ಭಯೋತ್ಪಾದನೆ: ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ಕೊಟ್ಟ ಪ್ರಧಾನಿ ಮೋದಿ, ಜೋ ಬೈಡನ್ | Joe Biden And Narendra Modi Issues Warning To Pakistan Over Terrorism

International

oi-Naveen Kumar N

|

Google Oneindia Kannada News

ವಾಷಿಂಗ್ಟನ್, ಜೂನ್ 23: ದೆಹಲಿಯನ್ನು ಗುರಿಯಾಗಿಸಿಕೊಂಡಿರುವ ಭಯೋತ್ಪಾದಕರನ್ನು ಸದೆಬಡಿಯುವಂತೆ ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಜೋ ಬೈಡನ್ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

ಪ್ರಧಾನಿ ನರೇಂದ್ರ ಅಮೆರಿಕ ಪ್ರವಾಸ ಕಾರ್ಯಕ್ರಮದಲ್ಲಿ ಗುರುವಾರ ವಾಷಿಂಗ್ಟನ್ ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದು, ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪುಗಳಾದ ಲಷ್ಕರ್-ಎ-ತೊಯ್ಬಾ ಮತ್ತು ಜೈಶ್-ಎ-ಮೊಹಮ್ಮದ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನಕ್ಕೆ ಮೋದಿ ಮತ್ತು ಬೈಡನ್ ಎಚ್ಚರಿಕೆ ಕೊಟ್ಟಿದ್ದಾರೆ.

Joe Biden And Narendra Modi Issues Warning

“ಪಾಕಿಸ್ತಾನ ಗಡಿಯಾಚೆ ಭಯೋತ್ಪಾದನೆ, ಭಯೋತ್ಪಾದಕರ ರಕ್ಷಣೆ ಮಾಡುತ್ತಿರುವುದನ್ನು ಉಭಯ ನಾಯಕರು ಬಲವಾಗಿ ಖಂಡಿಸಿದ್ದಾರೆ. ಪಾಕಿಸ್ತಾನ ತನ್ನ ನಿಯಂತ್ರಣದಲ್ಲಿರುವ ಯಾವುದೇ ಪ್ರದೇಶದಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಯದಂತೆ ಕ್ರಮ ತೆಗೆದುಕೊಳ್ಳಬೇಕು” ಎಂದು ಹೇಳಿಕೆ ನೀಡಲಾಗಿದೆ.

ಮುಂಬೈ ದಾಳಿ: ಅಪರಾಧಿಗಳನ್ನು ಶಿಕ್ಷಿಸಲು ಒತ್ತಾಯ

2008ರಲ್ಲಿ ಮುಂಬೈನ ತಾಜ್ ಹೋಟೆಲ್‌ ಮೇಲಿನ ಭಯೋತ್ಪಾದಕ ದಾಳಿಯ ಹಿಂದಿನ ಅಪರಾಧಿಗಳನ್ನು ಹಿಡಿದು, ಕಠಿಣವಾಗಿ ಶಿಕ್ಷೆ ನೀಡಬೇಕು ಎಂದು ಉಭಯ ನಾಯಕರು ಪಾಕಿಸ್ತಾನಕ್ಕೆ ಒತ್ತಾಯಿಸಿದ್ದಾರೆ.

ಪಾಕಿಸ್ತಾನದ ವಿರುದ್ಧ ಭಾರತ ಈಗಾಗಲೇ ಕಠಿಣ ನಿಲುವು ತೆಗೆದುಕೊಂಡಿದೆ. ಭಾರತದ ನೆಲದಲ್ಲಿ ಭಯೋತ್ಪಾದನೆಗೆ ಜಾಗವಿಲ್ಲ ಎನ್ನುವ ಖಡಕ್ ಸಂದೇಶವನ್ನು ನೀಡಿದೆ. ಪಾಕಿಸ್ತಾನದ ದಾಳಿಗೆ ಪ್ರತಿಯಾಗಿ 2019ರಲ್ಲಿ ಭಾರತ ವೈಮಾನಿಕ ದಾಳಿ ಮಾಡುವ ಮೂಲಕ ಪಾಕ್ ಸೊಕ್ಕಡಗಿಸಿತ್ತು.

1993ರಲ್ಲಿ ಸಾಮಾನ್ಯ ವ್ಯಕ್ತಿ, 2023ರಲ್ಲಿ ಭಾರತದ ಪ್ರಧಾನಿ! ವೈಟ್ ಹೌಸ್‌ನಲ್ಲಿ ಪ್ರಧಾನಿ ಮೋದಿ ಖದರ್ ಹೇಗಿತ್ತು?1993ರಲ್ಲಿ ಸಾಮಾನ್ಯ ವ್ಯಕ್ತಿ, 2023ರಲ್ಲಿ ಭಾರತದ ಪ್ರಧಾನಿ! ವೈಟ್ ಹೌಸ್‌ನಲ್ಲಿ ಪ್ರಧಾನಿ ಮೋದಿ ಖದರ್ ಹೇಗಿತ್ತು?

