ಭಾರತೀಯ ಉದ್ಯೋಗಿಗಳಿಗೆ ಬಂಪರ್ ಗಿಫ್ಟ್: ವೀಸಾ ನವೀಕರಣ ವ್ಯವಸ್ಥೆ ಆಗಲಿದೆ ಮತ್ತಷ್ಟು ಸರಳ? | H1B Visa Renewal may get very simplified in coming days

International

oi-Malathesha M

|

Google Oneindia Kannada News

ವಾಷಿಂಗ್ಟನ್: ಪ್ರಧಾನಿ ಮೋದಿ ಅವರ ಅಮೆರಿಕ ಭೇಟಿ ಸಂದರ್ಭದಲ್ಲಿ ಹಲವು ಮಹತ್ವದ ಒಪ್ಪಂದಕ್ಕೆ ಅಂತಿಮ ಮುದ್ರೆ ಬೀಳುತ್ತಿದೆ. ಅದ್ರಲ್ಲೂ ರಕ್ಷಣಾ ಕ್ಷೇತ್ರ, ತಂತ್ರಜ್ಞಾನ ವಲಯ ಸೇರಿದಂತೆ ವೀಸಾ ನವೀಕರಣ ವ್ಯವಸ್ಥೆಯಲ್ಲೂ ಮಹತ್ವದ ಬದಲಾವಣೆ ಇದೀಗ ನಿರೀಕ್ಷೆ ಮಾಡಲಾಗುತ್ತಿದೆ. ಈ ಮೂಲಕ ಭಾರತೀಯರಿಗೆ ಹೆಚ್ಚು ಅಗತ್ಯವಾಗಿರುವ ಎಚ್‌-1ಬಿ ವೀಸಾ ಇನ್ನು ಮುಂದೆ ಸುಲಭವಾಗಿ ಸಿಗುವುದು ಬಹುತೇಕ ಪಕ್ಕಾ ಆಗಿದೆ.

ಹೌದು, ಸ್ಪೆಷಲ್ ಸ್ಕಿಲ್ ಹೊಂದಿದ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಅಮೆರಿಕದ ಸರ್ಕಾರ ಕಂಪನಿಗಳಿಗೆ ಅನುಮತಿ ನೀಡುತ್ತದೆ. ನೇಮಕಗೊಳ್ಳುವ ಉದ್ಯೋಗಿಗಳಿಗೆ ಪ್ರತಿ ವರ್ಷ 65 ಸಾವಿರ ಎಚ್‌-1ಬಿ ವೀಸಾ ಕೂಡ ವಿತರಿಸುತ್ತದೆ. ಹೆಚ್ಚಿನ ಶೈಕ್ಷಣಿಕ ಅರ್ಹತೆ ಹೊಂದಿರುವ ಉದ್ಯೋಗಿಗಳಿಗಾಗಿ ಹೆಚ್ಚುವರಿ 20 ಸಾವಿರ ವೀಸಾ ಕೂಡ ನೀಡುತ್ತದೆ ದೊಡ್ಡಣ್ಣ ಅಮೆರಿಕ. ಹೀಗೆ ಎಚ್‌-1ಬಿ ವೀಸಾ ಪಡೆದು ಅಮೆರಿಕದ ಕಂಪನಿಗಳಲ್ಲಿ ಕೆಲಸ ಮಾಡುವವರ ಪೈಕಿ, ಜಗತ್ತಿನಲ್ಲೇ ಭಾರತೀಯರು ಮುಂದೆ. ಹೀಗಾಗಿ ಈ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರಲು ಅಮೆರಿಕ ಮುಂದಾಗಿದೆ ಎನ್ನಲಾಗುತ್ತಿದೆ.

H1B Visa Renewal may get very simplified in coming days

ಏನಿದು ಎಚ್‌-1ಬಿ ವೀಸಾ ಬದಲಾವಣೆ?

