿ ಸಮಯದಲ್ಲಿ ಆಡುವಾಗ ಭಾರತ ತಂಡದ ಆಟಗಾರರ ಜೆರ್ಸಿಯ ಮೇಲೆ ಡ್ರೀಮ್ 11 ಲೋಗೋ ಕಾಣಿಸಿಕೊಳ್ಳಲಿದೆ.
ವೆಸ್ಟ್ ಇಂಡೀಸ್ ಪ್ರವಾಸಕ್ಕೂ ಮುನ್ನ ಬಿಸಿಸಿಐ ಒಪ್ಪಂದ ಮಾಡಿಕೊಳ್ಳಬಹುದೇ ಎಂಬ ಅನುಮಾನವಿತ್ತು. ನ್ಯೂಸ್ 18 ವರದಿ ಮಾಡಿರುವ ಪ್ರಕಾರ, ಬಿಸಿಸಿಐ ಒಪ್ಪಂದಕ್ಕೆ ಸಹಿ ಹಾಕಿದೆ. ಬಿಸಿಸಿಐ ಉದ್ಯಮದ ಒತ್ತಡಕ್ಕೆ ಮಣಿದು ಪ್ರಾಯೋಜಕತ್ವದ ಒಪ್ಪಂದದ ಮೂಲ ಬೆಲೆಯನ್ನು ಇಳಿಸಿತ್ತು. ಭಾರತೀಯ ಮಂಡಳಿಯು ಭಾರತ ಕ್ರಿಕೆಟ್ ತಂಡದ ಪ್ರಾಯೋಜಕರ ಮೂಲ ಬೆಲೆ ಈಗ ರೂ 350 ಕೋಟಿಗೆ ಇಳಿಸಿತ್ತು.
ಆರ್ಥಿಕ ಸಂಕಷ್ಟದ ಕಾರಣ ಹಿಂದೆ ಸರಿದ ಬೈಜೂಸ್
2023ರಲ್ಲಿ ಒಪ್ಪಂದದ ಪ್ರಕಾರ 450 ಕೋಟಿ ರೂಪಾಯಿ ಪಾವತಿಸಿದ್ದ ಬೈಜೂಸ್ ನಂತರ ಆರ್ಥಿಕ ಸಂಕಷ್ಟದ ಕಾರಣ ಹಿಂದಕ್ಕೆ ಸರಿಯುತ್ತಿರುವುದಾಗಿ ಹೇಳಿತು. ಬೈಜೂಸ್ ಭಾರತ ತಂಡದ ದ್ವಿಪಕ್ಷೀಯ ಪಂದ್ಯಗಳಿಗೆ 5.5 ಕೋಟಿ ರೂಪಾಯಿ ಮತ್ತು ಐಸಿಸಿ ಟೂರ್ನಿಯ ಒಂದು ಪಂದ್ಯಕ್ಕೆ 1.7 ಕೋಟಿ ರೂಪಾಯಿ ಪಾವತಿ ಮಾಡುತ್ತಿತ್ತು.
ಬಿಸಿಸಿಐನ ಪ್ರಾಯೋಜಕತ್ವ ದುಬಾರಿಯಾದ ಕಾರಣ ಯಾವುದೇ ಸಂಸ್ಥೆಗಳು ಕೂಡ ಪ್ರಾಯೋಜಕತ್ವ ವಹಿಸಿಕೊಳ್ಳಲು ಮುಂದೆ ಬಂದಿರಲಿಲ್ಲ. ನಂತರ ಪ್ರಾಯೋಜಕತ್ವದ ಮೂಲ ಬೆಲೆಯನ್ನು 350 ಕೋಟಿ ರುಪಾಯಿಗೆ ಕಡಿಮೆ ಮಾಡಿತ್ತು.
ಭಾರತ ತಂಡದ ಪ್ರಾಯೋಜಕರು
ವಿಲ್ಸ್ : 1990
ಐಟಿಸಿ: 1990
ಸಹರಾ ಗ್ರೂಪ್: 2002-2013
ಸ್ಟಾರ್ ಇಂಡಿಯಾ: 2014-2017
ಒಪ್ಪೊ: 2017-2022
ಬೈಜೂಸ್: 2022-2023
ಡ್ರೀಮ್ 11: 2023-2027
ಒಂದು ಪಂದ್ಯಕ್ಕೆ 3 ಕೋಟಿ ರೂಪಾಯಿ
ಪ್ರಾಯೋಜಕರು ಭಾರತ ತಂಡದ ದ್ವಿಪಕ್ಷೀಯ ಸರಣಿಯ ಒಂದು ಪಂದ್ಯಕ್ಕೆ 3 ಕೋಟಿ ರೂಪಾಯಿ ನೀಡಬೇಕಿತ್ತು. ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಪಂದ್ಯಾವಳಿಗಳಿಗೆ, ಪ್ರತಿ ಪಂದ್ಯಕ್ಕೆ ಮೂಲ ಬೆಲೆ 1 ಕೋಟಿ ರೂ. ನಿಗದಿ ಮಾಡಿದೆ.
ಭಾರತದ ಫ್ಯಾಂಟಸಿ ಯುನಿಕಾರ್ನ್ ಡ್ರೀಮ್11 ಐಪಿಎಲ್ 2018 ರಿಂದ ಭಾರತೀಯ ಕ್ರಿಕೆಟ್‌ನೊಂದಿಗೆ ಸಂಬಂಧ ಹೊಂದಿದೆ. ಐಪಿಎಲ್ 2020 ರಲ್ಲಿ ಶೀರ್ಷಿಕೆ ಪ್ರಾಯೋಜಕತ್ವದಿಂದ ಒಪ್ಪೋ ಹೊರಬಂದಾಗ ಡ್ರೀಮ್ 11 ಐಪಿಎಲ್‌ಗೆ ಪ್ರಾಯೋಜಕರಾಗಿ ಬಂದಿತು.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಮುಂಚಿತವಾಗಿ ಬಿಸಿಸಿಐ ಅಡೀಡಸ್‌ಗೆ ಅಧಿಕೃತ ಕಿಟ್ ಪ್ರಾಯೋಜಕತ್ವವನ್ನು ನೀಡಿತು. ವಿಶ್ವಕಪ್ 2019 ರ ನಂತರ ಕ್ರೀಡಾ ಸಾಮಗ್ರಿಗಳ ದೈತ್ಯ ನೈಕ್‌ನೊಂದಿಗೆ ಬೇರ್ಪಟ್ಟ ನಂತರ ಬಿಸಿಸಿಐನ ಪ್ರಮುಖ ಒಪ್ಪಂದವಾಗಿದೆ.
English summary
Dream11 has secured the jersey sponsorship rights for Team India, taking over from Byju’s in a lucrative ₹358 crore deal following the abrupt end of the previous partnership with the edtech company.
Story first published: Saturday, July 1, 2023, 8:32 [IST]