International
oi-Naveen Kumar N

ಭಾರತದಲ್ಲಿನ ಪ್ರಜಾಪ್ರಭುತ್ವದ ನಿಯಮಗಳು ಮತ್ತು ಮಾನವ ಹಕ್ಕುಗಳ ಬಗ್ಗೆ ಕಳವಳ ವ್ಯಕ್ತಪಡಿಸುವಂತೆ ಯುಎಸ್ ಅಧ್ಯಕ್ಷ ಜೋ ಬೈಡನ್‌ಗೆ ಅಮೆರಿಕದ 70ಕ್ಕೂ ಹೆಚ್ಚು ಸೆನೆಟರ್‌ಗಳು ಒತ್ತಾಯಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ಭೇಟಿಗಾಗಿ ವಾಷಿಂಗ್ಟನ್ ಡಿಸಿಗೆ ಆಗಮಿಸುವ ಮುನ್ನಾದಿನದಂದು ಶಾಸಕರು ಪತ್ರ ಬರೆದು ಒತ್ತಾಯ ಮಾಡಿದ್ದಾರೆ.
ಅಮೆರಿಕ ಮತ್ತು ಭಾರತದ ನಡುವೆ ಬಲಿಷ್ಠ, ಮತ್ತು ಯಶಸ್ವಿ ಸಂಬಂಧವನ್ನು ಹೊಂದಲು ಮುಖ್ಯವಾಗಿರುವ ವಿಚಾರಗಳನ್ನು ಮೋದಿ ಜೊತೆ ಬೈಡನ್ ಚರ್ಚೆ ಮಾಡಬೇಕು ಎಂದು ಅಮೆರಿಕಾದ ಶಾಸಕರು ಹೇಳಿದ್ದಾರೆ.

ಭಾರತ-ಅಮೆರಿಕಾ ನಡುವೆ ಇರುವ ಭಿನ್ನಾಭಿಪ್ರಾಯಗಳನ್ನು ಮುಕ್ತವಾಗಿ, ಪ್ರಾಮಾಣೀಕವಾಘಿ ಚರ್ಚೆ ಮಾಡಬೇಕು, ಭಾರತ ಮತ್ತು ಅಮೆರಿಕಾ ಬಲಿಷ್ಠ ಸಂಬಂಧವಿರಬೇಕು ಎನ್ನುವ ಉದ್ದೇಶ ಹೊಂದಿರುವ ನಾವು ಇದನ್ನು ನಂಬುತ್ತೇವೆ ಎಂದು ಭಾರತೀಯ ಮೂಲದ ಕಾಂಗ್ರೆಸ್ ಮಹಿಳೆ ಪ್ರಮೀಳಾ ಜಯಪಾಲ್ ಹೇಳಿದ್ದಾರೆ.
ಭಾರತ-ಅಮೆರಿಕ ನಡುವಿನ ಪರಸ್ಪರ ಹಿತಾಸಕ್ತಿಗಳ ವಿಚಾರಗಳ ಜೊತೆ, ಆತಂಕ ಇರುವ ಕ್ಷೇತ್ರಗಳ ಬಗ್ಗೆ ಕೂಡ ಪ್ರಧಾನಿ ನರೇಂದ್ರ ಮೋದಿ ಬಳಿ ಜೋ ಬೈಡನ್ ಪ್ರಸ್ತಾಪಿಸಬೇಕು ಎಂದು ಶಾಸಕರು ಪತ್ರದಲ್ಲಿ ತಿಳಿಸಿದ್ದಾರೆ.
ಭಾರತಕ್ಕೆ ಬರುತ್ತಾ ಟೆಸ್ಲಾ? ಪ್ರಧಾನಿ ಮೋದಿ ಭೇಟಿ ಬಳಿಕ ಎಲಾನ್ ಮಸ್ಕ್ ಏನಂದ್ರು ಗೊತ್ತಾ?
ಭಾರತದಲ್ಲಿನ ಬೆಳವಣಿಗೆ ಬಗ್ಗೆ ಆತಂಕ
ಪತ್ರಿಕಾ ಮತ್ತು ಧಾರ್ಮಿಕ ಸ್ವಾತಂತ್ರ್ಯಗಳ ಶ್ರೇಯಾಂಕಗಳಂತಹ ಹಲವಾರು ವರದಿಗಳು ಮತ್ತು ಅಂಕಿಅಂಶಗಳನ್ನು ಉಲ್ಲೇಖಿಸಿ, “ಸ್ವತಂತ್ರ, ವಿಶ್ವಾಸಾರ್ಹ ವರದಿಗಳ ಸರಣಿಯು ಭಾರತದಲ್ಲಿ ರಾಜಕೀಯ ಜಾಗವನ್ನು ಕುಗ್ಗಿಸುವ, ಧಾರ್ಮಿಕ ಅಸಹಿಷ್ಣುತೆಯ ಏರಿಕೆ, ನಾಗರಿಕ ಸಮಾಜ ಸಂಸ್ಥೆಗಳು, ಪತ್ರಕರ್ತರನ್ನು ಗುರಿಯಾಗಿಸುವುದು ಮತ್ತು ಪತ್ರಿಕಾ ಸ್ವಾತಂತ್ರ್ಯ ಮತ್ತು ಇಂಟರ್ನೆಟ್ ಪ್ರವೇಶದ ಮೇಲೆ ಹೆಚ್ಚುತ್ತಿರುವ ನಿರ್ಬಂಧಗಳು ಪ್ರಜಾಪ್ರಭುತ್ವಕ್ಕೆ ತೊಂದರೆದಾಯಕ ಚಿಹ್ನೆಗಳನ್ನು ಬಿಂಬಿಸುತ್ತವೆ” ಎಂದು ಶಾಸಕರು ಹೇಳಿದ್ದಾರೆ.