ಇಲ್ಲಿ ಬೈಡನ್ ಆಡಳಿತ ಭಾರತೀಯರ ಪರವಾಗಿ ಹಲವು ಯೋಜನೆ ತರಲು ಮುಂದಾಗಿದೆ. ಉದ್ಯೋಗ ಅರಸಿ ಅಮೆರಿಕಕ್ಕೆ ಬಂದಿರುವ ಭಾರತೀಯರು ಸೇರಿದಂತೆ ವಿದೇಶಿಯರಿಗೆ ಎಚ್‌-1ಬಿ ವೀಸಾ ನೀಡಲಾಗಿದೆ. ಈ ಉದ್ಯೋಗಿಗಳು ತಮ್ಮ ದೇಶಗಳಿಗೆ ತೆರಳದೇ, ಅಮೆರಿಕದಲ್ಲೇ ವೀಸಾ ನವೀಕರಣ ಮಾಡಿಕೊಳ್ಳಲು ಅನುಕೂಲ ಕಲ್ಪಿಸುವ ಯೋಜನೆಯನ್ನು ವಿದೇಶಾಂಗ ಇಲಾಖೆ ಪ್ರಾಯೋಗಿಕವಾಗಿ ಆರಂಭಿಸಲಿದೆ ಎನ್ನಲಾಗಿದೆ. ಹಾಗಾದರೆ ಇದರಿಂದ ಭಾರತೀಯರಿಗೆ ಯಾವ ರೀತಿ ಉಪಯೋಗ ಆಗಲಿದೆ? ಭವಿಷ್ಯದಲ್ಲಿ ಇದು ವೀಸಾ ಪದ್ಧತಿಯಲ್ಲಿ ಯಾವ ರೀತಿ ಕ್ರಾಂತಿಕಾರಕ ಬದಲಾವಣೆ ತರಬಹುದು? ಸಂಪೂರ್ಣ ಮಾಹಿತಿಗಾಗಿ ಮುಂದೆ ಓದಿ.

ಭಾರತೀಯ ಉದ್ಯೋಗಿಗಳಿಗೆ ಬೈಡನ್ ಬಲ?

ಅಷ್ಟಕ್ಕೂ ಅಮೆರಿಕ ಮೂಲದ ಅಮೆಜಾನ್, ಅಲ್ಫಾಬೆಟ್ ಮತ್ತು ಮೆಟಾ, ಭಾರತ ಮೂಲದ ಇನ್ಫೊಸಿಸ್, ಟಾಟಾ ಕನ್ಸಲ್ಟನ್ಸಿ ಸರ್ವೀಸಸ್ ಸಂಸ್ಥೆಗಳಲ್ಲಿ ಎಚ್‌-1ಬಿ ಮಾದರಿ ವೀಸಾ ಪಡೆದ ಉದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎನ್ನಲಾಗಿದೆ. ಅದರಲ್ಲೂ ಭಾರತ ಮೂಲದ ಉದ್ಯೋಗಿಗಳು ತಮ್ಮ ಕನಸಿನ ಜೀವನ ಕಟ್ಟಿಕೊಳ್ಳಲು ಎಚ್‌-1ಬಿ ಮಾದರಿ ವೀಸಾ ಮುಖ್ಯ ಪಾತ್ರ ವಹಿಸುತ್ತದೆ. ಇದೇ ಕಾರಣಕ್ಕೆ ಹಲವು ನಿಯಮಗಳನ್ನ ಈ ಹಿಂದೆ ಟ್ರಂಪ್ ಸರ್ಕಾರ ಜಾರಿಗೆ ತಂದು ವಿವಾದ ಸೃಷ್ಟಿ ಮಾಡಿದ ಆರೋಪ ಕೇಳಿಬಂದಿತ್ತು. ಆದರೆ ಈಗ ಬೈಡನ್ ಆಡಳಿತ ಭಾರತೀಯ ಉದ್ಯೋಗಿಗಳಿಗೆ ಬಲ ತುಂಬಲಿದೆ ಎನ್ನಲಾಗುತ್ತಿದೆ.