ಯುನೈಟೆಡ್ ಸ್ಟೇಟ್ಸ್ ಐತಿಹಾಸಿಕವಾಗಿ ಪಾಕಿಸ್ತಾನದ ನಿಕಟ ಪಾಲುದಾರನಾಗಿದೆ ಆದರೆ ಅಫ್ಘಾನಿಸ್ತಾನದ ತಾಲಿಬಾನ್ ಮತ್ತು ಇಸ್ಲಾಮಾಬಾದ್‌ನ ಪ್ರಬಲ ಮಿಲಿಟರಿ ಮತ್ತು ಗುಪ್ತಚರ ಉಪಕರಣಗಳ ನಡುವಿನ ಸಂಬಂಧಗಳ ಮೇಲೆ ಅಮೆರಿಕ ತಾಳ್ಮೆ ಕಳೆದುಕೊಳ್ಳುತ್ತಿದೆ.

2021 ರಲ್ಲಿ ಅಫ್ಘಾನಿಸ್ತಾನದಿಂದ ಯುಎಸ್ ಸೇನೆಯನ್ನು ಹಿಂತೆಗೆದುಕೊಂಡಾಗಿನಿಂದ ಬೈಡನ್ ಆಡಳಿತವು ಭಾರತದೊಂದಿಗಿನ ಸಂಬಂಧವನ್ನು ಗಟ್ಟಿಯಾಗಿಸಲು, ಪಾಕಿಸ್ತಾನವನ್ನು ದೂರ ಇಟ್ಟಿದೆ. ಇದು ಪಾಕಿಸ್ತಾನಕ್ಕೆ ದೊಡ್ಡ ಮುಖಭಂಗವಾದಂತಾಗಿದೆ.

ಭಾರತ ಮತ್ತು ಯುನೈಟೆಡ್ ಸ್ಟೇಟ್ಸ್, “ಮ್ಯಾನ್ಮಾರ್‌ನಲ್ಲಿ ಹದಗೆಡುತ್ತಿರುವ ಪರಿಸ್ಥಿತಿಯ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿವೆ, ಅಲ್ಲಿನ ಮಿಲಿಟರಿಯು 2021 ರಲ್ಲಿ ಹೊಸ ನಾಗರಿಕ ಸರ್ಕಾರವನ್ನು ಹೊರಹಾಕಿತು.”

“ನಿರಂಕುಶವಾಗಿ ಬಂಧನಕ್ಕೊಳಗಾದ ಎಲ್ಲರ ಬಿಡುಗಡೆ, ರಚನಾತ್ಮಕ ಮಾತುಕತೆಯ ಸ್ಥಾಪನೆ ಮತ್ತು ಮ್ಯಾನ್ಮಾರ್ ಅನ್ನು ಒಳಗೊಳ್ಳುವ ಫೆಡರಲ್ ಪ್ರಜಾಪ್ರಭುತ್ವ ವ್ಯವಸ್ಥೆಗೆ ಪರಿವರ್ತಿಸಲು” ಎರಡು ದೇಶಗಳು ಕರೆ ನೀಡಿವೆ.

ಯುನೈಟೆಡ್ ಸ್ಟೇಟ್ಸ್ ಮ್ಯಾನ್ಮಾರ್‌ನ ಜುಂಟಾದ ಮೇಲೆ ನಿರ್ಬಂಧಗಳನ್ನು ಹೇರಿದೆ, ಆದರೆ ಭಾರತ ತುಲನಾತ್ಮಕವಾಗಿ ಸೌಹಾರ್ದಯುತ ಸಂಬಂಧವನ್ನು ಉಳಿಸಿಕೊಂಡಿದೆ, ಮ್ಯಾನ್ಮಾರ್ ಈಶಾನ್ಯ ಭಾರತದ ಅಸ್ಥಿರ ಭಾಗಗಳನ್ನು ಗಡಿಯಾಗಿ ಹೊಂದಿದೆ.

ಮೋದಿ ಅಮೆರಿಕ ಭೇಟಿ ಸಫಲವಾಗಿದೆ

ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಭೇಟಿ ಯಶಸ್ವಿಯಾಗಿದೆ ಎಂದು ಅಮರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಈ ಭೇಟಿಯ ಮೂಲಕ ಭಾರತ-ಅಮೆರಿಕ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಯಾಗಿದೆ. ರಕ್ಷಣೆ, ಸಂಪರ್ಕ, ಹಣಕಾಸು ಕ್ಷೇತ್ರದಲ್ಲಿ ಪರಸ್ಪರ ಸಹಕಾರ ಹೆಚ್ಚಾಗಲಿದೆ. ಸೆಮಿಕಂಡಕ್ಟರ್​ ಉತ್ಪಾದನಾ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶ ದೊರೆಯಲಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಕೂಡ ಉಭಯ ರಾಷ್ಟ್ರಗಳ ನಡುವೆ ಒಪ್ಪಂದ ಏರ್ಪಟ್ಟಿದೆ. ಹೊಸದಾಗಿ 2 ಬಿಲಿಯನ್ ಡಾಲರ್​ಗೂ ಹೆಚ್ಚು ಹೂಡಿಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.

English summary

US President Joe Biden and Prime Minister Narendra Modi issued a joint statement during PM Modi’s state visit to Washington, urging Pakistan to take action against terrorist organizations like Lashkar-e-Taiba and Jaish-e-Mohammad, which target New Delhi.

Story first published: Friday, June 23, 2023, 6:35 [IST]

Source link