ಭಾರತದ ಸಾಂಪ್ರದಾಯಿಕ ‘ಯೋಗ’ಕ್ಕೆ ಪೇಟೆಂಟ್-ಕಾಪಿರೈಟ್ ಇಲ್ಲ, ಎಲ್ಲರೂ ಕಲಿಯಬಹುದು: ಪ್ರಧಾನಿ ಮೋದಿ | India’s Traditional Yoga Has No Patent And Copyright, Anyone Can Learn: PM Narendra Modi

International

oi-Shankrappa Parangi

|

Google Oneindia Kannada News

ಬೆಂಗಳೂರು, ಜೂನ್ 21: ಹಲವು ಪ್ರಥಮಗಳಿಗೆ ಸಾಕ್ಷಿಯಾಗಿರುವ ಭಾರತ ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವದ ದೊಡ್ಡಣ್ಣ ರಾಷ್ಟ್ರ ‘ಅಮೆರಿಕಾ ಪ್ರವಾಸ’ದಲ್ಲಿದ್ದಾರೆ. ಬುಧವಾರ ವಿಶ್ವ ಸಂಸ್ಥೆ ವತಿಯಿಂದ ಸಂಸ್ಥೆಯ ಆವರಣದಲ್ಲಿ ‘ವಸುದೈವ ಕುಟುಂಬಕಂ’ ಘೋಷವಾಕ್ಯದಡಿ ನಡೆದ 9 ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪ್ರಧಾನಿ ಮೋದಿ ಎಲ್ಲರೊಂದಿಗೆ ಯೋಗಾಭ್ಯಾಸ ಮಾಡಿ ಯೋಗದ ಮಹತ್ವ, ಆಚರಣೆ ಉದ್ದೇಶಿಸಿ ಮಾತನಾಡಿದರು.

ಭಾರತ ಮಾಡಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಸ್ತಾವನೆಗೆ ಮನ್ನಣೆ ದೊರೆತು ಇಂದಿಗೆ 9 ವರ್ಷ ಕಳೆದಿದೆ. ಅಲ್ಲಿಂದ ಈವರೆಗೆ ನೀವೆಲ್ಲರೂ ಸಹಕರಿಸಿದ್ದೀರಿ ಮತ್ತು ಬೆಂಬಲಿಸಿದ್ದೀರಿ. ಯೋಗ ಭಾರತದಿಂದ ಬಂದಿದ್ದು, ಇದು ಅತ್ಯಂತ ಹಳೇಯ ಸಂಪ್ರಾಯಿಕ ಮತ್ತು ಅತ್ಯಂತ ಪರಿಣಾಮಕಾರಿಯಾದದ್ದು. ಯಾರಿಂದ ಬೇಕಾದರೂ ಈ ಯೋಗವನ್ನು ಕಲಿಯಬಹುದು ಎಂದು ನರೇಂದ್ರ ಮೋದಿಯವರು ಹೇಳಿದರು.

Indias Traditional Yoga Has No Patent And Copyright, Anyone Can Learn: PM Narendra Modi

ಆರೋಗ್ಯಯುತ ಬದುಕಿಗೆ ಯೋಗ ಮುಖ್ಯ. ಯೋಗದಿಂದ ಬದುಕುವ ರೀತಿ ಉತ್ತಮವಾಗುತ್ತದೆ, ದೈಹಿಕ ಮತ್ತು ಮಾನಸಿಕ ಶಕ್ತಿಗೆ ಯೋಗ ಆಗ್ಯಕರವಾದದ್ದು. ಇದು ಭಾರತದ ಅತ್ಯಂತ ಹಳೆಯ ಸಂಸ್ಕೃತಿಯಾದರೂ ಇಂದಿಗೂ ಜೀವಂತವಿದೆ. ಎಲ್ಲಾ ಕಾಲಕ್ಕೆ ಎಲ್ಲ ವರ್ಗಕ್ಕೂ ಯೋಗ ಸಹಕಾರಿ. ವೈಜ್ಞಾನಿಕವಾಗಿಯೂ ಯೋಗಕ್ಕೆ ಮಹತ್ವ ಇದೆ ಎಂದರು.

ಯೋಗ ಜಗತ್ತನ್ನೇ ಹತ್ತಿರವಾಗಿಸುತ್ತದೆ

ಯೋಗ ನಮ್ಮ ದೇಶದ್ದೇ ಆದರೂ ಇದಕ್ಕೆ ಕಾಪಿರೈಟ್ ಇಲ್ಲ, ಪೇಟೆಂಟ್ ಇಲ್ಲ. ಅದನ್ನು ಯಾರು ಬೇಕಾದರೂ ಸ್ವೀಕರಿಸಬಹುದು. ಯೋಗ ಎಂದರೆ ಎಲ್ಲರನ್ನು ಒಂದೂಗುಡಿಸುತ್ತದೆ. ಯೋಗವು ಜಗತ್ತನ್ನೇ ಹತ್ತಿರವಾಗಿಸುತ್ತದೆ. ಅದಕ್ಕೆ ನಾವೆಲ್ಲರು ಇಲ್ಲಿ ಕೂಡಿರುವುದೇ ಸಾಕ್ಷ್ಯಿ.