ಭಾರತ ಮೂಲದವರಿಗೆ ಇದರಿಂದ ಪ್ರಯೋಜನವೇನು?

ಎಚ್‌-1ಬಿ ಮಾದರಿ ವೀಸಾ ನವೀಕರಣ ಸುಲಭವಾದರೆ ಭಾರತ ಮೂಲದವರು ಇನ್ಮುಂದೆ ಅಮೆರಿಕದಲ್ಲಿ ಉದ್ಯೋಗ ಪಡೆಯೋದು & ವಾಸ ಮಾಡುವುದು ಕೂಡ ಸುಲಭವಾಗಲಿದೆ. ಅಲ್ಲದೆ ಎರಡೂ ದೇಶಗಳ ನಡುವೆ ಸ್ನೇಹ ಮತ್ತಷ್ಟು ಗಟ್ಟಿಯಾಗಲಿದೆ. ಹಾಗೇ ಮತ್ತೊಂದು ಗುರಿ ಕೂಡ ಇರಬಹುದು. ಅದೇನೆಂದರೆ ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲೂ ಈ ಕ್ರಮ ಮಹತ್ವದ ಪ್ರಭಾವ ಬೀರಲಿದೆ. ಏಕೆಂದರೆ ಭಾರತ ಮೂಲದಿಂದ ಹೋಗಿ, ಈಗ ಅಮೆರಿಕದ ಪ್ರಜೆಗಳಾಗಿರುವ ಲಕ್ಷಾಂತರ ಜನರ ಮತ ಆಡಳಿತ ಪಕ್ಷಕ್ಕೆ ಬೀಳುವುದು ಪಕ್ಕಾ. ಇದೆಲ್ಲವನ್ನೂ ಅಳೆದು, ತೂಗಿ ಬೈಡನ್ ಆಡಳಿತ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ಎಚ್‌-1ಬಿ ಮಾದರಿ ವೀಸಾ ಭಾರತ ಸೇರಿದಂತೆ ಜಗತ್ತಿನ ಅನೇಕ ದೇಶಗಳ ಉದ್ಯೋಗಿಗಳಿಗೆ ಹೇಗೆ ಪ್ರಯೋಜನಕಾರಿ ಆಗಿದೆಯೋ, ಅದೇ ರೀತಿ ಅಮೆರಿಕದ ಅಭಿವೃದ್ಧಿಗೂ ಬಿಗ್ ಗಿಫ್ಟ್ ಕೊಡುತ್ತಿದೆ. ಅಮೆರಿಕದಲ್ಲಿನ ಕಂಪನಿಗಳು ಸ್ಕಿಲ್ ವರ್ಕರ್ಸ್ ಅಂದರೆ ಕೌಶಲ್ಯ ಹೊಂದಿದ ಉದ್ಯೋಗಿಗಳನ್ನ ಕೆಲಸಕ್ಕೆ ಕರೆಸಿಕೊಳ್ಳಲು ಸಹಾಯ ಮಾಡ್ತಿದೆ. ಈ ಹಿನ್ನೆಲೆಯಲ್ಲಿ ಹೊಸ ಬದಲಾವಣೆ ತಂದು, ಉದ್ಯೋಗಿಗಳು ಹಾಗೂ ಸಂಸ್ಥೆಗಳಿಗೆ ಬೆಂಬಲ ನೀಡಲು ಬೈಡನ್ ಆಡಳಿತ ಮುಂದಾಗಿದೆ ಎಂಬ ಮಾತುಗಳು ಕೇಳಿಬಂದಿವೆ. ಈ ಮೂಲಕ ಅಮೆರಿಕದ ಅಭಿವೃದ್ಧಿಗೂ ಬೈಡನ್ ಸರ್ಕಾರದ ಹೊಸ ನಿರ್ಧಾರ ಸಹಾಯ ಮಾಡುವುದು ಪಕ್ಕಾ.

English summary

H1B Visa Renewal may get very simplified in coming days.

Story first published: Thursday, June 22, 2023, 23:48 [IST]

Source link