ಭಾರತ ಮತ್ತು ಯುಎಸ್ “ನಮ್ಮ ಇತಿಹಾಸಗಳನ್ನು ರೂಪಿಸಿದ ನೈತಿಕ ನಾಯಕರ ಮೂಲಕ ವಿಶೇಷ ಬಾಂಧವ್ಯವನ್ನು ಹಂಚಿಕೊಳ್ಳುತ್ತವೆ ಎಂದು ಪತ್ರದಲ್ಲಿ ಹೇಳಲಾಗಿದೆ. ಮಹಾತ್ಮ ಗಾಂಧಿ ಮತ್ತು ಯುಎಸ್ ನಾಗರಿಕ ಹಕ್ಕುಗಳ ನಾಯಕ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಭಾರತ ಮತ್ತು ಯುಎಸ್‌ನ ಅತ್ಯಂತ ಹೆಚ್ಚು ಗೌರವಾನ್ವಿತರಾಗಿದ್ದಾರೆ.
ರಕ್ಷಣಾ ವಲುಯ, ಪೂರೈಕೆ ಸರಪಳಿ ಸ್ಥಿತಿಸ್ಥಾಪಕತ್ವ, ಔಷಧೀಯ ಕ್ಷೇತ್ರಗಳಲ್ಲಿ ಅಮೆರಿಕ ಮತ್ತು ಭಾರತದ ನಡುವಿನ ಪರಸ್ಪರ ಸಹಕಾರವನ್ನು ಮತ್ತಷ್ಟು ಗಟ್ಟಿಯಾಗಿಸಬೇಕು ಎಂದು ಶಾಸಕರು ಬೆಂಬಲ ನೀಡಿದ್ದಾರೆ. ಎರಡೂ ದೇಶಗಳ ನಡುವೆ ಸಾಂಸ್ಕೃತಿಕ ಸಂಬಂಧವನ್ನು ಗಟ್ಟಿಯಾಗಿಸುವಂತೆ ಕೇಳಿದರು.
“ನಾವು ಯಾವುದೇ ನಿರ್ದಿಷ್ಟ ಭಾರತೀಯ ನಾಯಕ ಅಥವಾ ರಾಜಕೀಯ ಪಕ್ಷವನ್ನು ಪ್ರಸ್ತಾಪಿಸುತ್ತಿಲ್ಲ. ಅದು ಭಾರತದ ಜನರ ನಿರ್ಧಾರ. ಆದರೆ ನಾವು ಅಮೇರಿಕನ್ ವಿದೇಶಾಂಗ ನೀತಿಯ ಪ್ರಮುಖ ಭಾಗವಾಗಿರುವ ಪ್ರಮುಖ ತತ್ವಗಳಿಗೆ ಬೆಂಬಲವಾಗಿ ನಿಲ್ಲುತ್ತೇವೆ” ಎಂದು ಪತ್ರದಲ್ಲಿ ತಿಳಿಸಲಾಗಿದೆ. ಯುಎಸ್‌ಗೆ ಭೇಟಿ ನೀಡುತ್ತಿರುವ ನರೇಂದ್ರ ಮೋದಿಯನ್ನು ಶಾಸಕರು ಸ್ವಾಗತಿಸಿದ್ದಾರೆ.
ಭಾರತೀಯ ಮೂಲದ ಕಾಂಗ್ರೆಸ್ ಮಹಿಳೆ ಪ್ರಮೀಳಾ ಜಯಪಾಲ್ (ಡೆಮೊಕ್ರಾಟ್, ವಾಷಿಂಗ್ಟನ್) ಮತ್ತು ಸೆನೆಟರ್ ಕ್ರಿಸ್ ವ್ಯಾನ್ ಹೊಲೆನ್ (ಡೆಮೊಕ್ರಾಟ್, ಮೇರಿಲ್ಯಾಂಡ್) ಪತ್ರದ ಪ್ರಮುಖ ಲೇಖಕರಾಗಿದ್ದಾರೆ.
ವಾಷಿಂಗ್ಟನ್‌ನಲ್ಲಿ ಮೋದಿ ಭೇಟಿ ಸಂದರ್ಭದಲ್ಲಿ ಹಲವಾರು ಪ್ರತಿಭಟನೆಗಳನ್ನು ಆಯೋಜಿಸಲಾಗಿದೆ ಮತ್ತು ಹ್ಯೂಮನ್ ರೈಟ್ಸ್ ವಾಚ್ ಮತ್ತು ಅಮೆನ್ಸ್ಟಿ ಇಂಟರ್‌ನ್ಯಾಶನಲ್ ಯುಎಸ್‌ಎ, ಭಾರತದ ಅಲ್ಪಸಂಖ್ಯಾತರ ಬಗ್ಗೆ ಮೋದಿಯವರ ಕ್ರಮಗಳು ಮತ್ತು ನೀತಿಗಳನ್ನು ಟೀಕಿಸುವ ಬಿಬಿಸಿ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಆಯೋಜಿಸಲಾಗಿದೆ.
English summary
Ahead of Prime Minister Narendra Modi’s state visit to Washington DC, over 70 American Senators and Representatives have written to President Joe Biden, requesting him to discuss concerns regarding democratic norms and human rights in India with PM Modi.
Story first published: Wednesday, June 21, 2023, 8:02 [IST]