ಭಾರತದ ಪದಕದ ಭರವಸೆಗೆ ಭಾರಿ ಆಘಾತ; 2026ರ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಇರಲ್ಲ ಕ್ರಿಕೆಟ್, ಹಾಕಿ, ಬ್ಯಾಡ್ಮಿಂಟನ್, ಶೂಟಿಂಗ್

2026ರ ಜುಲೈ 23ರಿಂದ ಆಗಸ್ಟ್ 2ರವರೆಗೆ ಗ್ಲ್ಯಾಸ್ಗೋ ಕಾಮನ್‌ವೆಲ್ತ್‌ ಕ್ರೀಡಾಕೂಟ ನಿಗದಿಯಾಗಿದೆ. ಆ ಮೂಲಕ ಗ್ಲ್ಯಾಸ್ಗೋ ನಗರವು 12 ವರ್ಷಗಳ ನಂತರ ಕೂಡಕ್ಕೆ ಆತಿಥ್ಯ ವಹಿಸುತ್ತಿದೆ. ಈ ಬಾರಿಯ ಕೂಟವು ಅಥ್ಲೆಟಿಕ್ಸ್ ಮತ್ತು ಪ್ಯಾರಾ ಅಥ್ಲೆಟಿಕ್ಸ್ (ಟ್ರ್ಯಾಕ್ ಮತ್ತು ಫೀಲ್ಡ್), ಈಜು ಮತ್ತು ಪ್ಯಾರಾ ಈಜು, ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್, ಟ್ರ್ಯಾಕ್ ಸೈಕ್ಲಿಂಗ್ ಮತ್ತು ಪ್ಯಾರಾ ಟ್ರ್ಯಾಕ್ ಸೈಕ್ಲಿಂಗ್, ನೆಟ್ಬಾಲ್, ವೇಟ್ಲಿಫ್ಟಿಂಗ್ ಮತ್ತು ಪ್ಯಾರಾ ಪವರ್ಲಿಫ್ಟಿಂಗ್, ಬಾಕ್ಸಿಂಗ್, ಜೂಡೋ, ಬೌಲ್ಸ್ ಮತ್ತು ಪ್ಯಾರಾ ಬೌಲ್ಸ್, ಜೊತೆಗೆ 3×3 ಬ್ಯಾಸ್ಕೆಟ್ಬಾಲ್ ಮತ್ತು 3×3 ಗಾಲಿಕುರ್ಚಿ ಬ್ಯಾಸ್ಕೆಟ್ಬಾಲ್ ಕ್ರೀಡೆಗಳನ್ನು ಒಳಗೊಂಡಿದೆ ಎಂದು ಕಾಮನ್ವೆಲ್ತ್ ಗೇಮ್ಸ್ ಫೆಡರೇಶನ್ ಪ್ರಕಟಿಸಿದೆ.

Source link