ಯೋಗ ದಿನಾಚರಣೆಗೆ ವಿವಿಧೆಡೆಯಿಂದ ನೀವು ಆಗಮಿಸಿದ್ದೀರಿ. ನಿಮ್ಮೆಲ್ಲರಿಗೂ ಧನ್ಯವಾದಗಳು. ನಾವೆಲ್ಲರೂ ಒಂದುಗೂಡಿ ವಿಶ್ವಸಂಸ್ಥೆ ಆವರಣದಲ್ಲಿ ಇವತ್ತು ಯೋಗಾಸನ ಮಾಡುತ್ತಿದ್ದೇವೆ. ಈ ಯೋಗದ ಮಹತ್ವ ಸಾರಲು, ಯೋಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಚರಣೆಗೆ ಬರಬೇಕು ಭಾರತ 9 ವರ್ಷಗಳ ಹಿಂದೆ ಆಗ್ರಹಿಸಿತ್ತು. ಅದರ ಜಾರಿಗೆ ನೀವೆಲ್ಲರೂ ಸಹಕರಿಸಿದ್ದೀರಿ ಎಂದು ವಿವಿಧ ರಾಷ್ಟ್ರಗಳಿಗೆ ಅಭಿನಂದನೆ ತಿಳಿಸಿದರು.

Indias Traditional Yoga Has No Patent And Copyright, Anyone Can Learn: PM Narendra Modi

ಮಹತ್ವಪೂರ್ಣವಾಗಿ ಯೋಗ ದಿನಾಚರಣೆ ಆಯೋಜಿಸಿದ್ದ ವಿಶ್ವ ಸಂಸ್ಥೆಗೆ ನಾನು ಧನ್ಯವಾದ ಸಲ್ಲಿಸುತ್ತೇವೆ. ಯೋಗದಿಂದ ಎಲ್ಲರನ್ನು ಖುಷಿಯಾಗಿಡಿ, ಎಲ್ಲರೂ ಖುಷಿಯಾಗಿರಿ ಎಂದು ಅವರು ಪ್ರಧಾನಿ ಮೋದಿ ಹೇಳಿದರು.

ಕಾರ್ಯಕ್ರಮದಲ್ಲಿ ಮಾನಸಿಕ ಆರೋಗ್ಯ, ಪರಿಸರ ಕಾಳಜಿ ಕುರಿತು ಯೋಗಾಸನ ಮೂಲಕ ಅರಿವು ಮೂಡಿಸಲಾಯಿತು. ಜಾಗತಿಕ ಮಟ್ಟದಲ್ಲಿ ಪ್ರಧಾನಿ ಮೋದಿ ನೇತೃತ್ವದ ಈ ಯೋಗ ದಿನಾಚರಣೆ ಒಂದು ಐತಿಹಾಸಿಕ ದಾಖಲೆ ಅಂತಲೂ ಕೆಲವು ಬಣಿಸುತ್ತಿದ್ದಾರೆ.

190 ದೇಶಗಳ ಗಣ್ಯರು ಭಾಗಿ: ಬೈಡನ್ ಜತೆ ಜೌತಣ

ವಿಶ್ವಸಂಸ್ಥೆಯ ಆವರಣದಲ್ಲಿ ಯೋಗ ದಿನಾಚರಣೆಯಲ್ಲಿ ಭಾಗವಹಿಸುವುದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿಯವರು ಅಲ್ಲಿರುವ ಮಹಾತ್ಮ ಗಾಂಧಿ ಪುತ್ಥಳಿಗೆ ಪುಷ್ಪ ನಮಸ್ಕರಿಸಿದರು. ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ವಿಶ್ವದ ಒಟ್ಟು 190 ದೇಶಗಳ ಗಣ್ಯರು ಪಾಲ್ಗೊಂಡಿದ್ದರು. ಅವರೆಲ್ಲ ಭಾರತದ ಯೋಗದ ಮಹತ್ವ, ಅದರ ಆಚರಣೆ, ಅಗತ್ಯತೆ ಕುರಿತು ಮಾಹಿತಿ ಪಡೆದುಕೊಂಡರು.

Indias Traditional Yoga Has No Patent And Copyright, Anyone Can Learn: PM Narendra Modi

ಮಂಗಳವಾರ ಪ್ರಧಾನಿ ನ್ಯೂಯಾರ್ಕ್‌ಗೆ ಬಂದಿಳಿಯುತ್ತಿದ್ದಂತೆ ಭ್ಯವ ಸ್ವಾಗತ ದೊರೆಯಿತು. ಬುಧವಾರ ಅವರು ವಿವಿಧ ಕಂಪನಿಗಳ ಉದ್ಯಮಿಗಳ ಜತೆ ಸಭೆ ನಡೆಸಿದರು. ಬಳಿಕ ಯೋಗಾಭ್ಯಾಸ ಮುಗಿಸಿದರು. ಇಂದು ರಾತ್ರಿಯೇ ಅವರು ವಾಷಿಂಗ್ಟನ್‌ಗೆ ತೆರಳಿ ಅಲ್ಲಿ ರಾತ್ರಿ ಅಮೆರಿಕ ಅಧ್ಯಕ್ಷ ಜೋಬೈಡನ್ ದಂಪತಿಯ ಔತಣ ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.

English summary

PM Modi Visit US: India’s Traditional Yoga Has No Patent And Copyright, Anyone Can Learn: PM Narendra Modi.

Story first published: Wednesday, June 21, 2023, 19:54 [IST]

Source link